ರಿಲಾಯನ್ಸ್‌ ಡಿಜಿಟಲ್‌ ಸ್ಟೋರ್‌ಗಳಲ್ಲಿ ಈಗ ನಾಯ್ಸ್‌ ಆಡಿಯೋ ಡಿವೈಸ್‌ಗಳು ಲಭ್ಯ!

|

ಭಾರತದ ಸಂಪರ್ಕಿತ ಜೀವನಶೈಲಿ ಬ್ರಾಂಡ್ ನಾಯ್ಸ್, ಭಾರತದ ಅತಿದೊಡ್ಡ ಮತ್ತು ಮುಂಚೂಣಿ ರೀಟೇಲ್‌ಗಳಲ್ಲಿ ಒಂದಾದ ರಿಲಯನ್ಸ್ ರಿಟೇಲ್ ಜೊತೆಗಿನ ಪಾಲುದಾರಿಕೆಯನ್ನು ಪ್ರಕಟಿಸಿದೆ. ಈ ಮೂಲಕ ಅದು ಭಾರತದಲ್ಲಿನ ತನ್ನ ಆಫ್‌ಲೈನ್ ರೀಟೇಲ್ ಅಸ್ತಿತ್ವವನ್ನು ಮತ್ತಷ್ಟು ಬಲಪಡಿಸಲು ಮುಂದಾಗಿದೆ.

ರಿಲಾಯನ್ಸ್‌ ಡಿಜಿಟಲ್‌ ಸ್ಟೋರ್‌ಗಳಲ್ಲಿ ಈಗ ನಾಯ್ಸ್‌ ಆಡಿಯೋ ಡಿವೈಸ್‌ಗಳು ಲಭ್ಯ!

ಈ ಪಾಲುದಾರಿಕೆ ಅಡಿಯಲ್ಲಿ, ನಾಯ್ಸ್‌ನ ಸಂಪೂರ್ಣ ಸ್ಮಾರ್ಟ್ ಉತ್ಪನ್ನಗಳು ರಿಲಯನ್ಸ್ ಡಿಜಿಟಲ್‌ನ ಆನ್‌ಲೈನ್ ಮತ್ತು ಆಫ್‌ಲೈನ್ ಮಳಿಗೆಗಳಲ್ಲಿ ಈಗ ಲಭ್ಯವಾಗುತ್ತಿವೆ. ನೂತನವಾಗಿ ಪರಿಚಯಿಸಲಾದ 1.55" ಟ್ರೂ ವೀವ್ ಡಿಸ್‌ಪ್ಲೇ ಸಾಧನವನ್ನು ಒಳಗೊಂಡ ಕಲರ್‌ಫಿಟ್ ಪ್ರೋ 3 ಸ್ಮಾರ್ಟ್ ವಾಚ್‌ಗಳ ಶ್ರೇಣಿಯ ಉತ್ಪನ್ನಗಳೂ ರಿಲಯನ್ಸ್ ಡಿಜಿಟಲ್ ಸ್ಟೋರ್‌ಗಳಲ್ಲಿ ಲಭ್ಯ.

ಭಾರತದ ಅತಿ ದೊಡ್ಡ ಮಾದರಿ ರೀಟೇಲ್ (ಎಲ್‌ಎಫ್‌ಆರ್) ಸರಪಣಿಯಾದ ರಿಲಯನ್ಸ್ ರಿಟೇಲ್‌ನ ವಿಶಾಲ ನೆಟ್ವರ್ಕ್ ಮತ್ತು ತಲುಪುವ ಸಾಮರ್ಥ್ಯದಿಂದಾಗಿ ನಾಯ್ಸ್, ಆಫ್‌ಲೈನ್ ಮತ್ತು ಆನ್‌ಲೈನ್ ವೇದಿಕೆಗಳ ಮೂಲಕ ಭಾರತದಲ್ಲಿನ ತನ್ನ ತಳಹದಿಯನ್ನು ಭದ್ರಪಡಿಸಿಕೊಳ್ಳಲು ಹಾಗೂ ಬೃಹತ್ ಗ್ರಾಹಕ ನೆಲೆಯ ವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳಲು ಉದ್ದೇಶಿಸಿದೆ.

ರಿಲಾಯನ್ಸ್‌ ಡಿಜಿಟಲ್‌ ಸ್ಟೋರ್‌ಗಳಲ್ಲಿ ಈಗ ನಾಯ್ಸ್‌ ಆಡಿಯೋ ಡಿವೈಸ್‌ಗಳು ಲಭ್ಯ!

ಈ ಸಹಭಾಗಿತ್ವದ ಬಗ್ಗೆ ಮಾತನಾಡಿರುವ ನಾಯ್ಸ್ ಸಹ ಸಂಸ್ಥಾಪಕ ಗೌರವ್ ಖತ್ರಿ, ''ರಿಲಯನ್ಸ್ ಡಿಜಿಟಲ್‌ನ ರೀಟೇಲ್ ಜತೆ ದೇಶಾದ್ಯಂತ ನಮ್ಮ ಪ್ರಸ್ತುತ ಆನ್‌ಲೈನ್ ಪಾಲುದಾರಿಕೆ ಪಡೆದುಕೊಳ್ಳಲು ಸಂತಸವಾಗುತ್ತಿದೆ. ಈ ಸಹಭಾಗಿತ್ವದಿಂದ, ನಾವು ನಮ್ಮ ಆಫ್‌ಲೈನ್ ಅಸ್ತಿತ್ವವನ್ನು ಬಲಪಡಿಸಿಕೊಂಡಿರುವುದು ಮಾತ್ರವಲ್ಲದೆ, ಮತ್ತಷ್ಟು ಗ್ರಾಹಕರಿಗೆ ಸೇವೆ ಸಲ್ಲಿಸಲು ನಮಗೆ ಸಾಧ್ಯವಾಗಲಿದೆ. ನಾವು ಮಾಡಿಕೊಳ್ಳುವ ಪ್ರತಿ ಪಾಲುದಾರಿಕೆಯಿಂದಲೂ ನಮ್ಮ ಗ್ರಾಹಕರಿಗೆ ಮತ್ತಷ್ಟು ಹತ್ತಿರವಾಗುವುದು ಮತ್ತು ಸ್ಮಾರ್ಟ್ ಉತ್ಪನ್ನಗಳು ದೇಶದೆಲ್ಲೆಡೆ ಪ್ರತಿಯೊಬ್ಬರಿಗೂ ಲಭ್ಯವಂತಾಗುವುದು ನಮ್ಮ ಉದ್ದೇಶವಾಗಿದೆ'' ಎಂದರು.

ಪಾಲುದಾರಿಕೆ ಕುರಿತು ಮಾತನಾಡಿದ ರಿಲಯನ್ಸ್ ಡಿಜಿಟಲ್‌ನ ಮುಖ್ಯ ಕಾರ್ಯನಿರ್ವಾಹಕ ಬ್ರಿಯಾನ್ ಬೇಡ್, ''ನಮ್ಮ ಮಳಿಗೆಗಳಲ್ಲಿ ನಾಯ್ಸ್‌ಅನ್ನು ತರುತ್ತಿರುವುದಕ್ಕೆ ಮತ್ತು ನಮ್ಮಲ್ಲಿನ ವೇರಬಲ್ ಶ್ರೇಣಿಯ ವಿಭಾಗವನ್ನು ವಿಸ್ತರಿಸುತ್ತಿರುವುದಕ್ಕೆ ಸಂತಸವಾಗುತ್ತಿದೆ. ನಾಯ್ಸ್ ನಿರಂತರವಾಗಿ ಅತ್ಯಧಿಕ ಗುಣಮಟ್ಟದ ಉತ್ಪನ್ನಗಳನ್ನು ನೀಡುತ್ತಿದೆ ಮತ್ತು ಎಲ್ಲ ಗ್ರಾಹಕರಿಗೂ ತಮ್ಮ ತಂತ್ರಜ್ಞಾನ ಲಭ್ಯವಾಗುವಂತೆ ಮಾಡುವ ಅವರ ಉದ್ದೇಶವು, ಪ್ರತಿಯೊಬ್ಬರಿಗೂ ತಂತ್ರಜ್ಞಾನ ದೊರಕುವಂತೆ ಮಾಡುವ ರಿಲಯನ್ಸ್ ಡಿಜಿಟಲ್‌ನ ಬದ್ಧತೆಯೊಂದಿಗೆ ನಿಜಕ್ಕೂ ಪೂರಕವಾಗಿದೆ. ಮುಂದಿನ ವರ್ಷಗಳಲ್ಲಿ ಪ್ರಬಲ, ಅರ್ಥವತ್ತಾದ ಪಾಲುದಾರಿಕೆಯನ್ನು ನಾವು ನಿರೀಕ್ಷಿಸುತ್ತಿದ್ದೇವೆ'' ಎಂದು ಹೇಳಿದರು.

ರಿಲಾಯನ್ಸ್‌ ಡಿಜಿಟಲ್‌ ಸ್ಟೋರ್‌ಗಳಲ್ಲಿ ಈಗ ನಾಯ್ಸ್‌ ಆಡಿಯೋ ಡಿವೈಸ್‌ಗಳು ಲಭ್ಯ!

ಭಾರತದಲ್ಲಿ ಹಿಯರಬಲ್ ಮತ್ತು ವೇರಬಲ್ ಉತ್ಪನ್ನಗಳಿಗೆ ಹೆಚ್ಚುತ್ತಿರುವ ಬೇಡಿಕೆಗೆ ಅನುಗುಣವಾಗಿ ನಾಯ್ಸ್ ಪೂರೈಕೆ ಮಾಡುತ್ತಿದೆ ಮತ್ತು ಎರಡೂ ವಿಭಾಗಗಳಲ್ಲಿ ಮಾರುಕಟ್ಟೆ ನಾಯಕನಾಗಿ ಬೆಳೆದಿದೆ. ಈ ಕಂಪೆನಿಯು ಇತ್ತೀಚೆಗೆ ಭಾರತದ ನಂಬರ್ 1 ವಾಚ್ ಬ್ರ್ಯಾಂಡ್ ಎಂದು ಐಡಿಸಿಯ ವರ್ಲ್ಡ್‌ವೈಡ್ ಕ್ವಾರ್ಟರ್ಲಿ ವೇರಬಲ್ ಡಿವೈಸ್ ಟ್ರ್ಯಾಕರ್, ಕ್ಯೂ4, 2020 ಗುರುತಿಸಿದೆ. ಪ್ರಸ್ತುತ ಈ ಬ್ರಾಂಡ್‌ನ ಮಾರುಕಟ್ಟೆ ಷೇರು ವರದಿಯಲ್ಲಿ ಉಲ್ಲೇಖಿಸಿರುವಂತೆ ಯುನಿಟ್ ಶಿಪ್‌ಮೆಂಟ್ ಆಧಾರದಲ್ಲಿ ಶೇ 24.5ರಷ್ಟಿದೆ. ನಾಯ್ಸ್ ಕಳೆದ 24 ತಿಂಗಳಲ್ಲಿ ವರ್ಷದಿಂದ ವರ್ಷಕ್ಕೆ 30 ಪಟ್ಟು ಹೆಚ್ಚು ಗಮನಾರ್ಹ ಪ್ರಗತಿ ಸಾಧಿಸಿದೆ.

Best Mobiles in India

English summary
Noise Partners with Reliance Retail to Expand its Presence in India.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X