Home
ಸುದ್ದಿಜಾಲ

Noise: ವಿಶೇಷ ಸೌಲಭ್ಯದೊಂದಿಗೆ ಹೊಸ ನಾಯ್ಸ್‌ ವಾಚ್‌ ಲಾಂಚ್‌! ಏನದು ಹೊಸ ಫೀಚರ್ಸ್‌? ಬೆಲೆ ಎಷ್ಟು?

ನಾಯ್ಸ್‌ ವಾಚ್‌ಗಳಿಗೆ (Noise watch) ಭಾರತದಲ್ಲಿ ದೊಡ್ಡ ಮಟ್ಟದ ಬೇಡಿಕೆ ಇದೆ. ಈ ಸ್ಮಾರ್ಟ್‌ವಾಚ್‌ಗಳ ಶೈಲಿ ಹಾಗೂ ವಿಶೇ‍ಷ ಫೀಚರ್ಸ್‌ ಯುವ ಪೀಳಿಗೆಯನ್ನು ವಿಶೇಷವಾಗಿ ಆಕರ್ಷಿಸುತ್ತದೆ. ಈ ನಡುವೆ ನಾಯ್ಸ್‌ ವಿಶೇಷ ಟೆಕ್ನಾಲಜಿಯೊಂದಿಗೆ ಮತ್ತೊಂದು ಹೊಸ ವಾಚ್ ಲಾಂಚ್‌ ಮಾಡಿದೆ.

ಹೌದು, ನಾಯ್ಸ್‌ ಇದೀಗ ನಾಯ್ಸ್‌ಫಿಟ್‌ ಎವೊಲ್ವ್‌ 4 (NoiseFit Evolve 4 Smartwatch) ಸ್ಮಾರ್ಟ್‌ವಾಚ್‌ ಅನ್ನು ಲಾಂಚ್‌ ಮಾಡಲಾಗಿದ್ದು, ಈ ಸ್ಮಾರ್ಟ್‌ವಾಚ್‌ ಅಮೋಲೆಡ್ ಡಿಸ್‌ಪ್ಲೇ ಆಯ್ಕೆ, ಬ್ಲೂಟೂತ್ ಕಾಲಿಂಗ್ ಫೀಚರ್ಸ್‌ನೊಂದಿಗೆ ಕಾಣಿಸಿಕೊಂಡಿದೆ. ಹಾಗಿದ್ರೆ, ಈ ವಾಚ್‌ನಲ್ಲಿ ಇರುವ ವಿಶೇಷ ಟೆಕ್ನಾಲಜಿ ಏನು?, ಭಾರತದಲ್ಲಿ ಈ ವಾಚ್ ಬೆಲೆ ಎಷ್ಟು ಅನ್ನೋದನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ವಿಶೇಷ ಸೌಲಭ್ಯದೊಂದಿಗೆ ಹೊಸ ನಾಯ್ಸ್‌ ವಾಚ್‌ ಲಾಂಚ್‌! ಏನದು ಹೊಸ ಫೀಚರ್ಸ್‌?

ನಾಯ್ಸ್‌ಫಿಟ್‌ ಎವೊಲ್ವ್‌ 4 ಸ್ಮಾರ್ಟ್‌ವಾಚ್‌ ವಿನ್ಯಾಸ: ನಾಯ್ಸ್‌ ಕೆಲವು ದಿನಗಳ ಹಿಂದಷ್ಟೇ ಕಲರ್‌ಫಿಟ್‌ ಪ್ರೊ 5 ಅನ್ನು ಲಾಂಚ್‌ ಮಾಡಿ ಬಹಳ ಸದ್ದು ಮಾಡಿತ್ತು. ಇದಾದ ಕೆಲವೇ ದಿನಗಳಲ್ಲಿ ಈಗ ನಾಯ್ಸ್‌ಫಿಟ್‌ ಎವೊಲ್ವ್‌ 4 ಸ್ಮಾರ್ಟ್‌ವಾಚ್ ಅನ್ನು ಅನಾವರಣ ಮಾಡಿದೆ. ಈ ಸ್ಮಾರ್ಟ್‌ವಾಚ್‌ ಕ್ರಿಯಾತ್ಮಕ ಕ್ರೌನ್‌ ಬಟನ್‌ ಹಾಗೂ ಪುಶ್ ಬಟನ್‌ನೊಂದಿಗೆ ರೌಂಡ್ ಡಯಲ್ ವಿನ್ಯಾಸವನ್ನು ಹೊಂದಿದ್ದು, ಸಿಲಿಕೋನ್ ಮತ್ತು ಮೆಟಾಲಿಕ್ ಸೇರಿದಂತೆ ಡ್ಯುಯಲ್ ಸ್ಟ್ರಾಪ್ ಆಯ್ಕೆಗಳೊಂದಿಗೆ ಪ್ರೀಮಿಯಂ ಸೌಲಭ್ಯ ಪಡೆದಿದೆ.

ಅದರಲ್ಲೂ ಈ ವಾಚ್‌ 1.46 ಇಂಚಿನ ದೊಡ್ಡ ಅಮೋಲೆಡ್‌ ಡಿಸ್‌ಪ್ಲೇ ಹೊಂದಿದ್ದು, ಈ ಡಿಸ್‌ಪ್ಲೇ 600 ನಿಟ್ಸ್‌ ಗರಿಷ್ಠ ಬ್ರೈಟ್‌ನೆಸ್‌ ಆಯ್ಕೆ ಪಡೆದಿದ್ದು, ಈ ಮೂಲಕ ನೀವು ಎಂತಹುದೇ ಪರಿಸರದಲ್ಲಿ ಇದ್ದರೂ ಸಹ ಯಾವುದೇ ಸಮಸ್ಯೆ ಇಲ್ಲದೆ ವಾಚ್‌ ಬಳಕೆ ಮಾಡಬಹುದು. ಜೊತೆಗೆ ಗ್ರಾಹಕೀಯಗೊಳಿಸಬಹುದಾದ ವಾಚ್ ಫೇಸ್‌ಗಳನ್ನು ಆಯ್ಕೆಯೊಂದಿಗೆ 100+ ವಾಚ್‌ ಫೇಸ್‌ ಆಯ್ಕೆಯನ್ನು ಈ ವಾಚ್‌ನಲ್ಲಿ ಕಾಣಬಹುದು.

ವಿಶೇಷ ಸೌಲಭ್ಯದೊಂದಿಗೆ ಹೊಸ ನಾಯ್ಸ್‌ ವಾಚ್‌ ಲಾಂಚ್‌! ಏನದು ಹೊಸ ಫೀಚರ್ಸ್‌?

ಇನ್ನು ಇದರ ಇತರೆ ಫೀಚರ್ಸ್ ಕಡೆ ಕಣ್ಣಾಯಿಸುವುದಾದರೆ, ನಾಯ್ಸ್ ಟ್ರೂ ಸಿಂಕ್ ತಂತ್ರಜ್ಞಾನವು ತ್ವರಿತ ಜೋಡಣೆ ಮತ್ತು ಕಡಿಮೆ ವಿದ್ಯುತ್ ಬಳಕೆಯೊಂದಿಗೆ ಬ್ಲೂಟೂತ್ ಕರೆಯನ್ನು ಸಕ್ರಿಯಗೊಳಿಸುತ್ತದೆ. ಇದೆಲ್ಲಕ್ಕಿಂತ ಮಿಗಿಲಾಗಿ ಈ ವಾಚ್‌ನಲ್ಲಿ ತುರ್ತು SOS ಫೀಚರ್ಸ್‌ ಆಯ್ಕೆ ಪಡೆದಿದ್ದು, ವಿವಿಧ ರೀತಿಯಲ್ಲಿ ಬಳಕೆ ಆಗಲಿದೆ. ಉಳಿದಂತೆ ಈ ವಾಚ್‌ 24×7 ಹೃದಯ ಬಡಿತದ ಮಾನಿಟರಿಂಗ್, SpO2 ಮಾಪನ, ನಿದ್ರೆಯ ಟ್ರ್ಯಾಕಿಂಗ್ ಫೀಚರ್ಸ್‌ ಪಡೆದಿದೆ.

ಹಾಗೆಯೇ ಒತ್ತಡ ನಿರ್ವಹಣೆ ಮತ್ತು ಸ್ತ್ರೀ ಸೈಕಲ್ ಟ್ರ್ಯಾಕರ್ ಅನ್ನು ಹೊಂದಿದ್ದು, ಇತರ ನಾಯ್ಸ್ ಸ್ಮಾರ್ಟ್‌ವಾಚ್‌ಗಳಂತೆ ಅಗತ್ಯ ಆರೋಗ್ಯ ಮೇಲ್ವಿಚಾರಣೆ ಮೂಲಕ ಬಳಕೆದಾರರ ಆರೋಗ್ಯಕ್ಕೆ ಉತ್ತಮ ಕೊಡುಗೆ ನೀಡಲಿದೆ. ಮತ್ತು 100+ ಸ್ಪೋರ್ಟ್ಸ್ ಮೋಡ್‌ಗಳನ್ನು ಹೊಂದಿದ್ದು, ನಿಮ್ಮೆಲ್ಲಾ ದೈನಂದಿನ ಕಾರ್ಯಚಟುವಟಿಕೆಯನ್ನು ಉತ್ತಮವಾಗಿ ಮೇಲ್ವಿಚಾರಣೆ ಮಾಡಬಹುದಾಗಿದೆ.

ಇದರೊಂದಿಗೆ ನೋಟಿಫಿಕೇಶನ್‌, ಹವಾಮಾನ ನವೀಕರಣಗಳು, ಜ್ಞಾಪನೆಗಳು, ಅಲಾರ್ಮ್, ಕ್ಯಾಮೆರಾ ಕಂಟ್ರೋಲ್‌, ಮ್ಯೂಸಿಕ್‌ ಕಂಟ್ರೋಲ್, ಕ್ಯಾಲ್ಕುಲೇಟರ್ ಸೇರಿದಂತೆ ಇತರೆ ಫೀಚರ್ಸ್ ಅನ್ನು ಈ ವಾಚ್‌ ಪಡೆದುಕೊಂಡಿದ್ದು, IP68 ರೇಟಿಂಗ್‌ ಪಡೆದಿರುವ ಹಿನ್ನೆಲೆ ನೀರು ಮತ್ತು ಧೂಳಿನ ಪ್ರತಿರೋಧಕತೆ ಪಡೆದಿದೆ. ಅಂದರೆ ಇದನ್ನು ಎಲ್ಲಾ ಸಮಯದಲ್ಲೂ ಸಹ ಧರಿಸಬಹುದಾಗಿದೆ. ಆಂಡ್ರಾಯ್ಡ್‌ ಮತ್ತು ಐಓಎಸ್‌ ನೊಂದಿಗೆ ಹೊಂದಿಕೊಳ್ಳುವ ಈ ವಾಚ್‌ ನಿಮಗೆ 7 ದಿನಗಳ ಬ್ಯಾಟರಿ ಬ್ಯಾಕಪ್‌ ನೀಡಲಿದೆ.

ವಿಶೇಷ ಸೌಲಭ್ಯದೊಂದಿಗೆ ಹೊಸ ನಾಯ್ಸ್‌ ವಾಚ್‌ ಲಾಂಚ್‌! ಏನದು ಹೊಸ ಫೀಚರ್ಸ್‌?

ನಾಯ್ಸ್‌ಫಿಟ್‌ ಎವೊಲ್ವ್‌ 4 ಸ್ಮಾರ್ಟ್‌ವಾಚ್ ಬೆಲೆ: ಈ ಸ್ಮಾರ್ಟ್‌ವಾಚ್‌ನ ಪರಿಚಯಾತ್ಮಕ ಬೆಲೆ 3,999 ರೂ.ಗಳಾಗಿದೆ. ನೀವು ಈ ವಾಚ್‌ ಅನ್ನು ಅಧಿಕೃತ ವೆಬ್‌ಸೈಟ್‌ ಮೂಲಕ ನವೆಂಬರ್ 22 ರಿಂದ ಖರೀದಿ ಮಾಡಬಹುದಾಗಿದೆ. ಮೊದಲು ಖರೀದಿ ಮಾಡುವ ಗ್ರಾಹಕರಿಗೆ ಹೆಚ್ಚುವರಿ 500ರೂ.ಗಳ ಆಫರ್ ಸಿಗಲಿದೆ. ಈ ವಾಚ್ ಸ್ಪೇಸ್ ಬ್ಲೂ, ಕ್ಲಾಸಿಕ್ ಬ್ಲಾಕ್ ಮತ್ತು ಎಲೈಟ್ ಬ್ಲಾಕ್ (ಮೆಟಾಲಿಕ್ ಸ್ಟ್ರಾಪ್) ಬಣ್ಣಗಳಲ್ಲಿ ಬರುತ್ತದೆ.

Best Mobiles in India

English summary
Noise has just launched the NoiseFit Evolve 4 Smartwatch, which comes with an AMOLED display option, Bluetooth calling features.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+