ನೋಕಿಯಾ 125 ಮತ್ತು ನೋಕಿಯಾ 150 ಫೀಚರ್ ಫೋನ್‌ ಬಿಡುಗಡೆ !

|

ಟೆಕ್‌ ವಲಯದಲ್ಲಿ ನೊಕಿಯಾ ಕಂಪೆನಿ ಎವರ್‌ಗ್ರೀನ್‌ ಮೊಬೈಲ್‌ ಬ್ರ್ಯಾಂಡ್‌ ಎನಿಸಿಕೊಂಡಿದೆ. ಅಲ್ಲದೆ ಈಗಾಗಲೇ ಹಲವು ಮಾದರಿಯ ಸ್ಮಾರ್ಟ್‌ಫೋನ್‌ಗಳನ್ನ ಪರಿಚಯಿಸಿ ಸ್ಮಾರ್ಟ್‌ಫೋನ್‌ ಪ್ರಿಯರಿಂದ ಸೈ ಎನಿಸಿಕೊಂಡಿದೆ. ಇದಲ್ಲದೆ ಕಳೆದ ತಿಂಗಳು, ಎಚ್‌ಎಂಡಿ ಗ್ಲೋಬಲ್ ನೋಕಿಯಾ 5.3, ನೋಕಿಯಾ 1.3, ಮತ್ತು ನೋಕಿಯಾ ಸಿ 2 ಆಂಡ್ರಾಯ್ಡ್ ಗೋ ಸೇರಿದಂತೆ ಮೂರು ಹೊಸ ಮಾದರಿಯ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಿತು. ಇದೀಗ, ನೋಕಿಯಾ ಕಂಪೆನಿ ಎರಡು ಹೊಸ ಫೀಚರ್‌ ಫೋನ್‌ಗಳನ್ನ ಆಯ್ದ ಮಾರುಕಟ್ಟೆಗಳಲ್ಲಿ ಮಾತ್ರ ಬಿಡುಗಡೆ ಮಾಡಿದೆ ಹಾಗೂ ಜಾಗತಿಕವಾಗಿ ಬಿಡುಗಡೆ ಮಾಡುವುದಾಗಿ ಘೋಷಣೆ ಮಾಡಿದೆ.

ಹೌದು

ಹೌದು, ಎವರ್‌ ಗ್ರೀನ್‌ ಮೊಬೈಲ್‌ ಬ್ರ್ಯಾಂಡ್‌ ಎಚ್‌ಎಂಡಿ ಗ್ಲೋಬಲ್‌ ನೋಕಿಯಾ ಕಂಪೆನಿ ತನ್ನ ಹೊಸ ಫೀಚರ್‌ ಫೋನ್‌ಗಳನ್ನ ಅಧಿಕೃತವಾಗಿ ಬಿಡುಗಡೆ ಮಾಡಿದೆ. ಇನ್ನು ಈ ಫೀಚರ್‌ ‌ಫೋನ್‌ಗಳನ್ನ ನೋಕಿಯಾ 125 ಮತ್ತು ನೋಕಿಯಾ 150 ಫೀಚರ್ ಫೋನ್‌ಗಳೆಂದು ಹೆಸರಿಸಲಾಗಿದೆ. ಇನ್ನು ಈ ಎರಡು ‌ಫೋನ್‌ಗಳು ಎಂಟ್ರಿ ಲೆವೆಲ್‌ ಫೋನ್‌ಗಳಾಗಿದ್ದು, ಹೊಸ ಮಾದರಿಯ ವಿನ್ಯಾಸವನ್ನ ಒಳಗೊಂಡಿವೆ. ಇನ್ನು ಈ ಫೀಚರ್‌ ಫೋನ್‌ಗಳ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿದುಕೊಳ್ಳೋಣ ಬನ್ನಿರಿ.

ಎಚ್‌ಎಂಡಿ

ಸದ್ಯ ಎಚ್‌ಎಂಡಿ ಗ್ಲೋಬಲ್, ನೋಕಿಯಾ 125 ಮತ್ತು ನೋಕಿಯಾ 150 (2020) ಎಂಬ ಎರಡು ಹೊಸ ನೋಕಿಯಾ ಫೀಚರ್ ಫೋನ್‌ಗಳನ್ನು ಜಾಗತಿಕವಾಗಿ ಬಿಡುಗಡೆ ಮಾಡಿದೆ. ಈ ಎರಡೂ ಫೋನ್‌ಗಳು 2.4-ಇಂಚಿನ QVGA ​​ಕಲರ್ ಡಿಸ್ಪ್ಲೇ ಹೊಂದಿದ್ದು, ನೋಕಿಯಾ 125 ಸಿಂಗಲ್-ಸಿಮ್ ಮತ್ತು ಡ್ಯುಯಲ್ ಸಿಮ್ ಆಯ್ಕೆಗಳನ್ನ ಹೊಂದಿದೆ, ಇನ್ನು ನೋಕಿಯಾ 150 (2020) ಏಕೈಕ ಡ್ಯುಯಲ್ ಸಿಮ್ ರೂಪಾಂತರವನ್ನು ಹೊಂದಿದೆ. ಹಾಗೇ ನೋಡುವುದಾದರೆ ನೋಕಿಯಾ 150 (2020) ಈ ಹಿಂದೆ 2016ರಲ್ಲಿ ಬಿಡುಗಡೆ ಆಗಿದ್ದ ನೋಕಿಯಾ 150 ಫೀಚರ್‌ ಫೋನ್‌ನ ಪರಿಷ್ಕರಿಸಿದ ಆವೃತ್ತಿಯಾಗಿ ಬಿಡುಗಡೆ ಮಾಡಲಾಗಿದೆ. ಸದ್ಯ ಈ ಎರಡು ಫೀಚರ್‌ ಫೋನ್‌ಗಳ ವಿಶೇಷತೆ ಏನು ಅನ್ನೊದರ ಮಾಹಿತಿ ಇಲ್ಲಿದೆ ಓದಿ.

ನೋಕಿಯಾ 125

ನೋಕಿಯಾ 125

ನೋಕಿಯಾ 125 ಫೋನ್‌ ಸಿಂಗಲ್-ಸಿಮ್ (ಮಿನಿ) ಮತ್ತು ಡ್ಯುಯಲ್ ಸಿಮ್ (ಮಿನಿ) ಆಯ್ಕೆಗಳಲ್ಲಿ ಲಭ್ಯವಾಗಲಿದೆ. ಇನ್ನು ಈ ಫೀಚರ್ ಫೋನ್ ಸ್ಪೋರ್ಟ್‌ನ 2.4-ಇಂಚಿನ QVGA ​​ಕಲರ್‌ ಡಿಸ್‌ಪ್ಲೇಯನ್ನ ಹೊಂದಿದೆ. ಅಲ್ಲದೆ ಇದು ಭೌತಿಕ ಕೀಪ್ಯಾಡ್‌ ವಿನ್ಯಾಶವನ್ನ ಹೊಂದಿದೆ. ಇದಲ್ಲದೆ, ಈ ಹೊಸ ನೋಕಿಯಾ 125 ಸರಣಿ 30+ ಸಾಫ್ಟ್‌ವೇರ್ ಮೂಲಕ ಕಾರ್ಯನಿರ್ವಹಿಸಲಿದೆ. ಹಾಗೇಯೇ 4MB RAM ಮತ್ತು 4MB ಆಂತರಿಕ ಸಂಗ್ರಹಣಾ ಸಾಮರ್ಥ್ಯವನ್ನು ಹೊಂದಿದೆ. ಜೊತೆಗೆ ಫ್ಲ್ಯಾಷ್ ಬೆಂಬಲವನ್ನು ಹೊಂದಿರುವ VGA ರಿಯರ್ ಕ್ಯಾಮೆರಾವನ್ನು ಸಹ ಹೊಂದಿದೆ. ಇದಲ್ಲದೆ ನೋಕಿಯಾ 125 ಫೋನ್‌ ಕ್ಲಾಸಿಕ್ ಸ್ನೇಕ್ ಕ್ಸೆನ್ಜಿಯಾ ಗೇಮ್‌ ಅನ್ನು ಸಹ ಒಳಗೊಂಡಿದೆ. ಇನ್ನು ಈ ಫೋನ್‌ 1,020mAh ಸಾಮರ್ಥ್ಯದ ಬ್ಯಾಟರಿಯನ್ನ ಹೊಂದಿದ್ದು, ಬ್ಯಾಟರಿಯು 19.4 ಗಂಟೆಗಳವರೆಗೆ ಟಾಕ್ ಟೈಮ್ ಮತ್ತು 23.4 ದಿನಗಳವರೆಗೆ ಸ್ಟ್ಯಾಂಡ್‌ಬೈ ಸಮಯವನ್ನು ನೀಡುತ್ತದೆ ಎಂದು ಎಚ್‌ಎಂಡಿ ಗ್ಲೋಬಲ್ ಹೇಳಿಕೊಂಡಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ 3.5 ಎಂಎಂ ಹೆಡ್‌ಫೋನ್ ಜ್ಯಾಕ್ ಮತ್ತು ಮೈಕ್ರೋ-ಯುಎಸ್‌ಬಿ ಪೋರ್ಟ್ ಅನ್ನು ಒಳಗೊಂಡಿದೆ. ಅಲ್ಲದೆ ಈ ಫೋನ್‌ನಲ್ಲಿ ಎಫ್‌ಎಂ ರೇಡಿಯೊ ಕೂಡ ಇದೆ.

ನೋಕಿಯಾ 150 (2020)

ನೋಕಿಯಾ 150 (2020)

ನೋಕಿಯಾ 150 (2020) ಫೀಚರ್‌ ಫೋನ್‌ ಏಕೈಕ ಡ್ಯುಯಲ್ ಸಿಮ್ (ಮಿನಿ) ಆಯ್ಕೆಯನ್ನು ಹೊಂದಿದ್ದು, ಭೌತಿಕ ಕೀಪ್ಯಾಡ್‌ನೊಂದಿಗೆ 2.4-ಇಂಚಿನ ಕ್ಯೂವಿಜಿಎ ಕಲರ್‌ ಡಿಸ್‌ಪ್ಲೇಯನ್ನ ಹೊಂದಿದೆ. ಅಲ್ಲದೆ ನೋಕಿಯಾ 125 ಫೋನ್‌ ನಂತೆ ಇದು ಸಹ 30+ ಸಾಫ್ಟ್‌ವೇರ್ ಮೂಲಕ ಕಾರ್ಯನಿರ್ವಹಿಸಲಿದೆ. ಹಾಗೇಯೇ 4MB RAM ಮತ್ತು 4MB ಯ ಆಂತರಿಕ ಸಂಗ್ರಹಣೆಯನ್ನು ಹೊಂದಿದೆ. ಜೊತೆಗೆ ಇದರಲ್ಲಿ ಮೆಮೊರಿ ಕಾರ್ಡ್ ಮೂಲಕ 32 ಜಿಬಿ ವರೆಗೆ ಸಂಗ್ರಹಣಾ ಸಾಮರ್ಥ್ಯವನ್ನ ವಿಸ್ತರಿಸಿಕೊಳ್ಳಬಹುದಾಗಿದೆ. ಅಲ್ಲದೆ ನೋಕಿಯಾ 150 (2020) ಫ್ಲ್ಯಾಷ್ ಬೆಂಬಲಿಸುವ VGA ರಿಯರ್‌ ಕ್ಯಾಮೆರಾವನ್ನು ಹೊಂದಿದೆ. ಇನ್ನು ಈ ಫೋನ್‌ 1,020mAh ಸಾಮರ್ಥ್ಯದ ಬ್ಯಾಟರಿಯನ್ನ ಹೊಂದಿದ್ದು, ಬ್ಯಾಟರಿಯು ಸಿಂಗಲ್‌ ಚಾರ್ಜ್‌ನಲ್ಲಿ 19.4 ಗಂಟೆಗಳವರೆಗೆ ಟಾಕ್ ಟೈಮ್ ನೀಡುತ್ತದೆ ಎಂದು ಕಂಪನಿ ಹೇಳಿಕೊಂಡಿದೆ.ಇದಲ್ಲದೆ ಈ ಫೋನ್‌ 3.5 ಎಂಎಂ ಹೆಡ್‌ಫೋನ್ ಜ್ಯಾಕ್ ಮತ್ತು ಮೈಕ್ರೋ-ಯುಎಸ್‌ಬಿ ಪೋರ್ಟ್‌, ಫೋನ್ ಬ್ಲೂಟೂತ್ ವಿ 3.0 ಅನ್ನು ಸಹ ಹೊಂದಿದೆ. ಅಲ್ಲದೆ ಎಂಪಿ 3 ಪ್ಲೇಯರ್ ಮತ್ತು ಸ್ನೇಕ್ ಕ್ಸೆನ್ಜಿಯಾ ಸೇರಿದಂತೆ ಕ್ಲಾಸಿಕ್ ಗೇಮ್‌ಗಳನ್ನು ಸಹ ಒಳಗೊಂಡಿದೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ಸದ್ಯ ಕಂಪನಿಯ ಪ್ರಕಾರ, ನೋಕಿಯಾ 125 ಚಿಲ್ಲರೆ $ 24 (ಸರಿಸುಮಾರು 1,800 ರೂ.). ಮತ್ತು ನೋಕಿಯಾ 150 (2020) ಬೆಲೆಯನ್ನು $ 29 (ಸರಿಸುಮಾರು 2,200 ರೂ.) ಎಂದು ನಿಗದಿಪಡಿಸಲಾಗಿದೆ. ಅಲ್ಲದೆ ನೋಕಿಯಾ 125 ಫೋನ್‌ ಚಾರ್ಕೋಲ್ ಬ್ಲ್ಯಾಕ್ ಮತ್ತು ಪೌಡರ್ ವೈಟ್ ಕಲರ್ ಆಯ್ಕೆಗಳಲ್ಲಿ ಲಭ್ಯವಾಗಲಿದೆ. ಹಾಗೇಯೇ ನೋಕಿಯಾ 150 ಬ್ಲ್ಯಾಕ್, ಸಯಾನ್ ಮತ್ತು ರೆಡ್ ಕಲರ್ ಆಯ್ಕೆಗಳಲ್ಲಿ ಲಭ್ಯವಾಗಲಿವೆ.

Best Mobiles in India

English summary
Nokia-brand licensee, HMD Global, today announced the global launch of two new Nokia feature phones namely, Nokia 125 and Nokia 150 (2020).to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X