ನಾಯ್ಸ್‌ಫಿಟ್ ಆಕ್ಟಿವ್ 2 ಸ್ಮಾರ್ಟ್ ವಾಚ್ ಲಾಂಚ್! ಅಮೋಲೆಡ್ ಡಿಸ್‌ಪ್ಲೇ... ಬೆಲೆ ಎಷ್ಟು?
ನಾಯ್ಸ್ ಕಂಪೆನಿ (Noise Company) ಸುಧಾರಿತ ಫೀಚರ್ಸ್ ಆಯ್ಕೆಯೊಂದಿಗೆ ಸಾಕಷ್ಟು ಧರಿಸಬಹುದಾದ ಡಿವೈಸ್‌ಗಳನ್ನು ಲಾಂಚ್ ಮಾಡಿದೆ. ಈ ವಿಭಾಗದಲ್ಲಿ ಈಗ ಮಗದೊಂದು ಆಕರ್ಷಕ ಸ್ಮಾರ್ಟ್‌ವಾಚ್ ಸೇರಿಕೊಂಡಿದೆ. ಈ ಸ್ಮಾರ್ಟ್‌ವಾಚ್ ಅಮೋಲೆಡ್ ಡಿಸ್‌ಪ್ಲೇ ಹೊಂದಿದೆ.
ಹೌದು, ಈಗಾಗಲೇ ಸ್ಮಾರ್ಟ್‌ವಾಚ್ ವಿಭಾಗದಲ್ಲಿ ಸಾಕಷ್ಟು ವಾಚ್‌ಗಳನ್ನು ಕಾಣಬಹುದಾಗಿದೆ. ಈ ನಡುವೆ ನಾಯ್ಸ್ ಆಕ್ಟಿವ್ 2 ಸ್ಮಾರ್ಟ್ ವಾಚ್ (NoiseFit Active 2 Smart Watch) ಲಾಂಚ್ ಆಗಿದ್ದು , ಸ್ಮಾರ್ಟ್‌ವಾಚ್ ಪ್ರಿಯರಿಗೆ ಇಷ್ಟವಾಗಲಿದೆ. ಯಾಕೆಂದರೆ ಈ ವಾಚ್ 600 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಆಯ್ಕೆ ಹೊಂದಿದ್ದು, 150 ಕ್ಕೂ ಹೆಚ್ಚು ವಾಚ್ ಫೇಸ್ ಬೆಂಬಲ ಪಡೆದಿದೆ. ಹಾಗಿದ್ರೆ ಬನ್ನಿ ಈ ವಾಚ್‌ನ ಪ್ರಮುಖ ಫೀಚರ್ಸ್ ಹಾಗೂ ಇದರ ಬೆಲೆ ಎಷ್ಟು ಅನ್ನೋ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಡಾಗಿದೆ ಓದಿರಿ.

ನಾಯ್ಸ್‌ಫಿಟ್ ಆಕ್ಟಿವ್ 2 ಸ್ಮಾರ್ಟ್ ವಾಚ್: ಈ ಸ್ಮಾರ್ಟ್‌ವಾಚ್ ಅನ್ನು ಮೆಟಲ್‌ನಿಂದ ನಿರ್ಮಾಣ ಮಾಡಲಾಗಿದೆ. ಜೊತೆಗೆ ಕಸ್ಟಮೈಸೇಶನ್‌ಗಾಗಿ ವಿವಿಧ ಸ್ಟ್ರಾಪ್ ಆಯ್ಕೆಗಳೊಂದಿಗೆ ಸುಲಭವಾದ ನ್ಯಾವಿಗೇಷನ್‌ಗಾಗಿ ಆಕರ್ಷಕ ಕ್ರೌನ್ ಬಟನ್‌ನೊಂದಿಗೆ 1.46 ಇಂಚಿನ ಹೈಪರ್ ವಿಷನ್ ಅಮೋಲೆಡ್ ಡಿಸ್‌ಪ್ಲೇ ಮತ್ತು 600 ನಿಟ್ಸ್ ಬ್ರೈಟ್‌ನೆಸ್ ಆಯ್ಕೆ ಪಡೆದುಕೊಂಡಿದೆ. ಹಾಗೆಯೇ 150 ಕ್ಕೂ ಹೆಚ್ಚು ವಾಚ್ ಫೇಸ್‌ಗಳನ್ನು ಈ ವಾಚ್‌ನಲ್ಲಿ ಕಾಣಬಹುದು.
ಇದರೊಂದಿಗೆ ಈ ಸ್ಮಾರ್ಟ್ ವಾಚ್ ಟ್ರೂ ಸಿಂಕ್ ತಂತ್ರಜ್ಞಾನವನ್ನು ಹೊಂದಿದೆ. ಇದು ಬ್ಲೂಟೂತ್ ಕರೆ ಅನುಭವವನ್ನು ಹೆಚ್ಚಿಗೆ ಮಾಡುತ್ತದೆ. ಅಲ್ಲದೆ ಬ್ಲೂಟೂತ್ ಆವೃತ್ತಿ 5.3 ಸಂಪರ್ಕವನ್ನು ಹೊಂದಿದ್ದು, ನಾಯ್ಸ್ ಬುಜ್‌ನೊಂದಿಗೆ, ಬಳಕೆದಾರರು ವಾಚ್ ಡಯಲ್ ಪ್ಯಾಡ್‌ನಿಂದ ನೇರವಾಗಿ ಕರೆಗಳನ್ನು ಮಾಡಬಹುದಾಗಿದೆ.ಇಷ್ಟೇ ಅಲ್ಲದೆ ನಾಯ್ಸ್ ಫಿಟ್ ಆಕ್ಟಿವ್ 2 ನಲ್ಲಿ 10 ಸಂಪರ್ಕ ವಿವರಗಳನ್ನು ಸೇವ್ ಮಾಡಿಕೊಳ್ಳಬಹುದಾಗಿದೆ.
ಇನ್ನು ನಾಯ್ಸ್ ಹೆಲ್ತ್ ಸೂಟ್ ಬಳಕೆದಾರರಿಗೆ ಹೃದಯ ಬಡಿತ, ರಕ್ತದ ಆಮ್ಲಜನಕ (SpO2), ನಿದ್ರೆಯ ಮಾದರಿಗಳು ಮತ್ತು ಒತ್ತಡದ ಮಟ್ಟಗಳಂತಹ ಅಗತ್ಯ ಆರೋಗ್ಯ ಮೆಟ್ರಿಕ್‌ಗಳನ್ನು ಮೇಲ್ವಿಚಾರಣೆ ಮಾಡುತ್ತದೆ. ಹಾಗೆಯೇ ಇದು ವಿವಿಧ ದೈಹಿಕ ಚಟುವಟಿಕೆಗಳಿಗಾಗಿ 100 ಸ್ಪೋರ್ಟ್ಸ್ ಮೋಡ್ ಆಯ್ಕೆ ಪಡೆದಿದ್ದು, ಬಳಕೆದಾರರಿಗೆ ಭಿನ್ನ ಅನುಭವ ನೀಡಲಿದೆ.

ಇದರೊಂದಿಗೆ ಈ ಸ್ಮಾರ್ಟ್‌ವಾಚ್ ಒಂದು ದೈನಂದಿನ ಜ್ಞಾಪನೆಗಳು ಮತ್ತು ಹವಾಮಾನ ಮುನ್ಸೂಚನೆಗಳಿಗಾಗಿ ಸಂಯೋಜಿತ ಉತ್ಪಾದಕತೆಯ ಸೂಟ್ ಅನ್ನು ಹೊಂದಿದೆ. ಹಾಗೂ IP68 ರೇಟಿಂಗ್ ಹೊಂದಿದ್ದು, ನೀರು ಮತ್ತು ಧೂಳು ನಿರೋಧಕವಾಗಿದೆ. ಈ ಮೂಲಕ ವಿವಿಧ ಪರಿಸರದಲ್ಲಿ ಈ ಸ್ಮಾರ್ಟ್‌ವಾಚ್ ಅನ್ನು ಬಳಕೆ ಮಾಡಬಹುದಾಗಿದೆ. ಇದೆಲ್ಲದರ ಜೊತೆಗೆ ಈ ಸ್ಮಾರ್ಟ್‌ವಾಚ್ 10 ದಿನಗಳ ಬ್ಯಾಟರಿ ಬ್ಯಾಕಪ್ ಅನ್ನು ನೀಡಲಿದೆ.
ನಾಯ್ಸ್‌ಫಿಟ್ ಆಕ್ಟಿವ್ 2 ಸ್ಮಾರ್ಟ್ ವಾಚ್ ಬೆಲೆ ಹಾಗೂ ಲಭ್ಯತೆ: ಈ ವಾಚ್ ಅನ್ನು 3,499 ರೂ.ಗಳ ಪರಿಚಯಾತ್ಮಕ ಬೆಲೆಯಲ್ಲಿ ಅನಾವರಣಗೊಳಿಸಲಾಗಿದೆ. ಇದನ್ನು ಇ-ಕಾಮರ್ಸ್ ಪ್ಲಾಟ್‌ಫಾರ್ಮ್ ಫ್ಲಿಪ್‌ಕಾರ್ಟ್ ಮತ್ತು ನಾಯ್ಸ್‌ನ ಅಧಿಕೃತ ವೆಬ್‌ಸೈಟ್‌ನಿಂದ ಖರೀದಿ ಮಾಡಬಹುದು. ಹಾಗೆಯೇ ಈ ಸ್ಮಾರ್ಟ್‌ವಾಚ್ ವಿವಿಧ ಲೆದರ್ ಸ್ಟ್ರಾಪ್ ಆಯ್ಕೆಗಳೊಂದಿಗೆ ವಿಂಟೇಜ್ ಬ್ರೌನ್, ಮಿಡ್ನೈಟ್ ಬ್ಲಾಕ್, ಕ್ಲಾಸಿಕ್ ಬ್ರೌನ್, ಕ್ಲಾಸಿಕ್ ಬ್ಲಾಕ್, ಸಿಲ್ವರ್ ಬ್ಲಾಕ್ ಮತ್ತು ಕಾಪರ್ ಬ್ಲ್ಯಾಕ್ ಎಂಬ ಆರು ಬಣ್ಣದ ಆಯ್ಕೆಯಲ್ಲಿ ಲಭ್ಯ ಇದೆ.

ಈ ವಾರದ ಆರಂಭದಲ್ಲಿ ನಾಯ್ಸ್ ಕಲರ್‌ಫಿಟ್ ಓರ್ ವಾಚ್ ಅನ್ನು ಲಾಂಚ್ ಮಾಡಲಾಗಿತ್ತು.ಈ ವಾಚ್‌ಗೆ 2,999 ರೂಪಾಯಿಗಳ ಪರಿಚಯಾತ್ಮಕ ಬೆಲೆ ನಿಗದಿ ಮಾಡಲಾಗಿದ್ದು, ಈ ವಾಚ್ ಸಹ ಲೆದರ್, ಸಿಲಿಕೋನ್ ಮತ್ತು ಮೆಟಲ್ ಆಯ್ಕೆಯೊಂದಿಗೆ ಜೆಟ್ ಬ್ಲಾಕ್, ಎಲೈಟ್ ಬ್ಲಾಕ್, ಎಲೈಟ್ ಸಿಲ್ವರ್, ಸ್ಪೇಸ್ ಬ್ಲೂ ಮತ್ತು ಕ್ಲಾಸಿಕ್ ಬ್ರೌನ್ ಎಂಬ ಬಣ್ಣದ ಆಯ್ಕೆಯಲ್ಲಿ ಲಭ್ಯ ಇದೆ.


Click it and Unblock the Notifications