ನೋಕಿಯಾದ ಈ ಫ್ಲಿಪ್ ಮೊಬೈಲ್‌ಗೆ ಧಮಾಕಾ ಆಫರ್!..ತುಂಬಾ ಅಗ್ಗದ ಬೆಲೆಗೆ ಲಭ್ಯ!
ಈಗಂತೂ ಹೊಸ ಮೊಬೈಲ್ ಖರೀದಿಸುವಾಗ ಗ್ರಾಹಕರು ಮೊದಲು ಇ ಕಾಮರ್ಸ್ ತಾಣಗಳಲ್ಲಿ ಇರುವ ಆಫರ್‌ಗಳ ಬಗ್ಗೆ ತಿಳಿಯುತ್ತಾರೆ. ಏಕೆಂದರೆ ಪ್ರಸ್ತುತ ಇ ಕಾಮರ್ಸ್ ಪ್ಲಾಟ್‌ಫಾರ್ಮ್ ಗಳು ಸ್ಮಾರ್ಟ್‌ಫೋನ್‌ಗಳಿಗೆ ಒಂದಿಲ್ಲೊಂದು ಕೊಡುಗೆ ಲಭ್ಯ ಮಾಡಿರುತ್ತವೆ. ಹೀಗೆ ಸದ್ಯ ಅಮೆಜಾನ್ ಪ್ಲಾಟ್‌ಫಾರ್ಮ್ ನೋಕಿಯಾ ಸಂಸ್ಥೆಯ ನೋಕಿಯಾ 2660 ಫ್ಲಿಪ್ ಫೀಚರ್ ಮೊಬೈಲ್‌ಗೆ ಜಬರ್ದಸ್ತ್ ರಿಯಾಯಿತಿ ತಿಳಿಸಿದೆ.
ಹೌದು, ಜನಪ್ರಿಯ ಅಮೆಜಾನ್ ತಾಣದಲ್ಲಿ ನೋಕಿಯಾ 2660 ಫ್ಲಿಪ್ ಮೊಬೈಲ್ 5,899ರೂ. ಬೆಲೆಯನ್ನು ಹೊಂದಿದ್ದು, ಸದ್ಯ ಹಬ್ಬದ ಕೊಡುಗೆಯಲ್ಲಿ ಶೇ. 25% ರಷ್ಟು ಡಿಸ್ಕೌಂಟ್ ಪಡೆದುಕೊಂಡಿದೆ. ಹೀಗಾಗಿ ನೋಕಿಯಾ 2660 ಫ್ಲಿಪ್ ಫೋನ್ ಅನ್ನು ಗ್ರಾಹಕರು 4,449ರೂ. ಗಳ ಬೆಲೆಯಲ್ಲಿ ಖರೀದಿ ಮಾಡಬಹುದಾಗಿದೆ.

ಅಂದಹಾಗೆ ಈ ಮೊಬೈಲ್ ದೀರ್ಘ ಬಾಳಿಕೆಯ ಬ್ಯಾಟರಿ ಬ್ಯಾಕ್‌ಅಪ್ ಸಾಮರ್ಥ್ಯವನ್ನು ಪಡೆದುಕೊಂಡಿದ್ದು, Unisoc T107 ಪ್ರೊಸೆಸರ್ ಪವರ್ ಅನ್ನು ಒಳಗೊಂಡಿದೆ. ಇದರ ಜೊತೆಗೆ ಸಿಂಗಲ್ ರಿಯರ್ ಕ್ಯಾಮೆರಾ ರಚನೆಯನ್ನು ಹೊಂದಿದೆ. ಹಾಗಾದರೆ ಇನ್ನುಳಿದಂತೆ ನೋಕಿಯಾ 2660 ಫ್ಲಿಪ್ ಫೋನಿನ ಇತರೆ ಫೀಚರ್ಸ್ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.
ವಿನ್ಯಾಸ ಹಾಗೂ ರಚನೆ ಮಾಹಿತಿ ಇಲ್ಲಿದೆ
ನೋಕಿಯಾ 2660 ಫ್ಲಿಪ್ ಮೊಬೈಲ್ ಪಾಪ್ ಪಿಂಕ್ ಮತ್ತು ಲಷ್ ಗ್ರೀನ್ ಬಣ್ಣಗಳಲ್ಲಿ ಸುಂದರವಾದ ಮತ್ತು ದೀರ್ಘ ಬಾಳಿಕೆ ಬರುವ ಕ್ಲಾಮ್ಷೆಲ್ ವಿನ್ಯಾಸ ಪಡೆದಿದೆ. ಈ ಫೋನ್ ಲೋ-ಫೈ ವೈ2ಕೆ ಶೈಲಿಯ ಫೋಟೋಗಾಗಿ ಹಿಂಬದಿಯ ಕ್ಯಾಮರಾ ಒಳಗೊಂಡಿದೆ. ಇದರ ಜೊತೆಗೆ ಅಧಿಕ ಬಾಳಿಕೆಯ ಬ್ಯಾಟರಿ ಬ್ಯಾಕ್‌ಅಪ್, ಎಸ್ಎಂಎಸ್ ಮತ್ತು ಮೊಬೈಲ್ ಕರೆಗಳನ್ನು ಮಾಡಬಹುದಾದ ಈ ಫೀಚರ್ ಫೋನ್ ಜನಪ್ರಿಯ ಕ್ಲಾಸಿಕ್ ಸ್ನೇಕ್ ಗೇಮ್ ಸೌಲಭ್ಯ ಕೂಡಾ ಹೊಂದಿದೆ.

ಡಿಸ್‌ಪ್ಲೇ ರಚನೆ ಮಾಹಿತಿ ಇಲ್ಲಿದೆ
ನೋಕಿಯಾ 2660 ಫ್ಲಿಪ್ ಮೊಬೈಲ್ 2.8 ಇಂಚಿನ ಡಿಸ್‌ಪ್ಲೇ ವ್ಯವಸ್ಥೆ ಅನ್ನು ಪಡೆದಿದೆ. ಅಲ್ಲದೇ ಇದು ಝೂಮ್-ಇನ್ ಯೂಸರ್ ಇಂಟರ್ಫೇಸ್ ಪಡೆದುಕೊಂಡಿದೆ. ಇದರ ಅರ್ಥವೆಂದರೆ ಬಳಕೆದಾರರು ಸ್ಕ್ರೀನ್ ಮೇಲೆ ಏನಿದೆ ಎಂಬುವುದನ್ನು ಊಹಿಸಲು ಅಧಿಕ ಸಮಯ ವ್ಯರ್ಥ ಆಗುವುದಿಲ್ಲ ಎಂದರ್ಥ, ಇದರ ಅನುಕೂಲಕರ ಕವರ್ ಸ್ಕ್ರೀನ್ ಒಳಬರುವ ಕರೆಗಳನ್ನು ಸುಲಭವಾಗಿ ಗುರುತಿಸುವುದನ್ನು ಖಚಿತ ಪಡಿಸುತ್ತದೆ.
ಪ್ರೊಸೆಸರ್ ಪವರ್ ಹಾಗೂ ಬಿಗ್ ಬ್ಯಾಟರಿ
ನೋಕಿಯಾ 2660 ಫ್ಲಿಪ್ ಮೊಬೈಲ್ Unisoc T107 ಪ್ರೊಸೆಸರ್ ಪವರ್ ಅನ್ನು ಹೊಂದಿದ್ದು, ಇದರ ಜೊತೆಗೆ 1450 mAh ಬ್ಯಾಟರಿ ಬ್ಯಾಕ್‌ಅಪ್ ಅನ್ನು ಪಡೆದಿದೆ. ವಾರಗಳ ಕಾಲ ಬಳಕೆ ಸೌಲಭ್ಯ ಒದಗಿಸಲಿದೆ.

ನೋಕಿಯಾ 2660 ಫ್ಲಿಪ್ ಕ್ಯಾಮೆರಾ ಸೆಟ್‌ಅಪ್ ಹೀಗಿದೆ
ನೋಕಿಯಾ ಸಂಸ್ಥೆಯ ಈ ಮೊಬೈಲ್ ಹಿಂಬದಿ ಸಿಂಗಲ್ ರಿಯರ್ ಕ್ಯಾಮೆರಾ ರಚನೆ ಹೊಂದಿದ್ದು, ಅದು 0.3 ಮೆಗಾ ಪಿಕ್ಸಲ್ ಸೆನ್ಸಾರ್ ಸೌಲಭ್ಯ ಒಳಗೊಂಡಿದೆ. ಇದರ ಜೊತೆಗೆ ಎಲ್‌ಇಡಿ ಪ್ಲ್ಯಾಶ್ ಸೌಲಭ್ಯ ಕೂಡಾ ಹೊಂದಿದೆ.
ನೋಕಿಯಾ 2660 ಫ್ಲಿಪ್ ಕಲರ್ ಮಾಹಿತಿ ಹಾಗೂ ಲಭ್ಯತೆ
ನೋಕಿಯಾ ಸಂಸ್ಥೆಯು ಇತ್ತೀಚಿಗಷ್ಟೆ ಬಿಡುಗಡೆ ಮಾಡಿರುವ ನೋಕಿಯಾ 2660 ಫ್ಲಿಪ್ ಫೋನ್ ಅಮೆಜಾನ್.ಕಾಮ್ (Amazon.com) ನಲ್ಲಿ ಮತ್ತು ಅಧಿಕೃತ ನೋಕಿಯಾ ವೆಬ್‌ಸೈಟ್ ಖರೀದಿಗೆ ಲಭ್ಯ ಇದೆ. ಇನ್ನು ಈ ಫೋನ್ ಪಿಂಕ್, ಬ್ಲೂ, ಗ್ರೀನ್, ರೆಡ್ ಹಾಗೂ ಬ್ಲ್ಯಾಕ್ ಕಲರ್ ಆಯ್ಕೆಗಳಲ್ಲಿ ಖರೀದಿಗೆ ಲಭ್ಯ ಇದೆ. ಅಂದಹಾಗೆ ಈ ಮೊಬೈಲ್‌ನ ಆಫರ್ ಬೆಲೆಯು 4,449ರೂ. ಆಗಿದೆ.


Click it and Unblock the Notifications








