Home
ಸುದ್ದಿಜಾಲ

ಮಾರುಕಟ್ಟೆಯಲ್ಲಿ ಧೂಳೆಬ್ಬಿಸಲು ಬಂತು ನಾಯ್ಸ್‌ ನಿಂದ ಹೊಸ ವಾಚ್! ಬೆಲೆ ಎಷ್ಟು ಗೊತ್ತಾ?

ನಾಯ್ಸ್‌ ಸಂಸ್ಥೆಯ ಸ್ಮಾರ್ಟ್‌ವಾಚ್‌ಗಳು ಈ ಕ್ಷಣಕ್ಕೂ ಸಹ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆ ಪಡೆದುಕೊಂಡಿವೆ. ಈ ವಾಚ್‌ಗಳ ಸುಧಾರಿತ ಫೀಚರ್ಸ್‌ ಬಳಕೆದಾರರ ಗಮನವನ್ನು ಹೆಚ್ಚಾಗಿ ಸೆಳೆಯುತ್ತಿದ್ದು, ಈ ನಡುವೆ ಮತ್ತೊಂದು ಸ್ಮಾರ್ಟ್‌ವಾಚ್‌ ಲಾಂಚ್‌ ಆಗಿದ್ದು, ಇದು ಸ್ಮಾರ್ಟ್‌ವಾಚ್‌ಗಳ ಮಾರುಕಟ್ಟೆಯಲ್ಲಿ ಸಂಚಲನ ಉಂಟು ಮಾಡಿದೆ.

ಹೌದು, ನಾಯ್ಸ್‌ ಕಂಪೆನಿಯು ಈ ಹಿಂದೆ ನಾಯ್ಸ್‌ಫೀಟ್‌ ಕ್ರ್ಯೂ ಪ್ರೊ ಸ್ಮಾರ್ಟ್‌ವಾಚ್‌ ಅನ್ನು ಅನಾವರಣ ಮಾಡಿತ್ತು. ಇದಾದ ನಂತರದಲ್ಲಿ ಅಂದರೆ ಈಗ ನಾಯ್ಸ್ ಕಲರ್‌ಫಿಟ್ ವಿಷನ್ 3 (Noise ColorFit Vision 3) ಎಂಬ ವಾಚ್‌ ಅನ್ನು ಲಾಂಚ್‌ ಮಾಡಿದೆ. ಈ ವಾಚ್‌ ಬ್ಲೂಟೂತ್‌ ಕಾಲಿಂಕ್‌ ಫೀಚರ್ಸ್‌ ಹೊಂದಿದ್ದು, ಆಯತಾಕಾರದ ಡಯಲ್ ಶೈಲಿ ಪಡೆದುಕೊಂಡಿದೆ. ಹಾಗಿದ್ರೆ, ಈ ವಾಚ್‌ನ ಪ್ರಮುಖ ಫೀಚರ್ಸ್‌ ಹಾಗೂ ಭಾರತದಲ್ಲಿ ಇದರ ಬೆಲೆ ಎಷ್ಟೆಂದು ತಿಳಿಯೋಣ ಬನ್ನಿ.

ಮಾರುಕಟ್ಟೆಯಲ್ಲಿ ಧೂಳೆಬ್ಬಿಸಲು ಬಂತು ನಾಯ್ಸ್‌ ನಿಂದ ಹೊಸ ವಾಚ್!  ಬೆಲೆ ಎಷ್ಟು?

ಕಲರ್‌ಫಿಟ್ ವಿಷನ್ 3 ವಿನ್ಯಾಸ: ಈ ವಾಚ್‌ 1.96 ಇಂಚಿನ ಅಮೋಲೆಡ್‌ ಡಿಸ್‌ಪ್ಲೇ ಹೊಂದಿದ್ದು, 410 x 502 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯ ಪಡೆದುಕೊಂಡಿದೆ. ಇದರೊಂದಿಗೆ 150 ಕ್ಕೂ ಹೆಚ್ಚು ವಾಚ್ಫೇಸ್‌ಗಳ ಬೆಂಬಲದೊಂದಿಗೆ ಆಕರ್ಷಕವಾಗಿದ್ದು, ಅತ್ಯಾಕರ್ಷಕ ಕ್ರೌನ್‌ ಬಟನ್‌ ಈ ವಾಚ್‌ಗೆ ಮತ್ತಷ್ಟು ಮೆರಗು ನೀಡಲಿದೆ.

ಕಲರ್‌ಫಿಟ್ ವಿಷನ್ 3 ಪ್ರಮುಖ ಫೀಚರ್ಸ್‌: ಈ ವಾಚ್‌ ಬ್ಲೂಟೂತ್ ಆವೃತ್ತಿ 5.3 ಯನ್ನು ಹೊಂದಿದ್ದು, ನಾಯ್ಸ್ ಟ್ರೂ ಸಿಂಕ್ ತಂತ್ರಜ್ಞಾನದೊಂದಿಗೆ ಕೆಲಸ ಮಾಡುತ್ತದೆ. ಜೊತೆಗೆ 24×7 ಹೃದಯ ಬಡಿತ ಮಾನಿಟರಿಂಗ್, SpO2, ನಿದ್ರೆ ಟ್ರ್ಯಾಕಿಂಗ್, ಒತ್ತಡ ನಿರ್ವಹಣೆ, ಮಹಿಳೆಯರ ಆರೋಗ್ಯ ಟ್ರ್ಯಾಕಿಂಗ್ ಸೇರಿದಂತೆ ಅಗತ್ಯ ಫೀಚರ್ಸ್‌ಗಳನ್ನು ಹೊಂದಿದ್ದು, ಬಳಕೆದಾರರರಿಗೆ ನೈಜ ಸಮಯದ ಆರೋಗ್ಯ ಮಾಹಿತಿಯನ್ನು ನೀಡುತ್ತದೆ.

ಇನ್ನುಳಿದಂತೆ ಐಓಎಸ್‌ 11.0+ ಅಥವಾ ಆಂಡ್ರಾಯ್ಡ್‌ 9.0+ ಡಿವೈಸ್‌ಗಳಿಗೆ ಇದು ಹೊಂದಿಕೆ ಆಗಲಿದ್ದು, ನೋಟಿಫಿಕೇಶನ್‌ ಸೌಲಭ್ಯ, ಹವಾಮಾನ ಮತ್ತು ಸ್ಟಾಕ್ ನವೀಕರಣಗಳು, ಕ್ಯಾಮರಾ ಕಂಟ್ರೋಲ್‌, ಮ್ಯೂಸಿಕ್‌ ಕಂಟ್ರೋಲ್, ತ್ವರಿತ ಪ್ರತ್ಯುತ್ತರ, ಸ್ಮಾರ್ಟ್ ಡಿಎನ್‌ಡಿ, ಜ್ಞಾಪನೆಗಳು, ಕ್ಯಾಲ್ಕುಲೇಟರ್ ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ಪಡೆದುಕೊಂಡಿದೆ. ಇದೆಲ್ಲಕ್ಕೂ ಮಿಗಿಲಾಗಿ ನೀರು ಮತ್ತು ಧೂಳಿನ ಪ್ರತಿರೋಧ ಹೊಂದಿದೆ. ಇದಕ್ಕಾಗಿ IP68 ರೇಟಿಂಗ್‌ ಪಡೆದಿದೆ.

ಜೊತೆಗೆ ಈ ಕಲರ್‌ಫಿಟ್ ವಿಷನ್ 3 ಸ್ಮಾರ್ಟ್‌ವಾಚ್‌ 300mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಪಡೆದುಕೊಂಡಿದ್ದು, ಇದನ್ನು ಒಂದು ಬಾರಿ ಫೂರ್ಣ ಚಾರ್ಜ್‌ ಮಾಡಿದರೆ 7 ದಿನಗಳ ಬ್ಯಾಕಪ್‌ ನೀಡಲಿದೆ. ಹಾಗೆಯೇ ಬ್ಲೂಟೂತ್ ಕಾಲ್ ಸಕ್ರಿಯಗೊಳಿಸಿದ್ದಾಗ 2 ದಿನಗಳವರೆಗೆ ಬಳಕೆ ಮಾಡಬಹುದು. ಈ ಮೂಲಕ ನಿಮ್ಮ ವಾಚ್ ಅನ್ನು ಪದೇ ಪದೇ ಚಾರ್ಜಿಂಗ್‌ಗೆ ಹಾಕುವ ಅವಶ್ಯಕತೆ ಇರುವುದಿಲ್ಲ.

ಕಲರ್‌ಫಿಟ್ ವಿಷನ್ 3 ಬೆಲೆ ಮತ್ತು ಲಭ್ಯತೆ: ಈ ವಾಚ್‌ ಅನ್ನು ಆಫರ್‌ ಬೆಲೆಗೆ ಅಂದರೆ ಪರಿಚಯಾತ್ಮಕ ಬೆಲೆಗೆ ಖರೀದಿ ಮಾಡಬೇಕು ಎಂದರೆ ಅಧಿಕೃತ ನಾಯ್ಸ್‌ ವೆಬ್‌ಸೈಟ್‌ಗೆ ಭೇಟಿ ನೀಡಬೇಕಿದೆ. ಇದರೊಂದಿಗೆ ಸಿಲಿಕೋನ್ ಸ್ಟ್ರಾಪ್ ಮತ್ತು ಲೆದರ್ ಆವೃತ್ತಿಗೆ 3,999ರೂ.ಗಳನ್ನು ನಿಗದಿ ಮಾಡಲಾಗಿದೆ. ಹಾಗೆಯೇ ಮೆಟಾಲಿಕ್ ಸ್ಟ್ರಾಪ್ ಆವೃತ್ತಿಗೆ 4999ರೂ. ನಿಗದಿಪಡಿಸಲಾಗಿದೆ. ಈ ಸ್ಮಾರ್ಟ್ ವಾಚ್ ಖರೀದಿಸುವ ಮೊದಲ 1000 ಗ್ರಾಹಕರು 500ರೂ.ಗಳ ರಿಯಾಯಿತಿ ಪಡೆಯಲಿದ್ದಾರೆ.

ಮಾರುಕಟ್ಟೆಯಲ್ಲಿ ಧೂಳೆಬ್ಬಿಸಲು ಬಂತು ನಾಯ್ಸ್‌ ನಿಂದ ಹೊಸ ವಾಚ್!  ಬೆಲೆ ಎಷ್ಟು?

ನಾಯ್ಸ್ ಕಲರ್‌ಫಿಟ್ ವಿಷನ್ 3 ಸ್ಮಾರ್ಟ್‌ವಾಚ್‌ನ ಸಿಲಿಕೋನ್ ಸ್ಟ್ರಾಪ್ ವೇರಿಯಂಟ್‌ ಜೆಟ್ ಕಪ್ಪು ಮತ್ತು ಹಸಿರು ಬಣ್ಣಗಳಲ್ಲಿ ಕಂಡುಬರಲಿದ್ದು, ಮೆಟಾಲಿಕ್ ಸ್ಟ್ರಾಪ್ ವೇರಿಯಂಟ್‌ ಕಪ್ಪು ಮತ್ತು ಬೆಳ್ಳಿ ಬಣ್ಣಗಳಲ್ಲಿ ಕಾಣಿಸಿಕೊಂಡಿದೆ. ಜೊತೆಗೆ ಇದರ ಲೆದರ್ ಸ್ಟ್ರಾಪ್ ವೇರಿಯಂಟ್ ಕ್ಲಾಸಿಕ್ ಬ್ರೌನ್ ಮತ್ತು ಕ್ಲಾಸಿಕ್ ಬ್ಲ್ಯಾಕ್‌ ಬಣ್ಣಗಳಲ್ಲಿ ಬರುತ್ತದೆ.

Best Mobiles in India

English summary
The Noise company had earlier unveiled the Noisefeet Crew Pro smartwatch. After this now Noise has launched a watch called Noise Colorfit Vision 3.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+