'ನೋಕಿಯಾ 110' ಬಿಡುಗಡೆ : 'ಸ್ನೇಕ್ ಗೇಮ್' ಮತ್ತು 'ಎಂಪಿ3 ಪ್ಲೇಯರ್' ಹೈಲೈಟ್ಸ್!
ಮೊಬೈಲ್ ಪ್ರಿಯರ ನೆಚ್ಚಿನ ಬ್ರ್ಯಾಂಡ್ ನೋಕಿಯಾ ಸಂಸ್ಥೆಯ ಬೇಸಿಕ್ ಫೋನ್‌ಗಳಿಗೂ ಈಗಲೂ ಉತ್ತಮ ಬೇಡಿಕೆ ಇದೆ. ಈ ನಿಟ್ಟಿನಲ್ಲಿ ಇತ್ತೀಚಿಗೆ ಸಂಸ್ಥೆಯು 'ನೋಕಿಯಾ 105' ಫೋನ್ ಅನ್ನು ಲಾಂಚ್ ಮಾಡಿತ್ತು. ಆದ್ರೆ, ಇದೀಗ ನೋಕಿಯಾ ಮಾರುಕಟ್ಟೆಗೆ 'ನೋಕಿಯಾ 110' (2019) ಫೋನ್ ಅನ್ನು ಬಿಡುಗಡೆ ಮಾಡಿದ್ದು, ಈ ಫೋನ್ ಜನಪ್ರಿಯ ಸ್ನೇಕ್ ಗೇಮ್ ಜೊತೆಗೆ ಎಫ್‌ಎಮ್ ರೇಡಿಯೊ ಸೌಲಭ್ಯವನ್ನು ಪಡೆದುಕೊಂಡಿದೆ.

ಹೌದು, ನೋಕಿಯಾ ಸಂಸ್ಥೆಯು ಭಾರತೀಯ ಮಾರುಕಟ್ಟೆಗೆ (ಅ.17) ಹೊಸ ನೋಕಿಯಾ 110(2019) ಫೋನ್ ಅನ್ನು ಪರಿಚಯಿಸಿದೆ. ಈ ಬೇಸಿಕ್ ಫೋನ್ ಬೆಲೆಯು 1,599ರೂ.ಗಳಾಗಿದ್ದು, ಬ್ಲ್ಯಾಕ, ಓಶಿಯನ್ ಬ್ಲೂ, ಪಿಂಕ್ ಬಣ್ಣಗಳ ಆಯ್ಕೆಗಳಲ್ಲಿ ಲಭ್ಯವಾಗಲಿದೆ. ಈ ಫೋನ್ ಇಂದಿನಿಂದ (ಅಕ್ಟೋಬರ್ 18) ಪ್ರಮುಖ ರೀಟೈಲ್ ಸ್ಟೋರ್‌ಗಳಲ್ಲಿ ಮತ್ತು ನೋಕಿಯಾದ ಅಧಿಕೃತ ವೆಬ್‌ಸೈಟ್‌ನಲ್ಲಿ ಗ್ರಾಹಕರ ಖರೀದಿಗೆ ಸಿಗಲಿದೆ.

ನೋಕಿಯಾ 110(2019) ಫೋನ್ 1.77 ಇಂಚಿನ QQVGA ಡಿಸ್‌ಪ್ಲೇಯನ್ನು ಹೊಂದಿದ್ದು, ಡಿಸ್‌ಪ್ಲೇಯ ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯವು 120x160 ಆಗಿದೆ. ಹಾಗೆಯೇ ಈ ಫೋನ್ SPRD 6531E ಪ್ರೊಸೆಸರ್ ಸಾಮರ್ಥ್ಯದಲ್ಲಿ ಕೆಲಸ ನಿರ್ವಹಿಸಲಿದ್ದು, 4MB RAM ಮತ್ತು 4MB ಸ್ಟೋರೇಜ್ ಸ್ಥಳಾವಕಾಶವನ್ನು ಪಡೆದುಕೊಂಡಿದೆ. ಎಸ್‌ಡಿ ಕಾರ್ಡ್ ಮೂಲಕ 32GB ವರೆಗೂ ಸ್ಟೋರೇಜ್ ಸ್ಥಳಾವಕಾಶವನ್ನು ವಿಸ್ತರಿಸಿಕೊಳ್ಳಬಹುದು.

ಈ ಫೋನ್ ಬೇಸಿಕ್ ಮಾದರಿಯಲ್ಲಿದ್ದರು, ಉತ್ತಮ ಮನರಂಜನೆಯ ಫ್ಲಾಟ್‌ಫಾರ್ಮ್ ಹೊಂದಿದೆ. ಈ ಫೋನ್ ಎಂಪಿ3 ಪ್ಲೇಯರ್, ಎಫ್‌ಎಮ್ ರೇಡಿಯೊ ಸೌಲಭ್ಯಗಳನ್ನು ಪಡೆದಿದ್ದು, ಜೊತೆಗೆ ಪ್ರಿ-ಇನ್‌ಸ್ಟಾಲ್ಡ್ ಸ್ನೇಕ್ ಗೇಮ್ ಸೌಲಭ್ಯವನ್ನು ಪಡೆದಿದೆ. ಇದರೊಂದಿಗೆ ಗ್ರಾಹಕರು Ninja Up, ಏರ್ ಸ್ಟ್ರೈಕ್(Air Strike), ಫುಟ್‌ಬಾಲ್ ಕಪ್ (Football Cup) ಡ್ಯೂಡಲ್ ಜಂಪ್(Doodle Jump) ಗೇಮ್ಸ್‌ಗಳ ಬೆಂಬಲ ಪಡೆದಿದೆ. ಹಾಗೆಯೇ ಹಾಡುಗಳನ್ನು ಸ್ಟೋರೇಜ್ ಸಹ ಮಾಡಿಕೊಳ್ಳಬಹುದು.

ಈ ಫೋನ್ 800mAh ಸಾಮರ್ಥ್ಯದ ಬ್ಯಾಟರಿ ಶಕ್ತಿಯನ್ನು ಒಳಗೊಂಡಿದ್ದು, ಒಮ್ಮೆ ಪೂರ್ಣ ಚಾರ್ಜ್ ಮಾಡಿದರೇ ಸುಮಾರು 14ಗಂಟೆಗಳ ಟಾಕ್‌ಟೈಮ್ ಬ್ಯಾಕ್‌ಅಪ್ ಒದಗಿಸಲಿದೆ. ಹಾಗೆಯೇ ಸುಮಾರು 18 ಗಂಟೆಗಳ ಎಫ್‌ಎಮ್ ರೇಡಿಯೊ ಪ್ಲೇ ಬ್ಯಾಕ್ ಬ್ಯಾಕ್‌ಅಪ್ ನೀಡಲಿದ್ದು, ಸುಮಾರು 27 ಗಂಟೆ ಮ್ಯೂಸಿಕ್ ಪ್ಲೇ ಬ್ಯಾಕ್ ಬ್ಯಾಕ್‌ಅಪ್ ಪಡೆದಿದೆ. ಹಾಗೆಯೇ ಸುಮಾರು 18.5 ದಿನಗಳ ಸ್ಟ್ಯಾಂಡ್ ಬೈ ಟೈಮ್ ಬ್ಯಾಟರಿ ಲೈಫ್ ಒದಗಿಸುವ ಸಾಮರ್ಥ್ಯವಿದೆ.

ಇನ್ನುಳಿದಂತೆ ಈ ಫೋನಿನಲ್ಲಿ ಬಿಲ್ಟ್‌ಇನ್ ರಿಯರ್ ಕ್ಯಾಮೆರಾ ಸಹ ಇದ್ದು, ಫೋನಿನ ಮೇಲ್ಭಾಗದಲ್ಲಿ ಎಲ್‌ಇಡಿ ಟಾರ್ಚ್ ಲೈಟ್ ಸೌಲಭ್ಯವನ್ನು ಹೊಂದಿದೆ. ಮೈಕ್ರೋ ಯುಎಸ್‌ಬಿ 2.0 ಪೋರ್ಟ್, ಎರಡು ಮಿನಿ ಸಿಮ್ ಸ್ಲಾಟ್ ಆಯ್ಕೆಗಳನ್ನು ಒಳಗೊಂಡಿದೆ.


Click it and Unblock the Notifications








