Home
ಸುದ್ದಿಜಾಲ

ನೋಕಿಯಾ 1.3 ಎಂಟ್ರಿ ಲೆವಲ್ ಸ್ಮಾರ್ಟ್‌ಫೋನ್‌ ಲಾಂಚ್!

ನೋಕಿಯಾ ಸಂಸ್ಥೆಯು ಇದೀಗ ಹೊಸದಾಗಿ ನೋಕಿಯಾ 8.3-5G, ನೋಕಿಯಾ 5.2 ಮತ್ತು ನೋಕಿಯಾ 1.3 ಸ್ಮಾರ್ಟ್‌ಫೋನ್‌ಗಳನ್ನು ಲಾಂಚ್ ಮಾಡಿದೆ. ಅವುಗಳಲ್ಲಿ ನೋಕಿಯಾ 1.3 ಅಗ್ಗದ ಎಂಟ್ರಿ ಲೆವೆಲ್ ಸ್ಮಾರ್ಟ್‌ಫೋನ್ ಆಗಿದ್ದು, ಗೂಗಲ್‌ ಸಂಸ್ಥೆಯ ಕ್ಯಾಮೆರಾ ಗೋ ಅಪ್ಲಿಕೇಶನ್ ಪಡೆದ ಮೊದಲ ಸ್ಮಾರ್ಟ್‌ಫೋನ್ ಆಗಿದೆ. ಬೆಲೆ ಮತ್ತು ಕೆಲವು ಆಕರ್ಷಕ ಫೀಚರ್ಸ್‌ಗಳಿಂದ ಈ ಫೋನ್ ಗುರುತಿಸಿಕೊಂಡಿದೆ.

ನೋಕಿಯಾ 1.3

ಹೌದು, ನೋಕಿಯಾ ಹೆಚ್‌ಎಮ್‌ಡಿ ಇದೀಗ ಅಗ್ಗದ ನೋಕಿಯಾ 1.3 ಸ್ಮಾರ್ಟ್‌ಫೋನ್ ಅನ್ನು ಅನಾವರಣಗೊಳಿಸಿದೆ. ಈ ಫೋನ್ ಆಂಡ್ರಾಯ್ಡ್ 10 ಗೋ ಎಡಿಷನ್ ಸೌಲಭ್ಯ ಪಡೆದಿದ್ದು, ಗೂಗಲ್ ಅಸಿಸ್ಟಂಟ್ ಬಟನ್ ಆಯ್ಕೆಯನ್ನು ಒಳಗೊಂಡಿದೆ. ಡ್ಯುಯಲ್ ಕ್ಯಾಮೆರಾ ಸಂಯೋಜನೆಯನ್ನು ಪಡೆದುಕೊಂಡಿದೆ. ಬಾಹ್ಯ ಮೆಮೊರಿಯನ್ನು 400GB ವಿಸ್ತರಿಸುವ ಅವಕಾಶವನ್ನು ನೀಡಿದೆ. ನೋಕಿಯಾ 1.3 ಸ್ಮಾರ್ಟ್‌ಫೋನಿನ ಇನ್ನುಳಿದ ಫೀಚರ್ಸ್‌ಗಳು ಹೇಗಿವೆ ಎಂಬುದನ್ನು ತಿಳಿಯಲು ಮುಂದೆ ಓದಿರಿ.

ಡಿಸ್‌ಪ್ಲೇ ರಚನೆ

ಡಿಸ್‌ಪ್ಲೇ ರಚನೆ

ನೋಕಿಯಾ 1.3 ಸ್ಮಾರ್ಟ್‌ಫೋನ್‌ 720x1520 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯದೊಂದಿಗೆ 5.71 ಇಂಚಿನ ಪೂರ್ಣ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇಯನ್ನು ಹೊಂದಿದೆ. ಪಿಕ್ಸಲ್ ಸಾಂದ್ರತೆಯು 386 ppi ಆಗಿದ್ದು, ಈ ಫೋನಿನ ಡಿಸ್‌ಪ್ಲೇ ಅನುಪಾತವು 19:9 ಆಗಿದೆ. ಸ್ಕ್ರೀನ್‌ನಿಂದ ಬಾಹ್ಯ ಬಾಡಿಯ ನಡುವಿನ ಅಂತರ 76.94 % ಪರ್ಸೆಂಟ್ ಆಗಿದೆ.

ಪ್ರೊಸೆಸರ್ ಸಾಮರ್ಥ್ಯ

ಪ್ರೊಸೆಸರ್ ಸಾಮರ್ಥ್ಯ

ನೋಕಿಯಾ 1.3 ಸ್ಮಾರ್ಟ್‌ಫೋನ್‌ ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ 215 ಪ್ರೊಸೆಸರ್ ಹೊಂದಿದ್ದು, ಅದಕ್ಕೆ ಪೂರಕವಾಗಿ ಆಂಡ್ರಾಯ್ಡ್ 10 ಗೋ ಓಎಸ್‌ ಆವೃತ್ತಿಯ ಬೆಂಬಲ ಪಡೆವಿದೆ. ಇದರೊಂದಿಗೆ 1GB RAM ಮತ್ತು 16GB ಸ್ಟೋರೇಜ್ ಆಯ್ಕೆ ಇದ್ದು, ಎಸ್‌ಡಿ ಕಾರ್ಡ್‌ ಮೂಲಕ ಬಾಹ್ಯ ಮೆಮೊರಿಯನ್ನು 400GB ವರೆಗೂ ವಿಸ್ತರಿಸುವ ಅವಕಾಶ ಇದೆ.

ಕ್ಯಾಮೆರಾ ವಿಶೇಷ

ಕ್ಯಾಮೆರಾ ವಿಶೇಷ

ನೋಕಿಯಾ 1.3 ಸ್ಮಾರ್ಟ್‌ಫೋನ್‌ ಡ್ಯುಯಲ್ ಕ್ಯಾಮೆರಾ ಸೆಟ್‌ಅಪ್ ರಚನೆ ಪಡೆದಿದ್ದು, ಹಿಂಬದಿಯ ರಿಯರ್ ಕ್ಯಾಮೆರಾವು 8ಎಂಪಿ ಸೆನ್ಸಾರ್ ಸಾಮರ್ಥ್ಯದಲ್ಲಿದೆ. ಹಾಗೂ ಸೆಲ್ಫಿ ಕ್ಯಾಮೆರಾವು 5ಎಂಪಿ ಸೆನ್ಸಾರ್ ಸಾಮರ್ಥ್ಯ ಪಡೆದಿದೆ.

ಬ್ಯಾಟರಿ ಬಲ

ಬ್ಯಾಟರಿ ಬಲ

ನೋಕಿಯಾ 1.3 ಸ್ಮಾರ್ಟ್‌ಫೋನ್‌ 3000mAh ಸಾಮರ್ಥ್ಯದ ಬ್ಯಾಟರಿ ಬಾಳಿಕೆಯನ್ನು ಹೊಂದಿದೆ. ಹಾಗೆಯೇ 5W ಚಾರ್ಜಿಂಗ್ ಸೌಲಭ್ಯ ಪಡೆದಿದೆ. ನೇರವಾಗಿ ಗೂಗಲ್ ಅಸಿಸ್ಟಂಟ್ ಕನೆಕ್ಟ್ ಮಾಡಲು ಪ್ರತ್ಯೇಕ ಬಟನ್ ಹೊಂದಿದೆ. ಜೊತೆಗೆ ವೈಫೈ, ಜಿಪಿಎಸ್, ಫಿಂಗರ್‌ಪ್ರಿಂಟ್, ಬ್ಲೂಟೂತ್, ಇತರೆ ಕನೆಕ್ಟಿವಿಟಿ ಆಯ್ಕೆಗಳು ಸಹ ಇವೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ಮಾರುಕಟ್ಟೆಗೆ ಬಿಡುಗಡೆ ಆಗಿರುವ ನೋಕಿಯಾ 1.3 ಸ್ಮಾರ್ಟ್‌ಫೋನ್‌ ಬೆಲೆಯು 95 ಯುರೋ ಆಗಿದೆ. ಭಾರತದಲ್ಲಿ ಅಂದಾಜು 7,500ರೂ. ಇನ್ನು ಈ ಫೋನ್ ಚಾರ್ಕೋಲ್, ಕ್ಲೈನ್‌ ಹಾಗೂ ಸ್ಯಾಂಡ್‌ ಬಣ್ಣಗಳ ಆಯ್ಕೆಯಲ್ಲಿ ಲಭ್ಯವಾಗಲಿದೆ. ಇದೇ ಏಪ್ರಿಲ್ ಆರಂಭದಲ್ಲಿ ಸೇಲ್ ಪ್ರಾರಂಭವಾಗಲಿದೆ.

Best Mobiles in India

English summary
Nokia 1.3 will also be the first smartphone to feature the Google Camera Go application.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+