Home
ಸುದ್ದಿಜಾಲ

Nokia: ನೋಕಿಯಾ 105 ಕ್ಲಾಸಿಕ್ ಫೀಚರ್ ಫೋನ್ ಲಾಂಚ್‌; UPI ಬೆಂಬಲ... ಬೆಲೆ 999ರೂ.!

ನೋಕಿಯಾದ (Nokia) ಸ್ಮಾರ್ಟ್‌ಫೋನ್‌ಗಳಿಗಿಂತ ಫೀಚರ್‌ಪೋನ್‌ಗಳೇ ಹೆಚ್ಚು ಸದ್ದು ಮಾಡುತ್ತಿರುತ್ತವೆ. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಜಿಯೋಗೆ (Jio) ಸೆಡ್ಡು ಹೊಡೆಯುತ್ತಿರುವ ನೋಕಿಯಾ ಫೀಚರ್‌ ಫೋನ್‌ಗಳಲ್ಲೇ ಪ್ರೀಮಿಯಂ ಫೀಚರ್ಸ್‌ ಅನ್ನು ನೀಡುವ ಮೂಲಕ ಸಾಕಷ್ಟು ಸದ್ದು ಮಾಡುತ್ತಿದೆ.

ಹೌದು, ಭಾರತದಲ್ಲಿ ನೋಕಿಯಾ ಫೋನ್‌ಗಳನ್ನು ತಯಾರಿಸುವ ಹೆಚ್‌ಎಮ್‌ಡಿ ಗ್ಲೋಬಲ್, ನೋಕಿಯಾ 105 ಕ್ಲಾಸಿಕ್(Nokia 105 Classic) ಎಂಬ ಹೊಸ 2G ಫೀಚರ್ ಫೋನ್ ಅನ್ನು ಲಾಂಚ್‌ ಮಾಡಿದೆ. ಈ ಫೋನ್ ಆಲ್ಫಾನ್ಯೂಮರಿಕ್ ಕೀಪ್ಯಾಡ್ ಆಯ್ಕೆ ಪಡೆದುಕೊಂಡಿದ್ದು, ಅದೆಲ್ಲಕ್ಕಿಂತ ಮಿಗಿಲಾಗಿ ಯುಪಿಐ (UPI) ಸೌಲಭ್ಯ ಹೊಂದಿದೆ. ಹಾಗಿದ್ರೆ, ಈ ಫೋನ್‌ನ ಪ್ರಮುಖ ಫೀಚರ್ಸ್‌ ಹಾಗೂ ಇದರ ಬೆಲೆ ವಿವರಗಳನ್ನು ತಿಳಿಸಿಕೊಡಲಾಗಿದೆ ಈ ಲೇಖನ ಓದಿರಿ.

ನೋಕಿಯಾ 105 ಕ್ಲಾಸಿಕ್ ಫೀಚರ್ ಫೋನ್ ಲಾಂಚ್‌; UPI ಬೆಂಬಲ... ಬೆಲೆ 999ರೂ.!

ನೋಕಿಯಾ 105 ಕ್ಲಾಸಿಕ್‌ ಫೋನ್ ಫೀಚರ್ಸ್: ಈ ಫೋನ್ ಕ್ಲಾಸಿಕ್ ದಕ್ಷತಾಶಾಸ್ತ್ರದ ವಿನ್ಯಾಸವನ್ನು ಹೊಂದಿದ್ದು, ಇದು ವೈರ್‌ಲೆಸ್ ಎಫ್‌ಎಂ ರೇಡಿಯೊಗೆ (Wireless FM radio) ಬೆಂಬಲ ನೀಡುತ್ತದೆ. ಅಂದರೆ ಈ ಸೇವೆ ಪಡೆದುಕೊಳ್ಳಲು ಬಳಕೆದಾರರಿಗೆ ಹೆಡ್‌ಸೆಟ್ ಅಗತ್ಯವಿಲ್ಲ. ಈ ಮೂಲಕ ಬಳಕೆದಾರರು ತಮ್ಮ ನೆಚ್ಚಿನ ಕೇಂದ್ರಗಳನ್ನು ಕೇಳಲು ಅನುವು ಅನುಕೂಲ ಆಗಲಿದೆ.

ನೋಕಿಯಾ 105 ಕ್ಲಾಸಿಕ್ ಫೀಚರ್ ಫೋನ್ ಎರಡು ಆಯ್ಕೆಗಳಲ್ಲಿ ಬರುತ್ತದೆ. ಅಂದರೆ ಸಿಂಗಲ್ ಸಿಮ್ ಮತ್ತು ಡ್ಯುಯಲ್ ಸಿಮ್ (Single SIM and Dual SIM) ಆಯ್ಕೆ. ಈ ಫೋನ್‌ ಅನ್ನು ಲಾಂಚ್‌ ಮಾಡುವ ಮುನ್ನವೇ ಕಠಿಣ ಪರೀಕ್ಷೆಗೆ ಒಳಪಡಿಸಲಾಗಿದ್ದು, ಈ ಮೂಲಕ ದೀರ್ಘ ಬಾಳಿಕೆ ಬಗ್ಗೆ ಕಂಪೆನಿ ಗ್ಯಾರಂಟಿ ನೀಡಿದೆ. ಎಲ್ಲಕ್ಕಿಂತ ಮಿಗಿಲಾಗಿ ಈ ಫೋನ್‌ನ ಹೈಲೈಟ್‌ ಏನೆಂದರೆ ಯುಪಿಐ ಫೀಚರ್ಸ್‌.

ನೋಕಿಯಾ 105 ಕ್ಲಾಸಿಕ್ ಫೀಚರ್ ಫೋನ್ ಲಾಂಚ್‌; UPI ಬೆಂಬಲ... ಬೆಲೆ 999ರೂ.!

ಈ ಮೊದಲು ಕೇವಲ ಸ್ಮಾರ್ಟ್‌ಫೋನ್‌ಗಳಲ್ಲಿ ಮಾತ್ರ ಇದ್ದ ಈ ಫೀಚರ್ಸ್‌ ಇದೀಗ ಫೀಚರ್ ಫೋನ್‌ಗಳಲ್ಲೂ ಯಶಸ್ಸು ಕಾಣುತ್ತಿದೆ. ಈ ಇನ್‌ಬಿಲ್ಟ್‌ ಯುಪಿಐ ಆಪ್‌ (Inbuilt UPI app) ಬಳಕೆದಾರರಿಗೆ ಸುರಕ್ಷಿತ ಮತ್ತು ಸುಗಮ ಯುಪಿಐ ಪಾವತಿಗಳನ್ನು ಮಾಡಲು ಅನುಮತಿ ನೀಡಲಿದೆ. ಇದರೊಂದಿಗೆ ಈ ಫೋನ್ 800 mAh ಸಾಮರ್ಥ್ಯದ ಬ್ಯಾಟರಿಯಿಂದ ಪ್ಯಾಕ್‌ ಆಗಿದ್ದು, ಈ ಮೂಲಕ ದೀರ್ಘ ಬ್ಯಾಕಪ್‌ ನೀಡಲಿದೆ.

ಈ ಸಂಬಂಧ ಹೆಚ್‌ಎಮ್‌ಡಿ ಗ್ಲೋಬಲ್ ನ ಅಧಿಕಾರಿ ರವಿ ಕುನ್ವಾರ್ ಮಾಹಿತಿ ನೀಡಿದ್ದು, ಹೊಸ ನೋಕಿಯಾ 105 ಕ್ಲಾಸಿಕ್‌ನೊಂದಿಗೆ ಮಾರುಕಟ್ಟೆಯ ಪ್ರಮುಖ ಫೀಚರ್ ಫೋನ್‌ಗೆ ಅತ್ಯಾಕರ್ಷಕ ಅಪ್‌ಗ್ರೇಡ್ ಅನ್ನು ಪ್ರಾರಂಭಿಸಲು ನಾವು ಉತ್ಸುಕರಾಗಿದ್ದೇವೆ. ಇದು ಸೊಗಸಾದ ಹೊಸ ವಿನ್ಯಾಸ ಮತ್ತು ಯುಪಿಐ ಫೀಚರ್ಸ್‌ನೊಂದಿಗೆ ಎಂದಿಗಿಂತಲೂ ಹೆಚ್ಚು ಪ್ರಸ್ತುತವಾಗಿದೆ. ಅಷ್ಟೇ ಅಲ್ಲದೆ 1000 ರೂ.ಗಳ ವಿಭಾಗದಲ್ಲಿ ಇದು ಲಭ್ಯ ಇದ್ದು, ನಾವು ಡಿಜಿಟಲ್ ವಿಭಜನೆಯನ್ನು ಕಡಿಮೆ ಮಾಡಲು ಮತ್ತು ಎಲ್ಲರಿಗೂ ಆರ್ಥಿಕ ಪ್ರವೇಶವನ್ನು ಸಕ್ರಿಯಗೊಳಿಸಲು ಪ್ರಯತ್ನಿಸುತ್ತೇವೆ ಎಂದಿದ್ದಾರೆ.

ನೋಕಿಯಾ 105 ಕ್ಲಾಸಿಕ್ ಫೀಚರ್ ಫೋನ್ ಲಾಂಚ್‌; UPI ಬೆಂಬಲ... ಬೆಲೆ 999ರೂ.!

ನೋಕಿಯಾ 105 ಕ್ಲಾಸಿಕ್ ಫೋನ್ ಬೆಲೆ ಹಾಗೂ ಲಭ್ಯತೆ: ಈ ಫೋನ್ 999ರೂ.ಗಳ ಬೆಲೆಯಿಂದ ಆರಂಭವಾಗಲಿದೆ. ಜೊತೆಗೆ ಇದು ಚಾರ್ಕೋಲ್ ಮತ್ತು ಬ್ಲೂ ಬಣ್ಣದ ಆಯ್ಕೆಗಳಲ್ಲಿ ಕಂಡುಬಂದಿದ್ದು, ಫೋನ್‌ನೊಂದಿಗೆ ಒಂದು ವರ್ಷದ ಬದಲಿ ಗ್ಯಾರಂಟಿಯನ್ನು ಸಹ ನೀಡಲಾಗುತ್ತದೆ. ಜೊತೆಗೆ ಖರೀದಿ ವೇಳೆ ನೀವು ಸಿಂಗಲ್ ಸಿಮ್ ಮತ್ತು ಡ್ಯುಯಲ್ ಸಿಮ್, ಚಾರ್ಜರ್ ಜೊತೆಗೆ ಮತ್ತು ರಹಿತವಾಗಿ ಕೊಂಡುಕೊಳ್ಳಬಹುದಾಗಿದೆ.

ನೋಕಿಯಾ ಫೋನ್‌ ಖರೀದಿ ಮಾಡಲು ಸಾಲ: ಈ ನಡುವೆ ನೋಕಿಯಾ ತನ್ನೆಲ್ಲಾ ಗ್ರಾಹಕರಿಗೆ ಮತ್ತೊಂದು ಗುಡ್‌ ನ್ಯೂಸ್ ನೀಡಿದೆ. ಅದುವೇ ನೋಕಿಯಾ ಸ್ಮಾರ್ಟ್‌ಫೋನ್‌ಗಳನ್ನು ಖರೀದಿ ಮಾಡಲು ಸಾಲ ಸೌಲಭ್ಯ. ಹೆಚ್‌ಎಮ್‌ಡಿ ಗ್ಲೋಬಲ್ (HMD Global) ಭಾರತದಲ್ಲಿ ಹೆಚ್‌ಎಮ್‌ಡಿ ಈಸಿ ಪೇ (HMD Easy Pay) ಎಂಬ ಹೊಸ ಹಣಕಾಸು ಸೌಲಭ್ಯವನ್ನು ಗ್ರಾಹಕರಿಗೆ ನೀಡಲಿದೆ.

ಈ ಸೇವೆಯಿಂದ ಗ್ರಾಹಕರು ನೋ-ಕಾಸ್ಟ್ ಇಎಮ್‌ಐ ಮತ್ತು ಸುಲಭ ಕಂತು ಪಾವತಿ ಆಯ್ಕೆಗಳಲ್ಲಿ ಸ್ಮಾರ್ಟ್‌ಫೋನ್‌ಗಳನ್ನು ಖರೀದಿ ಮಾಡಬಹುದಾಗಿದೆ. ಅಂದರೆ ನೀವು ಫೋನ್‌ನ ವೆಚ್ಚದ 20 ಪ್ರತಿಶತವನ್ನು ಪಾವತಿ ಮಾಡಿದ್ರೆ ಉಳಿದ ಹಣಕ್ಕಾಗಿ ಯಾವುದೇ ಬಡ್ಡಿ ಇಲ್ಲದೆ ನೋಕಿಯಾ ನಿಮಗೆ ಸಾಲ ನೀಡುತ್ತದೆ. ಇದರಿಂದ ಯಾರೆಲ್ಲಾ ಸ್ಮಾರ್ಟ್‌ಫೋನ್‌ ಖರೀದಿ ಮಾಡಬೇಕು ಅಂದುಕೊಂಡಿದ್ದಾರೋ ಅವರು ಸುಲಭವಾಗಿ ಈಗ ಖರೀದಿ ಮಾಡಬಹುದಾಗಿದೆ.

Best Mobiles in India

English summary
Nokia 105 Classic has launched. This phone has an alphanumeric keypad option and on top of that it has UPI facility.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+