Home
ಸುದ್ದಿಜಾಲ

ನಾಯ್ಸ್ HRX ಸ್ಪ್ರಿಂಟ್ ಸ್ಮಾರ್ಟ್‌ವಾಚ್ ಅನಾವರಣ: ವಿಶೇಷ ಫೀಚರ್ಸ್‌ ಸೌಲಭ್ಯ!

ನಾಯ್ಸ್‌ ಈಗಾಗಲೇ ಭಿನ್ನ ರೀತಿಯ ಸ್ಮಾರ್ಟ್‌ವಾಚ್‌ಗಳನ್ನು ಅನಾವರಣ ಮಾಡಿದ್ದು, ಇವು ಬಳಕೆದಾರರಿಗೆ ವಿವಿಧ ರೀತಿಯ ಸೌಲಭ್ಯಗಳನ್ನು ಕಲ್ಪಿಸಿಕೊಂಡು ಬರುತ್ತಿವೆ. ಅದರಂತೆ ನಾಯ್ಸ್‌ ಭಾರತದಲ್ಲಿ ಮತ್ತೊಂದು ಹೊಸ ಸ್ಮಾರ್ಟ್‌ವಾಚ್‌ ಅನ್ನು ಅನಾವರಣ ಮಾಡಿದ್ದು, ಈ ವಾಚ್‌ ಸುಲಭ ವಹಿವಾಟುಗಳಿಗಾಗಿ QR ಕೋಡ್‌ಗಳನ್ನು ಸಂಗ್ರಹಿಸಬಹುದಾದ ವಿಶೇಷ ಫೀಚರ್ಸ್‌ ಪಡೆದಿದೆ.

ಹೌದು, ನಾಯ್ಸ್‌ ಕಂಪೆನಿಯಿಂದ ಇದೀಗ ನಾಯ್ಸ್‌ HRX ಸ್ಪ್ರಿಂಟ್ ಸ್ಮಾರ್ಟ್‌ವಾಚ್ (Noise HRX Sprint Smartwatch) ಅನ್ನು ಭಾರತದಲ್ಲಿ ಅನಾವರಣ ಮಾಡಲಾಗಿದೆ.ಈ ವಾಚ್‌ ಅನ್ನು ಲೈಫ್ ಸ್ಟೈಲ್ ಟೆಕ್ ಬ್ರ್ಯಾಂಡ್ HRX ಸಹಭಾಗಿತ್ವದಲ್ಲಿ ತಯಾರಿಸಲಾಗಿದ್ದು, ನಯವಾದ ವಿನ್ಯಾಸವನ್ನು ಪಡೆದುಕೊಂಡಿದೆ. ಹಾಗೆಯೇ ಬ್ಲೂಟೂತ್ ಕಾಲಿಂಗ್‌ನಂತಹ ಹಲವು ಫೀಚರ್ಸ್‌ಗಳನ್ನು ಇದು ಹೊಂದಿದೆ. ಹಾಗಿದ್ರೆ, ಈ ವಾಚ್‌ನ ಪ್ರಮುಖ ಫೀಚರ್ಸ್‌ ಹಾಗೂ ಭಾರತದಲ್ಲಿ ಇದರ ಬೆಲೆ ಎಷ್ಟೆಂದು ಈ ಮೂಲಕ ತಿಳಿದುಕೊಳ್ಳೋಣ ಬನ್ನಿ.

ನಾಯ್ಸ್ HRX ಸ್ಪ್ರಿಂಟ್ ಸ್ಮಾರ್ಟ್‌ವಾಚ್ ಅನಾವರಣ: ವಿಶೇಷ ಫೀಚರ್ಸ್‌ ಸೌಲಭ್ಯ!


ನಾಯ್ಸ್‌HRX ಸ್ಪ್ರಿಂಟ್ ಸ್ಮಾರ್ಟ್‌ವಾಚ್ ವಿನ್ಯಾಸ: ಈ ವಿಶೇಷ ಸ್ಮಾರ್ಟ್‌ವಾಚ್‌ 1.91 ಇಂಚಿನ TFT ಡಿಸ್‌ಪ್ಲೇ ಹೊಂದಿದ್ದು, 550nits ಗರಿಷ್ಠ ಬ್ರೈಟ್‌ನೆಸ್‌ ನೀಡಲಿದೆ. ಹಾಗೆಯೇ 240×296 ಪಿಕ್ಸೆಲ್‌ ರೆಸಲ್ಯೂಶನ್‌ ಸಾಮರ್ಥ್ಯವನ್ನು ಹೊಂದಿದ್ದು, ಇದರೊಂದಿಗೆ 150 ಕ್ಕೂ ಹೆಚ್ಚು ಕ್ಲೌಡ್ ಆಧಾರಿತ ವಾಚ್ ಫೇಸ್‌ಗಳೊಂದಿಗೆ ಪ್ಯಾಕ್‌ ಆಗಿದೆ.

ನಾಯ್ಸ್‌HRX ಸ್ಪ್ರಿಂಟ್ ಸ್ಮಾರ್ಟ್‌ವಾಚ್ ಫೀಚರ್ಸ್‌: ಬ್ಲೂಟೂತ್ ಆವೃತ್ತಿ 5.2 ನಲ್ಲಿ ಕೆಲಸ ಮಾಡುವ ಈ ಸ್ಮಾರ್ಟ್‌ವಾಚ್‌ ಬ್ಲೂಟೂತ್ ಕರೆಗಳಿಗಾಗಿ ಇನ್‌ಬಿಲ್ಟ್ ಸ್ಪೀಕರ್ ಮತ್ತು ಮೈಕ್ರೊಫೋನ್‌ ಆಯ್ಕೆಯನ್ನು ಪಡೆದುಕೊಂಡಿದೆ. ಇದಿಷ್ಟೇ ಅಲ್ಲದೆ 10 ಫೋನ್ ಸಂಖ್ಯೆಗಳನ್ನು ಸೇವ್‌ ಮಾಡಿಕೊಳ್ಳಲು ಹಾಗೂ ಇತ್ತೀಚಿನ ಕರೆ ಇತಿಹಾಸವನ್ನು ತಕ್ಷಣವೇ ತಿಳಿದುಕೊಳ್ಳಲು ಅನುಕೂಲಕರವಾದ ಸೌಲಭ್ಯ ಹೊಂದಿದೆ.

ಈ ವಾಚ್‌ನ ಪ್ರಮುಖ ಫೀಚರ್ಸ್‌ಗಳಲ್ಲಿ ಒಂದಾಗಿರುವುದು QR ಕೋಡ್‌ಗಳನ್ನು ಸಂಗ್ರಹಿಸುವ ಸಾಮರ್ಥ್ಯ. ಹೌದು, ಈ ವಾಚ್‌ ಮೂಲಕ ಸುಲಭ ವಹಿವಾಟುಗಳಿಗಾಗಿ QR ಕೋಡ್‌ಗಳನ್ನು ಸಂಗ್ರಹಿಸುವ ಸಾಮರ್ಥ್ಯವನ್ನು ಒದಗಿಸಲಾಗಿದೆ. ಇದರೊಂದಿಗೆ ಗೂಗಲ್‌ ಅಸಿಸ್ಟೆಂಟ್‌ ಅಥವಾ ಸಿರಿ ಮೂಲಕ ಎಐ ವಾಯ್ಸ್‌ ಅಸಿಸ್ಟೆಂಟ್‌ಗೆ ಪ್ರವೇಶ ಪಡೆದುಕೊಳ್ಳಬಹುದಾಗಿದೆ. ಹಾಗೆಯೇ ನಾಯ್ಸ್‌ಫಿಟ್‌ ಆಪ್‌ಗೆ ಈ ವಾಚ್‌ ಬೆಂಬಲ ನೀಡಲಿದೆ.

ನಾಯ್ಸ್ HRX ಸ್ಪ್ರಿಂಟ್ ಸ್ಮಾರ್ಟ್‌ವಾಚ್ ಅನಾವರಣ: ವಿಶೇಷ ಫೀಚರ್ಸ್‌ ಸೌಲಭ್ಯ!

ಇನ್ನುಳಿದಂತೆ ಹೃದಯ ಬಡಿತ ಸೆನ್ಸರ್‌, ನಿದ್ರೆ ಟ್ರ್ಯಾಕರ್, ಒತ್ತಡ ಟ್ರ್ಯಾಕರ್, ಮಹಿಳೆಯರ ಆರೋಗ್ಯದ ಮೇಲ್ವಿಚಾರಣೆ ಮತ್ತು SpO2 ಸೆನ್ಸರ್‌ ಸೇರಿದಂತೆ ವಿವಿಧ ಆರೋಗ್ಯ ಮಾಹಿತಿಯನ್ನು ಒದಗಿಸುತ್ತದೆ. ಇದರೊಂದಿಗೆ ವಿವಿಧ ಚಟುವಟಿಕೆಗಳನ್ನು ಟ್ರ್ಯಾಕ್ ಮಾಡುವ ಉದ್ದೇಶಕ್ಕಾಗಿ ಈ ವಾಚ್‌ನಲ್ಲಿ 100ಕ್ಕೂ ಹೆಚ್ಚು ಸ್ಪೋರ್ಟ್ಸ್‌ ಮೋಡ್‌ಗಳನ್ನು ನೀಡಲಾಗಿದೆ.

ನಾಯ್ಸ್‌HRX ಸ್ಪ್ರಿಂಟ್ ಸ್ಮಾರ್ಟ್‌ವಾಚ್ ಬ್ಯಾಟರಿ ಸಾಮರ್ಥ್ಯ ಹಾಗೂ ಇತರೆ: ಈ ಸ್ಮಾರ್ಟ್‌ವಾಚ್‌ ಅನ್ನು ಒಂದು ಬಾರಿ ಪೂರ್ಣ ಚಾರ್ಜಿಂಗ್‌ ಮಾಡಿದರೆ ಬರೋಬ್ಬರಿ 7 ದಿನಗಳವರೆಗೆ ಬಳಕೆ ಮಾಡಲು ಅನುಮತಿಸುತ್ತದೆ. ಇದರೊಂದಿಗೆ ಇನ್‌ಬಿಲ್ಟ್‌ ಗೇಮ್‌ಗಳು, ಅಲಾರಾಂ, ಟೈಮರ್, ಸ್ಟಾಪ್‌ವಾಚ್ ಸೇರಿದಂತೆ ಇನ್ನಿತರೆ ಸಾಮಾನ್ಯ ಫೀಚರ್ಸ್‌ಗಳನ್ನು ಪಡೆದುಕೊಂಡಿದೆ. ಇದೆಲ್ಲಕ್ಕೂ ಮಿಗಿಲಾಗಿ ನೀರು ಮತ್ತು ಧೂಳಿನ ಪ್ರತಿರೋಧಕ್ಕಾಗಿ IP67 ರೇಟಿಂಗ್ ಅನ್ನು ಹೊಂದಿರುವುದು ವಿಶೇಷ.

ನಾಯ್ಸ್ HRX ಸ್ಪ್ರಿಂಟ್ ಸ್ಮಾರ್ಟ್‌ವಾಚ್ ಅನಾವರಣ: ವಿಶೇಷ ಫೀಚರ್ಸ್‌ ಸೌಲಭ್ಯ!

ನಾಯ್ಸ್‌HRX ಸ್ಪ್ರಿಂಟ್ ಸ್ಮಾರ್ಟ್‌ವಾಚ್ ಬೆಲೆ ಹಾಗೂ ಲಭ್ಯತೆ: ಈ ಸ್ಮಾರ್ಟ್‌ವಾಚ್‌ ಭಾರತದಲ್ಲಿ 1,999ರೂ.ಗಳ ಬೆಲೆ ಹೊಂದಿದ್ದು, ಫೈರ್-ಬೋಲ್ಟ್ ಟ್ಯಾಂಕ್, ಬೋಟ್ ವೇವ್ ಎಲೆಕ್ಟ್ರಾ ಸೇರಿದಂತೆ ವಿವಿಧ ಸ್ಮಾರ್ಟ್‌ವಾಚ್‌ಗಳಿಗೆ ಸ್ಪರ್ಧೆ ನೀಡಲಿದೆ. ಜೊತೆಗೆ ವಿಂಟೇಜ್ ಬ್ರೌನ್, ಜೆಟ್ ಬ್ಲಾಕ್, ಆಕ್ಟಿವ್ ಬ್ಲೂ, ಆಕ್ಟಿವ್ ಬ್ಲ್ಯಾಕ್ ಅಥವಾ ಆಕ್ಟಿವ್ ಗ್ರೇ ಬಣ್ಣಗಳಲ್ಲಿ ಈ ವಾಚ್‌ ಕಾಣಿಸಿಕೊಂಡಿದೆ. ಅದರಂತೆ ಈ ವಾಚ್‌ ಅನ್ನು ನೀವು ಅಮೆಜಾನ್ ಹಾಗೂ ಮೈಂತ್ರಾ ಮೂಲಕ ಖರೀದಿ ಮಾಡಬಹುದು.

Best Mobiles in India

English summary
Noise HRX Sprint Smartwatch Unveiled in India and this watch Gets QR Code Store Option for Easy Transactions It also has Bluetooth calling facility.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+