ಕಡಿಮೆ ಬೆಲೆಗೆ 'ನೋಕಿಯಾ 2.3' ಫೋನ್ ಬಿಡುಗಡೆ!..ಬಿಗ್ ಬ್ಯಾಟರಿ ಹೈಲೈಟ್!

|

ಜನಪ್ರಿಯ ಮೊಬೈಲ್‌ ಸಂಸ್ಥೆ ನೋಕಿಯಾದ ಬಹುನಿರೀಕ್ಷಿತ ನೋಕಿಯಾ 2.3 ಸ್ಮಾರ್ಟ್‌ಫೋನ್ ಇದೀಗ ಬಿಡುಗಡೆ ಆಗಿದ್ದು, ಎಂಟ್ರಿ ಲೆವಲ್ ಸ್ಮಾರ್ಟ್‌ಫೋನ್ ವಲಯಕ್ಕೆ ಹೊಸ ಸೇರ್ಪಡೆ ಆಗಿದೆ. ನೋಡಲು ನೋಕಿಯಾ 7.2 ನಂತಹ ಡಿಸೈನ್‌ ಅನ್ನು ಹೊಂದಿರುವ ಈ ಸ್ಮಾರ್ಟ್‌ಫೋನ್ ಡ್ಯುಯಲ್‌ ಕ್ಯಾಮೆರಾ, ಅತ್ಯುತ್ತಮ ಪ್ರೊಸೆಸರ್ ಮತ್ತು ಅಧಿಕ ಬ್ಯಾಟರಿ ಫೀಚರ್ಸ್‌ಗಳನ್ನು ಹೊಂದಿದ್ದು, ಅಗ್ಗದ ಕೇಟಗರಿಯಲ್ಲಿ ಮುಂಚೂಣಿಯಲ್ಲಿ ಗುರುತಿಸಿಕೊಳ್ಳುವ ಲಕ್ಷಣಗಳನ್ನು ಹೊರಹಾಕಿದೆ.

ನೋಕಿಯಾ ಸಂಸ್ಥೆ

ಹೌದು, ನೋಕಿಯಾ ಸಂಸ್ಥೆಯು ಇದೇ ಡಿ.5ರಂದು ಕೈರೊದಲ್ಲಿ ಹೊಸದಾಗಿ ನೋಕಿಯಾ 2.3 ಸ್ಮಾರ್ಟ್‌ಫೋನ್‌ ಅನ್ನು ರಿಲೀಸ್ ಮಾಡಿದೆ.ಈ ಸ್ಮಾರ್ಟ್‌ಫೋನ್ ಮೀಡಿಯಾ ಟೆಕ್ ಹಿಲಿಯೊ A22 ಪ್ರೊಸೆಸರ್‌ ಹೊಂದಿದ್ದು, ಜೊತೆಗೆ 4,000mAh ಬ್ಯಾಟರಿ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಗೂಗಲ್ ಅಸಿಸ್ಟಂಟ್ ಬಟನ್ ಸೌಲಭ್ಯವನ್ನು ಸಹ ಒಳಗೊಂಡಿದ್ದು, ಗ್ರೀನ್ ಮತ್ತು ಚಾರ್ಕೋಲ್ ಬಣ್ಣಗಳ ಆಯ್ಕೆಯಲ್ಲಿ ಲಭ್ಯವಾಗಲಿದೆ. ಹಾಗಾದರೇ ನೋಕಿಯಾ 2.3 ಸ್ಮಾರ್ಟ್‌ಫೋನ್ ಇತರೆ ಫೀಚರ್ಸ್‌ಗಳೆನು ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.

ಡಿಸ್‌ಪ್ಲೇ ಹೇಗಿದೆ

ಡಿಸ್‌ಪ್ಲೇ ಹೇಗಿದೆ

ನೋಕಿಯಾ 2.3 ಸ್ಮಾರ್ಟ್‌ಫೋನ್ 720x1520 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯವನ್ನು ಹೊಂದಿದ್ದು, 6.2 ಇಂಚಿನ ಹೆಚ್‌ಡಿ ಪ್ಲಸ್ ಡಿಸ್‌ಪ್ಲೇ ಮಾದರಿಯನ್ನು ಹೊಂದಿದೆ. ಹಾಗೆಯೇ ಡಿಸ್‌ಪ್ಲೇಯ ಅನುಪಾತವು 19:9 ರಷ್ಟು ಆಗಿದ್ದು, ವಾಟರ್‌ಡ್ರಾಪ್‌ ಶೇಪ್ ಡಿಸ್‌ಪ್ಲೇ ಮಾದರಿಯನ್ನು ಪಡೆದಿದೆ. ವಿಡಿಯೊ ವೀಕ್ಷಣೆಗೆ ಪೂರಕವಾಗಿದೆ. ಪ್ರಸ್ತುತ ಈ ವರ್ಗದ ಸ್ಮಾರ್ಟ್‌ಫೋನ್‌ಗಳಲ್ಲಿ ಸಾಮಾನ್ಯವಾಗಿ ಇಷ್ಟೇ ಡಿಸ್‌ಪ್ಲೇ ಗಾತ್ರ ಕಾಣಬಹುದು.

ಪ್ರೊಸೆಸರ್ ಯಾವುದು

ಪ್ರೊಸೆಸರ್ ಯಾವುದು

ನೋಕಿಯಾ 2.3 ಸ್ಮಾರ್ಟ್‌ಫೋನ್ ಮೀಡಿಯಾ ಟೆಕ್ ಹಿಲಿಯೊ A22 ಕ್ವಾಡ್‌ ಕೋರ್ ಪ್ರೊಸೆಸರ್ ಸಾಮರ್ಥ್ಯವನ್ನು ಹೊಂದಿದ್ದು, ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್ 9 ಪೈ ಓಎಸ್‌ ಬೆಂಬಲ ಪಡೆದಿದೆ. ಇದರೊಂದಿಗೆ 2GB RAM ಸಾಮರ್ಥ್ಯ ಹಾಗೂ 32GB ಸ್ಟೋರೇಜ್ ವೇರಿಯಂಟ್‌ ಆಯ್ಕೆ ಹೊಂದಿದೆ. ಇನ್ನು ಎಸ್‌ಡಿ ಕಾರ್ಡ್‌ ಮೂಲಕ ಮೆಮೊರಿ ವಿಸ್ತರಿಸುವ ಅವಕಾಶ ಸಹ ಇದೆ.

ಡ್ಯುಯಲ್ ಕ್ಯಾಮೆರಾ

ಡ್ಯುಯಲ್ ಕ್ಯಾಮೆರಾ

ನೋಕಿಯಾ 2.3 ಸ್ಮಾರ್ಟ್‌ಫೋನ್ ಅಗ್ಗದ ಫೋನ ಆಗಿದ್ದು, ಹಿಂಬದಿಯಲ್ಲಿ ಡ್ಯುಯಲ್ ಕ್ಯಾಮೆರಾ ಸೆಟ್‌ಅಪ್‌ ಪಡೆದಿದೆ. ಮುಖ್ಯ ರಿಯರ್ ಕ್ಯಾಮೆರಾ f/2.2 ಅಪರ್ಚರ್ ನೊಂದಿಗೆ 13ಎಂಪಿ ಸೆನ್ಸಾರ್ ಹೊಂದಿದ್ದು, ಸೆಕಂಡರಿ ಕ್ಯಾಮೆರಾವು 2ಎಂಪಿ ಸೆನ್ಸಾರ್‌ ಒಳಗೊಂಡಿದೆ. ಇರಲಿದೆ. ಸೆಲ್ಫಿಗಾಗಿ ಮುಂಭಾಗದಲ್ಲಿ 5ಎಂಪಿ ಸೆನ್ಸಾರ್ ಸಾಮರ್ಥ್ಯದ ಕ್ಯಾಮೆರಾ ನೀಡಲಾಗಿದೆ. ಇತರೆ ಫೋಟೊ ಆಯ್ಕೆಗಳು ಸಹ ಇವೆ.

ಬ್ಯಾಟರಿ ಮತ್ತು ಇತರೆ

ಬ್ಯಾಟರಿ ಮತ್ತು ಇತರೆ

ನೋಕಿಯಾ 2.3 ಸ್ಮಾರ್ಟ್‌ಫೋನ್ 4,000mAhಸಾಮರ್ಥ್ಯ ಬ್ಯಾಟರಿ ಸಾಮರ್ಥ್ಯವನ್ನು ಹೊಂದಿದ್ದು, ಸುಮಾರು ಎರಡು ದಿನ ಬ್ಯಾಟರಿ ಬಾಳಿಕೆ ಬರಲಿದೆ ಎಂದು ಕಂಪನಿ ಹೇಳಿಕೊಂಡಿದೆ. ಇದರೊಂದಿಗೆ ಬ್ಲೂಟೂತ್, ವೈಫೈ, ಜಿಪಿಎಸ್, ಹೆಡ್‌ಫೋನ್ ಜಾಕ್, ಆಯ್ಕೆಗಳು ಲಭ್ಯವಿದ್ದು, ಇನ್ನು ಈ ಫೋನ್ ಚಾರ್ಕೋಲ್, ಗ್ರೀನ್, ಸ್ಯಾಂಡ್‌ ಬಣ್ಣಗಳ ಆಯ್ಕೆ ಹೊಂದಿದೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ನೋಕಿಯಾ 2.3 ಸ್ಮಾರ್ಟ್‌ಫೋನ್ ಸದ್ಯ ಕೈರೋದಲ್ಲಿ ಬಿಡುಗಡೆ ಆಗಿದ್ದು, ಇದೇ ಡಿಸೆಂಬರ್‌ ಅಂತ್ಯದೊಳಗೆ ಭಾರತದಲ್ಲಿಯೂ ಲಭ್ಯವಾಗುವ ಸಾಧ್ಯತೆಗಳಿವೆ. ಈ ಸ್ಮಾರ್ಟ್‌ಫೋನ್ ಬೆಲೆಯುEUR 109 ಆಗಿದ್ದು, ಭಾರತದಲ್ಲಿ ಅಂದಾಜು 8,600ರೂ. ಒಳಗೆ ಇರಲಿದೆ ಎಂದು ಊಹಿಸಲಾಗಿದೆ.

Best Mobiles in India

English summary
Nokia 2.3 is an entry-level Android One smartphone promising two years of software updates and three years of security updates. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X