Home
ಸುದ್ದಿಜಾಲ

Noise: ಭಾರತದ ಮೊದಲ OWS ನಾಯ್ಸ್ ಪ್ಯೂರ್ ಪಾಡ್‌ ಲಾಂಚ್‌: ವಿಶೇಷ ತಂತ್ರಜ್ಞಾನ! ಬೆಲೆ ಎಷ್ಟು?

ನಾಯ್ಸ್‌ (Noise) ಎಂದಾಕ್ಷಣ ಅತ್ಯುತ್ತಮ ಸ್ಮಾರ್ಟ್‌ವಾಚ್‌ಗಳು ನಮ್ಮ ಕಣ್ಣ ಮುಂದೆ ಬರುತ್ತವೆ. ಈ ಮೂಲಕ ಈಗಾಗಲೇ ಸಾಕಷ್ಟು ಗ್ರಾಹಕರು ವಿವಿಧ ಪ್ರಯೋಜನ ಪಡೆದುಕೊಳ್ಳುತ್ತಿದ್ದಾರೆ. ಇದರ ನಡುವೆ ಈಗ ಸ್ಮಾರ್ಟ್‌ ಗ್ಯಾಜೆಟ್ ಪ್ರಿಯರು ಅಚ್ಚರಿ ಪಡುವ ಡಿವೈಸ್ ಅನ್ನು ನಾಯ್ಸ್‌ ಘೋಷಣೆ ಮಾಡಿದೆ.

ಹೌದು, ನಾಯ್ಸ್‌ ಭಾರತದ ಮೊದಲ OWS ನಾಯ್ಸ್ ಪ್ಯೂರ್ ಪಾಡ್ಸ್‌ (Noise OWS Noise Pure Pods) ಅನ್ನು ಏರ್‌ವೇವ್ ಟಿಎಮ್‌ ತಂತ್ರಜ್ಞಾನದೊಂದಿಗೆ ( AirWaveTM technology) ಅನಾವರಣ ಮಾಡಿದೆ. ಈ ಮೂಲಕ ನಾಯ್ಸ್ ಭಾರತದ ಮೊದಲ ಓಪನ್ ವೈರ್‌ಲೆಸ್ ಸ್ಟಿರಿಯೊ, ನಾಯ್ಸ್ ಪ್ಯೂರ್ ಪಾಡ್ಸ್ ಅನ್ನು ಅನಾವರಣ ಮಾಡಿದ ಕೀರ್ತಿಯನ್ನು ಪಡೆಯಲಿದೆ. ಹಾಗಿದ್ರೆ, ಇದರ ಫೀಚರ್ಸ್‌ ಏನು?, ಭಾರತದಲ್ಲಿ ಇದರ ಬೆಲೆ ಎಷ್ಟು ಅನ್ನೋ ಮಾಹಿತಿ ಇಲ್ಲಿದೆ ನೋಡಿ.

ಭಾರತದ ಮೊದಲ OWS ನಾಯ್ಸ್ ಪ್ಯೂರ್ ಪಾಡ್‌ ಲಾಂಚ್‌:ವಿಶೇಷ ತಂತ್ರಜ್ಞಾನ!ಬೆಲೆ ಎಷ್ಟು?

ಓಪನ್ ವೈರ್‌ಲೆಸ್ ಸ್ಟಿರಿಯೋ ಪ್ಯೂರ್ ಪಾಡ್ಸ್‌: ನಾಯ್ಸ್ ಭಾರತದಲ್ಲಿ ಮೊದಲ ಬಾರಿಗೆ ಓಪನ್ ವೈರ್‌ಲೆಸ್ ಸ್ಟಿರಿಯೋವನ್ನು ಅನಾವರಣಗೊಳಿಸಿದೆ. ಈ ವಿಶೇಷ ನಾಯ್ಸ್ ಪ್ಯೂರ್ ಪಾಡ್ಸ್, ಆರಾಮದಾಯಕ ಮತ್ತು ಉತ್ತಮ ಧ್ವನಿ ಗುಣಮಟ್ಟದ ಭರವಸೆಯನ್ನು ನೀಡುತ್ತದೆ. ಈ ಡಿವೈಸ್‌ ಏರ್‌ವೇವ್ ಟೆಕ್ನಾಲಜಿಯಿಂದ ರನ್‌ ಆಗಲಿದೆ. ಈ ಮೂಲಕ ಸಾಟಿಯಿಲ್ಲದ ಮತ್ತು ಉತ್ತಮವಾದ ಧ್ವನಿ ಗುಣಮಟ್ಟವನ್ನು ನೀಡಲು ನಿಖರವಾದ ಗಾಳಿಯ ವಹನ ಕಾರ್ಯವಿಧಾನಗಳನ್ನು ಬಳಕೆ ಮಾಡಿಕೊಳ್ಳುತ್ತದೆ.

ಇದಲ್ಲದೆ, ನಾಯ್ಸ್ ಪ್ಯೂರ್ ಪಾಡ್ಸ್‌ 16mm ನಿಯೋ ಡೈಮಿಯಮ್ ಡೈನಾಮಿಕ್ ಡ್ರೈವರ್‌ಗಳನ್ನು ಹೊಂದಿದ್ದು, ಇದು ಡಿಟ್ಯಾಚೇಬಲ್ ಪ್ಯೂರ್ ಬ್ಯಾಂಡ್ ಗ್ರಾಹಕೀಕರಣದ ಆಯ್ಕೆಯನ್ನೂ ಸಹ ನೀಡಿದೆ. ಅಂದರೆ ಬಳಕೆದಾರರು ಸಲೀಸಾಗಿ ಪಾಡ್‌ಗಳನ್ನು ನೆಕ್‌ಬ್ಯಾಂಡ್ ಆಗಿ ಪರಿವರ್ತಿಸಲು ಅನುವು ಮಾಡಿಕೊಡುತ್ತದೆ. ಇದರಿಂದ ವೈವಿಧ್ಯಮಯ ಆದ್ಯತೆಗಳು ಮತ್ತು ಶೈಲಿಗಳನ್ನು ಈ ಮೂಲಕ ನಾಯ್ಸ್‌ ಖಾತರಿಪಡಿಸಿದೆ.

ಭಾರತದ ಮೊದಲ OWS ನಾಯ್ಸ್ ಪ್ಯೂರ್ ಪಾಡ್‌ ಲಾಂಚ್‌:ವಿಶೇಷ ತಂತ್ರಜ್ಞಾನ!ಬೆಲೆ ಎಷ್ಟು?

ಈ ಪಾಡ್ಸ್‌ ಯಾವುದೇ ಪರಿಸರದಲ್ಲಿ ಸುಧಾರಿತ ಕರೆ ಅನುಭವಗಳಿಗಾಗಿ ಕ್ವಾಡ್ ಮೈಕ್‌ ಜೊತೆಗೆ BTv5.3 ಮೂಲಕ ತಡೆರಹಿತ ಮತ್ತು ತ್ವರಿತ ಜೋಡಣೆಯ ಫೀಚರ್ಸ್‌ ಪಡೆದುಕೊಂಡಿದೆ. ಹಾಗೆಯೇ IPX5 ನೀರಿನ ಪ್ರತಿರೋಧದ ರೇಟಿಂಗ್ ಸಹ ಇದ್ದು, ಫಿಟ್‌ನೆಸ್ ಚಟುವಟಿಕೆಗಳು ಮತ್ತು ಹೊರಾಂಗಣದ ಬಳಕೆಗೆ ಉತ್ತಮ ಆಯ್ಕೆಯಾಗಿದೆ. ಇದರೊಂದಿಗೆ ಟಚ್‌ ಕಂಟ್ರೋಲ್‌ ಆಯ್ಕೆ ಸಹ ಇದ್ದು, ಈ ಮೂಲಕ ಸುಲಭವಾಗಿ ಇದನ್ನು ಬಳಕೆ ಮಾಡಬಹುದಾಗಿದೆ.

ಓಪನ್ ವೈರ್‌ಲೆಸ್ ಸ್ಟಿರಿಯೋ ಪ್ಯೂರ್ ಪಾಡ್ಸ್ ಬ್ಯಾಟರಿ ಹಾಗೂ ಇತರೆ: ನಾಯ್ಸ್ ಪ್ಯೂರ್ ಪಾಡ್ಸ್‌ ಇನ್‌ಸ್ಟಾಚಾರ್ಜ್ ತಂತ್ರಜ್ಞಾನವನ್ನು ಹೊಂದಿದ್ದು, ಕೇವಲ 10 ನಿಮಿಷದ ಸ್ವಿಫ್ಟ್ ಚಾರ್ಜ್‌ನೊಂದಿಗೆ 180 ನಿಮಿಷಗಳ ಬ್ಯಾಕಪ್‌ ಅನ್ನು ಪಡೆದುಕೊಳ್ಳಬಹುದಾಗಿದೆ. ದೀರ್ಘ ಮತ್ತು ಹೆಚ್ಚು ಆರಾಮದಾಯಕ ಆಲಿಸುವ ಅವಧಿಗಳನ್ನು ಈ ಮೂಲಕ ಖಾತ್ರಿಪಡಿಸುತ್ತದೆ.

ಏನಿದು ಓಪನ್ ವೈರ್‌ಲೆಸ್ ಸ್ಟಿರಿಯೋ?: OWS ಇಯರ್‌ಬಡ್‌ಗಳು ತೆರೆದ ಇಯರ್ ಹೆಡ್‌ಫೋನ್‌ಗಳಾಗಿವೆ. ಇವು ಹೊರ ಕಿವಿಯ ಮೇಲ್ಭಾಗದಲ್ಲಿ ಕೂರುವಂತ ವಿನ್ಯಾಸ ಪಡೆದುಕೊಂಡಿದ್ದು, ಅದಾಗ್ಯೂ ನೇರವಾಗಿ ಕಿವಿ ಕಾಲುವೆಗೆ ಸೌಂಡ್‌ ಅನ್ನು ನೇರವಾಗಿ ತಲುಪಿಸುವ ಕೆಲಸ ಮಾಡುತ್ತದೆ. ಅಷ್ಟೇ ಅಲ್ಲದೆ ಧರಿಸುವವರು ತಮ್ಮ ಸುತ್ತಮುತ್ತಲಿನ ಪ್ರದೇಶದಲ್ಲಿ ಏನೆಲ್ಲಾ ನಡೆಯುತ್ತಿದೆ ಎನ್ನುವುದನ್ನೂ ಸಹ ಆಲಿಸಿಕೊಳ್ಳಬಹುದು. ಜೊತೆಗೆ ಕಿವಿಯ ಆರೋಗ್ಯವನ್ನೂ ಈ ಮೂಲಕ ಕಾಪಾಡಿಕೊಳ್ಳಬಹುದಾಗಿದೆ.

ಭಾರತದ ಮೊದಲ OWS ನಾಯ್ಸ್ ಪ್ಯೂರ್ ಪಾಡ್‌ ಲಾಂಚ್‌:ವಿಶೇಷ ತಂತ್ರಜ್ಞಾನ!ಬೆಲೆ ಎಷ್ಟು?

ಓಪನ್ ವೈರ್‌ಲೆಸ್ ಸ್ಟಿರಿಯೊ ಪ್ಯೂರ್ ಪಾಡ್ಸ್ ಬೆಲೆ ಹಾಗೂ ಲಭ್ಯತೆ: ಗ್ರಾಹಕರು ಈ ಡಿವೈಸ್‌ ಅನ್ನು ಖರೀದಿ ಮಾಡಲು ಆಯ್ಕೆ ಮುಂಗಡ-ಆರ್ಡರ್ ಪಾಸ್ ಅನ್ನು ಪ್ರತ್ಯೇಕವಾಗಿ ಅಧಿಕೃತ ಸೈಟ್‌ಗೆ ಭೇಟಿ ನೀಡಿ ಕಾಯ್ದಿರಿಸಬಹುದು. ಈ ಪಾಸ್‌ ಬೆಲೆ 499 ರೂ.ಗಳಾಗಿದೆ. ಇದರೊಂದಿಗೆ 800 ರೂ.ಗಳ ರಿಯಾಯಿತಿ ಜೊತೆಗೆ 2,000 ರೂ.ಗಳ ಮೌಲ್ಯದ ನಂಬಲಾಗದ ಪ್ರಯೋಜನಗಳನ್ನು ಖರೀದಿ ವೇಳೆ ಪಡೆದುಕೊಳ್ಳಬಹುದಾಗಿದೆ. ಇದು ಎರಡು ಬಣ್ಣದಲ್ಲಿ ಲಭ್ಯ ಇದ್ದು, ಲಾಂಚ್‌ ಆಫರ್ ಹಿನ್ನೆಲೆ 2,999ರೂ.ಗಳಲ್ಲಿ ನೀವು ಇದನ್ನು ಖರೀದಿ ಮಾಡಬಹುದಾಗಿದೆ.

Best Mobiles in India

English summary
Noise has unveiled India's first OWS Noise Pure Pods with AirWaveTM technology.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+