Home
ಸುದ್ದಿಜಾಲ

ನೋಕಿಯಾ 105 ಪ್ಲಸ್ ಫೋನ್‌ ಬೆಲೆಯಲ್ಲಿ ಭಾರೀ ಇಳಿಕೆ: ಇದುವೇ ಬೆಸ್ಟ್‌ ಆಫರ್‌!

ನೋಕಿಯಾ ಸಂಸ್ಥೆಯು ಭಿನ್ನ ಬೆಲೆಯಲ್ಲಿ ಹಲವು ಫೋನ್‌ಗಳನ್ನು ಪರಿಚಯಿಸಿ ಮಾರುಕಟ್ಟೆಯಲ್ಲಿ ಸದ್ದು ಮಾಡಿದೆ. ಆ ಪೈಕಿ ಕೆಲವು ಅತ್ಯುತ್ತಮ ಫೀಚರ್ ಫೋನ್‌ ಸಹ ಪರಿಚಯಿಸಿ ಗಮನ ಸೆಳೆದಿದೆ. ಸಂಸ್ಥೆಯ ನೋಕಿಯಾ 105 ಸ್ಮಾರ್ಟ್‌ಫೋನ್‌ ಇದೀಗ ಅಮೆಜಾನ್ ಇ ಕಾಮರ್ಸ್‌ ತಾಣದಲ್ಲಿ ಬಿಗ್ ಡಿಸ್ಕೌಂಟ್‌ ಬೆಲೆಯಲ್ಲಿ ಖರೀದಿಗೆ ಲಭ್ಯ ಇದ್ದು, ಗ್ರಾಹಕರು ಅಚ್ಚರಿ ಆಗುವಂತೆ ಮಾಡಿದೆ.

ಹೌದು, ನೋಕಿಯಾ ಸಂಸ್ಥೆಯ ನೋಕಿಯಾ 105 ಪ್ಲಸ್‌ ಫೋನ್ ಅಮೆಜಾನ್ ಆನ್‌ಲೈನ್‌ ತಾಣದಲ್ಲಿ ಈಗ 21% ನಷ್ಟು ಡಿಸ್ಕೌಂಟ್‌ ದರದಲ್ಲಿ ಕಾಣಿಸಿಕೊಂಡಿದೆ. ಈ ಸ್ಮಾರ್ಟ್‌ಫೋನ್ 1,699ರೂ. ಪ್ರೈಸ್‌ ಟ್ಯಾಗ್‌ ಹೊಂದಿದ್ದು, ಆದರೆ ಈಗ ಗ್ರಾಹಕರು 1,349ರೂ. ಗಳ ರಿಯಾಯಿತಿ ಪ್ರೈಸ್‌ ಟ್ಯಾಗ್‌ನಲ್ಲಿ ಖರೀದಿ ಮಾಡಬಹುದಾಗಿದೆ. ಜೊತೆಗೆ ಬ್ಯಾಂಕ್ ರಿಯಾಯಿತಿ ಸಹ ಲಭ್ಯವಾಗಲಿವೆ. ಇನ್ನುಳಿದಂತೆ ಈ ಫೋನಿನ ಇತರೆ ಫೀಚರ್ಸ್‌ ಬಗ್ಗೆ ಮುಂದೆ ತಿಳಿಯೋಣ.

ನೋಕಿಯಾ 105 ಪ್ಲಸ್ ಫೋನ್‌ ಬೆಲೆಯಲ್ಲಿ ಭಾರೀ ಇಳಿಕೆ: ಇದುವೇ ಬೆಸ್ಟ್‌ ಆಫರ್‌!

ನೋಕಿಯಾ 105 ಪ್ಲಸ್ ಫೀಚರ್ಸ್‌ : ನೋಕಿಯಾ 105 ಫೋನ್ 1.77 ಇಂಚಿನ QQVGA ಡಿಸ್ಪ್ಲೇಯೊಂದಿಗೆ ಬರುತ್ತದೆ. ಈ ಫೋನ್ 4MB RAM ಮತ್ತು 4MB ಸ್ಟೋರೇಜ್‌ ಆಯ್ಕೆ ಅನ್ನು ಪಡೆದಿದೆ. ಹಾಗೆಯೇ 32 GB ವರೆಗಿನ ಮೆಮೊರಿ ಕಾರ್ಡ್ ಅನ್ನು ಬಳಸಿಕೊಂಡು ಈ ಸ್ಟೋರೇಜ್‌ ಅನ್ನು ಸ್ಥಳವನ್ನು ಮತ್ತಷ್ಟು ವಿಸ್ತರಿಸಬಹುದು.

ಪ್ರೊಸೆಸರ್‌ ಮಾಹಿತಿ : ಈ ಫೋನ್ S30+ ಆಪರೇಟಿಂಗ್ ಸಿಸ್ಟಮ್ ಅನ್ನು ರನ್ ಮಾಡುತ್ತದೆ. ಹಾಗೆಯೇ 800 mAh ಬ್ಯಾಟರಿಯಿಂದ ಬೆಂಬಲಿತವಾಗಿದೆ. ಇದರೊಂದಿಗೆ ಕನೆಕ್ಟಿವಿಟಿ ಆಯ್ಕೆಗಳಲ್ಲಿ ಈ ಫೋನ್ 3.5 mm ಜ್ಯಾಕ್, ಮೈಕ್ರೋ USB ಮತ್ತು 2G ಸಂಪರ್ಕವನ್ನು ಹೊಂದಿದೆ. ಹಾಗೆಯೇ ಹೆಚ್ಚುವರಿ ಫೀಚರ್ಸ್‌ಗಳು ಅಂತರ್ನಿರ್ಮಿತ ಟಾರ್ಚ್ ಮತ್ತು ಕ್ಲಾಸಿಕ್ ಆಟಗಳಿಗೆ ಬೆಂಬಲವನ್ನು ಒಳಗೊಂಡಿವೆ. ಈ ಫೋನ್ ಇದು ಚಾರ್ಕೋಲ್ ಮತ್ತು ಬ್ಲೂ ಬಣ್ಣದ ರೂಪಾಂತರಗಳಲ್ಲಿ ಲಭ್ಯವಿದೆ.

ನೋಕಿಯಾ 105 ಫೀಚರ್ಸ್‌ : ಫೋನ್ 1.77 ಇಂಚಿನ QQVGA ಡಿಸ್‌ಪ್ಲೇ ರಚನೆಯನ್ನು ಹೊಂದಿದೆ. ಹಾಗೆಯೇ ಆಡಿಯೋ ಕರೆ ರೆಕಾರ್ಡಿಂಗ್ ಫೀಚರ್ಸ್‌ ಹೊಂದಿದೆ. ಹಾಗೆಯೇ ಈ ಫೋನ್ ಎಂಪಿ3 ಪ್ಲೇಯರ್‌ ಸೌಲಭ್ಯ ಅನ್ನು ಹೊಂದಿದೆ. ಹಾಗೆಯೇ ಈ ಫೋನ್ 1,000 mAh ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಹೊಂದಿದೆ. ಈ ಫೋನ್ 18 ದಿನಗಳ ಸ್ಟ್ಯಾಂಡ್‌ ಬೈ ಸಮಯವನ್ನು ಮತ್ತು 12 ಗಂಟೆಗಳ ಟಾಕ್‌ಟೈಮ್ ಅನ್ನು ನೀಡುತ್ತದೆ. ಇದು ಚಾರ್ಕೋಲ್ ಮತ್ತು ರೆಡ್ ಬಣ್ಣದ ರೂಪಾಂತರಗಳಲ್ಲಿ ಬರುತ್ತದೆ.

ನೋಕಿಯಾ 105 ಪ್ಲಸ್ ಫೋನ್‌ ಬೆಲೆಯಲ್ಲಿ ಭಾರೀ ಇಳಿಕೆ: ಇದುವೇ ಬೆಸ್ಟ್‌ ಆಫರ್‌!

ನೋಕಿಯಾ G21 ಸ್ಮಾರ್ಟ್‌ಫೋನ್‌ ಫೀಚರ್ಸ್‌ : ನೋಕಿಯಾ ಸಂಸ್ಥೆಯು ಫೀಚರ್‌ ಫೋನ್‌ಗಳೊಂದಿಗೆ ನೋಕಿಯಾ G21 ಸ್ಮಾರ್ಟ್‌ಫೋನ್‌ ಸಹ ಜನಪ್ರಿಯವಾಗಿದೆ. ಈ ಫೋನ್ 720 x 1,600 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 6.5 ಇಂಚಿನ HD+ ಡಿಸ್‌ಪ್ಲೇ ಹೊಂದಿದೆ. ಆಕ್ಟಾ ಕೋರ್ ಯುನಿಸೊಕ್ T606 SoC ಪ್ರೊಸೆಸರ್‌ ಬಲವನ್ನು ಪಡೆದುಕೊಂಡಿದೆ.

ಇದು ಆಂಡ್ರಾಯ್ಡ್ 11 ಬೆಂಬಲದೊಂದಿಗೆ ಕಾರ್ಯ ನಿರ್ವಹಿಸಲಿದೆ. ಹಾಗೆಯೇ 6GB RAM ಮತ್ತು 128 GB ಇಂಟರ್‌ ಸ್ಟೋರೇಜ್‌ ಸಾಮರ್ಥ್ಯ ವನ್ನು ಹೊಂದಿದೆ. ಇನ್ನು ಈ ಸ್ಮಾರ್ಟ್‌ಫೋನ್‌ ಟ್ರಿಪಲ್ ರಿಯರ್‌ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾ ಪಿಕ್ಸೆಲ್ ಸೆನ್ಸಾರ್‌ ಹೊಂದಿದೆ. ಹಾಗೆಯೇ ನೋಕಿಯಾ G21 ಸ್ಮಾರ್ಟ್‌ಫೋನ್‌ 5,050 mAh ಬ್ಯಾಟರಿಯನ್ನು ಹೊಂದಿದ್ದು, 18W ವೇಗದ ಚಾರ್ಜಿಂಗ್ ಬೆಂಬಲಿಸಲಿದೆ.

Best Mobiles in India

English summary
Nokia 105 Plus available at big discount price on amazon: Check Offer Price and Specifications.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+