Home
ಸುದ್ದಿಜಾಲ

'ನೋಕಿಯಾ 2.2' ಮತ್ತು 'ನೋಕಿಯಾ 3.2' ಫೋನ್‌ಗಳ ಬೆಲೆ ಇಳಿಕೆ!

ನೋಕಿಯಾ ಕಂಪನಿಯ ಜನಪ್ರಿಯ 'ನೋಕಿಯಾ 2.2' ಮತ್ತು 'ನೋಕಿಯಾ 3.2' ಸ್ಮಾರ್ಟ್‌ಫೋನ್‌ಗಳು ಇದೀಗ ಭರ್ಜರಿ ಬೆಲೆ ಇಳಿಕೆ ಕಂಡಿವೆ. ಬ್ಲ್ಯಾಕ್‌ ಮತ್ತು ಸ್ಟೀಲ್ ಬಣ್ಣಗಳ ಆಯ್ಕೆಗಳನ್ನು ಹೊಂದಿರುವ ಈ ಸ್ಮಾರ್ಟ್‌ಫೋನ್‌ಗಳು 2GB RAM + 16GB ಮತ್ತು 3GB RAM + 32GB ಸ್ಟೋರೇಜ್‌ ವೇರಿಯಂಟ್‌ ಮಾದರಿಗಳನ್ನು ಪಡೆದಿವೆ. ಹಾಗೆಯೇ ಆಂಡ್ರಾಯ್ಡ್‌ 9 ಪೈ ಆಪರೇಟಿಂಗ್ ಸಿಸ್ಟಮ್ ಬೆಂಬಲ ಒಳಗೊಂಡಿವೆ.

ನೋಕಿಯಾ 2.2

ಹೌದು, ಇದೇ ಜೂನ್‌ನಲ್ಲಿ ಬಿಡುಗಡೆ ಆಗಿದ್ದ, 'ನೋಕಿಯಾ 2.2' ಸ್ಮಾರ್ಟ್‌ಫೋನ್ ಆರಂಭಿಕ ಬೆಲೆಯು 7,699ರೂ.ಗಳು ಆಗಿದೆ. ಆದ್ರೆ ಇದೀಗ 1,100ರೂ. ಇಳಿಕೆ ಕಂಡಿದ್ದು, 6,599ರೂ.ಗಳಿಗೆ ಲಭ್ಯವಾಗಲಿದೆ. ಹಾಗೆಯೇ 7,999ರೂ.ಗಳ ಬೆಲೆಯನ್ನು ಹೊಂದಿದ್ದ, 'ನೋಕಿಯಾ 3.2' ಸ್ಮಾರ್ಟ್‌ಫೋನ್‌ ಇದೀಗ 500ರೂ. ಇಳಿಕೆ ಕಂಡಿದೆ. ಹೀಗಾಗಿ 7,499ರೂ.ಗಳಿಗೆ ಸಿಗಲಿದೆ. ನೋಕಿಯಾ 3.2 ಇದೇ ಮೇ ತಿಂಗಳಿನಲ್ಲಿ ಲಾಂಚ್ ಆಗಿತ್ತು.

ನೋಕಿಯಾ 3.2

ಗ್ರಾಹಕರು 'ನೋಕಿಯಾ 2.2' ಮತ್ತು 'ನೋಕಿಯಾ 3.2' ಸ್ಮಾರ್ಟ್‌ಫೋನ್‌ಗಳನ್ನು ಇ-ಕಾಮರ್ಸ್ ದೈತ್ಯ ಫ್ಲಿಪ್‌ಕಾರ್ಟ್‌ ಮತ್ತು ನೋಕಿಯಾ ಅಧಿಕೃತ ವೆಬ್‌ತಾಣದಲ್ಲಿ ಖರೀದಿಸಬಹುದಾಗಿದೆ. ಫ್ಲಿಪ್‌ಕಾರ್ಟ್‌ನಲ್ಲಿ ನೋ ಕಾಸ್ಟ್‌ ಇಎಮ್‌ಐ ಸೌಲಭ್ಯ ದೊರೆತರೆ, ಇನ್ನು ನೋಕಿಯಾ ವೆಬ್‌ತಾಣದಲ್ಲಿ ಜಿಯೋ ಸಬ್‌ಸ್ಕ್ರೈಬರ್ಸ್‌ಗೆ ಸುಮಾರು 2,200ರೂ ವರೆಗೂ ಕ್ಯಾಶ್‌ಬ್ಯಾಕ್‌ ಮತ್ತು 100GB ಡೇಟಾದ ಪ್ರಯೋಜನ ಸಿಗುವ ಸಾಧ್ಯತೆಗಳಿವೆ. ಹಾಗಾದರೇ 'ನೋಕಿಯಾ 2.2' ಮತ್ತು 'ನೋಕಿಯಾ 3.2' ಸ್ಮಾರ್ಟ್‌ಫೋನ್‌ಗಳ ಫೀಚರ್ಸ್‌ಗಳೆನು ಎಂಬುದನ್ನು ಮುಂದೆ ನೋಡೋಣ ಬನ್ನಿರಿ.

ನೋಕಿಯಾ 2.2 ಡಿಸ್‌ಪ್ಲೇ

ನೋಕಿಯಾ 2.2 ಡಿಸ್‌ಪ್ಲೇ

ನೋಕಿಯಾ 2.2 ಸ್ಮಾರ್ಟ್‌ಫೋನ್‌ 5.7 ಇಂಚಿನ LCD ಡಿಸ್‌ಪ್ಲೇಯನ್ನು ಹೊಂದಿದ್ದು, ಡಿಸ್‌ಪ್ಲೇಯು 720x1520 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯವನ್ನು ಹೊಂದಿದೆ. ಡಿಸ್‌ಪ್ಲೇಯ ಸುತ್ತಲೂ ಬೆಜಲ್‌ ಮತ್ತು ಡಿಸ್‌ಪ್ಲೇಯ ಮೇಲ್ಭಾಗದಲ್ಲಿ ನಾಚ್‌ ರಚನೆಯನ್ನು ನೀಡಲಾಗಿದ್ದು, ಡಿಸ್‌ಪ್ಲೇಯು ವಿಶಾಲವಾಗಿದ್ದು, ಪ್ರತಿ ಇಂಚಿನ ಪಿಕ್ಸಲ್ ಸಾಂದ್ರತೆಯ ಅನುಪಾತವು 19:9 ರಷ್ಟಾಗಿದೆ.

ನೋಕಿಯಾ 2.2  ಪ್ರೊಸೆಸರ್‌

ನೋಕಿಯಾ 2.2 ಪ್ರೊಸೆಸರ್‌

ನೋಕಿಯಾ 2.2 ಸ್ಮಾರ್ಟ್‌ಫೋನ್ 'ಮೀಡಿಯಾ ಟೆಕ್‌ ಹಿಲಿಯೊ A22' ಪ್ರೊಸೆಸರ್ ಅನ್ನು ಒಳಗೊಂಡಿದೆ. ತನ್ನ ವರ್ಗದಲ್ಲಿಯೇ ಇದು ಅತ್ಯುತ್ತಮ ಪ್ರೊಸೆಸರ್‌ ಆಗಿದ್ದು, ಇದರೊಂದಿಗೆ ಆಂಡ್ರಾಯ್ಡ್‌ ಪೈ ಆಧಾರಿತ ಲೈಟರ್‌ ವರ್ಷನ್ 'ಆಂಡ್ರಾಯ್ಡ್‌ ಒನ್' ಓಎಸ್‌' ಬೆಂಬಲ ಪಡೆದಿದೆ. 2GB RAM ಮತ್ತು 3GB RAM ಸಾಮರ್ಥ್ಯದ ಎರಡು ವೇರಿಯಂಟ್‌ ಮಾದರಿಗಳ ಆಯ್ಕೆಯನ್ನು ಹೊಂದಿದೆ.

ನೋಕಿಯಾ 2.2  ಕ್ಯಾಮೆರಾ

ನೋಕಿಯಾ 2.2 ಕ್ಯಾಮೆರಾ

ನೋಕಿಯಾ 2.2 ಸ್ಮಾರ್ಟ್‌ಫೋನ್‌ ಹಿಂಬದಿಯಲ್ಲಿ ರೇರ್ ಪ್ರಾಥಮಿಕ ಕ್ಯಾಮೆರಾವು 13ಎಂಪಿ ಸಾಮರ್ಥ್ಯದಲ್ಲಿದ್ದು, f/2.2 ಅಪರ್ಚರ್‌ ಸಾಮರ್ಥ್ಯವನ್ನು ಪಡೆದಿದೆ. ಸಿಂಗಲ್‌ ಎಲ್‌ಇಡಿ ಫ್ಲ್ಯಾಶ್ ಲೈಟ್‌ ಸಹ ಇದೆ. ಇನ್ನು ಸೆಲ್ಫಿಗಾಗಿ 5ಎಂಪಿ ಕ್ಯಾಮೆರಾವನ್ನು ನೀಡಲಾಗಿದ್ದು, ಫ್ರಂಟ್‌ ಫೇಸಿಂಗ್ ಆಯ್ಕೆಯನ್ನು ಒಳಗೊಂಡಿದೆ.

ನೋಕಿಯಾ 2.2  ಬ್ಯಾಟರಿ

ನೋಕಿಯಾ 2.2 ಬ್ಯಾಟರಿ

ನೋಕಿಯಾ 2.2 ಎಂಟ್ರಿ ಲೆವಲ್ ಸ್ಮಾರ್ಟ್‌ಫೋನ್‌ 3,000mAh ಸಾಮರ್ಥ್ಯದ ಬ್ಯಾಟರಿ ಬಲವನ್ನು ಹೊಂದಿದ್ದು, ತನ್ನ ವರ್ಗದಲ್ಲಿಯೇ ಇದು ಅತ್ಯುತ್ತಮ ಬ್ಯಾಟರಿ ಆಗಿದೆ. ಇದರೊಂದಿಗೆ 5W ಶಕ್ತಿ ಚಾರ್ಜಿಂಗ್ ಸೌಲಭ್ಯವನ್ನು ಒಳಗೊಂಡಿದ್ದು, ಚಾರ್ಜಿಂಗ್‌ಗೆ ಉತ್ತಮ ಬೆಂಬಲ ನೀಡಲಿದೆ. ಹಾಗೆಯೇ ಮೈಕ್ರೋ USB, ವೈ ಫೈ, ಬ್ಲೂಟೂತ್ ಸೌಲಭ್ಯಗಳನ್ನು ಪಡೆದಿದೆ.

ನೋಕಿಯಾ 3.2 ಡಿಸ್‌ಪ್ಲೇ

ನೋಕಿಯಾ 3.2 ಡಿಸ್‌ಪ್ಲೇ

ನೋಕಿಯಾ 3.2 ಸ್ಮಾರ್ಟ್‌ಫೋನ್ 720x1520 ಪಿಕ್ಸೆಲ್ ರೆಸಲ್ಯೂಶನ್ ಸಾಮರ್ಥ್ಯದೊಂದಿಗೆ 6.26 ಇಂಚುಗಳ HD ಪ್ಲಸ್‌ ಡಿಸ್‌ಪ್ಲೇಯನ್ನು ಹೊಂದಿದ್ದು, ಡಿಸ್‌ಪ್ಲೇಯ ಅನುಪಾತವು 19:9 ಆಗಿದೆ. ಸುತ್ತಲೂ ಕರ್ವ್ ರಚನೆಯನ್ನು ಪಡೆದಿದ್ದು, ನೋಡಲು ಆಕರ್ಷಕವಾಗಿ ಕಾಣುತ್ತದೆ. ವಿಡಿಯೊ ವೀಕ್ಷಣೆಗೆ ಮತ್ತು ಗೇಮಿಂಗ್‌ಗೆ ಅತ್ಯುತ್ತಮ ಸಪೋರ್ಟ್‌ ಎನಿಸಲಿದೆ.

ನೋಕಿಯಾ 3.2 ಪ್ರೊಸೆಸರ್

ನೋಕಿಯಾ 3.2 ಪ್ರೊಸೆಸರ್

ನೋಕಿಯಾ 3.2 ಸ್ಮಾರ್ಟ್‌ಫೋನ್ 'ಕ್ವಾಲ್ಕಂ ಸ್ನ್ಯಾಪ್‌ಡ್ರಾಗನ್ 429 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸುತ್ತದೆ. ಅದಕ್ಕೆ ಪೂರಕವಾಗಿ ಆಂಡ್ರಾಯ್ಡ್‌ 9 ಪೈ ಆಪರೇಟಿಂಗ್ ಸಿಸ್ಟಮ್ ಬೆಂಬಲ ಸಹ ಪಡೆದಿದೆ. ಈ ಫೋನ್ 2GB RAM + 16GB ಸ್ಟೋರೇಜ್ ಮತ್ತು 3GB RAM + 32GB ಆಂತರಿಕ ಸ್ಟೋರೇಜ್‌ನ ಎರಡು ವೇರಿಯಂಟ್‌ ಮಾದರಿಗಳಿಲ್ಲಿ ದೊರೆಯಲಿದೆ.

ನೋಕಿಯಾ 3.2 ಕ್ಯಾಮೆರಾ

ನೋಕಿಯಾ 3.2 ಕ್ಯಾಮೆರಾ

ನೋಕಿಯಾ 3.2 ಸ್ಮಾರ್ಟ್‌ಫೋನ್ ಹಿಂಬದಿಯಲ್ಲಿ ಸಿಂಗಲ್ ರಿಯರ್ ಕ್ಯಾಮೆರಾ ಸೆಟ್‌ಅಪ್ ಪಡೆದುಕೊಂಡಿದ್ದು, ಅದು f/2.2 ಅಪರ್ಚರ್ನೊಂದಿಗೆ 13ಎಂಪಿ ಸೆನ್ಸಾರ್‌ ಸಾಮರ್ಥ್ಯದಲ್ಲಿದೆ. ಹಾಗೂ ಸೆಲ್ಫಿಗಾಗಿ 5ಎಂಪಿ ಕ್ಯಾಮೆರಾ ನೀಡಲಾಗಿದ್ದು, ಅದು ಸಹ f/2.2 ಅಪರ್ಚರ್ ಸಾಮರ್ಥ್ಯದಲ್ಲಿದೆ.

ನೋಕಿಯಾ 3.2 ಬ್ಯಾಟರಿ

ನೋಕಿಯಾ 3.2 ಬ್ಯಾಟರಿ

ನೋಕಿಯಾ 3.2 ಸ್ಮಾರ್ಟ್‌ಫೋನ್ 4,000mAh ಸಾಮರ್ಥ್ಯದ ಬ್ಯಾಟರಿ ಬಾಳಿಕೆಯ ಶಕ್ತಿಯನ್ನು ಒಳಗೊಂಡಿದ್ದು, ತನ್ನ ವರ್ಗದಲ್ಲಿಯೇ ಇದು ಅತ್ಯುತ್ತಮ ಬ್ಯಾಟರಿ ಲೈಫ್‌ ಆಗಿದೆ. ಇದರೊಂದಿಗೆ 5W ಶಕ್ತಿ ಚಾರ್ಜಿಂಗ್ ಸೌಲಭ್ಯವನ್ನು ಒಳಗೊಂಡಿದ್ದು, ಚಾರ್ಜಿಂಗ್‌ಗೆ ಅತ್ಯುತ್ತಮ ಬೆಂಬಲ ಒದಗಿಸಲಿದೆ. ಹಾಗೆಯೇ ಮೈಕ್ರೋ USB, ವೈ ಫೈ, ಬ್ಲೂಟೂತ್ ಸೌಲಭ್ಯಗಳನ್ನು ಪಡೆದಿದೆ.

Best Mobiles in India

English summary
Nokia 2.2 and Nokia 3.2 phones have received a price cut in India. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+