ಅಗ್ಗದ ಬೆಲೆಯಲ್ಲಿ ಲಾಂಚ್‌ ಆಯ್ತು 'ನೋಕಿಯಾ 2.2' ಸ್ಮಾರ್ಟ್‌ಫೋನ್!

|

ಮೊಬೈಲ್ ಹಿರಿಯಣ್ಣ ಎನಿಸಿಕೊಂಡಿರುವ ನೋಕಿಯಾ ಆಂಡ್ರಾಯ್ಡ್‌ ಮಾದರಿಯಲ್ಲಿ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಿ ಗ್ರಾಹಕರಿಂದ ಸೈ ಎನಿಸಿಕೊಂಡಿದೆ. ಕಂಪನಿಯು ಇದೀಗ ತನ್ನ ಆಂಡ್ರಾಯ್ಡ್‌ ಸರಣಿಗೆ ಮತ್ತೊಂದು ಸ್ಮಾರ್ಟ್‌ಫೋನ್‌ ಅನ್ನು ಸೆರೆಸಿಕೊಂಡಿದ್ದು, ಈ ಮೂಲಕ ಬಜೆಟ್‌ ಬೆಲೆಯ ಸ್ಮಾರ್ಟ್‌ಫೋನ್‌ ನಿರೀಕ್ಷಿಸುವ ಗ್ರಾಹಕರಿಗೆ ಖುಷಿ ನೀಡಿದೆ. ಏಕೆಂದರೇ ಕಂಪನಿ ಈಗ ಬಿಡುಗಡೆ ಮಾಡಿರುವ ಸ್ಮಾರ್ಟ್‌ಫೋನ್‌ ಎಂಟ್ರಿ ಲೆವೆಲ್‌ ಮಾದರಿಯಾಗಿದೆ.

ಅಗ್ಗದ ಬೆಲೆಯಲ್ಲಿ ಲಾಂಚ್‌ ಆಯ್ತು 'ನೋಕಿಯಾ 2.2' ಸ್ಮಾರ್ಟ್‌ಫೋನ್!

ಹೌದು, ನೋಕಿಯಾ ಕಂಪನಿಯು ಭಾರತೀಯ ಮಾರುಕಟ್ಟೆಗೆ ನೋಕಿಯಾ 2.2' ಹೆಸರಿನ ಎಂಟ್ರಿ ಲೆವೆಲ್ ಸ್ಮಾರ್ಟ್‌ಫೋನ್‌ ಲಾಂಚ್‌ ಮಾಡಿದ್ದು, ಎರಡು ವೇರಿಯಂಟ್ ಮಾದರಿಗಳ ಆಯ್ಕೆಯನ್ನು ಹೊಂದಿದೆ. ಅತ್ಯುತ್ತಮ ಕ್ಯಾಮೆರಾ ಮತ್ತು ಸೆಲ್ಫಿ ಕ್ಯಾಮೆರಾ ಆಯ್ಕೆಯೊಂದಿದೆ 3000mAh ಸಾಮರ್ಥ್ಯದ ಶಕ್ತಿಯುತ ಬ್ಯಾಟರಿಯನ್ನು ಒಳಗೊಂಡಿದ್ದು, ಎಂಟ್ರಿ ಲೆವೆಲ್‌ ಸ್ಮಾರ್ಟ್‌ಫೋನ್‌ಗಳ ವಲಯದಲ್ಲಿ ಮಿಂಚುವ ಮೂನ್ಸೂಚನೆ ನೀಡಿದೆ.

ಅಗ್ಗದ ಬೆಲೆಯಲ್ಲಿ ಲಾಂಚ್‌ ಆಯ್ತು 'ನೋಕಿಯಾ 2.2' ಸ್ಮಾರ್ಟ್‌ಫೋನ್!

ಬ್ಲ್ಯಾಕ್‌ ಮತ್ತು ಸ್ಟೀಲ್‌ ಬಣ್ಣಗಳ ಆಯ್ಕೆಯನ್ನು ಹೊಂದಿರುವ ಈ ಸ್ಮಾರ್ಟ್‌ಫೋನ್‌ 'ಮೀಡಿಯಾ ಟೆಕ್‌ ಹಿಲಿಯೊ A22' ಪ್ರೊಸೆಸೆರ್‌ನಲ್ಲಿ ಕಾರ್ಯನಿರ್ವಹಿಸಲಿದೆ ಮತ್ತು ಆಂಡ್ರಾಯ್ಡ್‌ ಪೈ ಆಧಾರಿತ ಆಂಡ್ರಾಯ್ಡ್‌ ಒನ್ ಓಎಸ್‌ ಪ್ರೊಸೆಸರ್‌ಗೆ ಬೆಂಬಲ ನೀಡಲಿದೆ. ಹಾಗಾದರೇ ನೋಕಿಯಾ 2.2 ಸ್ಮಾರ್ಟ್‌ಫೋನ್‌ ಇತರೆ ಯಾವೆಲ್ಲಾ ಫೀಚರ್ಸ್‌ಗಳನ್ನು ಒಳಗೊಂಡಿದೆ ಎಂಬುದನ್ನು ತಿಳಿಯಲು ಮುಂದೆ ಓದಿರಿ.

ಓದಿರಿ : ಭಾರತಕ್ಕೆ ಲಗ್ಗೆ ಇಟ್ಟ ಅಮೆರಿಕಾದ 'ಫೊಸಿಲ್' ಸ್ಮಾರ್ಟ್‌ವಾಚ್!..ಬೆಲೆ? ಓದಿರಿ : ಭಾರತಕ್ಕೆ ಲಗ್ಗೆ ಇಟ್ಟ ಅಮೆರಿಕಾದ 'ಫೊಸಿಲ್' ಸ್ಮಾರ್ಟ್‌ವಾಚ್!..ಬೆಲೆ?

ಡಿಸ್‌ಪ್ಲೇ ಹೇಗಿದೆ

ಡಿಸ್‌ಪ್ಲೇ ಹೇಗಿದೆ

ನೋಕಿಯಾ 2.2 ಸ್ಮಾರ್ಟ್‌ಫೋನ್‌ 5.7 ಇಂಚಿನ LCD ಡಿಸ್‌ಪ್ಲೇಯನ್ನು ಹೊಂದಿದ್ದು, ಡಿಸ್‌ಪ್ಲೇಯು 720x1520 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯವನ್ನು ಹೊಂದಿದೆ. ಡಿಸ್‌ಪ್ಲೇಯ ಸುತ್ತಲೂ ಬೆಜಲ್‌ ಮತ್ತು ಡಿಸ್‌ಪ್ಲೇಯ ಮೇಲ್ಭಾಗದಲ್ಲಿ ನಾಚ್‌ ರಚನೆಯನ್ನು ನೀಡಲಾಗಿದ್ದು, ಡಿಸ್‌ಪ್ಲೇಯು ವಿಶಾಲವಾಗಿದ್ದು, ಪ್ರತಿ ಇಂಚಿನ ಪಿಕ್ಸಲ್ ಸಾಂದ್ರತೆಯ ಅನುಪಾತವು 19:9 ರಷ್ಟಾಗಿದೆ.

ಪ್ರೊಸೆಸರ್‌ ಶಕ್ತಿ ಹೇಗಿದೆ

ಪ್ರೊಸೆಸರ್‌ ಶಕ್ತಿ ಹೇಗಿದೆ

ನೋಕಿಯಾ 2.2 ಸ್ಮಾರ್ಟ್‌ಫೋನ್ 'ಮೀಡಿಯಾ ಟೆಕ್‌ ಹಿಲಿಯೊ A22' ಪ್ರೊಸೆಸರ್ ಅನ್ನು ಒಳಗೊಂಡಿದೆ. ತನ್ನ ವರ್ಗದಲ್ಲಿಯೇ ಇದು ಅತ್ಯುತ್ತಮ ಪ್ರೊಸೆಸರ್‌ ಆಗಿದ್ದು, ಇದರೊಂದಿಗೆ ಆಂಡ್ರಾಯ್ಡ್‌ ಪೈ ಆಧಾರಿತ ಲೈಟರ್‌ ವರ್ಷನ್ 'ಆಂಡ್ರಾಯ್ಡ್‌ ಒನ್' ಓಎಸ್‌' ಬೆಂಬಲ ಪಡೆದಿದೆ. ಮಲ್ಟಿಟಾಸ್ಕ್‌ ಕೆಲಸಗಳನ್ನು ನಿಭಾಯಿಸುವ ಸಾಮರ್ಥ್ಯವನ್ನು ಹೊಂದಿದೆ.

RAM ಮತ್ತು ಮೆಮೊರಿ

RAM ಮತ್ತು ಮೆಮೊರಿ

ನೋಕಿಯಾದ ಈ ಎಂಟ್ರಿ ಲೆವೆಲ್ ಸ್ಮಾರ್ಟ್‌ಫೋನ್ 2GB RAM ಮತ್ತು 3GB RAM ಸಾಮರ್ಥ್ಯದ ಎರಡು ವೇರಿಯಂಟ್‌ ಮಾದರಿಗಳ ಆಯ್ಕೆಯನ್ನು ಹೊಂದಿದ್ದು, ಅವು ಕ್ರಮವಾಗಿ 16GB ಮತ್ತು 32GB ಆಂತರಿಕ ಸ್ಟೋರೇಜ್‌ ಸ್ಥಳಾವಕಾಶವನ್ನು ಹೊಂದಿವೆ. ತನ್ನ ವರ್ಗದಲ್ಲಿಯೇ ಇದು ಉತ್ತಮ ಮೆಮೊರಿ ಆಯ್ಕೆಯನ್ನು ಒಳಗೊಂಡಿದೆ.

ಕ್ಯಾಮೆರಾ ವಿಶೇಷತೆ

ಕ್ಯಾಮೆರಾ ವಿಶೇಷತೆ

ನೋಕಿಯಾ 2.2 ಸ್ಮಾರ್ಟ್‌ಫೋನ್‌ ಹಿಂಬದಿಯಲ್ಲಿ ರೇರ್ ಪ್ರಾಥಮಿಕ ಕ್ಯಾಮೆರಾವು 13ಎಂಪಿ ಸಾಮರ್ಥ್ಯದಲ್ಲಿದ್ದು, f/2.2 ಅಪರ್ಚರ್‌ ಸಾಮರ್ಥ್ಯವನ್ನು ಪಡೆದಿದೆ. ಸಿಂಗಲ್‌ ಎಲ್‌ಇಡಿ ಫ್ಲ್ಯಾಶ್ ಲೈಟ್‌ ಸಹ ಇದೆ. ಇನ್ನು ಸೆಲ್ಫಿಗಾಗಿ 5ಎಂಪಿ ಕ್ಯಾಮೆರಾವನ್ನು ನೀಡಲಾಗಿದ್ದು, ಫ್ರಂಟ್‌ ಫೇಸಿಂಗ್ ಆಯ್ಕೆಯನ್ನು ಒಳಗೊಂಡಿದೆ.

ಬ್ಯಾಟರಿ ಶಕ್ತಿ

ಬ್ಯಾಟರಿ ಶಕ್ತಿ

ನೋಕಿಯಾ 2.2 ಎಂಟ್ರಿ ಲೆವಲ್ ಸ್ಮಾರ್ಟ್‌ಫೋನ್‌ 3,000mAh ಸಾಮರ್ಥ್ಯದ ಬ್ಯಾಟರಿ ಬಲವನ್ನು ಹೊಂದಿದ್ದು, ತನ್ನ ವರ್ಗದಲ್ಲಿಯೇ ಇದು ಅತ್ಯುತ್ತಮ ಬ್ಯಾಟರಿ ಆಗಿದೆ. ಇದರೊಂದಿಗೆ 5W ಶಕ್ತಿ ಚಾರ್ಜಿಂಗ್ ಸೌಲಭ್ಯವನ್ನು ಒಳಗೊಂಡಿದ್ದು, ಚಾರ್ಜಿಂಗ್‌ಗೆ ಉತ್ತಮ ಬೆಂಬಲ ನೀಡಲಿದೆ. ಹಾಗೆಯೇ ಮೈಕ್ರೋ USB, ವೈ ಫೈ ಸೌಲಭ್ಯಗಳನ್ನು ಪಡೆದಿದೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆ ಆಗಿರುವ ನೋಕಿಯಾ 2.2 ಸ್ಮಾರ್ಟ್‌ಫೋನ್‌ ಎರಡು ವೇರಿಯಂಟ್‌ಗಳಲ್ಲಿ ಲಭ್ಯವಿದೆ. 2GB + 16GB ಆಂತರಿತ ಸಾಮರ್ಥ್ಯದ ವೇರಿಯಂಟ್ ಬೆಲೆಯು 7,699ರೂ.ಗಳು ಆಗಿದೆ. ಮತ್ತು 3GB + 32GB ವೇರಿಯಂಟ್ ಬೆಲೆಯು 8,699ರೂ.ಆಗಿದೆ. ಗ್ರಾಹಕರು ಇ ಕಾಮರ್ಸ್‌ ತಾಣ ಫ್ಲಿಪ್‌ಕಾರ್ಟ್‌ನಲ್ಲಿ ಖರೀದಿಸಲು ದೊರೆಯಲಿದೆ.

ಓದಿರಿ : ಶಿಯೋಮಿ ಸ್ಮಾರ್ಟ್‌ಫೋನ್‌ ಬಳಕೆದಾರರಿಗೆ ಬ್ಯಾಡ್‌ ನ್ಯೂಸ್‌! ಓದಿರಿ : ಶಿಯೋಮಿ ಸ್ಮಾರ್ಟ್‌ಫೋನ್‌ ಬಳಕೆದಾರರಿಗೆ ಬ್ಯಾಡ್‌ ನ್ಯೂಸ್‌!

43 ಇಂಚಿನ ಅಗ್ಗದ 'ಮಾರ್ಕ್' ಸ್ಮಾರ್ಟ್‌ಟಿವಿ ಹೇಗಿದೆ ಗೊತ್ತಾ!..ಬೆಲೆ 21,999ರೂ!

43 ಇಂಚಿನ ಅಗ್ಗದ 'ಮಾರ್ಕ್' ಸ್ಮಾರ್ಟ್‌ಟಿವಿ ಹೇಗಿದೆ ಗೊತ್ತಾ!..ಬೆಲೆ 21,999ರೂ!

ಟಿವಿ ತಂತ್ರಜ್ಞಾನ ವಯಲದಲ್ಲಿ ಸಾಕಷ್ಟು ಹೊಸತನದ ಬದಲಾವಣೆಗಳು ಆಗಿತ್ತಿದ್ದು, ಬ್ಲ್ಯಾಕ್‌ ಆಂಡ್‌ ವೈಟ್‌ಗಳಿಂದ ಪ್ರಸ್ತುತ ಸ್ಮಾರ್ಟ್‌ಟಿವಿ 8K ರೆಸಲ್ಯೂಶನ್‌ ವರೆಗೂ ಮಹತ್ತರ ಬದಲಾವಣೆಯನ್ನು ಕಾಣಬಹುದು. ಭಾರತೀಯ ಮಾರುಕಟ್ಟೆಯಲ್ಲಿ ಸ್ಮಾರ್ಟ್‌ಟಿವಿಗಳಿಗೆ ಭಾರಿ ಬೇಡಿಕೆ ಇದ್ದು, ಆನ್‌ಲೈನ್‌ ಮೂಲಕ ಸ್ಮಾರ್ಟ್‌ಟಿವಿ ಖರೀದಿಸುವ ಗ್ರಾಹಕರ ಸಂಖ್ಯೆಗೆನು ಕಡಿಮೆ ಇಲ್ಲ. ಆನ್‌ಲೈನ್‌ ಮಾರುಕಟ್ಟೆಗೆ ಹೊಸದೊಂದು ಕಂಪನಿಯ ಸ್ಮಾರ್ಟ್‌ಟಿವಿ ಎಂಟ್ರಿ ಆಗಿದೆ.

ಹೌದು, ಸ್ಮಾರ್ಟ್‌ಟಿವಿಗಳಿಗೆ ಭಾರತೀಯ ಆನ್‌ಲೈನ್‌ ಮಾರುಕಟ್ಟೆಯಲ್ಲಿ ಸಖತ್ ಡಿಮ್ಯಾಂಡ್‌ ಇದ್ದು, ಹೀಗಾಗಿ ಆನ್‌ಲೈನ್‌ನಲ್ಲಿ ಸ್ಮಾರ್ಟ್‌ಟಿವಿ ಮಾರಾಟ ಮಾಡುವ ಕಂಪನಿಗಳ ಸಂಖ್ಯೆಯು ಹೆಚ್ಚಾಗಿದೆ. ಅವುಗಳ ಸಾಲಿಗಿಗ ಮಾರ್ಕ್‌(MarQ) ಕಂಪನಿಯ ಸೇರಿದ್ದು, ಈ ಕಂಪನಿಯು ಇತ್ತೀಚಿಗೆ 43 ಇಂಚಿನ ಹೆಚ್‌ಡಿ ಸಾಮರ್ಥ್ಯದಲ್ಲಿ ಅಲ್ಟ್ರಾ ಥೀನ್ ಬೆಜಲ್ (Ultra Thin Bezel) ಆಂಡ್ರಾಯ್ಡ್ ಸ್ಮಾರ್ಟ್‌ಟಿವಿಯನ್ನು ಬಿಡುಗಡೆ ಮಾಡಿದೆ.

ಫ್ಲಿಪ್‌ಕಾರ್ಟ್‌ ಮಾಲೀಕತ್ವದ ಮಾರ್ಕ್(MarQ) ಸ್ಮಾರ್ಟ್‌ಟಿವಿಯು ಗೂಗಲ್ ಅಸಿಸ್ಟಂಟ್ ವಾಯಿಸ್‌ ಕಮಾಂಡ್‌ ಅನ್ನು ಒಳಗೊಂಡಿದೆ. ಹಾಗೆಯೇ ಈ ಸ್ಮಾರ್ಟ್‌ಟಿವಿಯು ಆಂಡ್ರಾಯ್ಡ್‌ ಆಪ್ಸ್‌ಗಳನ್ನು ಮತ್ತು ಯೂಟ್ಯೂಬ್‌ ಅನ್ನು ಸಹ ಹೊಂದಿದೆ. ಈ ಟಿವಿಯ ಪ್ರೈಸ್‌ಟ್ಯಾಗ್ ಗ್ರಾಹಕರ ಸ್ನೇಹಿಯಾಗಿದೆ. ಹಾಗಾದರೇ ಮಾರ್ಕ್‌(MarQ) ಸ್ಮಾರ್ಟ್‌ಟಿವಿಯು ಇತರೆ ಯಾವೆಲ್ಲಾ ವಿಶೇಷ ಫೀಚರ್ಸ್‌ಗಳನ್ನು ಹೊಂದಿದೆ ಮತ್ತು ಬೆಲೆ ಎಷ್ಟು ಎಂಬುದನ್ನು ತಿಳಿಯಲು ಮುಂದೆ ಓದಿರಿ.

ಆಕರ್ಷಕ ಡಿಸೈನ್‌

ಆಕರ್ಷಕ ಡಿಸೈನ್‌

ಮಾರ್ಕ್ ಸ್ಮಾರ್ಟ್‌ಟಿವಿಯ ಹೊರ ನೋಟವು ಗ್ರಾಹಕ ಕಣ್ಣಸೆಳೆಯುವ ರಚನೆಯನ್ನು ಪಡೆದಿದ್ದು, ಅಲ್ಟ್ರಾ ಥೀನ್‌ ಬೆಜಲ್ ವಿನ್ಯಾಸ್‌ವು ಈ ಸ್ಮಾರ್ಟ್‌ಟಿವಿಯ ಅಂದವನ್ನು ಮತ್ತಷ್ಟು ಹೆಚ್ಚಿಸಿದೆ. ಟಿವಿಯ ಅಂಚುಗಳು ಫಿನಿಶಿಂಗ್ ಸುಂದರವಾಗಿದ್ದು, ತೆಳುವಾದ ರಚನೆಯನ್ನು ಹೊಂದಿದೆ. 178 ಡಿಗ್ರಿ ಸಾಮರ್ಐದಲ್ಲಿ ವಿವ್ಯೂ ಆಂಗಲ್ ವಿನ್ಯಾಸವನ್ನು ಡಿಸ್‌ಪ್ಲೇ ಹೊಂದಿದ್ದು, ADS ಪ್ಯಾನೆಲ್‌ನ ಲುಕ್‌ ಪಡೆದುಕೊಂಡಿದೆ.

ಸೌಂಡ್‌ ಗುಣಮಟ್ಟ

ಸೌಂಡ್‌ ಗುಣಮಟ್ಟ

ಈ ಸ್ಮಾರ್ಟ್‌ಟಿವಿಯಲ್ಲಿ ಎರಡು ಡೌನ್‌ ಫೈರಿಂಗ್‌ ಸ್ಪೀಕರ್ಸ್‌ಗಳನ್ನು ನೀಡಲಾಗಿದ್ದು, ಇದರೊಂದಿಗೆ DTS ಸೌಂಡ್‌ ತಂತ್ರಜ್ಞಾನ ಒದಗಿಸಲಾಗಿದೆ ಹಾಗೆಯೇ 20W ಸಾಮರ್ಥ್ಯತ ಸ್ಪೀಕರ್ಸ್‌ಗಳನ್ನು ಇದು ಒಳಗೊಂಡಿದೆ. ಇದರ ನೆರವಿನಿಂದ ಆಡಿಯೊ ಕ್ವಾಲಿಟಿಯು ಹೆಚ್ಚು ಗುಣಮಟ್ಟದಲ್ಲಿ ಕೇಳಿಸಲಿದೆ. ಸೌಂಡ್‌ ಸೆಟ್ಟಿಂಗ್‌ ಆಯ್ಕೆಗಳನ್ನು ನೀಡಲಾಗಿದ್ದು, ಗ್ರಾಹಕರು ಅನುಕೂಲಕ್ಕೆ ತಕ್ಕಂತೆ ಸೌಂಡ್‌ ಅನ್ನು ನಿಯಂತ್ರಿಸಬಹುದಾಗಿದೆ.

ಆಂಡ್ರಾಯ್ಡ್ ಆಪ್ಸ್‌ ಲಭ್ಯ

ಆಂಡ್ರಾಯ್ಡ್ ಆಪ್ಸ್‌ ಲಭ್ಯ

ಮಾರ್ಕ್ ಕಂಪನಿಯ ಈ ಸ್ಮಾರ್ಟ್‌ಟಿವಿಯು ಸಂಪೂರ್ಣ ಆಂಡ್ರಾಯ್ಡ್ 8.0 ಓರಿಯೊ‌ ಬೆಂಬಲಿತವಿದ್ದು, 8GB ಇನ್‌ಬಿಲ್ಟ್‌ ಮೆಮೊರಿ ನೀಡಲಾಗಿದೆ. ಆಂಡ್ರಾಯ್ಡ್‌ ಆಧಾರಿತ ಆಪ್ಸ್‌ಗಳು ಗ್ರಾಹಕರಿಗೆ ದೊರೆಯಲಿದ್ದು, ಆದರೆ ನೆಕ್‌ಫ್ಲೆಕ್ಸ್ ಮತ್ತು ಅಮೆಜಾನ್ ಪ್ರೇಮ್ ವಿಡಿಯೊ ಸೇವೆಗಳು ಈ ಸ್ಮಾರ್ಟ್‌ಟಿವಿಯಲ್ಲಿ ಲಭ್ಯವಾಗುವುದಿಲ್ಲ. ಹಾಟ್‌ಸ್ಟಾರ್‌, ಜೀ5, ಸೋನಿLIV, ಜಿಯೋ ಸಿನಿಮಾ ಮತ್ತು ವೂಟ್‌ ಆಪ್‌ಗಳಿಗೆ ಬೆಂಬಲ ವಿದೆ.

ಓದಿರಿ : ಶಿಯೋಮಿಯ ಹೊಸ ಸೇವೆ!..ಮರು ದಿನವೇ ನಿಮ್ಮ ಕೈ ಸೇರಲಿವೆ ಉತ್ಪನ್ನಗಳು! ಓದಿರಿ : ಶಿಯೋಮಿಯ ಹೊಸ ಸೇವೆ!..ಮರು ದಿನವೇ ನಿಮ್ಮ ಕೈ ಸೇರಲಿವೆ ಉತ್ಪನ್ನಗಳು!

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ಮಾರ್ಕ್ ಕಂಪನಿಯ ಹೊಸ 43 ಇಂಚಿನ ಸ್ಮಾರ್ಟ್‌ಟಿವಿಯು ಭಾರತೀಯ ಆನ್‌ಲೈನ್‌ ಮಾರುಕಟ್ಟೆಯಲ್ಲಿ ಲಭ್ಯವಿದ್ದು, ಜನಪ್ರಿಯ ಇ ಕಾಮರ್ಸ್‌ ಜಾಲತಾಣ ಫ್ಲಿಪ್‌ಕಾರ್ಟ್‌ನಲ್ಲಿ ಗ್ರಾಹಕರಿಗೆ ಖರೀದಿಗೆ ದೊರೆಯಲಿದೆ. ಇದರ ಬೆಲೆಯು 21,999ರೂ.ಗಳು ಆಗಿದೆ. ಸದ್ಯ ಆನ್‌ಲೈನ್‌ ಮಾರುಕಟ್ಟೆಗೆ ಹೋಲಿಸಿದರೇ ಇದು ದುಬಾರಿ ಎನಿಸುವುದಿಲ್ಲ ಬದಲಾಗಿ ಸ್ಪರ್ಧಾತ್ಮಕ ಬೆಲೆಯಲ್ಲಿ ಬೆಲೆಯಲ್ಲಿ ಇದೆ.

ಓದಿರಿ : ಭಾರಿ ಬೆಲೆ ಇಳಿಕೆ!..'ಪೊಕೊ ಎಫ್ 1' ಖರೀದಿಗೆ ಇದುವೇ ಬೆಸ್ಟ್ ಟೈಮ್‌! ಓದಿರಿ : ಭಾರಿ ಬೆಲೆ ಇಳಿಕೆ!..'ಪೊಕೊ ಎಫ್ 1' ಖರೀದಿಗೆ ಇದುವೇ ಬೆಸ್ಟ್ ಟೈಮ್‌!

Best Mobiles in India

English summary
Nokia has launched an introductory level smartphone, the Nokia 2.2 with some decent specifications and an attractive price. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X