Just In
Don't Miss
- Movies
ದಾಂಪತ್ಯ ಜೀವನಕ್ಕೆ ಕಾಲಿಟ್ಟ 'ಮಗಳು ಜಾನಕಿ' ಧಾರಾವಾಹಿಯ ಖ್ಯಾತ ನಟಿ ಪೂಜಾ
- News
ಲೋಳೆಸರಕ್ಕೆ 50 ಕೆ.ಜಿ ಕಲ್ಲು ನೇತು ಹಾಕಿದರೂ ಬೀಳಲ್ಲ, ಇದು ಬೀರಲಿಂಗೇಶ್ವರ ಪವಾಡ
- Lifestyle
ಸೋಮವಾರದ ದಿನ ಭವಿಷ್ಯ 9-12-2019
- Sports
ಭಾರತ vs ವಿಂಡಿಸ್ ಟಿ20; ಚಾಂಪಿಯನ್ನರಿಗೆ ತಲೆಬಾಗಿದ ಟೀಮ್ ಇಂಡಿಯಾ
- Finance
ಮಾರುತಿ ಸುಜುಕಿ ಉತ್ಪಾದನೆ ಒಂಬತ್ತು ತಿಂಗಳ ನಂತರ ಹೆಚ್ಚಳ
- Automobiles
ಟಾಟಾ ಕಾರುಗಳ ಮೇಲೆ ಭರ್ಜರಿ ರಿಯಾಯಿತಿ
- Education
ರೆಪ್ಕೊ ಬ್ಯಾಂಕ್ ನಲ್ಲಿ 15 ಹುದ್ದೆಗಳ ನೇಮಕಾತಿ
- Travel
ಹಿಮಾಚಲ ಪ್ರದೇಶದ ಈ ಜಲಪಾತಗಳು ನಿಮ್ಮನ್ನು ಬೇರೊಂದು ರಮ್ಯಲೋಕಕ್ಕೆ ಕೊಂಡೊಯ್ಯುವುದು ಖಂಡಿತ
ಬರಲಿದೆ ಅಗ್ಗದ 'ನೋಕಿಯಾ 2.3' ಸ್ಮಾರ್ಟ್‌ಫೋನ್!
ಮೊಬೈಲ್ ವಲಯದಲ್ಲಿ ಎವರ್‌ಗ್ರೀನ್ ಸ್ಥಾನ ಪಡೆದ ನೋಕಿಯಾ ಕಂಪನಿಯು ಈಗಾಗಲೇ ಹಲವು ಆಂಡ್ರಾಯ್ಡ್ ಮಾದರಿಯ ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸಿ ಸೈ ಅನಿಸಿಕೊಂಡಿದೆ. ಕೇಲವು ಬಜೆಟ್ ಬೆಲೆಯಲ್ಲಿ ಇದ್ದರೇ ಇನ್ನು ಕೇಲವು ಮೀಡ್‌ರೇಂಜ್ ಮಾದರಿಯಲ್ಲಿ ಗುರುತಿಸಿಕೊಂಡಿವೆ. ಇದೀಗ ಕಂಪನಿಯು ಮತ್ತೆ ಮೂರು ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಲು ತಯಾರಾಗಿ ನಿಂತಿದ್ದು, ಅವುಗಳಲ್ಲಿ ಅಗ್ಗದ ಫೋನ್ ಸಹ ಇರಲಿದೆ.

ಹೌದು, ನೋಕಿಯಾ ಸಂಸ್ಥೆಯು ಇದೇ ಡಿಸಂಬರ್ 5ಕ್ಕೆ ಹೊಸದಾಗಿ 'ನೋಕಿಯಾ 2.3', 'ನೋಕಿಯಾ 8.2' ಮತ್ತು 'ನೋಕಿಯಾ 5.2' ಸ್ಮಾರ್ಟ್‌ಫೋನ್‌ಗಳನ್ನು ಲಾಂಚ್ ಮಾಡಲಿದೆ. ಈ ಮೂರರಲ್ಲಿ ನೋಕಿಯಾ 2.3 ಅಗ್ಗದ ಬೆಲೆಯ ಪ್ರೈಸ್‌ಟ್ಯಾಗ್ ಹೊಂದಿರಲಿದ್ದು, ತನ್ನ ವರ್ಗಕ್ಕೆ ಹೊಂದಿಕೆಯಾಗುವ ಫೀಚರ್ಸ್‌ಗಳನ್ನು ಒಳಗೊಂಡಿರಲಿವೆ ಎಂಬ ಲೀಕ್ ಮಾಹಿತಿಗಳು ಸೂಚನೆ ನೀಡಿವೆ. ಹಾಗಾದರೇ ನೋಕಿಯಾ 2.3 ಸ್ಮಾರ್ಟ್‌ಫೋನ್ ಯಾವೆಲ್ಲಾ ಫೀಚರ್ಸ್‌ಗಳನ್ನು ಹೊಂದಿರಲಿದೆ ಎನ್ನುವುದನ್ನು ಮುಂದೆ ತಿಳಿಯೋಣ ಬನ್ನಿರಿ.

ಡಿಸ್‌ಪ್ಲೇ ಹೇಗಿರಲಿದೆ
ನೋಕಿಯಾ 2.3 ಸ್ಮಾರ್ಟ್‌ಫೋನ್ 720*1520 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯವನ್ನು ಹೊಂದಿರಲಿದ್ದು, 6.1 ಇಂಚಿನ ಹೆಚ್‌ಡಿ ಡಿಸ್‌ಪ್ಲೇ ಮಾದರಿಯನ್ನು ಹೊಂದಿರಲಿದೆ. ಹಾಗೆಯೇ ಡಿಸ್‌ಪ್ಲೇಯ ಅನುಪಾತವು 19:9 ರಷ್ಟು ಆಗಿರಲಿದ್ದು, ವಿಡಿಯೊ ವೀಕ್ಷಣೆಗೆ ಪೂರಕವಾಗಿರಲಿದೆ. ಪ್ರಸ್ತುತ ಈ ವರ್ಗದ ಸ್ಮಾರ್ಟ್‌ಫೋನ್‌ಗಳಲ್ಲಿ ಸಾಮಾನ್ಯವಾಗಿ ಇಷ್ಟೇ ಡಿಸ್‌ಪ್ಲೇ ಗಾತ್ರ ಕಾಣಬಹುದು.

ಪ್ರೊಸೆಸರ್ ಯಾವುದು
ನೋಕಿಯಾ 2.3 ಸ್ಮಾರ್ಟ್‌ಫೋನ್ ಮೀಡಿಯಾ ಟೆಕ್ ಹಿಲಿಯೊ A22 ಕ್ವಾಡ್ ಕೋರ್ ಪ್ರೊಸೆಸರ್ ಸಾಮರ್ಥ್ಯವನ್ನು ಹೊಂದಿರಲಿದ್ದು, ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್ 9 ಪೈ ಓಎಸ್ ಬೆಂಬಲ ಇರಲಿದೆ. ಇದರೊಂದಿಗೆ 2GB/3GB RAM ಸಾಮರ್ಥ್ಯ ಹಾಗೂ 16GB/32GB ಸ್ಟೋರೇಜ್ ಆಯ್ಕೆ ಇರಲಿವೆ. ಎಸ್‌ಡಿ ಕಾರ್ಡ್ ಮೂಲಕ 400GB ಮೆಮೊರಿ ವಿಸ್ತರಿಸುವ ಅವಕಾಶ ಸಹ ಇರಲಿದೆ.

ಕ್ಯಾಮೆರಾ ಹೇಗಿರಲಿದೆ
ನೋಕಿಯಾ 2.3 ಸ್ಮಾರ್ಟ್‌ಫೋನ್ ಅಗ್ಗದ ಫೋನ ಆಗಿರುವುದರಿಂದ ಸಿಂಗಲ್ ರಿಯರ್ ಕ್ಯಾಮೆರಾ ಇರಲಿದೆ. ಆ ಕ್ಯಾಮೆರಾವು f/2.2 ಅಪರ್ಚರ್ ನೊಂದಿಗೆ 13ಎಂಪಿ ಸೆನ್ಸಾರ್ ಹೊಂದಿರಲಿದೆ. ಹಾಗೂ ಸೆಲ್ಫಿಗಾಗಿ ಮುಂಭಾಗದಲ್ಲಿ 5ಎಂಪಿ ಸೆನ್ಸಾರ್ ಸಾಮರ್ಥ್ಯದ ಕ್ಯಾಮೆರಾ ನೀಡಲಾಗುವ ಸಾಧ್ಯತೆಗಳು ಇವೆ. ಇತರೆ ಫೋಟೊ ಆಯ್ಕೆಗಳು ಸಹ ಇರಲಿವೆ.

ಬ್ಯಾಟರಿ ಮತ್ತು ಇತರೆ
ನೋಕಿಯಾ 2.3 ಫೋನ್ 3,920 mAh ಸಾಮರ್ಥ್ಯ ಬ್ಯಾಟರಿ ಸಾಮರ್ಥ್ಯವನ್ನು ಹೊಂದಿರಲಿದ್ದು, ಉತ್ತಮ ಬ್ಯಾಕ್‌ಅಪ್ ಒದಗಿಸಲಿದೆ. ಇದರೊಂದಿಗೆ ಬ್ಲೂಟೂತ್, ವೈಫೈ, ಜಿಪಿಎಸ್, ಹೆಡ್‌ಫೋನ್ ಜಾಕ್, ಆಯ್ಕೆಗಳು ಲಭ್ಯ ಇರಲಿವೆ. ಇನ್ನು ಈ ಫೋನ್ ಚಾರ್ಕೋಲ್, ಗ್ರೀನ್, ಸ್ಯಾಂಡ್ ಬಣ್ಣಗಳ ಆಯ್ಕೆ ಹೊಂದಿರಲಿದೆ. ಬೆಲೆಯು ಸುಮಾರು 8,000ರೂ.ಒಳಗೆ ಇರಲಿದೆ ಎಂದು ಊಹಿಸಲಾಗಿದೆ.
-
29,999
-
14,999
-
28,999
-
34,999
-
1,09,894
-
15,999
-
36,990
-
79,999
-
71,990
-
49,999
-
14,999
-
9,999
-
64,900
-
34,999
-
15,999
-
25,999
-
46,354
-
19,999
-
17,999
-
9,999
-
18,200
-
18,270
-
22,300
-
33,530
-
14,030
-
6,990
-
20,340
-
12,790
-
7,090
-
17,090