Home
ಸುದ್ದಿಜಾಲ

ನಾಯ್ಸ್‌, ಫೈರ್‌ಬೋಲ್ಟ್‌ನಿಂದ ಸ್ಮಾರ್ಟ್‌ ವಾಚ್‌ ಲಾಂಚ್‌: ಬೊಂಬಾಟ್‌ ಫೀಚರ್ಸ್‌, ಬೆಲೆ ಎಷ್ಟು?

ಸ್ಮಾರ್ಟ್‌ವಾಚ್‌ಗಳ ಬಳಕೆ ಹೆಚ್ಚಾದಂತೆ ವಿವಿಧ ಕಂಪೆನಿಗಳು ವಿಶೇಷ ಫೀಚರ್ಸ್‌ ಆಯ್ಕೆಯೊಂದಿಗೆ ಹೊಸ ಹೊಸ ಸ್ಮಾರ್ಟ್‌ವಾಚ್‌ಗಳನ್ನು ಅನಾವರಣ ಮಾಡಿಕೊಂಡು ಬರುತ್ತಿವೆ. ಈ ನಡುವೆ ಈಗ ಪ್ರಮುಖ ಸ್ಮಾರ್ಟ್‌ವಾಚ್‌ ತಯಾರಿಕಾ ಕಂಪೆನಿಗಳಾದ ನಾಯ್ಸ್‌ ಹಾಗೂ ಫೈರ್‌ ಬೋಲ್ಟ್‌ ತಮ್ಮ ಹೊಸ ಸ್ಮಾರ್ಟ್‌ವಾಚ್‌ಗಳನ್ನು ಅನಾವರಣ ಮಾಡಿವೆ.

ಹೌದು, ನಾಯ್ಸ್‌ ಕಂಪೆನಿಯು ನಾಯ್ಸ್‌ ಕಲರ್‌ಫಿಟ್‌ ಥ್ರೈವ್ (Noise ColorFit Thrive) ಸ್ಮಾರ್ಟ್‌ವಾಚ್‌ ಅನ್ನು ಅನಾವರಣ ಮಾಡಿದೆ. ಈ ವಾಚ್‌ 1.85 ಇಂಚಿನ ಡಿಸ್‌ಪ್ಲೇ ಆಯ್ಕೆ ಪಡೆದುಕೊಂಡಿದೆ. ಜೊತೆಗೆ ಬ್ಲೂಟೂತ್ ಕಾಲಿಂಗ್ ಸೌಲಭ್ಯ ಸಹ ಲಭ್ಯ. ಹಾಗೆಯೇ ಫೈರ್-ಬೋಲ್ಟ್ ಗ್ಲಾಡಿಯೇಟರ್ ಪ್ಲಸ್ (Fire-Boltt Gladiator Plus) ಸ್ಮಾರ್ಟ್‌‌ವಾಚ್‌ ಸಹ ಲಾಂಚ್‌ ಆಗಿದೆ. ಹಾಗಿದ್ರೆ, ಮತ್ಯಾಕೆ ತಡ ಬನ್ನಿ ಈ ವಾಚ್‌ಗಳ ಪ್ರಮುಖ ಫೀಚರ್ಸ್‌ ಬೆಲೆ ವಿವರಗಳನ್ನು ತಿಳಿದುಕೊಳ್ಳಿ.

ನಾಯ್ಸ್‌, ಫೈರ್‌ಬೋಲ್ಟ್‌ನಿಂದ ಸ್ಮಾರ್ಟ್‌ ವಾಚ್‌ ಲಾಂಚ್‌: ಬೊಂಬಾಟ್‌ ಫೀಚರ್ಸ್‌...

ನಾಯ್ಸ್‌ ಕಲರ್‌ಫಿಟ್‌ ಥ್ರೈವ್ ವಿನ್ಯಾಸ: ಈ ವಾಚ್‌ ಅನ್ನು ಕಲರ್‌‌ಫಿಟ್‌ ಸ್ಪಾರ್ಕ್‌ ಸ್ಮಾರ್ಟ್ ವಾಚ್‌ನ ಇತ್ತೀಚಿನ ಬಿಡುಗಡೆಯ ನಂತರ ಲಾಂಚ್‌ ಆಗಿದ್ದು, ಇದು ಮೆಟಾಲಿಕ್ ಫಿನಿಶ್‌ನೊಂದಿಗೆ ಚದರ ಡಯಲ್ ವಿನ್ಯಾಸ ಪಡೆದುಕೊಂಡಿದೆ. ಹಾಗೆಯೇ ಬಹು ಬಣ್ಣಗಳಲ್ಲಿ ಸಿಲಿಕೋನ್ ಸ್ಟ್ರಾಪ್‌ ಆಯ್ಕೆ ಸಹ ಲಭ್ಯ. ಉಳಿದಂತೆ ಈ ವಾಚ್‌ 1.85 ಇಂಚಿನ HD TFT ಡಿಸ್‌ಪ್ಲೇ ಹೊಂದಿದ್ದು, 100 ಕ್ಕೂ ಹೆಚ್ಚು ಗ್ರಾಹಕೀಯಗೊಳಿಸಬಹುದಾದ ವಾಚ್ ಫೇಸ್‌ಗಳನ್ನು ಹೊಂದಿದೆ.

ನಾಯ್ಸ್‌ ಕಲರ್‌ಫಿಟ್‌ ಥ್ರೈವ್ ಫೀಚರ್ಸ್‌: ಈ ವಾಚ್‌ನ ಪ್ರಮುಖ ಫೀಚರ್ಸ್‌(Features) ಕಡೆ ಕಣ್ಣಾಯಿಸುವುದಾದರೆ, ಇದು ಬ್ಲೂಟೂತ್ ಕಾಲ್‌ ಫೀಚರ್ಸ್‌ ಹೊಂದಿದೆ. ಹಾಗೆಯೇ ಡಯಲ್ ಪ್ಯಾಡ್ ಆಯ್ಕೆ ಪಡೆದುಕೊಂಡಿದ್ದು, ವಾಚ್‌ನಲ್ಲಿಯೇ 8 ಸಂಪರ್ಕಗಳನ್ನು ಉಳಿಸಲು ಅನುವು ಮಾಡಿಕೊಡಲಾಗಿದೆ. ಇದರೊಂದಿಗೆ 24×7 ಹೃದಯ ಬಡಿತದ ಮಾನಿಟರಿಂಗ್, SpO2 ಮಾಪನ, ನಿದ್ರೆ ಟ್ರ್ಯಾಕಿಂಗ್ ಸೇರಿದಂತೆ ಅಗತ್ಯ ಆರೋಗ್ಯ ಫೀಚರ್ಸ್‌ ಇವೆ.

ಅದರಲ್ಲೂ ಎಐ ವಾಯ್ಸ್‌ ಅಸಿಸ್ಟೆಂಟ್‌ ಸೇವೆ ಸಹ ಲಭ್ಯ ಇದ್ದು, ಮಹಿಳೆಯರ ಆರೋಗ್ಯ ಸಂಬಂಧಿ ಮಾಹಿತಿಯನ್ನೂ ಸಹ ಈ ಸ್ಮಾರ್ಟ್‌ವಾಚ್‌ ಒದಗಿಸುತ್ತದೆ. ಮತ್ತು ಇನ್‌ಬಿಲ್ಟ್‌ ಗೇಮ್ಗಳು, ನೋಟಿಫಿಕೇಶನ್, ಹವಾಮಾನ ನವೀಕರಣಗಳು, ಕ್ಯಾಮರಾ ಕಂಟ್ರೋಲ್‌, ಮ್ಯೂಸಿಕ್‌ ನಿಯಂತ್ರಣ, ಜ್ಞಾಪನೆಗಳು, ಕ್ಯಾಲ್ಕುಲೇಟರ್ ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ಈ ವಾಚ್‌ ಹೊಂದಿದೆ. ಈ ಎಲ್ಲಾ ಫೀಚರ್ಸ್‌ನೊಂದಿಗೆ ಈ ವಾಚ್‌ 7 ದಿನಗಳ ಬ್ಯಾಟರಿ ಬ್ಯಾಕಪ್‌ ನೀಡುತ್ತದೆ.

ಫೈರ್-ಬೋಲ್ಟ್ ಗ್ಲಾಡಿಯೇಟರ್ ಪ್ಲಸ್‌ ಡಿಸ್‌ಪ್ಲೇ: ಇನ್ನು ಮತ್ತೊಂದು ಸ್ಮಾರ್ಟ್‌ವಾಚ್‌ ಆಗಿರುವ ಗ್ಲಾಡಿಯೇಟರ್ ಪ್ಲಸ್‌ ವಿವರಕ್ಕೆ ಬರುವುದಾದರೆ ಈ ವಾಚ್‌ 1.96 ಇಂಚಿನ ಅಮೋಲೆಡ್‌ ಡಿಸ್‌ಪ್ಲೇ ಆಯ್ಕೆ ಪಡೆದುಕೊಂಡಿದ್ದು, 410 x 502 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್ ಸಾಮರ್ಥ್ಯ ಇದೆ ಹಾಗೂ 60Hz ರಿಫ್ರೆಶ್ ರೇಟ್, 600 ನಿಟ್ಸ್‌ ಬ್ರೈಟ್‌ನೆಸ್ ಸೌಲಭ್ಯದೊಂದಿಗೆ ವಿಶೇಷವಾಗಿ ಗುರುತಿಸಿಕೊಂಡಿದೆ.

ಫೈರ್-ಬೋಲ್ಟ್ ಗ್ಲಾಡಿಯೇಟರ್ ಪ್ಲಸ್‌ ಫೀಚರ್ಸ್‌: ಈ ವಾಚ್‌ ಸಹ ಬ್ಲೂಟೂತ್ ಕಾಲ್‌ ಫೀಚರ್ಸ್‌(Bluetooth call features) ಆಯ್ಕೆ ಪಡೆದುಕೊಂಡಿದ್ದು, ಹೃದಯ ಬಡಿತ ಮಾನಿಟರಿಂಗ್, SpO2 ಟ್ರ್ಯಾಕಿಂಗ್, ಸ್ಲೀಪ್ ಮಾನಿಟರಿಂಗ್ ಮತ್ತು ಮಹಿಳೆಯರ ಆರೋಗ್ಯ ಸಂಬಂಧಿ ಮಾಹಿತಿಗಳನ್ನು ನೀಡುತ್ತದೆ. ಜೊತೆಗೆ 115ಕ್ಕೂ ಹೆಚ್ಚಿನ ಸ್ಪೋರ್ಟ್ಸ್ ಮೋಡ್ ಆಯ್ಕೆಯನ್ನು ಈ ವಾಚ್‌ ಪಡೆದುಕೊಂಡಿದೆ.

ಇದರೊಂದಿಗೆ ಇನ್‌ಬಿಲ್ಟ್‌ ಮೈಕ್ ಮತ್ತು ಸ್ಪೀಕರ್ ಆಯ್ಕೆ ಸಹ ಇದ್ದು, ಎಐ ವಾಯ್ಸ್‌ ಅಸಿಸ್ಟೆಂಟ್ ಬೆಂಬಲ ಮಾತ್ರ ಬಳಕೆದಾರರಿಗೆ ವಿಶೇಷ ಅನುಭವ ನೀಡಲಿದೆ. ಉಳಿದಂತೆ ಈ ವಾಚ್‌ನಲ್ಲೂ ಸಹ ಸ್ಮಾರ್ಟ್ ನೋಟಿಫಿಕೇಶನ್‌ ಆಯ್ಕೆ ನೀಡಲಾಗಿದೆ ಮತ್ತು ಹವಾಮಾನ ನವೀಕರಣ, ಇನ್‌ಬಿಲ್ಟ್ ಗೇಮ್‌ಗಳು, ಮ್ಯೂಸಿಕ್‌ ಮತ್ತು ಕ್ಯಾಮರಾ ಕಂಟ್ರೋಲ್ ಆಯ್ಕೆ ನೀಡಲಾಗಿದ್ದು, ಈ ವಾಚ್‌ಗಳ ಸರಣಿಯಲ್ಲಿ ಇದು ಉತ್ತಮ ವಾಚ್‌ ಆಗಿದೆ. ಇದು ಸಹ 7 ದಿನಗಳವರೆಗೆ ಬ್ಯಾಟರಿ ಬ್ಯಾಕಪ್‌ ನೀಡಲಿದೆ.

ನಾಯ್ಸ್‌, ಫೈರ್‌ಬೋಲ್ಟ್‌ನಿಂದ ಸ್ಮಾರ್ಟ್‌ ವಾಚ್‌ ಲಾಂಚ್‌: ಬೊಂಬಾಟ್‌ ಫೀಚರ್ಸ್‌...

ನಾಯ್ಸ್‌ ಹಾಗೂ ಫೈರ್‌ಬೋಲ್ಟ್‌ನ ಈ ವಾಚ್‌ಗಳ ಬೆಲೆ, ಲಭ್ಯತೆ: ನಾಯ್ಸ್ ಕಲರ್‌ಫಿಟ್ ಥ್ರೈವ್ ಸ್ಮಾರ್ಟ್‌ವಾಚ್‌ 1,299 ರೂ.ಗಳ ಬೆಲೆ ಹೊಂದಿದ್ದು, ಇದನ್ನು ನಾಯ್ಸ್ ವೆಬ್‌ಸೈಟ್ ಮತ್ತು ಫ್ಲಿಪ್‌ಕಾರ್ಟ್‌ ನಲ್ಲಿ ಖರೀದಿ ಮಾಡಬಹುದಾಗಿದೆ, ಈ ವಾಚ್‌ ಮಿಡ್‌ನೈಟ್ ಬ್ಲೂ, ಸಿಲ್ವರ್ ಗ್ರೇ, ಕಾಮ್ ಬ್ಲೂ, ಕೋರಲ್ ಪಿಂಕ್, ಡೀಪ್ ವೈನ್ ಮತ್ತು ಜೆಟ್ ಬ್ಲ್ಯಾಕ್ ಬಣ್ಣಗಳಲ್ಲಿ ಕಾಣಿಸಿಕೊಂಡಿದೆ.

ಫೈರ್-ಬೋಲ್ಟ್ ಗ್ಲಾಡಿಯೇಟರ್ ಪ್ಲಸ್‌ ಸ್ಮಾರ್ಚ್‌ವಾಚ್‌ನ ಲಿಕೋನ್ ಮತ್ತು ನೈಲಾನ್ ಸ್ಟ್ರಾಪ್ ಆವೃತ್ತಿಗಳಿಗೆ 2,999ರೂ.ಗಳನ್ನು ನಿಗದಿ ಮಾಡಲಾಗಿದೆ. ಹಾಗೆಯೆ ಲೋಹದ ಪಟ್ಟಿಯ ಆವೃತ್ತಿಗೆ 3,499ರೂ.ಗಳ ಬೆಲೆ ಇದೆ. ಈ ವಾಚ್‌ ಇದು ಶೀಘ್ರದಲ್ಲೇ ಕಂಪೆನಿಯ ಅಧಿಕೃತ ಸೈಟ್‌ ಹಾಗೂ ಅಮೆಜಾನ್‌ನಲ್ಲಿ ಲಭ್ಯ ಇರಲಿದೆ.

Best Mobiles in India

English summary
Noise Company has unveiled the Noise ColorFit Thrive Smartwatch. Also Fire-Bolt launched Fire-Boltt Gladiator Plus smartwatch in india.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+