Home
ಸುದ್ದಿಜಾಲ

ನಾಯ್ಸ್ ಕಲರ್‌ಫಿಟ್ ವಿವಿದ್ ಕಾಲ್ ಸ್ಮಾರ್ಟ್‌ವಾಚ್‌ ಲಾಂಚ್‌: ಅತ್ಯಾಕರ್ಷಕ ಶೈಲಿ!

ನಾಯ್ಸ್‌ ಸಂಸ್ಥೆಯ ಸ್ಮಾರ್ಟ್‌ಡಿವೈಸ್‌ಗಳು ಮಾರುಕಟ್ಟೆಯಲ್ಲಿ ಭಾರೀ ಜನಪ್ರಿಯತೆ ಪಡೆದುಕೊಂಡಿದ್ದು, ಈ ನಡುವೆ ನಾಯ್ಸ್‌ ಅತ್ಯಾಕರ್ಷಕ ಹಾಗೂ ಹೊಸ ಫೀಚರ್ಸ್‌ ಇರುವ ಸ್ಮಾರ್ಟ್‌ವಾಚ್‌ಗಳನ್ನು ಅನಾವರಣ ಮಾಡಿಕೊಂಡು ಬರುತ್ತಲೇ ಇದೆ. ಅದರಂತೆ ಈ ಸ್ಮಾರ್ಟ್‌ವಾಚ್‌ಗಳ ಸಾಲಿಗೆ ಮತ್ತೊಂದು ಹೊಸ ವಾಚ್‌ಸೇರಿಕೊಳ್ಳಲಿದ್ದು, ಆಕರ್ಷಕ ಶೈಲಿ ಹೊಂದಿದೆ.

ಹೌದು, ನಾಯ್ಸ್‌ ಇದೀಗ ನಾಯ್ಸ್ ಕಲರ್‌ಫಿಟ್ ವಿವಿದ್ ಕಾಲ್ (Noise ColorFit Vivid Call) ಸ್ಮಾರ್ಟ್‌ವಾಚ್‌ ಅನ್ನು ಅನಾವರಣ ಮಾಡಿದೆ. ಈ ವಾಚ್‌ಗೂ ಮೊದಲು ನಾಯ್ಸ್‌ HRX ಸ್ಪ್ರಿಂಟ್ ಸ್ಮಾರ್ಟ್ ವಾಚ್ ಅನ್ನು ಅನಾವರಣ ಮಾಡಿತ್ತು. ಇನ್ನು ಈ ಹೊಸ ಸ್ಮಾರ್ಟ್‌ವಾಚ್‌ ಬ್ಲೂಟೂತ್‌ ಕಾಲಿಂಗ್‌ ಫೀಚರ್ಸ್ ಪಡೆದಿದ್ದು, 550 ನಿಟ್ಸ್ ಬ್ರೈಟ್‌ನೆಸ್‌ನೊಂದಿಗೆ ವಿಶೇಷ ಎನಿಸಿಕೊಂಡಿದೆ. ಹಾಗಿದ್ರೆ, ಇದರ ಪ್ರಮುಖ ಫೀಚರ್ಸ್‌ ಹಾಗೂ ಕೊಡುಗೆ ಬೆಲೆ ಬಗ್ಗೆ ತಿಳಿಸಿಕೊಟ್ಟಿದ್ದೇವೆ ಓದಿರಿ.

ನಾಯ್ಸ್ ಕಲರ್‌ಫಿಟ್ ವಿವಿದ್ ಕಾಲ್ ಸ್ಮಾರ್ಟ್‌ವಾಚ್‌ ಲಾಂಚ್‌: ಅತ್ಯಾಕರ್ಷಕ ಶೈಲಿ!

ಕಲರ್‌ಫಿಟ್ ವಿವಿದ್ ಕಾಲ್ ವಾಚ್‌ನ ವಿನ್ಯಾಶ: ಮೆಟಾಲಿಕ್ ಫಿನಿಶ್‌ನೊಂದಿಗೆ ಕಾಣಿಸಿಕೊಂಡಿರುವ ಈ ವಾಚ್ 1.69 ಇಂಚಿನ ಡಿಸ್‌ಪ್ಲೇಯನ್ನು ಹೊಂದಿದ್ದು, ಇದು 240×280 ಪಿಕ್ಸೆಲ್ ರೆಸಲ್ಯೂಶನ್‌ ನೀಡಲಿದೆ. ಇದರೊಂದಿಗೆ 550 ನಿಟ್ಸ್ ಬ್ರೈಟ್‌ನೆಸ್ ಆಯ್ಕೆ ಇರುವುದರಿಂದ ಎಂತಹ ಬಿರುಬಿಸಿಲಿನಲ್ಲೂ ಈ ವಾಚ್‌ ಅನ್ನು ಸ್ಪಷ್ಟವಾಗಿ ನೋಡಬಹುದು. ಇದರೊಂದಿಗೆ 100+ ಕ್ಲೌಡ್ ಆಧಾರಿತ ವಾಚ್‌ ಫೇಸ್‌ಗಳನ್ನು ಹೊಂದಿದೆ.

ಕಲರ್‌ಫಿಟ್ ವಿವಿದ್ ಕಾಲ್ ವಾಚ್‌ ಫೀಚರ್ಸ್‌: ಈ ಸ್ಮಾರ್ಟ್‌ವಾಚ್‌ ನಲ್ಲಿ ಹೆಚ್ಚಾಗಿ ಕರೆ ಸಂಬಂಧಿ ಫೀಚರ್ಸ್‌ಗಳ ಆಯ್ಕೆ ನೀಡಲಾಗಿದೆ. ಅಂದರೆ ಡಯಲ್-ಪ್ಯಾಡ್‌ನಿಂದ ಕರೆಗಳನ್ನು ಮಾಡುವ ಸೌಲಭ್ಯ, ಇತ್ತೀಚಿನ ಕರೆಗಳನ್ನು ಪ್ರವೇಶಿಸುವುದು ಮತ್ತು ನಾಯ್ಸ್ ಬಜ್‌ ಆಪ್‌ ಅನ್ನು ಬಳಸಿಕೊಂಡು ವಾಚ್‌ನಲ್ಲಿಯೇ 10 ಸಂಪರ್ಕಗಳನ್ನು ಉಳಿಸುವ ಸಾಮರ್ಥ್ಯ ಸೇರಿದಂತೆ ಅಗತ್ಯ ಸೌಲಭ್ಯ ಹೊಂದಿದೆ.

ಇನ್ನುಳಿದಂತೆ ಹೃದಯ ಬಡಿತ, SpO2 ಮತ್ತು ನಿದ್ರೆಯ ಮೇಲ್ವಿಚಾರಣೆ ಸೇರಿದಂತೆ ಅಗತ್ಯ ಆರೋಗ್ಯ ಸಂಬಂಧಿ ಮಾಹಿತಿಗಳ ಮೇಲೆ ಕಣ್ಣಿಡಲಿದ್ದು, ನಿಮ್ಮ ದೈನಂದಿನ ಆರೋಗ್ಯ ಸಂಬಂಧಿ ವಿಚಾರ ಹಾಗೂ ದೈನಂದಿನ ಚಟುವಟಿಕೆಗಳನ್ನು ಟ್ರ್ಯಾಕ್ ಮಾಡುವ ಮೂಲಕ ಅಗತ್ಯ ಮಾಹಿತಿಯನ್ನು ಬಳಕೆದಾರರಿಗೆ ನೀಡುತ್ತದೆ. ಈ ಮೂಲಕ ಒಂದು ವಾಚ್‌ ಹಲವು ಸೇವೆಗಳನ್ನು ನೀಡಲಿದೆ.

ನಾಯ್ಸ್ ಕಲರ್‌ಫಿಟ್ ವಿವಿದ್ ಕಾಲ್ ಸ್ಮಾರ್ಟ್‌ವಾಚ್‌ ಲಾಂಚ್‌: ಅತ್ಯಾಕರ್ಷಕ ಶೈಲಿ!

ಈ ಸ್ಮಾರ್ಟ್ ವಾಚ್ ಬಾಳಿಕೆ ಬರುವ 260mAh ಸಾಮರ್ಥ್ಯದ ಬ್ಯಾಟರಿಯಿಂದ ಪ್ಯಾಕ್‌ ಆಗಿದ್ದು, ಒಂದು ಬಾರಿ ಪೂರ್ಣವಾಗಿ ಚಾರ್ಜಿಂಗ್‌ ಮಾಡಿದರೆ ನೀವು ಬರೋಬ್ಬರಿ 7 ದಿನಗಳವರೆಗೆ ಬಳಕೆ ಮಾಡಬಹುದಾಗಿದೆ. ಇದರಿಂದಾಗಿ ಪದೇ ಪದೇ ಚಾರ್ಜಿಂಗ್‌ ಇರುವ ಪರಿಪಾಟಲು ನಿರ್ಮಾಣ ಆಗುವುದಿಲ್ಲ. ಎಲ್ಲದಕ್ಕಿಂತ ಮಿಗಿಲಾಗಿ ಈ ವಾಚ್‌ IP67 ರೇಟಿಂಗ್‌ ಹೊಂದಿದ್ದು, ಇದು ನೀರು ಮತ್ತು ಧೂಳು ನಿರೋಧಕವಾಗಿದೆ. ಹಾಗೆಯೇ ನಾಯ್ಸ್‌ಫಿಟ್‌ಗೆ ಬೆಂಬಲ ನೀಡಲಿದೆ.

ನಾಯ್ಸ್ ಕಲರ್‌ಫಿಟ್ ವಿವಿದ್ ಕಾಲ್ ಸ್ಮಾರ್ಟ್‌ವಾಚ್‌ ಲಾಂಚ್‌: ಅತ್ಯಾಕರ್ಷಕ ಶೈಲಿ!

ಇತರೆ ಫೀಚರ್ಸ್‌ಗಳ ಕಡೆ ಕಣ್ಣಾಯಿಸುವುದಾದರೆ ಸ್ಮಾರ್ಟ್ ನೋಟಿಫಿಕೇಶನ್‌, ಎಐ ವಾಯ್ಸ್‌ ಅಸಿಸ್ಟೆಂಟ್‌, ಇನ್‌ಬಿಲ್ಟ್‌ ಗೇಮ್‌ಗಳಿವೆ. ಇದರೊಂದಿಗೆ ಹವಾಮಾನ ವಿವರಗಳು, ರಿಮೋಟ್ ಕ್ಯಾಮೆರಾ ಕಂಟ್ರೋಲ್‌, ಟೈಮರ್, ಜ್ಞಾಪನೆ ಫೀಚರ್ಸ್‌ಗಳನ್ನು ಈ ವಾಚ್‌ನಲ್ಲಿ ಬಳಕೆ ಮಾಡಿಕೊಳ್ಳಬಹುದು. ಈ ವಾಚ್‌ ಬ್ಲೂಟೂತ್ ಆವೃತ್ತಿ 5.1 ಅನ್ನು ಹೊಂದುವ ಮೂಲಕ ಕನೆಕ್ಟಿವಿಟಿ ವಿಚಾರದಲ್ಲಿ ಬಹಳ ಸಹಾಯಕವಾಗಿದೆ.

ಕಲರ್‌ಫಿಟ್ ವಿವಿದ್ ಕಾಲ್ ವಾಚ್‌ ಬೆಲೆ ಹಾಗೂ ಲಭ್ಯತೆ: ಈ ಸ್ಮಾರ್ಟ್‌ವಾಚ್‌ 1,299ರೂ. ಗಳ ಪರಿಚಯಾತ್ಮಕ ಬೆಲೆ ಹೊಂದಿದ್ದು, ಇದನ್ನು ಅಮೆಜಾನ್‌, ಗೋನಾಯ್ಸ್‌ ಸೇರಿದಂತೆ ಪ್ರಮುಖ ಇ ಕಾಮರ್ಸ್‌ ಸೈಟ್‌ ಮೂಲಕ ಖರೀದಿ ಮಾಡಬಹುದಾಗಿದೆ. ಈ ವಾಚ್‌ ಸ್ಪೇಸ್ ಬ್ಲೂ, ಸಿಲ್ವರ್ ಗ್ರೇ, ಜೆಟ್ ಬ್ಲಾಕ್, ಫಾರೆಸ್ಟ್ ಗ್ರೀನ್, ರೋಸ್ ಪಿಂಕ್ ಮತ್ತು ಡೀಪ್ ವೈನ್ ಎಂಬ ಆರು ವಿಭಿನ್ನ ಬಣ್ಣ ಆಯ್ಕೆಗಳಲ್ಲಿ ಕಾಣಿಸಿಕೊಂಡಿದೆ.

Best Mobiles in India

English summary
Noise has just unveiled the Noise Colorfit Vivid Call smartwatch. Before this watch, Noise HRX was unveiled by Sprint Smartwatch.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+