NoiseFit: ನಾಯ್ಸ್‌ಫಿಟ್ ಎಂಡೀವರ್ ಸ್ಮಾರ್ಟ್‌ವಾಚ್ ಲಾಂಚ್! ಸಖತ್ ಸ್ಟೈಲಿಶ್.. ಬೆಲೆ ಎಷ್ಟು?
ಸ್ಮಾರ್ಟ್‌ವಾಚ್‌ಗಳು (Smartwatches) ಇಂದು ಅತ್ಯಗತ್ಯ ಡಿವೈಸ್ ಆಗಿದೆ. ಈ ಮೂಲಕ ಬಳಕೆದಾರರಿಗೆ ಸಮಯದ ಜೊತೆ ಅವರ ಆರೋಗ್ಯ ಮಾಹಿತಿ ಹಾಗೂ ದೈನಂದಿನ ಚಟುವಟಿಕೆಗಳನ್ನು ಟ್ರ್ಯಾಕ್ ಮಾಡುವ ಮೂಲಕ ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಸಹಕಾರಿ ಆಗಿವೆ. ಈ ನಡುವೆ ಪ್ರಮುಖ ಸ್ಮಾರ್ಟ್‌ವಾಚ್ ತಯಾರಿಕಾ ಸಂಸ್ಥೆಯಾದ ನಾಯ್ಸ್(Noise) ಹೊಸ ವಾಚ್ ಅನ್ನು ಲಾಂಚ್ ಮಾಡಿದೆ.
ಹೌದು, ನಾಯ್ಸ್ ಇದೀಗ ನಾಯ್ಸ್‌ಫಿಟ್ ಎಂಡೀವರ್ ಸ್ಮಾರ್ಟ್‌ವಾಚ್ (NoiseFit Endeavour smartwatch) ಅನ್ನು ಅನಾವರಣ ಮಾಡಿದೆ. ಈ ವಾಚ್ ಅಮೋಲೆಡ್ ಡಿಸ್‌ಪ್ಲೇ ಆಯ್ಕೆ ಪಡೆದಿದ್ದು, ಇದರ ಒರಟಾದ ವಿನ್ಯಾಸ ಯುವ ಪೀಳಿಗೆಗೆ ಸಖತ್ ಇಷ್ಟವಾಗಲಿದೆ. ಜೊತೆಗೆ ಈ ವಾಚ್‌ನಲ್ಲಿ ಸುಧಾರಿತ ಆರೋಗ್ಯ ಟ್ರ್ಯಾಕಿಂಗ್ ಸೆನ್ಸರ್ ಆಯ್ಕೆ ನೀಡಲಾಗಿದೆ. ಹಾಗಿದ್ರೆ, ಈ ಸ್ಮಾರ್ಟ್‌ವಾಚ್‌ನ ಪ್ರಮುಖ ಫೀಚರ್ಸ್ ಹಾಗೂ ಬೆಲೆ ವಿವರದ ಬಗ್ಗೆ ತಿಳಿಯೋಣ ಬನ್ನಿ.

ನಾಯ್ಸ್‌ಫಿಟ್ ಎಂಡೀವರ್ ಸ್ಮಾರ್ಟ್‌ವಾಚ್: ಕಂಪನಿಯು ಇತ್ತೀಚೆಗೆ ನಾಯ್ಸ್ ಪ್ಯೂರ್ ಪಾಡ್ಸ್, ನಾಯ್ಸ್ ಕಲರ್‌ಫಿಟ್ ಪ್ರೊ 5, ಕಲರ್‌ಫಿಟ್ ಪ್ರೊ 5 ಮ್ಯಾಕ್ಸ್ ಸ್ಮಾರ್ಟ್‌ವಾಚ್‌ಗಳನ್ನು ಲಾಂಚ್ ಮಾಡಿ ಮಾರುಕಟ್ಟೆಯಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ಈ ಸಾಲಿಗೆ ಈಗ ನಾಯ್ಸ್‌ಫಿಟ್ ಎಂಡೀವರ್ ಸೇರಿಕೊಂಡಿದ್ದು, ಈ ಮೂಲಕ ಸ್ಮಾರ್ಟ್‌ವಾಚ್ ಮಾರುಕಟ್ಟೆಯಲ್ಲಿ ದೊಡ್ಡ ಸಂಚಲನವನ್ನೇ ಆರಂಭ ಮಾಡಲು ಮುಂದಾಗಿದೆ.
ನಾಯ್ಸ್‌ಫಿಟ್ ಎಂಡೀವರ್ ಸ್ಮಾರ್ಟ್‌ವಾಚ್ ವಿನ್ಯಾಸ: ಈ ವಾಚ್ ಕ್ರಿಯಾತ್ಮಕ ಕ್ರೌನ್ ಬಟನ್ ಮತ್ತು ಪುಶ್ ಬಟನ್ ಹೊಂದಿದ ವೃತ್ತಾಕಾರದ ಡಯಲ್ ವಿನ್ಯಾಸವನ್ನು ಹೊಂದಿದ್ದು, ಈ ಮೂಲಕ ಸ್ಪೋರ್ಟಿ ನೋಟವನ್ನು ನೀಡಲಿದೆ. ಇದರೊಂದಿಗೆ 1.46 ಇಂಚಿನ ಅಮೋಲೆಡ್ ಡಿಸ್‌ಪ್ಲೇ ಆಯ್ಕೆ ಪಡೆದಿದ್ದು, ವಿವಿಧ ಗ್ರಾಹಕೀಯಗೊಳಿಸಬಹುದಾದ ವಾಚ್ ಫೇಸ್ ಆಯ್ಕೆಯೊಂದಿಗೆ ಉತ್ತಮ ಎನಿಸಿದೆ.

ಹಾಗೆಯೇ ಈ ಸ್ಮಾರ್ಟ್‌ವಾಚ್ ನಾಯ್ಸ್ ಟ್ರೂ ಸಿಂಕ್ ತಂತ್ರಜ್ಞಾನವನ್ನು ಹೊಂದಿದ್ದು, ತ್ವರಿತ ಜೋಡಣೆ ಮತ್ತು ಕಡಿಮೆ ವಿದ್ಯುತ್ ಬಳಕೆಯೊಂದಿಗೆ ಬ್ಲೂಟೂತ್ ಕರೆಯನ್ನು ಬೆಂಬಲಿಸುತ್ತದೆ. ಅಷ್ಟೇ ಅಲ್ಲದೆ ಬಳಕೆದಾರರಿಗೆ 10 ಸಂಪರ್ಕಗಳನ್ನು ಸೇವ್ ಮಾಡಿಕೊಳ್ಳು ಈ ವಾಚ್ ಸಹ ಅನುಮತಿಸುತ್ತದೆ ಮತ್ತು ನಿರಂತರ ಹೃದಯ ಬಡಿತದ ಮಾನಿಟರಿಂಗ್, SpO2 ಮಾಪನ, ನಿದ್ರೆ ಟ್ರ್ಯಾಕಿಂಗ್, ಒತ್ತಡ ನಿರ್ವಹಣೆ ಮತ್ತು ಸ್ತ್ರೀ ಸೈಕಲ್ ಟ್ರ್ಯಾಕರ್ ಅನ್ನು ಹೊಂದಿರುವ ನಾಯ್ಸ್ ಹೆಲ್ತ್ ಸೂಟ್ ನಲ್ಲಿ ಕೆಲಸ ಮಾಡಲಿದ್ದು, ಇತರೆ ವಾಚ್‌ಗಳಿಗಿಂತ ಭಿನ್ನ ಎನಿಸಿದೆ.
ಇದರೊಂದಿಗೆ 100 ಕ್ಕೂ ಹೆಚ್ಚು ಸ್ಪೋರ್ಟ್ಸ್ ಮೋಡ್ ಬೆಂಬಲಿಸಲಿದ್ದು, ನಾಯ್ಸ್ ಫಿಟ್ ಆಪ್‌ನೊಂದಿಗೆ ಸಂಪರ್ಕ ಆಗುವುದರಿಂದ ನಿಮ್ಮ ನಿತ್ಯದ ಎಲ್ಲಾ ರೀತಿಯ ಚಟುವಟಿಕೆಗಳನ್ನು ಟ್ರ್ಯಾಕ್ ಮಾಡಬಹುದಾಗಿದೆ. ಅಷ್ಟೇ ಅಲ್ಲದೆ ನೀಟಿಫಿಕೇಶನ್, ಹವಾಮಾನ ನವೀಕರಣಗಳು, ಜ್ಞಾಪನೆಗಳು, ಎಚ್ಚರಿಕೆ, ಕ್ಯಾಮರಾ ಕಂಟ್ರೋಲ್, ಮ್ಯೂಸಿಕ್ ಕಂಟ್ರೋಲ್ ಮತ್ತು ಕ್ಯಾಲ್ಕುಲೇಟರ್ ಸೌಲಭ್ಯವನ್ನು ಈ ವಾಚ್ ಹೊಂದಿದೆ.

ಈ ಸ್ಮಾರ್ಟ್‌ವಾಚ್ IP68 ರೇಟಿಂಗ್ ಹೊಂದಿದ್ದು, ನೀರು ಮತ್ತು ಧೂಳಿನ ಪ್ರತಿರೋಧವನ್ನು ಹೊಂದಿದೆ. ಅಂದರೆ ನೀವು ಹೊರಾಂಗಣ ಅಥವಾ ಒಳಾಂಗಣದ ಎಲ್ಲಾ ಕಡೆ ಇದನ್ನು ಬಳಕೆ ಮಾಡಿಕೊಳ್ಳಬಹುದಾಗಿದೆ. ಪ್ರಮುಖವಾಗಿ ಇದು ತುರ್ತು SOS ವೈಶಿಷ್ಟ್ಯ ಫೀಚರ್ಸ್ ಪಡೆದಿದ್ದು, ಈ ಮೂಲಕ ನೀವು ಸಂಕಷ್ಟಕ್ಕೆ ಈಡಾದ ಸಂದರ್ಭದಲ್ಲಿ ನಿಮ್ಮನ್ನು ಉಳಿಸುವ ಕೆಲಸ ಮಾಡುತ್ತದೆ. ಈ ಸ್ಮಾರ್ಟ್‌ವಾಚ್ ಆಂಡ್ರಾಯ್ಡ್ ಮತ್ತು ಐಓಎಸ್ ಡಿವೈಸ್‌ಗಳಿಗೆ ಬೆಂಬಲ ನೀಡಲಿದೆ.
ನಾಯ್ಸ್‌ಫಿಟ್ ಎಂಡೀವರ್ ಸ್ಮಾರ್ಟ್‌ವಾಚ್ ಬೆಲೆ ಹಾಗೂ ಲಭ್ಯತೆ: ಈ ಸ್ಮಾರ್ಟ್‌ವಾಚ್ ಅನ್ನು 2,999 ರೂ.ಗಳ ಪರಿಚಯಾತ್ಮಕ ಬೆಲೆಯಲ್ಲಿ ಪರಿಚಯಿಸಲಾಗಿದೆ. ಇದನ್ನು ನೀವು ನಾಯ್ಸ್‌ನ ಅಧಿಕೃತ ಸೈಟ್ ಹಾಗೂ ಅಮೆಜಾನ್ ಮೂಲಕ ಖರೀದಿ ಮಾಡಬಹುದಾಗಿದೆ. ಈ ವಾಚ್ ನಿಮಗೆ ಬ್ಲೂ, ಫಿಯರಿ ಆರೆಂಜ್, ಕ್ಯಾಮೊ ಬ್ಲ್ಯಾಕ್, ಜೆಟ್ ಬ್ಲಾಕ್ ಮತ್ತು ವಿಂಟೇಜ್ ಬ್ರೌನ್ ಬಣ್ಣದ ಆಯ್ಕೆಗಳಲ್ಲಿ ಲಭ್ಯ ಇದೆ.


Click it and Unblock the Notifications








