ನೋಕಿಯಾದ ಈ ಮೂರು ಹೊಸ ಫೋನ್‌ಗಳಿಗೆ ಗ್ರಾಹಕರು ಮುಗಿಬೀಳುವುದು ಪಕ್ಕಾ!

|

ಮೊಬೈಲ್ ಮಾರುಕಟ್ಟೆಯಲ್ಲಿ ದಿಗ್ಗಜ ಎಂದೆನಿಸಿಕೊಂಡಿರುವ 'ನೋಕಿಯಾ' ಕಂಪನಿಯು ಮೈಕ್ರೋಸಾಫ್ಟ್‌ ಮಾದರಿಯ ಸ್ಮಾರ್ಟ್‌ಫೋನ್‌ಗಳಿಂದ ಆಂಡ್ರಾಯ್ಡ್ ಮಾದರಿಯ ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡಿ ಸೈ ಎನಿಸಿಕೊಂಡಿದೆ. ಇತ್ತೀಚಿಗಿನ ಕೆಲವು ಸ್ಮಾರ್ಟ್‌ಫೋನ್‌ಗಳು ಗ್ರಾಹಕರ ಮೆಚ್ಚುಗೆಗೂ ಪಾತ್ರವಾಗಿವೆ. ಆದ್ರೆ ಇದೀಗ ಸಂಸ್ಥೆಯು ಮತ್ತಷ್ಟು ಹೊಸ ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸಲು ತಯಾರಾಗಿದೆ.

ನೋಕಿಯಾ

ಹೌದು, ಜನಪ್ರಿಯ ನೋಕಿಯಾ ಸಂಸ್ಥೆಯು ಹೊಸದಾಗಿ 'ನೋಕಿಯಾ 2.3', 'ನೋಕಿಯಾ 8.2' ಮತ್ತು 'ನೋಕಿಯಾ 5.2' ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಲು ಸಕಲ ತಯಾರಿ ಮಾಡಿಕೊಂಡಿದೆ. ಈ ಮೂರು ಸ್ಮಾರ್ಟ್‌ಫೋನ್‌ಗಳನ್ನು ಇದೇ ಡಿಸೆಂಬರ್ 5 ರಂದು ಏಕಕಾಲಕ್ಕೆ ಲಾಂಚ್ ಮಾಡುವುದು ಬಹುತೇಕ ಖಚಿತವಾಗಿದ್ದು, ಬಜೆಟ್‌ ಮತ್ತು ಮೀಡ್‌ರೇಂಜ್‌ ಪ್ರೈಸ್‌ಟ್ಯಾಗ್‌ ಹೊಂದಿರುವ ನಿರೀಕ್ಷೆಗಳಿವೆ. ಹಾಗಾದರೇ ಈ ಸ್ಮಾರ್ಟ್‌ಫೋನ್‌ಗಳ ಯಾವೆಲ್ಲಾ ಫೀಚರ್ಸ್‌ಗಳೆನು ಎಂಬುದನ್ನು ಮುಂದೆ ನೋಡೋಣ ಬನ್ನಿರಿ.

ನೋಕಿಯಾ 2.3

ನೋಕಿಯಾ 2.3

ನೋಕಿಯಾ 2.3 ಸ್ಮಾರ್ಟ್‌ಫೋನ್ ಎಂಟ್ರಿ ಲೆವೆಲ್ ಮಾದರಿಯ ಸ್ಮಾರ್ಟ್‌ಫೋನ್‌ ಆಗಿರಲಿದ್ದು, 2GB RAM ಮತ್ತು 32GB ಆಂತರಿಕ ಸ್ಟೋರೇಜ್ ಸೌಲಭ್ಯವನ್ನು ಒಳಗೊಂಡಿರಲಿದೆ. ಡ್ಯುಯಲ್ ಸಿಮ್ ಸೌಲಭ್ಯವನ್ನು ಹೊಂದಿರಲಿದ್ದು, ಮೀಡಿಯಾ ಟೆಕ್ ಚಿಪ್‌ ಸೆಟ್‌ ಪ್ರೊಸೆಸರ್ ಒಳಗೊಂಡಿರಲಿದೆ. ಪ್ರೊಸೆಸರ್‌ಗೆ ಪೂರಕ ಆಂಡ್ರಾಯ್ಡ್ ಓಎಸ್‌ ಪಡೆದಿರಲಿದೆ. ಬೆಲೆ ಸುಮಾರು 7000ರೂ. ಒಳಗೆ ಇರಲಿದೆ ಎಂದು ನಿರೀಕ್ಷಿಸಲಾಗುತ್ತಿದೆ.

ನೋಕಿಯಾ 5.2

ನೋಕಿಯಾ 5.2

ನೋಕಿಯಾ 5.2 ಸ್ಮಾರ್ಟ್‌ಫೋನ್ ಮೀಡ್‌ರೇಂಜ್ ಮಾದರಿಯಲ್ಲಿ ಗುರುತಿಸಿಕೊಳ್ಳಲಿದ್ದು, 6.1 ಇಂಚಿನ ಪೂರ್ಣ ಹೆಚ್‌ಡಿ ಡಿಸ್‌ಪ್ಲೇ ಪಡೆದಿರಲಿದೆ. ಈ ಫೋನ್ 6GB RAM ಸಾಮರ್ಥ್ಯವನ್ನು ಹೊಂದಿರಲಿದ್ದು, 3,920mAh ಸಾಮರ್ಥ್ಯದ ಬ್ಯಾಟರಿ ಬಾಳಿಕೆಯನ್ನು ಪಡೆದಿರಲಿದೆ. ವೃತ್ತಾಕಾರ ಮಾದರಿಯ ಹಿಂಬದಿ ಕ್ಯಾಮೆರಾ ಇರಲಿದ್ದು, 16ಎಂಪಿ ಸೆನ್ಸಾರ್ ಇರಲಿದೆ ಎಂದು ನಿರೀಕ್ಷಿಸಲಾಗಿದೆ. ಬ್ಲೂಟೂತ್ 5.0 ಆಯ್ಕೆ ಸಹ ಇರಲಿದೆ.

ನೋಕಿಯಾ 8.2

ನೋಕಿಯಾ 8.2

ನೋಕಿಯಾ 8.2 ಪ್ರಿಮಿಯಂ ಮಾದರಿಯ ಸ್ಮಾರ್ಟ್‌ಫೋನ್ ಆಗಿ ಕಾಣಿಸಿಕೊಳ್ಳಲಿದೆ. ಈ ಫೋನ್ 8GB RAM ಸಾಮರ್ಥ್ಯವನ್ನು ಹೊಮದಿದ್ದು, 256GB ಸ್ಟೋರೇಜ್ ಹೊಂದಿದೆ. ಕ್ವಾಡ್‌ ಕ್ಯಾಮೆರಾ ಹೊಂದಿರಲಿದ್ದು, 64ಎಂಪಿ ಸೆನ್ಸಾರ್‌ ಸಾಮರ್ಥ್ಯ ಪಡೆದಿರಲಿದೆ ಜೊತೆಗೆ ಪಾಪ್‌ಅಪ್‌ ಸೆಲ್ಫಿ ಕ್ಯಾಮೆರಾ ಇರಲಿದೆ. ಸ್ನ್ಯಾಪಡ್ರಾಗನ್ 730 ಪ್ರೊಸೆಸರ್ ಜತೆಗೆ ಅತ್ಯುತ್ತಮ ಆಂಡ್ರಾಯ್ಡ್ ಓಎಸ್‌ ಸಪೋರ್ಟ್ ಇರಲಿದೆ.

ಲಾಂಚ್ ಡೇಟ್

ಲಾಂಚ್ ಡೇಟ್

ನೋಕಿಯಾ ಸಂಸ್ಥೆಯು ಹೊಸದಾಗಿ 'ನೋಕಿಯಾ 2.3', 'ನೋಕಿಯಾ 8.2' ಮತ್ತು 'ನೋಕಿಯಾ 5.2' ಸ್ಮಾರ್ಟ್‌ಫೋನ್‌ಗಳನ್ನು ಇದೇ ಡಿಸೆಂಬರ್ 5 ರಂದು ಬಿಡುಗಡೆ ಮಾಡುವುದು ಗ್ಯಾರೆಂಟಿ ಎನ್ನಲಾಗುತ್ತಿದೆ. 'ನೋಕಿಯಾ 2.3' ಮತ್ತು 'ನೋಕಿಯಾ 5.2' ಬಜೆಟ್‌ ಬೆಲೆಯಲ್ಲಿ ಕಾಣಿಸಿಕೊಳ್ಳಲಿವೆ ಎಂದು ಊಹಿಸಲಾಗಿದೆ.

Best Mobiles in India

English summary
HMD Global last week confirmed it will introduce new Nokia phones on December 5. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X