Home
ಸುದ್ದಿಜಾಲ

Noisefit: ರಗಡ್‌ ವಿನ್ಯಾಸದ ನಾಯ್ಸ್‌ಫಿಟ್ ವೆಂಚರ್ ಸ್ಮಾರ್ಟ್‌ವಾಚ್‌ ಲಾಂಚ್! ಬೆಲೆ ಎಷ್ಟು?

ಸ್ಮಾರ್ಟ್‌ವಾಚ್‌ಗಳ (smartwatches) ವಿಭಾಗದಲ್ಲಿ ನಾಯ್ಸ್‌ ಈಗಾಗಲೇ ಭಿನ್ನ ಫೀಚರ್ಸ್‌ ಆಯ್ಕೆಯ ವಾಚ್‌ಗಳನ್ನು ಅನಾವರಣ ಮಾಡಿದೆ. ಅದರಲ್ಲೂ ಕೆಲವು ದಿನಗಳ ಹಿಂದೆ ನಾಯ್ಸ್‌ಫಿಟ್‌ ಟ್ವಿಸ್ಟ್‌ ಗೋ ಸ್ಮಾರ್ಟ್‌ವಾಚ್‌ (Noisefit Twist Go Smartwatch) ಅನ್ನು ಅನಾವರಣ ಮಾಡಲಾಗಿತ್ತು.

ಹೌದು, ಇದೀಗ ಭಾರತದಲ್ಲಿ ನಾಯ್ಸ್ ಫಿಟ್ ವೆಂಚರ್ ಸ್ಮಾರ್ಟ್‌ವಾಚ್‌(NoiseFit Venture) ಅನ್ನು ಲಾಂಚ್‌ ಮಾಡಲಾಗಿದೆ. ಈ ಸ್ಮಾರ್ಟ್‌ವಾಚ್‌ ರಗಡ್‌ಶೈಲಿ ಪಡೆದಿದ್ದು, ಯುವಕರ ಹಾರ್ಟ್‌ ಫೆವರಿಟ್‌ ಸ್ಮಾರ್ಟ್‌ವಾಚ್‌ ಆಗಿ ಗುರುತಿಸಿಕೊಳ್ಳಲಿದೆ. ಈ ವಾಚ್‌ 1.39 ಇಂಚಿನ ಡಿಸ್‌ಪ್ಲೇ ಹೊಂದಿದ್ದು, ಉತ್ತಮ ಅನುಭವ ನೀಡಲಿದೆ. ಹಾಗಿದ್ರೆ, ಈ ವಾಚ್‌ನ ಪ್ರಮುಖ ಫೀಚರ್ಸ್‌ ಹಾಗೂ ಭಾರತದಲ್ಲಿ ಇದರ ಬೆಲೆ ಎಷ್ಟು ಅನ್ನೋ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

 ರಗಡ್‌ ವಿನ್ಯಾಸದ ನಾಯ್ಸ್‌ಫಿಟ್ ವೆಂಚರ್ ಸ್ಮಾರ್ಟ್‌ವಾಚ್‌ ಲಾಂಚ್! ಬೆಲೆ ಎಷ್ಟು?

ನಾಯ್ಸ್ ಫಿಟ್ ವೆಂಚರ್ ಸ್ಮಾರ್ಟ್‌ವಾಚ್: ಈ ಸ್ಮಾರ್ಟ್‌ವಾಚ್‌ 300+ ಕ್ಲೌಡ್ ಆಧಾರಿತ ವಾಚ್ ಫೇಸ್‌ ಆಯ್ಕೆಯೊಂದಿಗೆ 1.39 ಇಂಚಿನ ಟಿಎಫ್‌ಟಿ ಎಲ್‌ಸಿಡಿ ಡಿಸ್‌ಪ್ಲೇ (TFT LCD display) ಹೊಂದಿದ್ದು, ಇದು 360 x 360 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯ ಪಡೆದುಕೊಂಡಿದೆ.

ಇದರೊಂದಿಗೆ ಈ ಸ್ಮಾರ್ಟ್‌ವಾಚ್‌ನಲ್ಲಿರುವ ನಾಯ್ಸ್ ಟ್ರೂ ಸಿಂಕ್ ತಂತ್ರಜ್ಞಾನವು ತ್ವರಿತ ಜೋಡಣೆ ಮತ್ತು ಕಡಿಮೆ ವಿದ್ಯುತ್ ಬಳಕೆಯೊಂದಿಗೆ ಬ್ಲೂಟೂತ್ ಕರೆಯನ್ನು ಸಕ್ರಿಯಗೊಳಿಸುತ್ತದೆ. ಹಾಗೆಯೇ 24×7 ಹೃದಯ ಬಡಿತದ ಮಾನಿಟರಿಂಗ್, SpO2 ಮಾಪನ, ನಿದ್ರೆ ಟ್ರ್ಯಾಕಿಂಗ್ ಮತ್ತು ಒತ್ತಡ ನಿರ್ವಹಣೆ, ಸ್ತ್ರೀ ಸೈಕಲ್ ಟ್ರ್ಯಾಕರ್ ಮತ್ತು ಉಸಿರಾಟದ ಅಭ್ಯಾಸ ಸೇರಿದಂತೆ ಅನೇಕ ಆರೋಗ್ಯ ಸಂಬಂಧಿ ಫೀಚರ್ಸ್‌ ಪಡೆದಿದೆ.

 ರಗಡ್‌ ವಿನ್ಯಾಸದ ನಾಯ್ಸ್‌ಫಿಟ್ ವೆಂಚರ್ ಸ್ಮಾರ್ಟ್‌ವಾಚ್‌ ಲಾಂಚ್! ಬೆಲೆ ಎಷ್ಟು?

ಇದರೊಂದಿಗೆ ಬಹು ಸ್ಪೋರ್ಟ್ಸ್‌ ಮೋಡ್‌ಗಳು, ಆಕರ್ಷಕ ಕ್ರೌನ್‌ ಬಟನ್‌ ಮತ್ತು ನಾಯ್ಸ್‌ ಫಿಟ್‌ ಆಪ್‌ನೊಂದಿಗೆ ಈ ವಾಚ್‌ಬೆಂಬಲ ನೀಡಲಿದೆ. ಅಲ್ಲದೆ ನಾಯ್ಸ್ ಟ್ರೂ ಸಿಂಕ್ ತಂತ್ರಜ್ಞಾನದೊಂದಿಗೆ ಬ್ಲೂಟೂತ್ ಕರೆ, ಡಯಲ್ ಪ್ಯಾಡ್, ಇತ್ತೀಚಿನ ಕರೆ ಇತಿಹಾಸದಂತಹ ಮಾಹಿತಿಯನ್ನು ಈ ವಾಚ್‌ ಮೂಲಕ ಪಡೆಯಬಹುದಾಗಿದೆ. ಈ ವಾಚ್‌ನಲ್ಲಿ ಇನ್‌ಬಿಲ್ಟ್‌ ಮೈಕ್ರೊಫೋನ್ ಮತ್ತು ಸ್ಪೀಕರ್ ಇದ್ದು, ವಾಯ್ಸ್‌ ಅಸಿಸ್ಟೆಂಟ್‌ ಸೇವೆ ಈ ವಾಚ್‌ ಬಳಕೆದಾರರಿಗೆ ಪ್ರೀಮಿಯಂ ಅನುಭವ ನೀಡುತ್ತದೆ.

ಉಳಿದಂತೆ ಈ ಸ್ಮಾರ್ಟ್‌ವಾಚ್‌ ಕ್ಯೂಆರ್‌ ಪಾವತಿಗಳು, ಪಾಸ್‌ವರ್ಡ್ ರಕ್ಷಣೆ, ನೋಟಿಫಿಕೇಶನ್, ಹವಾಮಾನ ನವೀಕರಣಗಳು, ಜ್ಞಾಪನೆಗಳು, ಅಲಾರ್ಮ್, ಕ್ಯಾಮೆರಾ ಕಂಟ್ರೋಲ್‌, ಕ್ಯಾಲ್ಕುಲೇಟರ್ ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ಈ ವಾಚ್‌ನಲ್ಲಿ ನೀಡಲಾಗಿದೆ. ಇದರ ಜೊತೆಗೆ ಈ ಸ್ಮಾರ್ಟ್‌ವಾಚ್‌ ಅನ್ನು ಒಂದು ಬಾರಿ ಪೂರ್ಣವಾಗಿ ಚಾರ್ಜ್‌ ಮಾಡಿದ್ರೆ ಏಳು ದಿನಗಳ ವರೆಗೆ ಬಳಕೆ ಮಾಡಬಹುದಾಗಿದೆ.

ನಾಯ್ಸ್ ಫಿಟ್ ವೆಂಚರ್ ಸ್ಮಾರ್ಟ್‌ವಾಚ್ ಬೆಲೆ ಹಾಗೂ ಲಭ್ಯತೆ: ಈ ಸ್ಮಾರ್ಟ್‌ವಾಚ್‌ ವೆಂಚರ್ ಕಪ್ಪು, ನೀಲಿ, ಹಸಿರು ಮತ್ತು ಬೂದು ಬಣ್ಣಗಳಲ್ಲಿ ಕಂಡುಬರುತ್ತದೆ. ಇದನ್ನು ನೀವು ನಾಯ್ಸ್ ವೆಬ್‌ಸೈಟ್ ಮತ್ತು ಫ್ಲಿಪ್‌ಕಾರ್ಟ್‌ ಮೂಲಕ ಪರಿಚಯಾತ್ಮಕ ಬೆಲೆ 1,499ರೂ.ಗಳಿಗೆ ಖರೀದಿ ಮಾಡಬಹುದಾಗಿದೆ. ಇಂದು 12 ಗಂಟೆಯಿಂದ ಮಾರಾಟಕ್ಕೆ ಈ ವಾಚ್‌ ಮುಕ್ತವಾಗಿದೆ.

 ರಗಡ್‌ ವಿನ್ಯಾಸದ ನಾಯ್ಸ್‌ಫಿಟ್ ವೆಂಚರ್ ಸ್ಮಾರ್ಟ್‌ವಾಚ್‌ ಲಾಂಚ್! ಬೆಲೆ ಎಷ್ಟು?

ನಾಯ್ಸ್ ಫಿಟ್ ಟ್ವಿಸ್ಟ್‌ ಗೋ ಸ್ಮಾರ್ಟ್‌ವಾಚ್‌: ಕೆಲವು ದಿನಗಳ ಹಿಂದೆ ನಾಯ್ಸ್ ಫಿಟ್ ಟ್ವಿಸ್ಟ್‌ ಗೋ ಸ್ಮಾರ್ಟ್‌ವಾಚ್ ಅನ್ನೂ ಸಹ ಅನಾವರಣ ಮಾಡಲಾಗಿದೆ. ಈ ಸ್ಮಾರ್ಟ್‌ವಾಚ್‌ 1,500ರೂ ವಿಭಾಗದ ಅಡಿಯಲ್ಲಿ ಆಕರ್ಷಕ ಫೀಚರ್ಸ್‌ಗಳನ್ನು ಹೊಂದಿದೆ. ಇದು ಮೆಟಾಲಿಕ್ ಯುನಿಬಾಡಿಯನ್ನು ಹೊಂದಿದ್ದು, ವೃತ್ತಾಕಾರದ ಡಯಲ್ ಪಡೆದಿದೆ. ಜೊತೆಗೆ IP68 ರೇಟಿಂಗ್‌ನಿಂದಾಗಿ ಧೂಳು ಮತ್ತು ನೀರು ನಿರೋಧಕವಾಗಿದೆ. ಇದನ್ನು ಮೆಟಾಲಿಕ್, ಮೆಶ್ ಮತ್ತು ಸಿಲಿಕೋನ್ ಸ್ಟ್ರಾಪ್ ಆಯ್ಕೆಗಳಲ್ಲಿ ನೀಡಲಾಗುತ್ತದೆ.

Best Mobiles in India

English summary
NoiseFit Venture Smartwatch has been launched in India. This smartwatch has got a rugged style and will be recognized as the heart favorite smartwatch of the youth.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+