Home
ಸುದ್ದಿಜಾಲ

Noise smartwatch: ದೊಡ್ಡ ಡಿಸ್‌ಪ್ಲೇ ಇರುವ ನಾಯ್ಸ್ ಕಲರ್‌ಫಿಟ್ ಥ್ರಿಲ್ ಸ್ಮಾರ್ಟ್‌ವಾಚ್‌ ಲಾಂಚ್‌! ಬೆಲೆ ಎಷ್ಟು?

ನಾಯ್ಸ್ ಸ್ಮಾರ್ಟ್‌ವಾಚ್‌ಗಳು (Noise smartwatch) ಅಗ್ಗದ ದರದಲ್ಲಿ ಅತ್ಯುತ್ತಮ ಫೀಚರ್ಸ್‌ ನೀಡುವ ಕೆಲಸ ಮಾಡುತ್ತವೆ. ಅದರಂತೆ ಇದೀಗ ನಾಯ್ಸ್‌ ಹೊಸ ಸ್ಮಾರ್ಟ್‌ವಾಚ್‌ ಅನ್ನು ಭಾರತದಲ್ಲಿ ಅನಾವರಣ ಮಾಡಿದ್ದು, ಈ ಸ್ಮಾರ್ಟ್‌ವಾಚ್‌ ದೊಡ್ಡ ಗಾತ್ರದ ಡಿಸ್‌ಪ್ಲೇ ಆಯ್ಕೆ ಪಡೆದಿದೆ.

ಹೌದು, ನಾಯ್ಸ್ ಬ್ಲೂಟೂತ್ ಕರೆ ಸೌಲಭ್ಯ ಇರುವ ಕಲರ್ ಫಿಟ್ ಥ್ರಿಲ್ ಸ್ಮಾರ್ಟ್‌ವಾಚ್ (Noise ColorFit Thrill smartwatch) ‌ಅನ್ನು ಅನಾವರಣ ಮಾಡಿದೆ. ಈ ಸ್ಮಾರ್ಟ್‌ವಾಚ್‌ ವಾಯೇಜ್ LTE ಸ್ಮಾರ್ಟ್‌ವಾಚ್‌ನ ಇತ್ತೀಚಿನ ಲಾಂಚ್‌ ಅನ್ನು ಅನುಸರಿಸುತ್ತದೆ. ಹಾಗಿದ್ರೆ, ಈ ಹೊಸ ಸ್ಮಾರ್ಟ್ ವಾಚ್‌ನ ಪ್ರಮುಖ ಫೀಚರ್ಸ್ ಹಾಗೂ ಭಾರತದಲ್ಲಿ ಈ ವಾಚ್‌ಗೆ ಇರುವ ಬೆಲೆ ಎಷ್ಟು ಅನ್ನೋ ಮಾಹಿತಿ ಇಲ್ಲಿದೆ ನೋಡಿ.

ದೊಡ್ಡ ಡಿಸ್‌ಪ್ಲೇ ಇರುವ ನಾಯ್ಸ್ ಕಲರ್‌ಫಿಟ್ ಥ್ರಿಲ್ ಸ್ಮಾರ್ಟ್‌ವಾಚ್‌ ಲಾಂಚ್‌!

ನಾಯ್ಸ್ ಕಲರ್ ಫಿಟ್ ಥ್ರಿಲ್ ಸ್ಮಾರ್ಟ್‌ವಾಚ್ ಡಿಸ್‌ಪ್ಲೇ ಮಾಹಿತಿ: ಈ ಸ್ಮಾರ್ಟ್‌ವಾಚ್‌ 2.0 ಇಂಚಿನ ದೊಡ್ಡ TFT LCD ಡಿಸ್‌ಪ್ಲೇ ಆಯ್ಕೆ ಪಡೆದಿದ್ದು, 150+ ಕ್ಲೌಡ್-ಆಧಾರಿತ ವಾಚ್ ಫೇಸ್‌ಗಳನ್ನು ಹೊಂದಿದೆ. ಜೊತೆಗೆ 550 ನಿಟ್ಸ್‌ ಗರಿಷ್ಠ ಬ್ರೈಟ್‌ನೆಸ್‌ ಆಯ್ಕೆ ಪಡೆದಿದ್ದು, 240 x 296 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದೊಂದಿಗೆ ಉತ್ತಮ ವೀಕ್ಷಣೆ ಅನುಭವ ನೀಡಲಿದೆ.

ನಾಯ್ಸ್ ಕಲರ್ ಫಿಟ್ ಥ್ರಿಲ್ ಸ್ಮಾರ್ಟ್‌ವಾಚ್ ಫೀಚರ್ಸ್ ವಿವರ: ಈ ಸ್ಮಾರ್ಟ್‌ವಾಚ್‌ ನಾಯ್ಸ್ ಟ್ರೂ ಸಿಂಕ್ ತಂತ್ರಜ್ಞಾನ ಹೊಂದಿದ್ದು, ಈ ಮೂಲಕ ತ್ವರಿತ ಜೋಡಣೆ ಮತ್ತು ಕಡಿಮೆ ವಿದ್ಯುತ್ ಬಳಕೆಯೊಂದಿಗೆ ಬ್ಲೂಟೂತ್ ಕರೆಯನ್ನು ಸಕ್ರಿಯಗೊಳಿಸುತ್ತದೆ. ಇದಕ್ಕಾಗಿ ಬ್ಲೂಟೂತ್ ಆವೃತ್ತಿ v5.2 ಅನ್ನು ಪಡೆದಿದೆ. ಹಾಗೆಯೇ 10 ಸಂಪರ್ಕಗಳನ್ನು ಸೇವ್ ಮಾಡಿಕೊಳ್ಳಲು ಅನುಮತಿ ನೀಡುತ್ತದೆ.

ಇದರೊಂದಿಗೆ ಈ ಸ್ಮಾರ್ಟ್‌ವಾಚ್‌ 24×7 ಹೃದಯ ಬಡಿತದ ಮಾನಿಟರಿಂಗ್, SpO2 ಮಾಪನ, ನಿದ್ರೆ ಟ್ರ್ಯಾಕಿಂಗ್ ಮತ್ತು ಒತ್ತಡ ನಿರ್ವಹಣೆಯನ್ನು ಟ್ರ್ಯಾಕ್‌ ಮಾಡಲಿದ್ದು, 100+ ಸ್ಪೋರ್ಟ್‌ ಮೋಡ್‌ ಆಯ್ಕೆ ಪಡೆದಿದ್ದು ನಿಮ್ಮ ನಿತ್ಯದ ದೈಹಿಕ ಚಟುವಟಿಕೆಯನ್ನು ಸುಲಭವಾಗಿ ಮೇಲ್ವಿಚಾರಣೆ ಮಾಡಬಹುದಾಗಿದೆ. ಈ ಎಲ್ಲಾ ವಿಷಯವನ್ನು ನಾಯ್ಸ್‌ಫಿಟ್‌ ಆಪ್‌ ಮೂಲಕ ತಿಳಿದುಕೊಳ್ಳಬಹುದು.

ದೊಡ್ಡ ಡಿಸ್‌ಪ್ಲೇ ಇರುವ ನಾಯ್ಸ್ ಕಲರ್‌ಫಿಟ್ ಥ್ರಿಲ್ ಸ್ಮಾರ್ಟ್‌ವಾಚ್‌ ಲಾಂಚ್‌!

ಹಾಗೆಯೇ ಈ ವಾಚ್‌ ಇನ್‌ಬಿಲ್ಟ್‌ ಮೈಕ್ರೊಫೋನ್ ಮತ್ತು ಸ್ಪೀಕರ್ ಆಯ್ಕೆ ಪಡೆದಿದ್ದು, ಕರೆಯಲ್ಲಿ ಉತ್ತಮವಾಗಿ ತೊಡಗಿಕೊಳ್ಳಬಹುದಾಗಿದೆ. ಜೊತೆಗೆ ನೋಟಿಫಿಕೇಶನ್‌ ಪ್ರದರ್ಶನ, ಹವಾಮಾನ ನವೀಕರಣಗಳು, ಜ್ಞಾಪನೆಗಳು, ಅಲಾರ್ಮ್, ಕ್ಯಾಮರಾ ಕಂಟ್ರೋಲ್‌, ಮ್ಯೂಸಿಕ್‌ ಕಂಟ್ರೋಲ್‌, ಕ್ಯಾಲ್ಕುಲೇಟರ್ ಸೇರಿದಂತೆ ಅನೇಕ ಆಕರ್ಷಕ ಫೀಚರ್ಸ್‌ ಅನ್ನು ಈ ಸ್ಮಾರ್ಟ್‌ವಾಚ್‌ನಲ್ಲಿ ಕಾಣಬಹುದಾಗಿದೆ.

ಎಲ್ಲಕ್ಕಿಂತ ಮಿಗಿಲಾಗಿ ಈ ವಾಚ್‌ ಆಂಡ್ರಾಯ್ಡ್‌ ಹಾಗೂ ಐಓಎಸ್ ಡಿವೈಸ್‌ಗಳೊಂದಿಗೆ ಸುಲಭವಾಗಿ ಕನೆಕ್ಟ್ ಆಗಲಿದ್ದು, ಇದರೊಂದಿಗೆ ನೀರು ಮತ್ತು ಧೂಳಿನ ಪ್ರತಿರೋಧಕ್ಕಾಗಿ IP68 ರೇಟಿಂಗ್‌ ಪಡೆದಿದೆ. ಇದರಿಂದ ನೀವು ಈ ವಾಚ್‌ ಅನ್ನು ಹೊರಾಂಗಣ, ಒಳಾಂಗಣ ಸೇರಿದಂತೆ ಎಲ್ಲಾ ಕಡೆ ಬಳಕೆ ಮಾಡಿಕೊಳ್ಳಬಹುದಾಗಿದೆ. ಅಲ್ಲದೆ ಈ ವಾಚ್‌ ಉತ್ತಮ ಬ್ಯಾಟರಿ ಹೊಂದಿದ್ದು, ಈ ಮೂಲಕ ಒಮ್ಮೆ ಚಾರ್ಜ್ ಮಾಡಿದ್ರೆ 15 ದಿನಗಳ ಬ್ಯಾಟರಿ ಬ್ಯಾಕಪ್‌ ಪಡೆಯಬಹುದಾಗಿದೆ.

ನಾಯ್ಸ್ ಕಲರ್ ಫಿಟ್ ಥ್ರಿಲ್ ಸ್ಮಾರ್ಟ್‌ವಾಚ್ ಬೆಲೆ ಮತ್ತು ಲಭ್ಯತೆ: ನಾಯ್ಸ್ ಕಲರ್‌ಫಿಟ್ ಥ್ರಿಲ್ ಸ್ಮಾರ್ಟ್‌ವಾಚ್‌ ಜೆಟ್ ಬ್ಲಾಕ್, ಥಂಡರ್ ಗ್ರೇ, ಕ್ಯಾಮೊ ಗ್ರೀನ್, ಕ್ಯಾಮೊ ಗ್ರೇ ಮತ್ತು ವಿಂಟೇಜ್ ಬ್ರೌನ್ ಬಣ್ಣಗಳಲ್ಲಿ ಕಾಣಿಸಿಕೊಂಡಿದ್ದು, ಇದನ್ನು ನೀವು ನಾಯ್ಸ್ ವೆಬ್‌ಸೈಟ್‌ನಲ್ಲಿ ಪರಿಚಯಾತ್ಮಕ ಬೆಲೆ 1,899 ರೂ.ಗಳಿಗೆ ಖರೀದಿ ಮಾಡಬಹುದಾಗಿದೆ. ಜೊತೆಗೆ ಇದು ಶೀಘ್ರದಲ್ಲೇ ಫ್ಲಿಪ್‌ಕಾರ್ಟ್‌ನಲ್ಲಿಯೂ ಕಾಣಿಸಿಕೊಳ್ಳಲಿದೆ.

ದೊಡ್ಡ ಡಿಸ್‌ಪ್ಲೇ ಇರುವ ನಾಯ್ಸ್ ಕಲರ್‌ಫಿಟ್ ಥ್ರಿಲ್ ಸ್ಮಾರ್ಟ್‌ವಾಚ್‌ ಲಾಂಚ್‌!

ನಾಯ್ಸ್ ವಾಯೇಜ್ ಸ್ಮಾರ್ಟ್‌ವಾಚ್‌: ಕೆಲವು ದಿನಗಳ ಹಿಂದಷ್ಟೇ ನಾಯ್ಸ್‌ ನಾಯ್ಸ್ ವಾಯೇಜ್ ಎಂಬ ಸ್ಮಾರ್ಟ್‌ವಾಚ್‌ ಅನ್ನು 9999 ರೂ.ಗಳ ಬೆಲೆಯೊಂದಿಗೆ ಲಾಂಚ್‌ ಮಾಡಿದೆ. ಈ ಸ್ಮಾರ್ಟ್‌ ವಾಚ್‌ 1.4 ಇಂಚಿನ ಅಮೋಲೆಡ್‌ ಡಿಸ್‌ಪ್ಲೇ ಆಯ್ಕೆ ಪಡೆದಿದ್ದು, ಜಿಪಿಎಸ್‌, ಇಸಿಮ್‌ ಆಯ್ಕೆ ಮೂಲಕ ಸ್ಮಾರ್ಟ್‌ಫೋನ್‌ಗೆ ಸೆಡ್ಡು ಹೊಡೆಯಲು ಮುಂದಾಗಿದೆ. ಬಳಕೆದಾರರಿಗೆ ಇ-ಸಿಮ್ ಕಾರ್ಯಗಳನ್ನು ಸಕ್ರಿಯಗೊಳಿಸಲು ಜಿಯೋ ಮತ್ತು ಏರ್‌ಟೆಲ್‌ನೊಂದಿಗೆ ನಾಯ್ಸ್ ಪಾಲುದಾರಿಕೆಯನ್ನು ಹೊಂದಿದೆ.

Best Mobiles in India

English summary
Noise has unveiled ColorFit Thrill smartwatch with Bluetooth calling facility. This smartwatch follows the recent launch of the Voyage LTE smartwatch.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+