Home
ಸುದ್ದಿಜಾಲ

ದೊಡ್ಡ ಡಿಸ್‌ಪ್ಲೇ ಆಯ್ಕೆಯೊಂದಿಗೆ ನಾಯ್ಸ್ ಕಲರ್‌ಫಿಟ್ ಸ್ಪಾರ್ಕ್ ಲಾಂಚ್‌: ಫೀಚರ್ಸ್ ಏನು, ಬೆಲೆ ಎಷ್ಟು?

ಮಾರುಕಟ್ಟೆಯಲ್ಲಿ ಲಾಂಚ್‌ ಆಗುತ್ತಿರುವ ಹೊಸ ಹೊಸ ಸ್ಮಾರ್ಟ್‌ವಾಚ್‌ಗಳು ಇಂದು ಬಳಕೆದಾರರಿಗೆ ಭಿನ್ನ ಸೇವೆ ನೀಡುತ್ತಿವೆ. ಅದರಲ್ಲೂ ಅಗ್ಗದ ಬೆಲೆಯಲ್ಲಿ ಲಭ್ಯ ಆಗುವ ನಾಯ್ಸ್ ಸ್ಮಾರ್ಟ್‌ವಾಚ್‌ಗಳಿಗೆ ಭರ್ಜರಿ ಬೇಡಿಕೆ ಇದ್ದು, ಈ ನಡುವೆ ಹೊಸ ಸ್ಮಾರ್ಟ್‌ ವಾಚ್‌ವೊಂದನ್ನು ಅನಾವರಣ ಮಾಡಲಾಗಿದೆ.

ಹೌದು, ಕೆಲವು ದಿನಗಳ ಹಿಂದಷ್ಟೇ ನಾಯ್ಸ್‌ಫಿಟ್ ದಿವಾ (NoiseFit Diva) ಸ್ಮಾರ್ಟ್‌ವಾಚ್‌ ಅನ್ನು ಲಾಂಚ್‌ ಮಾಡಲಾಗಿತ್ತು. ಅದಾಗ್ಯೂ ಈಗ ಮತ್ತೊಂದು ನಾಯ್ಸ್ ಬ್ಲೂಟೂತ್ ಕರೆಯೊಂದಿಗೆ ಹೊಸ ಸ್ಮಾರ್ಟ್ ವಾಚ್ ಕಲರ್ ಫಿಟ್ ಸ್ಪಾರ್ಕ್(Noise ColorFit Spark) ಅನ್ನು ಲಾಂಚ್‌ ಮಾಡಿದೆ. ಈ ವಾಚ್‌ ಲಿಕೋನ್ ಪಟ್ಟಿಯೊಂದಿಗೆ ವಿಶೇಷ ಡಯಲ್ ವಿನ್ಯಾಸವನ್ನು ಪಡೆದುಕೊಂಡಿದೆ. ಹಾಗಿದ್ರೆ ಈ ವಾಚ್‌ನ ಪ್ರಮುಖ ಫೀಚರ್ಸ್‌ ಹಾಗೂ ಬೆಲೆ ವಿವರವನ್ನು ಗಮನಿಸೋಣ ಬನ್ನಿ.

ದೊಡ್ಡ ಡಿಸ್‌ಪ್ಲೇ ಆಯ್ಕೆಯೊಂದಿಗೆ ನಾಯ್ಸ್ ಕಲರ್‌ಫಿಟ್ ಸ್ಪಾರ್ಕ್ ಲಾಂಚ್‌...

ನಾಯ್ಸ್‌ ಕಲರ್ ಫಿಟ್ ಸ್ಪಾರ್ಕ್ ವಿನ್ಯಾಸ: ಈ ಸ್ಮಾರ್ಟ್‌ವಾಚ್‌ (smartwatch) ಪ್ರಮುಖವಾಗಿ ಎರಡು ಇಂಚಿನ ದೊಡ್ಡ ಹೆಚ್‌ಡಿ ಟಿಎಫ್‌ಟಿ ಡಿಸ್‌ಪ್ಲೇ ಅನ್ನು ಹೊಂದಿದ್ದು, ಇತರೆ ಸ್ಮಾರ್ಟ್‌ವಾಚ್‌ಗಳಿಗಿಂತ ಭಿನ್ನವಾಗಿ ಕಾಣಿಸಿಕೊಂಡಿದೆ. ಇದರೊಂದಿಗೆ 150ಕ್ಕೂ ಹೆಚ್ಚು ಗ್ರಾಹಕೀಯಗೊಳಿಸಬಹುದಾದ ವಾಚ್ ಫೇಸ್‌ಗಳ ಆಯ್ಕೆ ಪಡೆದುಕೊಂಡಿದ್ದು, ಬಳಕೆದಾರರಿಗೆ ಈ ಮೂಲಕ ವಿಶೇಷ ಅನುಭವ ಸಿಗಲಿದೆ.

ನಾಯ್ಸ್‌ ಕಲರ್ ಫಿಟ್ ಸ್ಪಾರ್ಕ್ ಫೀಚರ್ಸ್‌: ಇದರ ಪ್ರಮುಖ ಫೀಚರ್ಸ್‌ ವಿಚಾರಕ್ಕೆ ಬರುವುದಾದರೆ ಈ ವಾಚ್‌ ನಾಯ್ಸ್ ಟ್ರೂ ಸಿಂಕ್ ತಂತ್ರಜ್ಞಾನದಿಂದ ಪ್ಯಾಕ್‌ ಆಗಿದೆ. ಈ ಮೂಲಕ ತ್ವರಿತ ಜೋಡಣೆ ಮತ್ತು ಕಡಿಮೆ ವಿದ್ಯುತ್ ಬಳಕೆಯೊಂದಿಗೆ ಬ್ಲೂಟೂತ್ ಕರೆಯನ್ನು ಸಕ್ರಿಯಗೊಳಿಸುತ್ತದೆ. ಹಾಗೆಯೇ 24×7 ಹೃದಯ ಬಡಿತದ ಮಾನಿಟರಿಂಗ್, SpO2 ಮಾಪನ, ನಿದ್ರೆಯ ಟ್ರ್ಯಾಕಿಂಗ್, ಒತ್ತಡ ನಿರ್ವಹಣೆ ಸೇರಿದಂತೆ ಅನೇಕ ಫೀಚರ್ಸ್‌ ಪಡೆದಿದೆ. ಅದರಲ್ಲೂ ಮಹಿಳೆಯರಿಗೆ ಸಂಬಂಧಿಸಿದ ಆರೋಗ್ಯದ ಸದಾ ಕಣ್ಣಿಡಲಿದೆ.

ಇದರೊಂದಿಗೆ ಬ್ಲೂಟೂತ್ ಆವೃತ್ತಿ 5.3 ಯನ್ನು ಹೊಂದಿದ್ದು, ನೀಟಿಫಿಕೇಶನ್‌ ಆಯ್ಕೆ, ಹವಾಮಾನ ನವೀಕರಣಗಳು, ಕ್ಯಾಮರಾ ಕಂಟ್ರೋಲ್‌, ಮ್ಯೂಸಿಕ್‌ ಕಂಟ್ರೋಲ್‌ , ಜ್ಞಾಪನೆಗಳು, ಕ್ಯಾಲ್ಕುಲೇಟರ್ ಸೇರಿದಂತೆ ಅನೇಕ ಅಗತ್ಯ ಫೀಚರ್ಸ್‌ ಮೂಲಕ ಈ ವಾಚ್‌ ವಿಶೇಷ ಎನಿಸಿದೆ. ಇದರಿಂದಾಗಿ ಈ ವಾಚ್‌ ಬಳಕೆ ಮಾಡುವಾಗ ಪಾಕೆಟ್‌ನಿಂದ ಫೋನ್‌ ಅನ್ನು ಹೊರತೆಗೆಯುವ ಪ್ರಮೇಯವೇ ಇರುವುದಿಲ್ಲ.

ನಾಯ್ಸ್‌ ಕಲರ್ ಫಿಟ್ ಸ್ಪಾರ್ಕ್ ಬ್ಯಾಟರಿ ಸಾಮರ್ಥ್ಯ: ಇನ್ನು ಇದರ ಬ್ಯಾಟರಿ ಸಾಮರ್ಥ್ಯದ ಬಗ್ಗೆ ಹೇಳುವುದಾದರೆ ಒಂದು ಪೂರ್ಣ ಚಾರ್ಜಿಂಗ್‌ನಲ್ಲಿ ಏಳು ದಿನಗಳ ಬ್ಯಾಟರಿ ಬ್ಯಾಕಪ್‌ ನೀಡುತ್ತದೆ. ಆದರೆ ನೀವು ಈ ವಾಚ್‌ನಲ್ಲಿ ಬ್ಲೂಟೂರ್‌ ಕರೆ (Bluetour call) ಫೀಚರ್ಸ್ ಬಳಕೆ ಮಾಡಿಕೊಂಡರೆ ಎರಡು ದಿನಗಳವರೆಗೆ ಬ್ಯಾಟರಿ ಬ್ಯಾಕಪ್‌ ಲಭ್ಯ ಆಗಲಿದೆ. ಜೊತೆಗೆ ಫಾಸ್ಟ್‌ ಚಾರ್ಜಿಂಗ್‌ ಸೌಲಭ್ಯ ಸಹ ಇದ್ದು, ಈ ವಾಚ್‌ಗಾಗಿಯೇ ಸಮಯ ಮೀಸಲಿಡುವ ಅಗತ್ಯ ಇಲ್ಲ.

ನಾಯ್ಸ್‌ ಕಲರ್ ಫಿಟ್ ಸ್ಪಾರ್ಕ್ ಬೆಲೆ ಹಾಗೂ ಲಭ್ಯತೆ: ಈ ಸ್ಮಾರ್ಟ್‌ವಾಚ್‌ಗೆ‌ ಪರಿಚಯಾತ್ಮಕವಾಗಿ 1,999 ರೂ.ಗಳ ಬೆಲೆ ನಿಗದಿ ಮಾಡಲಾಗಿದೆ. ಅದರಂತೆ ಇಂದಿನಿಂದಲೇ ಈ ವಾಚ್‌ ಅನ್ನು ಅಮೆಜಾನ್‌ ಮೂಲಕ ಖರೀದಿ ಮಾಡಬಹುದಾಗಿದೆ. ಉಳಿದಂತೆ ಈ ವಾಚ್‌ ಫಾರೆಸ್ಟ್ ಗ್ರೀನ್, ಚಾರ್ಕೋಲ್ ಗ್ರೇ, ಸಿಲ್ವರ್ ಗ್ರೇ, ಕೋಬಾಲ್ಟ್ ಬ್ಲೂ, ಡೀಪ್ ವೈನ್ ಮತ್ತು ಜೆಟ್ ಬ್ಲ್ಯಾಕ್ ಬಣ್ಣಗಳಲ್ಲಿ ಕಾಣಿಸಿಕೊಂಡಿದೆ.

ದೊಡ್ಡ ಡಿಸ್‌ಪ್ಲೇ ಆಯ್ಕೆಯೊಂದಿಗೆ ನಾಯ್ಸ್ ಕಲರ್‌ಫಿಟ್ ಸ್ಪಾರ್ಕ್ ಲಾಂಚ್‌...

ನಾಯ್ಸ್‌ಫಿಟ್‌ ದಿವಾ: ಈ ಸ್ಮಾರ್ಟ್‌ವಾಚ್‌ ಅನ್ನು ಮಹಿಳೆಯರಿಗಾಗಿಯೇ ನಿರ್ಮಾಣ ಮಾಡಲಾಗಿದ್ದು, ಇದು 1.1 ಇಂಚಿನ ಅಮೋಲೆಡ್ ಡಿಸ್‌ಪ್ಲೇ ಆಯ್ಕೆ ಪಡೆದಿದೆ. ಜೊತೆಗೆ ಬ್ಲೂಟೂತ್ ಕಾಲಿಂಗ್ ಫೀಚರ್ಸ್‌, ನಾಯ್ಸ್‌ ಬುಜ್‌ ಎಂಬ ಹೊಸ ಫೀಚರ್ಸ್‌ ಹೊಂದಿದ್ದು, ಇದು ಬಳಕೆದಾರರಿಗೆ ಇತ್ತೀಚಿನ ಕರೆ ಲಾಗ್‌ಗಳನ್ನು ಪ್ರವೇಶಿಸಲು ಮತ್ತು 10 ಸಂಪರ್ಕಗಳನ್ನು ಉಳಿಸಲು ಅನುಮತಿಸುತ್ತದೆ.

ಹಾಗೆಯೇ ಈ ಸ್ಮಾರ್ಟ್‌ವಾಚ್‌ ಡೈಮಂಡ್ ಕಟ್ ಡಯಲ್ ಅನ್ನು ಹೊಂದಿದ್ದು, ಈ ಮೂಲಕ ಮತ್ತಷ್ಟು ವಿಶೇಷವಾಗಿ ಕಾಣಿಸಿಕೊಳ್ಳುತ್ತಿದೆ. ಉಳಿದಂತೆ ಸಿರಿ ಮತ್ತು ಗೂಗಲ್‌ಗೆ ಬೆಂಬಲ ನೀಡಲಿದ್ದು, ಎಐ ವಾಯ್ಸ್‌ ಅಸಿಸ್ಟೆಂಟ್‌ ಆಯ್ಕೆ ಸಹ ಬಳಕೆದಾರರನ್ನು ಬೆರಗುಗೊಳಿಸುತ್ತದೆ. ಈ ವಾಚ್‌ ಸಹ ಅಮೆಜಾನ್‌ನಲ್ಲಿ 2,999 ರೂ.ಗಳ ಪರಿಚಯಾತ್ಮಕ ಬೆಲೆಯಲ್ಲಿ ಲಭ್ಯ ಇದೆ.

Best Mobiles in India

English summary
The Noise Fit Diva smartwatch was launched a few days ago. Now another new smartwatch has been launched Color Fit Spark.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+