Home
ಸುದ್ದಿಜಾಲ

Nokia ದಿಂದ ಎರಡು ಕೀಪ್ಯಾಡ್‌ ಫೋನ್‌ ಲಾಂಚ್‌: ಇವುಗಳಲ್ಲೂ ಹಣ ಪಾವತಿ ಮಾಡಬಹುದು!

ಭಾರತದಲ್ಲಿ ಇತ್ತೀಚಿನ ದಿನಗಳಲ್ಲಿ ಫೀಚರ್‌ ಫೋನ್‌ಗಳಿಗೆ ಮೌಲ್ಯ ಹೆಚ್ಚಾಗುತ್ತಿದೆ. ಹಲವೆಡೆ ಸ್ಮಾರ್ಟ್‌ಫೋನ್‌ಗಳಿಂದ ಬೇಸತ್ತ ಕೆಲವರು ಸುಧಾರಿತ ಫೀಚರ್ಸ್‌ ಇರುವ ಫೀಚರ್‌ ಫೋನ್‌ಗಳನ್ನು ಖರೀದಿ ಮಾಡಲು ಮುಂದಾಗುತ್ತಿದ್ದಾರೆ. ಈ ಕಾರಣಕ್ಕೆ ಜಿಯೋ ಕೆಲವು ದಿನಗಳ ಹಿಂದೆ ಜಿಯೋ ಭಾರತ್ 4G ಫೋನ್‌ ಅನ್ನು ಅನಾವರಣ ಮಾಡಿತ್ತು. ಇದೀಗ ನೋಕಿಯಾ ಸಹ ವಿಶೇಷ ಫೀಚರ್ಸ್‌ನೊಂದಿಗೆ ಎರಡು ಫೀಚರ್‌ ಫೋನ್‌ಗಳನ್ನು ಲಾಂಚ್‌ ಮಾಡಿದೆ.

ಹೌದು, ನೋಕಿಯಾದ (Nokia) ಫೀಚರ್‌ ಫೋನ್‌ಗಳನ್ನು ಯಾರು ತಾನೆ ಇಷ್ಟ ಪಡುವುದಿಲ್ಲ ಹೇಳಿ. ಈ ಫೋನ್‌ಗಳು ಉತ್ತಮ ಕಾರ್ಯಕ್ಷಮತೆಗೆ ಹಾಗೂ ಬ್ಯಾಟರಿ ಬ್ಯಾಕಪ್‌ಗೆ ಯಾರೇ ಆದರೂ ಮಾರು ಹೋಗುತ್ತಾರೆ. ಅದರಂತೆ ಈಗ ನೋಕಿಯಾ ಕಂಪೆನಿಯು ನೋಕಿಯಾ 110 4G ಹಾಗೂ ನೋಕಿಯಾ 110 2G (Nokia 110 4G, Nokia 110 2G ) ಫೋನ್‌ಗಳನ್ನು ಲಾಂಚ್ ಮಾಡಿದೆ. ಈ ಫೋನ್‌ಗಳು ಯುಪಿಐಗೆ(UPI) ಬೆಂಬಲ ನೀಡುವುದೇ ವಿಶೇಷ. ಹಾಗಿದ್ರೆ, ತಡಯಾಕೆ ಬನ್ನಿ ಇವುಗಳ ಫೀಚರ್ಸ್‌ ಹಾಗೂ ಬೆಲೆ ವಿವರ ತಿಳಿಯೋಣ.

Nokia ದಿಂದ ಎರಡು ಕೀಪ್ಯಾಡ್‌ ಫೋನ್‌ ಲಾಂಚ್‌: ಇವುಗಳಲ್ಲೂ ಹಣ ಪಾವತಿ ಮಾಡಬಹುದು!

ನೋಕಿಯಾ ಫೋನ್‌ಗಳ ಫೀಚರ್ಸ್‌: ಈ ವಿಶೇಷವಾದ ನೋಕಿಯಾ 110 4G ಮತ್ತು ನೋಕಿಯಾ 110 2G ಫೀಚರ್ ಫೋನ್‌ಗಳು ನೋಕಿಯಾ ಫೋನ್‌ಗಳ ವಿಶ್ವಾಸಾರ್ಹ ನಿರ್ಮಾಣ ಗುಣಮಟ್ಟದೊಂದಿಗೆ ಕೂಡಿದ್ದು, ಇದರೊಂದಿಗೆ ನಯವಾದ ವಿನ್ಯಾಸವನ್ನು ಪಡೆದುಕೊಂಡಿವೆ. ಹಾಗೆಯೇ ಆಧುನಿಕ ಟಚ್‌ ಅನ್ನು ಸಹ ಪಡೆದುಕೊಂಡಿದ್ದು, ಬಳಕೆದಾರರಿಗೆ ಸಾಕಷ್ಟು ಪ್ರಯೋಜನಗಳನ್ನು ನೀಡಲಿದೆ.

ಇನ್ನು ಇನ್‌ಬಿಲ್ಟ್‌ ರಿಯರ್‌ ಕ್ಯಾಮೆರಾ ಆಯ್ಕೆ ಹೊಂದಿದ್ದು, ಎಸ್‌ಡಿ ಕಾರ್ಡ್ ಸ್ಲಾಟ್ ಮೂಲಕ 32GB ವರೆಗೆ ಸ್ಟೋರೇಜ್‌ ಸಾಮರ್ಥ್ಯ ಪಡೆಯಬಹುದು. ಉಳಿದಂತೆ ಆಟೋ -ಕಾಲ್ ರೆಕಾರ್ಡರ್‌ನಂತಹ ಆಕರ್ಷಕ ಹೊಂದಿದ್ದು, ಇದರೊಂದಿಗೆ ನಿಮಗೆ ಅಗತ್ಯ ಇರುವ ಎಲ್ಲಾ ರೀತಿಯ ಸೇವೆಗಳನ್ನು ಈ ಫೋನ್‌ಗಳು ನೀಡುತ್ತದೆ. ಅದೆಲ್ಲಕ್ಕೂ ಮಿಗಿಲಾಗಿ ನೋಕಿಯಾ 110 4G ಫೋನ್‌ ಇನ್ನೂ ಹೆಚ್ಚಿನ ಸೌಲಭ್ಯ ಹೊಂದಿದ್ದು, ನಿಮಗೆ ಹೊಸ ಅನುಭವ ನೀಡುತ್ತದೆ.

ಇನ್ನು ನೋಕಿಯಾ 110 4G ಮತ್ತು ನೋಕಿಯಾ 110 2G ಯ ಪ್ರಮುಖ ಫೀಚರ್ಸ್ ಎಂದರೆ ಹೆಚ್‌ಡಿ ಧ್ವನಿ ಆಯ್ಕೆ. ಈ ಫೀಚರ್ಸ್‌ ಇತ್ತೀಚೆಗೆ ಲಾಂಚ್‌ ಆಗಿರುವ ಜಿಯೋ ಭಾರತ್ ಫೋನ್‌ಗಳಲ್ಲಿಯೂ ಇದೆ. ಅದೆಲ್ಲಕ್ಕಿಂತ ಮಿಗಿಲಾಗಿ ಈ ಫೋನ್‌ಗಳಲ್ಲಿ ಯುಪಿಐ ಪಾವತಿ ಕಾರ್ಯವನ್ನು ಮಾಡಲು ಅನುಕೂಲ ಮಾಡಿಕೊಡಲಾಗಿದೆ. ಅಂದರೆ ಬಳಕೆದಾರರು ಸ್ಕ್ಯಾನ್ ಮತ್ತು ಪೇ ಬಳಕೆ ಮಾಡಿಕೊಂಡು ಡಿಜಿಟಲ್ ಪಾವತಿ ಮಾಡಬಹುದಾಗಿದೆ.

ಇನ್ನು ನೋಕಿಯಾ 1102G ಫೋನ್ 1000 mAh ಸಾಮರ್ಥ್ಯದ ಬ್ಯಾಟರಿ ಹೊಂದಿದ್ದು, ನೋಕಿಯಾ 110 4G ಫೋನ್ 1450 mAh ಸಾಮರ್ಥ್ಯದ ಬ್ಯಾಟರಿಯಿಂದ ಪ್ಯಾಕ್‌ ಆಗಿದೆ. ಈ ಮೂಲಕ ನಿಮಗೆ ಉತ್ತಮ ಬ್ಯಾಟರಿ ಬ್ಯಾಕಪ್‌ ಭರವಸೆಯನ್ನು ನೀಡಲಾಗಿದೆ. ಈ ಸಂಬಂಧ ಎಚ್‌ಎಂಡಿ ಗ್ಲೋಬಲ್‌ನ ಉಪಾಧ್ಯಕ್ಷ ರವಿ ಕುನ್ವರ್ ಮಾಹಿತಿ ನೀಡಿದ್ದು, ಹೊಸ ಫೀಚರ್ ಫೋನ್‌ಗಳ ಬಗ್ಗೆ ತಮ್ಮ ಉತ್ಸಾಹವನ್ನು ವ್ಯಕ್ತಪಡಿಸಿದ್ದಾರೆ.

Nokia ದಿಂದ ಎರಡು ಕೀಪ್ಯಾಡ್‌ ಫೋನ್‌ ಲಾಂಚ್‌: ಇವುಗಳಲ್ಲೂ ಹಣ ಪಾವತಿ ಮಾಡಬಹುದು!

ನಮ್ಮ ಗ್ರಾಹಕರಿಗೆ ಕ್ರಾಂತಿಕಾರಿ ಫೀಚರ್ಸ್‌ಗಳೊಂದಿಗೆ ಅತ್ಯುತ್ತಮ ಫೋನ್ ಅನುಭವವನ್ನು ನೀಡಲು ನಮ್ಮ ಪ್ರಯತ್ನವನ್ನು ಮುಂದುವರಿಸಿರುವ ಭಾಗವಾಗಿ ನೋಕಿಯಾ 110 4G ಮತ್ತು ನೋಕಿಯಾ 110 2G ಲಾಂಚ್‌ ಮಾಡಲಾಗಿದೆ ಇವು ಫೀಚರ್ಸ್‌ ಫೋನ್‌ಗಳ ನಾಯಕತ್ವವನ್ನು ಬಲಪಡಿಸುತ್ತದೆ. ಹಾಗೆಯೇ ಫೀಚರ್ ಫೋನ್ ಬಳಕೆದಾರರನ್ನು ಸಶಕ್ತಗೊಳಿಸಲು ಮತ್ತು ಬದಲಾಗುತ್ತಿರುವ ಸಮಯಕ್ಕೆ ಸುಲಭವಾಗಿ ಹೊಂದಿಕೊಳ್ಳಲು ಅನುಕೂಲ ಆಗುವ ಸೌಲಭ್ಯ ಕಲ್ಪಿಸಿಕೊಡಲಾಗಿದೆ ಎಂದು ಹೇಳಿದ್ದಾರೆ.

ಈ ನೋಕಿಯಾ ಫೋನ್‌ಗಳ ಬೆಲೆ ಹಾಗೂ ಲಭ್ಯತೆ: ನೋಕಿಯಾ 110 4G (2023) ಫೋನ್‌ಗೆ 2499 ರೂ.ಗಳ ಬೆಲೆ ನಿಗದಿ ಮಾಡಲಾಗಿದ್ದು, ನೋಕಿಯಾ 110 2G (2023) ಫೋನ್‌ಗೆ 1699 ರೂ.ಗಳನ್ನು ನಿಗದಿ ಮಾಡಲಾಗಿದೆ. ಅದರಲ್ಲಿ 110 4G ಮಿಡ್ನೈಟ್ ಬ್ಲೂ ಮತ್ತು ಆರ್ಕ್ಟಿಕ್ ಪರ್ಪಲ್ ಬಣ್ಣದಲ್ಲಿ ಕಾಣಿಸಿಕೊಂಡರೆ 110 2G ಫೋನ್‌ ಚಾರ್ಕೋಲ್ ಮತ್ತು ಕ್ಲೌಡಿ ಬ್ಲೂ ಬಣ್ಣದಲ್ಲಿ ಕಾಣಿಸಿಕೊಂಡಿದೆ. ಈ ಫೋನ್‌ಗಳನ್ನು ನೋಕಿಯಾದ ಅಧಿಕೃತ ವೆಬ್‌ಸೈಟ್‌ ಸೇರಿದಂತೆ ಎಲ್ಲಾ ಕಡೆ ಖರೀದಿ ಮಾಡಬಹುದು.

Best Mobiles in India

English summary
Nokia company has launched Nokia 110 4G and Nokia 110 2G phones. These phones will support UPI.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+