ನಾಯ್ಸ್ ನಿಂದ ಅತ್ಯಾಕರ್ಷಕ ವಾಚ್ ಅನಾವರಣ;ವಾರದ ಬ್ಯಾಟರಿ ಬ್ಯಾಕಪ್, ಬೆಲೆ ಎಷ್ಟು?
ನಾಯ್ಸ್ ಸಂಸ್ಥೆಯು ಧರಿಸಬಹುದಾದ ಗ್ಯಾಜೆಟ್ ವಿಭಾಗದಲ್ಲಿ ಹೊಸ ಹೊಸ ಸ್ಮಾರ್ಟ್ ಡಿವೈಸ್‌ಗಳನ್ನು ಆಗಾಗ್ಗೆ ಅನಾವರಣ ಮಾಡಿಕೊಂಡು ಬರುತ್ತಲೇ ಇರುತ್ತದೆ. ಈ ನಡುವೆ ನಾಯ್ಸ್ ಸಂಸ್ಥೆಯ ಆಕರ್ಷಕ ಸ್ಮಾರ್ಟ್‌ವಾಚ್ ಅನ್ನು ಅನಾವರಣ ಮಾಡಲಾಗಿದೆ. ಈ ವಾಚ್ ಮೆಟಾಲಿಕ್ ಬಾಡಿ, ಬ್ಲೂಟೂತ್ ಕಾಲಿಂಗ್ ಸೌಲಭ್ಯ ಪಡೆದುಕೊಂಡಿದೆ.
ಹೌದು, ನಾಯ್ಸ್ ಸಂಸ್ಥೆಯ ನಾಯ್ಸ್ ಫಿಟ್ ಮೆಟಾಲಿಕ್ಸ್ (NoiseFit Mettalix) ಸ್ಮಾರ್ಟ್‌ವಾಚ್ ಅನ್ನು ಅನಾವರಣ ಮಾಡಲಾಗಿದ್ದು, ಈ ವಾಚ್ 1.4 ಡಿಸ್‌ಪ್ಲೇ ಆಯ್ಕೆ ಪಡೆದುಕೊಂಡಿದೆ. ಜೊತೆಗೆ ಆಕರ್ಷಕ ಕ್ರೌನ್ ಬಟನ್ ಆಯ್ಕೆ ಪಡೆದುಕೊಂಡಿದ್ದು, ಲೋಹದ ಚೌಕಟ್ಟಿನ ಮೂಲಕ ವಿಶೇಷ ಎನಿಸಿದೆ. ಹಾಗಿದ್ರೆ, ಈ ಸ್ಮಾರ್ಟ್‌ವಾಚ್‌ನ ಪ್ರಮುಖ ಫೀಚರ್ಸ್ ಹಾಗೂ ಭಾರತದಲ್ಲಿ ಇದರ ಬೆಲೆ ಎಷ್ಟೆಂದು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ನಾಯ್ಸ್ ಫಿಟ್ ಮೆಟಾಲಿಕ್ಸ್ ಡಿಸ್ಪ್ಲೇ ವಿವರ: ನಾಯ್ಸ್‌ನ ಈ ಸ್ಮಾರ್ಟ್‌ವಾಚ್ 1.4 ಇಂಚಿನ ಡಿಸ್‌ಪ್ಲೇ ಆಯ್ಕೆ ಪಡೆದುಕೊಂಡಿದ್ದು, ಇದು 240 x 240 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯ ಹೊಂದಿದ್ದು, ಇದರಲ್ಲಿನ ಹೆಚ್‌ಡಿ TFT ಎಲ್‌ಸಿಡಿ ರೌಂಡ್ ಸ್ಕ್ರೀನ್ ಬಳಕೆದಾರರಿಗೆ ವಿಶೇಷ ಅನುಭವ ನೀಡಲಿದೆ. ಅಷ್ಟೇ ಅಲ್ಲದೆ ಇಲ್ಲಿನ ವಿಶೇಷ ಕ್ರೌನ್ ಬಟನ್ ಆಯ್ಕೆ ವಾಚ್‌ಗೆ ಇನ್ನಷ್ಟು ಮೆರಗು ನೀಡಲಿದೆ.
ನಾಯ್ಸ್ ಫಿಟ್ ಮೆಟಾಲಿಕ್ಸ್ ಪ್ರಮುಖ ಫೀಚರ್ಸ್: ಈ ಸ್ಮಾರ್ಟ್‌ವಾಚ್ ಬ್ಲೂಟೂತ್ ಆವೃತ್ತಿ v5.3 ಅನ್ನು ಹೊಂದಿದ್ದು, ನಾಯ್ಸ್ ಟ್ರೂ ಸಿಂಕ್ ತಂತ್ರಜ್ಞಾನದೊಂದಿಗೆ ಬೆಂಬಲ ಪಡೆದಿದೆ. ಇದರೊಂದಿಗೆ ಈ ಸ್ಮಾರ್ಟ್‌ವಾಚ್ ಆಂಡ್ರಾಯ್ಡ್ ಹಾಗೂ ಐಓಎಸ್ ಡಿವೈಸ್‌ಗಳೊಂದಿಗೆ ಹೊಂದಿಕೊಳ್ಳಲಿದ್ದು, ಮಲ್ಟಿ ಸ್ಪೋರ್ಟ್ ಮೋಡ್ ಆಯ್ಕೆ ಪಡೆಯುವ ಮೂಲಕ ಬಳಕೆದಾರರಿಗೆ ಹಲವು ರೀತಿಯಲ್ಲಿ ಸಹಾಯ ಮಾಡಲಿದೆ.
ಅಷ್ಟೇ ಅಲ್ಲದೆ 150+ ಗ್ರಾಹಕೀಯಗೊಳಿಸಬಹುದಾದ ವಾಚ್ ಫೇಸ್ ಆಯ್ಕೆ ಹೊಂದಿದ್ದು, 24×7 ಹೃದಯ ಬಡಿತ ಮಾನಿಟರಿಂಗ್, SpO2, ನಿದ್ರೆ ಟ್ರ್ಯಾಕಿಂಗ್, ಒತ್ತಡ ನಿರ್ವಹಣೆ, ಮಹಿಳೆಯರಿಗೆ ಸಂಬಂಧಿಸಿದ ಆರೋಗ್ಯ ಮಾಹಿತಿಯನ್ನು ಈ ವಾಚ್ ಮೂಲಕ ಪಡೆದುಕೊಳ್ಳಬಹುದು. ಇದೆಲ್ಲಕ್ಕಿಂತ ಪ್ರಮುಖವಾಗಿ ಈ ವಾಚ್ IP68 ರೇಟಿಂಗ್ ಹೊಂದಿದ್ದು, ಇದು ನೀರು ಮತ್ತು ಧೂಳಿನಿಂದ ರಕ್ಷಣೆ ಪಡೆದುಕೊಳ್ಳಲಿದೆ.
ಉಳಿದಂತೆ ನೋಟಿಫಿಕೇಶನ್ ಆಯ್ಕೆ, ಹವಾಮಾನ ನವೀಕರಣಗಳು, ಜ್ಞಾಪನೆ, ಅಲಾರಮ್, ಕ್ಯಾಮರಾ ಕಂಟ್ರೋಲ್, ಮ್ಯೂಸಿಕ್ ಕಂಟ್ರೋಲ್, ಕ್ಯಾಲ್ಕುಲೇಟರ್ ಆಯ್ಕೆ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಈ ವಾಚ್ ನೀಡಲಿದ್ದು, ಇದರಿಂದಾಗಿ ಬಳಕೆದಾರರು ಹಲವು ರೀತಿಯಲ್ಲಿ ಪ್ರಯೋಜನ ಪಡೆದುಕೊಳ್ಳಬಹುದಾಗಿದೆ. ಪ್ರಮುಖವಾಗಿ ಈ ವಾಚ್ ಒಂದು ಪೂರ್ಣ ಚಾರ್ಜಿಂಗ್‌ನಲ್ಲಿ 7 ದಿನಗಳ ಬ್ಯಾಟರಿ ಬ್ಯಾಕಪ್ ಪಡೆದುಕೊಳ್ಳಬಹುದಾಗಿದೆ.
ನಾಯ್ಸ್ ಫಿಟ್ ಮೆಟಾಲಿಕ್ಸ್ ಬೆಲೆ ಹಾಗೂ ಲಭ್ಯತೆ: ಈ ಸ್ಮಾರ್ಟ್‌ವಾಚ್ ಸ2,499 ರೂ.ಗಳ ಪರಿಚಯಾತ್ಮಕ ಬೆಲೆ ಹೊಂದಿದ್ದು, ಎಲೈಟ್ ಸಿಲ್ವರ್, ಎಲೈಟ್ ನಿಕಲ್, ಎಲೈಟ್ ಬ್ಲ್ಯಾಕ್ ಮತ್ತು ಎಲೈಟ್ ನಿಕಲ್ ಬಣ್ಣಗಳಲ್ಲಿ ಕಾಣಿಸಿಕೊಂಡಿದೆ. ಈ ವಾಚ್ ಅನ್ನು ನೀವು ನಾಯ್ಸ್ ವೆಬ್‌ಸೈಟ್ ಮತ್ತು ಅಮೆಜಾನ್ ಖರೀದಿ ಮಾಡಬಹುದಾಗಿದೆ. ಆದರೆ ಈ ವಾಚ್ ಅನ್ನು ಖರೀದಿ ಮಾಡಲು ಸ್ವಲ್ಪ ಕಾಯಬೇಕಿದೆ. ಅಂದರೆ ಸೆಪ್ಟೆಂಬರ್ 22 ರಿಂದ ಮಧ್ಯಾಹ್ನ 12 ಗಂಟೆಗೆ ಈ ಸೇಲ್ ಆರಂಭ ಆಗಲಿದೆ.
ಈ ವಾಚ್ ಖರೀದಿ ಮಾಡುವವರಿಗೆ ನಾಯ್ಸ್ ಗುಡ್‌ನ್ಯೂಸ್ ಒಂದನ್ನು ನೀಡಿದೆ. ಅಂದರೆ ಸೆಪ್ಟೆಂಬರ್ 22 ರಿಂದ ಮಧ್ಯಾಹ್ನ 12 ಗಂಟೆಗೆ ಖರೀದಿ ಆರಂಭ ಆಗಲಿದ್ದು, ಆ ಸಮಯದಲ್ಲಿ ಖರೀದಿ ಮಾಡಲು ಮುಂದಾಗುವ ಮೊದಲ ಐದು ನೂರು ಗ್ರಾಹಕರು ಇನ್ನೂರು ರೂ.ಗಳ ತ್ವರಿತ ರಿಯಾಯಿತಿ ಪಡೆಯಲಿದ್ದಾರೆ. ಮುಂದಿನ ದಿನಗಳಲ್ಲಿ ಈ ವಾಚ್‌ನ ಬೆಲೆಯಲ್ಲಿ ಬದಲಾವಣೆ ಆಗುವ ಸಾಧ್ಯತೆ ಸಹ ಇದೆ.


Click it and Unblock the Notifications








