ನೋಕಿಯಾ 220 4G ಹ್ಯಾಂಡ್‌ಸೆಟ್ ಬಿಡುಗಡೆ!
ಜನಪ್ರಿಯ ನೋಕಿಯಾ ಆಂಡ್ರಾಯ್ಡ್ ಆವೃತ್ತಿಯಲ್ಲಿ ಹಲವು ಆಕರ್ಷಕ ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸಿ ಸೈ ಎನಿಸಿಕೊಂಡಿದೆ. ಹಾಗೆಯೇ ಸಂಸ್ಥೆಯು ಹಲವು ಫೀಚರ್ ಫೋನ್‌ಗಳನ್ನು ಬಿಡುಗಡೆ ಮಾಡಿದ್ದು, ಮಾರುಕಟ್ಟೆಯಲ್ಲಿ ನೋಕಿಯಾದ ಫೀಚರ್ ಫೋನ್‌ಗಳಿಗೆ ಇವತ್ತಿಗೂ ಬೇಡಿಕೆ ಇದೆ. ಈ ನಿಟ್ಟಿನಲ್ಲಿ HMD ಗ್ಲೋಬಲ್ ಇದೀಗ ನೋಕಿಯಾ 220 4G ಫೀಚರ್ ಫೋನ್ ಅನ್ನು ಅನಾವರಣ ಮಾಡಿದ್ದು, ಫೀಚರ್ ಫೋನ್ ಪ್ರಿಯ ಗ್ರಾಹಕರ ಗಮನ ಸೆಳೆದಿದೆ.

ಹೌದು, ನೋಕಿಯಾ ಸಂಸ್ಥೆಯು ಚೀನಾದಲ್ಲಿ ನೋಕಿಯಾ 220 4G ಫೋನ್ ಲಾಂಚ್ ಮಾಡಿದ್ದು, ಈ ಬೇಸಿಕ ಫೋನ್ 4G ಬೆಂಬಲ ಪಡೆದುಕೊಂಡಿದೆ. ಈ ಫೋನ್ 16MB RAM ಮತ್ತು 24MB ಆಂತರಿಕ ಸ್ಟೋರೇಜ್ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಹಾಗೆಯೇ ಫೀಚರ್ ಓಎಸ್ ಜೊತೆಗೆ 1,200mAh ಬ್ಯಾಟರಿ ಬಾಳಿಕೆಯನ್ನು ಒಳಗೊಂಡಿದೆ. ಇನ್ನು ಈ ಫೋನ್ ಕಪ್ಪು ಮತ್ತು ನೀಲಿ ಬಣ್ಣದಲ್ಲಿ ಖರೀದಿಸಲು ಲಭ್ಯವಿದೆ.

ಈ ಫೋನ್ ಕ್ಲಾಸಿಕ್ ಪಾಲಿಕಾರ್ಬೊನೇಟ್ ದೇಹವನ್ನು ಹೊಂದಿದೆ ಮತ್ತು ಇದು ಇದು 2.4-ಇಂಚಿನ ಡಿಸ್‌ಪ್ಲೇ ಹೊಂದಿದೆ. ಹಿಂಬದಿಯಲ್ಲಿ 0.3 ಮೆಗಾಪಿಕ್ಸೆಲ್ VGA ಕ್ಯಾಮೆರಾವನ್ನು ಹೊಂದಿದ್ದು ಜೊತೆಗೆ ಇದು LED ಫ್ಲ್ಯಾಶ್ ಲೈಟ್ ಸೌಲಭ್ಯವನ್ನು ಪಡೆದಿದೆ. ಹಾಗೆಯೇ ಈ ಪೋನ್ 16MB RAM ಮತ್ತು 24MB ಆಂತರಿಕ ಸಂಗ್ರಹಣೆ ಪಡೆದಿದ್ದು, VoLTE ಹೈ-ಡೆಫಿನಿಷನ್ ಕರೆಗಳಿಗೆ ಬೆಂಬಲವನ್ನು ನೀಡುತ್ತದೆ.

ನೋಕಿಯಾದ ಈ ಫೀಚರ್ ಫೋನ್ ಆಂಡ್ರಾಯ್ಡ್ 10 ಗೋ ಓಎಸ್ ಹೊಂದಿದ್ದು, ಬ್ಲೂಟೂತ್ 4.2 ಸಂಪರ್ಕ ಪಡೆದಿದೆ. ಅಂದಹಾಗೆ ಈ ಹ್ಯಾಂಡ್‌ಸೆಟ್ 3G ನೆಟ್‌ವರ್ಕ್‌ಗೆ ಬೆಂಬಲವನ್ನು ನೀಡುವುದಿಲ್ಲ. ಈ ಫೋನ್ 1,200mAh ಬ್ಯಾಟರಿ ಲೈಫ್ ಅನ್ನು ಒಳಗೊಂಡಿದ್ದು, 6 ಗಂಟೆಗಳಿಗಿಂತ ಹೆಚ್ಚಿನ ಟಾಕ್ ಟೈಮ್ ಒದಗಿಸಲಿದೆ ಮತ್ತು 27 ದಿನಗಳ ಸ್ಟ್ಯಾಂಡ್ಬೈ ಸಮಯವನ್ನು ನೀಡುತ್ತದೆ ಎಂದು ಕಂಪನಿ ಹೇಳಿಕೊಂಡಿದೆ.

HMD ಗ್ಲೋಬಲ್ ಚೀನಾದಲ್ಲಿ ಬಿಡುಗಡೆ ಆಗಿರುವ ನೋಕಿಯಾ 220 4G ಫೀಚರ್ ಫೋನ್ ಚೀನಾದಲ್ಲಿ ಬೆಲೆಯು RMB 299 ಆಗಿದೆ. (ಭಾರತದಲ್ಲಿ ಅಂದಾಜು 3,201ರೂ. ಆಗಿದೆ). ಹಾಗೆಯೇ ಸಂಸ್ಥೆಯು ಕಳೆದ ತಿಂಗಳು ನೋಕಿಯಾ 1.3 ಫೋನ್ ಅನ್ನು ಬಿಡುಗಡೆ ಮಾಡಿತ್ತು. ಈ ಫೋನ್ ಆಂಡ್ರಾಯ್ಡ್ 10 ಗೋ ಓಎಸ್ ಎಡಿಷನ್ ಪಡೆದಿದ್ದು, ಗೂಗಲ್ ಅಸಿಸ್ಟಂಟ್ ಸೌಲಭ್ಯವನ್ನು ಪಡೆದುಕೊಂಡಿದೆ.


Click it and Unblock the Notifications




