Just In
- 28 min ago
ಭಾರತದಲ್ಲಿ ಇನ್ಫಿನಿಕ್ಸ್ ಝೀರೋ ಬುಕ್ ಅಲ್ಟ್ರಾ ಲ್ಯಾಪ್ಟಾಪ್ ಲಾಂಚ್; ಏನೆಲ್ಲಾ ಫೀಚರ್ಸ್ ಇವೆ ಗೊತ್ತಾ!?
- 2 hrs ago
ಬಿಎಸ್ಎನ್ಎಲ್ನ ಈ ಪೋಸ್ಟ್ಪೇಯ್ಡ್ ಪ್ಲ್ಯಾನ್ ಬೆಲೆ ಅಗ್ಗ; ಆದ್ರೆ, ರೀಚಾರ್ಜ್ ಕಷ್ಟ!
- 2 hrs ago
ಅಗ್ಗದ ಬೆಲೆಗೆ ಹೊಸ ಪ್ಲ್ಯಾನ್ ಪರಿಚಯಿಸಿದ ವಿ ಟೆಲಿಕಾಂ; ಸಿಮ್ ಆಕ್ಟಿವ್ ಇಡಲು ಇದು ಬೆಸ್ಟ್!
- 4 hrs ago
ಏರ್ಟೆಲ್ ಜೊತೆಗೆ ಕೈ ಜೋಡಿಸಿದ ಮೆಟ್ರೋ, ಇನ್ಮುಂದೆ ಪ್ರಯಾಣಿಕರಿಗೆ ಈ ಸೇವೆ ಇನ್ನಷ್ಟು ಸರಳ!
Don't Miss
- News
ಸುಳ್ಳು ಭರವಸೆ ಕೊಟ್ಟು ಜನರನ್ನು ದಾರಿತಪ್ಪಿಸುವ ಕೆಲಸ; ಎಲ್ಲಾ ಸಮಯದಲ್ಲಿ ಮೋಸ ಮಾಡಲು ಸಾಧ್ಯವಿಲ್ಲ: ಸಿಎಂ
- Movies
ಏಜೆಯನ್ನು ಮುದ್ದಾಗಿ ಕಾಡಿದ ಲೀಲಾಳನ್ನು ಕಂಡು ಹಲ್ಲು ಮಸೆಯುತ್ತಿರುವ ದುರ್ಗಾ!
- Automobiles
ಜನಪ್ರಿಯ ನಟನ ಮನೆಗೆ ಕಥೆ ಹೇಳಲು ಹೋಗಿ ಆತನ ದುಬಾರಿ ಕಾರ್ ಓಡಿಸಿಬಂದ ನಿರ್ದೇಶಕ...
- Sports
ಮೂಲೆಗುಂಪಾದ ಶಿಖರ್ ಧವನ್ ಬಗ್ಗೆ ಅಶ್ವಿನ್ ಅಚ್ಚರಿಯ ಹೇಳಿಕೆ: ಇಶಾನ್, ಗಿಲ್ ಬಗ್ಗೆ ಹೇಳಿದ್ದೇನು?
- Lifestyle
ಫೆ.1ಕ್ಕೆ ಜಯ ಏಕಾದಶಿ: ಈ ರೀತಿ ಮಾಡಿದರೆ ದಾರಿದ್ರ್ಯ ಹೋಗಿ ಸಂಪತ್ತು ವೃದ್ಧಿಸುವುದು
- Finance
Economic Survey: ಶೇ.6-6.8 ಜಿಡಿಪಿ ಬೆಳವಣಿಗೆ, 3 ವರ್ಷದಲ್ಲೇ ಮಂದಗತಿ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
'ನೋಕಿಯಾ 105' ಫೀಚರ್ ಫೋನ್ ಲಾಂಚ್!.ಬಿಗ್ ಬ್ಯಾಟರಿ ಲೈಫ್!
ಫೀಚರ್ ಫೋನ್ ವಿಭಾಗದಲ್ಲಿ ವಿವಿಧ ಮಾದರಿಗಳ ಫೋನ್ ಮೂಲಕ ದಿಗ್ಗಜನಾಗಿ ಮೆರೆದ ನೋಕಿಯಾ, ಮಾರುಕಟ್ಟೆಯಲ್ಲಿ ಈಗಲೂ ಫೇವರೇಟ್ ಸ್ಥಾನದಲ್ಲಿಯೇ ಗುರುತಿಸಿಕೊಂಡಿದೆ. ಸಂಸ್ಥೆಯು ಇತ್ತೀಚಿಗೆ ಹೆಚ್‌ಎಮ್‌ಡಿ ಗ್ಲೋಬಲ್ ಮೇಳದಲ್ಲಿ ಹೊಸ ನೋಕಿಯಾ 220 4G ಮತ್ತು ನೋಕಿಯಾ 105 ಫೀಚರ್ ಫೋನ್‌ಗಳನ್ನು ಬಿಡುಗಡೆ ಮಾಡುವುದಾಗಿ ಘೋಷಿಸಿತ್ತು. ಅದರಂತೆಯೇ ನೋಕಿಯಾ ಇದೀಗ 105 (2019)ಫೀಚರ್ ಫೋನ್ ಲಾಂಚ್ ಮಾಡಿದ್ದು, ಮೊಬೈಲ್ ವಲಯದಲ್ಲಿ ಸದ್ದು ಮಾಡಲಿದೆ.

ಹೌದು, ನೋಕಿಯಾ ಸಂಸ್ಥೆಯು ನೋಕಿಯಾ 105 (2019) ಫೀಚರ್ ಫೋನ್ ಅಪ್‌ಡೇಟ್ ವರ್ಷನ್ ಬಿಡುಗಡೆ ಮಾಡಿದ್ದು, ಈ ಫೋನ್ ಇದೀಗ ಆನ್‌ಲೈನ್ ಮತ್ತು ಆಫ್‌ಲೈನ್ ಮಾರುಕಟ್ಟೆಗಳಲ್ಲಿ ಖರೀದಿಗೆ ಲಭ್ಯವಿದೆ. ಕಳೆದ 2017ರಲ್ಲಿನ ನೋಕಿಯಾ 105 ಯಶಸ್ಸಿನ ಮುಂದುವರಿದ ಭಾಗವಾಗಿ ನೂತನ ಅಪ್‌ಡೇಟ್ ರೂಪ ಪಡೆದಿದ್ದು, ಮುಖ್ಯವಾಗಿ 4MB RAM ಸಾಮರ್ಥ್ಯವನ್ನು ಒಳಗೊಂಡಿರುವುದು ವಿಶೇಷವಾಗಿದೆ ಹಾಗೆಯೇ ಪವರ್‌ಫುಲ್ ಬ್ಯಾಟರಿ ಲೈಫ್ ಹೊಂದಿದೆ.

ತನ್ನ ವರ್ಗದಲ್ಲಿಯೇ ಅತ್ಯುತ್ತಮ ಫೀಚರ್ಸ್‌ಗಳಿಂದ ಗಮನ ಸೆಳೆದಿರುವ ನೋಕಿಯಾ 105 ಫೀಚರ್ ಫೋನ್ 800mAh ಸಾಮರ್ಥ್ಯದ ಬ್ಯಾಟರಿಯನ್ನು ಪಡೆದುಕೊಂಡಿದೆ. ಒಮ್ಮೆ ಬ್ಯಾಟರಿ ಪೂರ್ಣ ಚಾರ್ಜ್ ಮಾಡಿದರೇ ನಿರಂತರ 14 ಗಂಟೆಗಳ ಟಾಕ್‌ಟೈಮ್ ಬ್ಯಾಕ್‌ಅಪ್ ನೀಡಲಿದೆ ಹಾಗೂ 26 ಗಂಟೆಗಳ ಸ್ಟ್ಯಾಂಡ್ ಬೈ ಸಾಮರ್ಥ್ಯವನ್ನು ಪಡೆದಿದೆ. ಹೀಗಾಗಿ ಅಧಿಕ ಬ್ಯಾಟರಿ ಲೈಫ್ ನಿರೀಕ್ಷಿಸುವ ಗ್ರಾಹಕರಿಗೆ ಉಪಯುಕ್ತವಾಗಲಿದೆ.

ನೋಕಿಯಾ 105 ಫೀಚರ್ ಫೋನ್ 1.77 ಇಂಚಿನ QQVGA ಕಲರ್ ಡಿಸ್‌ಪ್ಲೇಯನ್ನು ಒಳಗೊಂಡಿದ್ದು, 4MB RAM ಸಾಮರ್ಥ್ಯವನ್ನು ಸಹ ಪಡೆದುಕೊಂಡಿದೆ. ಆಂತರಿಕವಾಗಿ ಸುಮಾರು 2,000 ಕಾಂಟ್ಯಾಕ್ಟ್‌ಗಳನ್ನು ಸೇವ್ ಮಾಡಿಕೊಳ್ಳಬಹುದಾಗಿದ್ದು, ಇದರೊಂದಿಗೆ 500 ಎಸ್‌ಎಮ್‌ಎಸ್‌ಗಳ ಸ್ಟೋರೇಜ್ ಸಾಮರ್ಥ್ಯವನ್ನು ಹೊಂದಿದೆ. ಹಾಗೆಯೇ ಡ್ಯುಯಲ್ ಸಿಮ್ ಅಳವಡಿಕೆಗೆ ಬೆಂಬಲ ನೀಡಲಿದೆ.
ಈ ಬೇಸಿಕ್ ಮಾದರಿಯ ಫೋನ್ ಎಫ್‌ಎಮ್ ರೇಡಿಯೊ ಮಲ್ಟಿಮೀಡಿಯಾ ಹೊಂದಿದ್ದು, ಜೊತೆಗೆ ಎಲ್ಇಡಿ ಫ್ಲ್ಯಾಶ್ ಲೈಟ್ ವೈಶಿಷ್ಟತೆ ಪಡೆದಿದೆ. ಹಾಗೆಯೇ ಬ್ಲೂ, ಪಿಂಕ್ ಮತ್ತು ಬ್ಲ್ಯಾಕ್ ಬಣ್ಣಗಳ ಆಯ್ಕೆಗಳಲ್ಲಿ ಲಭ್ಯವಾಗಲಿದ್ದು, ಗ್ರಾಹಕರು ನೋಕಿಯಾ ಅಧಿಕೃತ ವೆಬ್‌ಸೈಟ್‌ನಲ್ಲಿ ಹಾಗೂ ಪ್ರಮುಖ ರಿಟೈಲ್ ಶಾಪ್‌ಗಳಲ್ಲಿ ಖರೀದಿಸಬಹುದಾಗಿದೆ. ಈ ಫೋನಿನ ಬೆಲೆಯು 1,199ರೂ.ಗಳು ಆಗಿದೆ.

ನೋಕಿಯಾ ವಾಯರ್‌ಲೆಸ್ ಇಯರ್‌ಫೋನ್‌ಗಳು ಈಗ ಕಡಿಮೆ ಬೆಲೆಗೆ ಲಭ್ಯ!
ಹೆಡ್‌ಫೋನ್ ಮತ್ತು ಇಯರ್‌ಫೋನ್‌ಗಳು ಮ್ಯೂಸಿಕ್ ಕೇಳಲು ಅತ್ಯುತ್ತಮ ಡಿವೈಸ್‌ಗಳಾಗಿವೆ. ಸದ್ಯ ಬ್ಲೂಟೂತ್ ಮೂಲಕ ಕಾರ್ಯನಿರ್ವಹಿಸುವ ವಾಯರ್‌ಲೆಸ್ ಇಯರ್‌ಬಡ್ಸ್‌ಗಳು ಮತ್ತು ಇಯರ್‌ಫೋನ್‌ಗಳು ಚಾಲ್ತಿಯಲ್ಲಿದ್ದು, ಮಾರುಕಟ್ಟೆಯಲ್ಲಿ ಸಿಕ್ಕಾಪಟ್ಟೆ ಟ್ರೆಂಡ್ ಹುಟ್ಟುಹಾಕಿವೆ. ಈ ನಿಟ್ಟಿನಲ್ಲಿ ನೋಕಿಯಾ ಸಂಸ್ಥೆಯ ಆಕ್ಟಿವ್ ವಾಯರ್‌ಲೆಸ್ ಇಯರ್‌ಬಡ್ಸ್ ಮತ್ತು ಇಯರ್‌ಫೋನ್ ಖರೀದಿಸುವವರಿಗೆ ಸಂತಸದ ಸುದ್ದಿ ಇದೆ.
ಹೌದು, ಜನಪ್ರಿಯ ನೋಕಿಯಾ ಸಂಸ್ಥೆಯ ನೋಕಿಯಾ BH-501, ನೋಕಿಯಾ BH-701 ಪ್ರೊ ಮತ್ತು ನೋಕಿಯಾ BH-705 ಆಕ್ಟಿವ್ ವಾಯರ್‌ಲೆಸ್ ಇಯರ್‌ಫೋನ್‌ಗಳು ಈಗಾಗಲೇ ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿದ್ದು, ಇದೀಗ ಈ ಡಿವೈಸ್‌ಗಳ ಬೆಲೆಯಲ್ಲಿ ಭಾರೀ ಇಳಿಕೆ ಆಗಿದೆ. ಇ ಕಾಮರ್ಸ್ ದೈತ್ಯ ಅಮೆಜಾನ್ ಇ ಕಾಮರ್ಸ್ ತಾಣದಲ್ಲಿ ಗ್ರಾಹಕರಿಗೆ ಡಿಸ್ಕೌಂಟ್ ಬೆಲೆಯಲ್ಲಿ ದೊರೆಯಲಿವೆ. ಹಾಗಾದರೇ ನೋಕಿಯಾ ಸಂಸ್ಥೆಯ ಈ ವಾಯರ್‌ಲೆಸ್ ಇಯರ್‌ಫೋನ್‌ಗಳ ಫೀಚರ್ಸ್ ಕುರಿತು ಮುಂದೆ ನೋಡೋಣ ಬನ್ನಿರಿ.

ನೋಕಿಯಾ ಇಯರ್‌ಫೋನ್ ವೇರಿಯಂಟ್ಸ್
ಅಮೆಜಾನ್‌ನಲ್ಲಿಗ ನೋಕಿಯಾ ಸಂಸ್ಥೆಯು ತನ್ನ ಜನಪ್ರಿಯ ಇಯರ್‌ಫೋನ್‌ಗಳ ಬೆಲೆಯಲ್ಲಿ ಇಳಿಕೆ ಆಗಿದೆ. BH-501 ಆಕ್ಟಿವ್ ವಾಯರ್‌ಲೆಸ್ ಇಯರ್‌ಫೋನ್ 2,499ರೂ.ಗಳಿಗೆ ಲಭ್ಯವಾಗುತ್ತಿದ್ದು, ನೋಕಿಯಾ BH-701 ಪ್ರೊ ಇಯರ್‌ಫೋನ್ 5,499ರೂ.ಗಳಿಗೆ ದೊರೆಯುತ್ತಿದೆ. ಮತ್ತು ನೋಕಿಯಾ BH-705 ಇಯರ್‌ಫೋನ್ 7,359ರೂ.ಗಳಿಗೆ ಗ್ರಾಹಕರ ಕೈಸೇರಲಿದೆ.

ನೋಕಿಯಾ BH-501
ನೋಕಿಯಾದ ಈ ಇಯರ್‌ಫೋನ್ ನೆಕ್‌ಬ್ಯಾಂಡ್ ಮಾದರಿಯಲ್ಲಿದ್ದು, ಅತ್ಯುತ್ತಮ ಸೌಂಡ್ ಕ್ವಾಲಿಟಿಯನ್ನು ಹೊಂದಿದೆ. ಬ್ಲೂಟೂತ್ 4.1 ಕನೆಕ್ಟಿವಿಟಿ ಸೌಲಭ್ಯವನ್ನು ಪಡೆದಿದ್ದು, 10m ವ್ಯಾಪ್ತಿಯ ಕವರೇಜ್ ಹೊಂದಿದೆ. 9mm ಸೌಂಡ್ ಡ್ರೈವರ್ಸ್‌ಗಳೊಂದಿಗೆ ಬೆಸ್ಟ್ ಬ್ಯಾಟರಿ ಲೈಫ್ ಒಳಗೊಂಡಿದ್ದು, ಒಮ್ಮೆ ಪೂರ್ಣ ಚಾರ್ಜ್ ಮಾಡಿದರೇ ಡಿವೈಸ್‌ಗೆ ಸುಮಾರು 8ಗಂಟೆಗಳ ಕಾಲ ಬಾಳಿಕೆ ಒದಗಿಸಲಿದೆ. ಅಮೆಜಾನ್‌ನಲ್ಲಿ 2,499ರೂ.ಗಳಿಗೆ ಲಭ್ಯ.

ನೋಕಿಯಾ BH-705
ನೋಕಿಯಾ BH-705 ಟ್ರೂ ವಾಯರ್‌ಲೆಸ್ ಇಯರ್‌ಬಡ್ಸ್ ಮಾದರಿಯಲ್ಲಿದ್ದು, ಬ್ಲೂಟೂತ್ v5.0 ಸಾಮರ್ಥ್ಯದ ಕನೆಕ್ಟಿವಿಟಿ ಸೌಲಭ್ಯವನ್ನು ಹೊಂದಿದೆ. ಇಯರ್‌ಬಡ್ಸ್‌ಗಳು IPx4 ಸಾಮರ್ಥ್ಯ ಪಡೆದಿದ್ದು, ಜೊತೆಗೆ ಸ್ವೆಟ್ ಮತ್ತು ಸ್ಲಾಶ್ ಪ್ರೂಫ್ ರಚನೆಯನ್ನು ಹೊಂದಿವೆ. ಯುಎಸ್‌ಬಿ ಟೈಪ್-ಸಿ ಚಾರ್ಜಿಂಗ್ ಜಾರ್ಜಿಂಗ್ ಕೇಸ್ ನೀಡಲಾಗಿದ್ದು, ಎಲ್‌ಇಡಿ ಚಾರ್ಜ್ ಇಂಡಿಕೇಟರ್ ಪಡೆದಿದೆ. ಅಮೆಜಾನ್‌ನಲ್ಲಿ 7,359ರೂ.ಗಳಿಗೆ ದೊರೆಯಲಿದೆ.

ನೋಕಿಯಾ BH-701
ಬ್ಲ್ಯಾಕ್ ಬಣ್ಣದ ಆಯ್ಕೆಯಲ್ಲಿ ಲಭ್ಯವಿರುವ ನೋಕಿಯಾ BH-701 ವಾಯರ್‌ಲೆಸ್ ಇಯರ್‌ಫೋನ್ ಅತ್ಯುತ್ತಮ ಬ್ಯಾಟರಿ ಪವರ್ ಪಡೆದಿದ್ದು, ಸಿಂಗಲ್ ಚಾರ್ಜ್‌ಗೆ ಸುಮಾರು 10ಗಂಟೆಗಳ ಬ್ಯಾಕ್‌ಅಪ್ ಒದಗಿಸಲಿದೆ. ಮ್ಯಾಕ್ನೆಟಿಕ್ ಕ್ಲಿಪ್ಪಿಂಗ್ ರಚನೆಯಿದ್ದು, ಬ್ಲೂಟೂತ್ 4.2 ಸಾಮರ್ಥ್ಯದ ಕನೆಕ್ಟಿವಿಟಿ ಆಯ್ಕೆಯನ್ನು ಪಡೆದಿದೆ. ಡಿಜಿಟಲ್ ಸಿಗ್ನಲ್ ಪ್ರೊಸೆಸರ್ ಫೀಚರ್ ಜೊತೆಗೆ ಸ್ವೆಟ್ ಮತ್ತು ಸ್ಲಾಶ್ ಪ್ರೂಫ್ ರಚನೆಯನ್ನು ಹೊಂದಿದೆ. ಅಮೆಜಾನ್‌ನಲ್ಲಿ 5,499ರೂ.ಗಳಿಗೆ ದೊರೆಯಲಿದೆ.
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470