ಜನಪ್ರಿಯ ನೋಕಿಯಾ ಸ್ಮಾರ್ಟ್‌ಫೋನ್‌ಗಳ ಬೆಲೆ ಇಳಿಕೆ!

|

ಮೊಬೈಲ್ ದೊಡ್ಡಣ್ಣ ಎಂದೇ ಗುರುತಿಸಿಕೊಂಡಿರುವ ನೋಕಿಯಾ ಕಂಪನಿಯು ಈಗಾಗಲೇ ಅಂಡ್ರಾಯ್ಡ್‌ ಆಪರೇಟಿಂಗ್ ಸಿಸ್ಟಮ್ ಆವೃತ್ತಿಯಲ್ಲಿ ಹಲವು ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸಿದೆ. ಹಾಗೆಯೇ ಇತ್ತೀಚಿಗೆ ನೋಕಿಯಾ 6.2 ಮತ್ತು ನೋಕಿಯಾ 7.2 ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಿ ಸುದ್ದಿಯಲ್ಲಿರುವ ನೋಕಿಯಾ, ಈಗ ಮತ್ತೊಂದು ಅಬ್ಬಬ್ಬಾ ಎನ್ನುವ ಸಮಾಚಾರವನ್ನು ತನ್ನ ಗ್ರಾಹಕರಿಗೆ ನೀಡಿದೆ.

ನೋಕಿಯಾ

ಹೌದು, ನೋಕಿಯಾ ಸಂಸ್ಥೆಯು ತನ್ನ ಜನಪ್ರಿಯ 'ನೋಕಿಯಾ 3.2' ಮತ್ತು 'ನೋಕಿಯಾ 4.2' ಸ್ಮಾರ್ಟ್‌ಫೋನ್‌ಗಳ ಬೆಲೆಯಲ್ಲಿ ಭರ್ಜರಿ ಇಳಿಕೆ ಮಾಡಿದೆ. ಕಳೆದ ಮೇ ತಿಂಗಳಿನಲ್ಲಿ ತಾತ್ಕಾಲಿಕವಾಗಿ ಬೆಲೆ ಕಡಿತ ಕಂಡಿದ್ದ ಈ ಸ್ಮಾರ್ಟ್‌ಫೋನ್‌ಗಳು, MWC-2019 ಕಾರ್ಯಕ್ರಮದಲ್ಲಿ ಲಾಂಚ್ ಆಗಿದ್ದವು. ಸದ್ಯ ಮಾರುಕಟ್ಟೆಯಲ್ಲಿ 'ನೋಕಿಯಾ 3.2' ಬೆಲೆಯು 7,999ರೂ ಮತ್ತು ನೋಕಿಯಾ 4.2 ಫೋನ್ ಬೆಲೆಯು 9,499ರೂ.ಗಳು ಆಗಿವೆ. ಹಾಗಾದರೇ 'ನೋಕಿಯಾ 3.2' ಮತ್ತು 'ನೋಕಿಯಾ 4.2' ಸ್ಮಾರ್ಟ್‌ಫೋನ್‌ಗಳ ಫೀಚರ್ಸ್‌ಗಳೆನು ಎಂಬುದನ್ನು ತಿಳಿಯಲು ಮುಂದೆ ಓದಿರಿ.

ಬೆಲೆ ಇಳಿಕೆ

ಬೆಲೆ ಇಳಿಕೆ

ನೋಕಿಯಾ 3.2 ಸ್ಮಾರ್ಟ್‌ಫೋನ್ ಎರಡು ವೇರಿಯಂಟ್‌ ಮಾದರಿಗಳನ್ನು ಒಳಗೊಂಡಿದ್ದು, 2GB RAM + 16GB ಮತ್ತು 3GB RAM + 32GB ಆಗಿದೆ. ಆರಂಭದಲ್ಲಿ ಈ ಎರಡು ವೇರಿಯಂಟ್‌ಗಳು ಕ್ರಮವಾಗಿ 8,990ರೂ. ಮತ್ತು 10,790ರೂ.ಗಳ ಬೆಲೆಯನ್ನು ಹೊಂದಿದ್ದವು. ಆದ್ರೆ ಈಗ ಬೆಲೆ ಕಡಿತದಿಂದ ಕ್ರಮವಾಗಿ 7,999ರೂ. ಮತ್ತು 8,999ರೂ.ಗಳಿಗೆ ಲಭ್ಯ. ಹಾಗೆಯೇ 3GB RAM + 32GBಯ 'ನೋಕಿಯಾ 4.2' ಫೋನ್ ಬೆಲೆ ಸದ್ಯ 9,499ರೂ.ಆಗಿದೆ.

ನೋಕಿಯಾ 3.2 ಡಿಸ್‌ಪ್ಲೇ ರಚನೆ

ನೋಕಿಯಾ 3.2 ಡಿಸ್‌ಪ್ಲೇ ರಚನೆ

ನೋಕಿಯಾ 3.2 ಸ್ಮಾರ್ಟ್‌ಫೋನ್ 720x1520 ಪಿಕ್ಸೆಲ್ ರೆಸಲ್ಯೂಶನ್ ಸಾಮರ್ಥ್ಯದೊಂದಿಗೆ 6.26 ಇಂಚುಗಳ HD ಪ್ಲಸ್‌ ಡಿಸ್‌ಪ್ಲೇಯನ್ನು ಹೊಂದಿದ್ದು, ಡಿಸ್‌ಪ್ಲೇಯ ಅನುಪಾತವು 19:9 ಆಗಿದೆ. ಸುತ್ತಲೂ ಕರ್ವ್ ರಚನೆಯನ್ನು ಪಡೆದಿದ್ದು, ನೋಡಲು ಆಕರ್ಷಕವಾಗಿ ಕಾಣುತ್ತದೆ. ವಿಡಿಯೊ ವೀಕ್ಷಣೆಗೆ ಮತ್ತು ಗೇಮಿಂಗ್‌ಗೆ ಅತ್ಯುತ್ತಮ ಸಪೋರ್ಟ್‌ ಎನಿಸಲಿದೆ.

ನೋಕಿಯಾ 3.2 ಪ್ರೊಸೆಸರ್

ನೋಕಿಯಾ 3.2 ಪ್ರೊಸೆಸರ್

ನೋಕಿಯಾ 3.2 ಸ್ಮಾರ್ಟ್‌ಫೋನ್ 'ಕ್ವಾಲ್ಕಂ ಸ್ನ್ಯಾಪ್‌ಡ್ರಾಗನ್ 429 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸುತ್ತದೆ. ಅದಕ್ಕೆ ಪೂರಕವಾಗಿ ಆಂಡ್ರಾಯ್ಡ್‌ 9 ಪೈ ಆಪರೇಟಿಂಗ್ ಸಿಸ್ಟಮ್ ಬೆಂಬಲ ಸಹ ಪಡೆದಿದೆ. ಈ ಫೋನ್ 2GB RAM + 16GB ಸ್ಟೋರೇಜ್ ಮತ್ತು 3GB RAM + 32GB ಆಂತರಿಕ ಸ್ಟೋರೇಜ್‌ನ ಎರಡು ವೇರಿಯಂಟ್‌ ಮಾದರಿಗಳಿಲ್ಲಿ ದೊರೆಯಲಿದೆ.

ನೋಕಿಯಾ 3.2 ಕ್ಯಾಮೆರಾ ಮತ್ತು ಬ್ಯಾಟರಿ

ನೋಕಿಯಾ 3.2 ಕ್ಯಾಮೆರಾ ಮತ್ತು ಬ್ಯಾಟರಿ

ನೋಕಿಯಾ 3.2 ಸ್ಮಾರ್ಟ್‌ಫೋನ್ ಹಿಂಬದಿಯಲ್ಲಿ ಸಿಂಗಲ್ ರಿಯರ್ ಕ್ಯಾಮೆರಾ ಸೆಟ್‌ಅಪ್ ಪಡೆದುಕೊಂಡಿದ್ದು, ಅದು f/2.2 ಅಪರ್ಚರ್ನೊಂದಿಗೆ 13ಎಂಪಿ ಸೆನ್ಸಾರ್‌ ಸಾಮರ್ಥ್ಯದಲ್ಲಿದೆ. ಹಾಗೂ ಸೆಲ್ಫಿಗಾಗಿ 5ಎಂಪಿ ಕ್ಯಾಮೆರಾ ನೀಡಲಾಗಿದ್ದು, ಅದು ಸಹ f/2.2 ಅಪರ್ಚರ್ ಸಾಮರ್ಥ್ಯದಲ್ಲಿದೆ. ಇದರೊಂದಿಗೆ ಈ ಫೋನ್ 4,000mAh ಸಾಮರ್ಥ್ಯದ ಬ್ಯಾಟರಿ ಬಾಳಿಕೆಯ ಶಕ್ತಿಯನ್ನು ಒಳಗೊಂಡಿದೆ.

ನೋಕಿಯಾ 4.2 ಡಿಸ್‌ಪ್ಲೇ ರಚನೆ

ನೋಕಿಯಾ 4.2 ಡಿಸ್‌ಪ್ಲೇ ರಚನೆ

ನೋಕಿಯಾ 4.2 ಸ್ಮಾರ್ಟ್‌ಫೋನ್ 720x1520 ಪಿಕ್ಸೆಲ್ ರೆಸಲ್ಯೂಶನ್ ಸಾಮರ್ಥ್ಯದೊಂದಿಗೆ 5.71 ಇಂಚುಗಳ HD ಪ್ಲಸ್‌ ಡಿಸ್‌ಪ್ಲೇಯನ್ನು ಹೊಂದಿದ್ದು, ಡಿಸ್‌ಪ್ಲೇಯ ವಾಟರ್‌ಡ್ರಾಪ್ ಸ್ಟೈಲ್ ನಾಚ್ ರಚನೆಯನ್ನು ಪಡೆದಿದೆ. ಹಾಗೆಯೇ ಡಿಸ್‌ಪ್ಲೇಯ ಅನುಪಾತವು ಅನುಪಾತವು 19:9 ಆಗಿದ್ದು, ಡಿಸ್‌ಪ್ಲೇ ಸುತ್ತಲೂ ಕರ್ವ್ ರಚನೆಯನ್ನು ಪಡೆದಿದೆ. ವಿಡಿಯೊ ವೀಕ್ಷಣೆಗೆ ಮತ್ತು ಗೇಮಿಂಗ್‌ಗೆ ಅತ್ಯುತ್ತಮ ಎನಿಸಲಿದೆ.

ನೋಕಿಯಾ 4.2 ಪ್ರೊಸೆಸರ್

ನೋಕಿಯಾ 4.2 ಪ್ರೊಸೆಸರ್

ನೋಕಿಯಾ 4.2 ಸ್ಮಾರ್ಟ್‌ಫೋನ್ ಆಕ್ಟಾ ಕೋರ್ 'ಕ್ವಾಲ್ಕಂ ಸ್ನ್ಯಾಪ್‌ಡ್ರಾಗನ್ 439 SoC ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸುತ್ತದೆ. ಅದಕ್ಕೆ ಪೂರಕವಾಗಿ ಆಂಡ್ರಾಯ್ಡ್‌ 9 ಪೈ ಆಪರೇಟಿಂಗ್ ಸಿಸ್ಟಮ್ ಬೆಂಬಲ ಸಹ ಪಡೆದಿದೆ. ಇದರೊಂದಿಗೆ 505 GPU ಸಹ ಪಡೆದಿದೆ ಹಾಗೆಯೇ ಈ ಫೋನ್ 3GB RAM + 32GB ಆಂತರಿಕ ಸ್ಟೋರೇಜ್‌ ಒಂದೇ ವೇರಿಯಂಟ್‌ ಮಾದರಿಯಲ್ಲಿ ದೊರೆಯಲಿದೆ.

ನೋಕಿಯಾ 4.2 ಕ್ಯಾಮೆರಾ ಮತ್ತು ಬ್ಯಾಟರಿ

ನೋಕಿಯಾ 4.2 ಕ್ಯಾಮೆರಾ ಮತ್ತು ಬ್ಯಾಟರಿ

ನೋಕಿಯಾ 4.2 ಸ್ಮಾರ್ಟ್‌ಫೋನ್ ಹಿಂಬದಿಯಲ್ಲಿ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟ್‌ಅಪ್ ಪಡೆದುಕೊಂಡಿದ್ದು, ಪ್ರಾಥಮಿಕ ಕ್ಯಾಮೆರಾವು f/2.2 ಅಪರ್ಚರ್ನೊಂದಿಗೆ 13ಎಂಪಿ ಸೆನ್ಸಾರ್‌ ಸಾಮರ್ಥ್ಯದಲ್ಲಿದೆ. ಸೆಕೆಂಡರಿ ಕ್ಯಾಮೆರಾವು 2ಎಂಪಿ ಸೆನ್ಸಾರ್ನಲ್ಲಿದೆ. ಹಾಗೂ ಸೆಲ್ಫಿಗಾಗಿ 8ಎಂಪಿ ಕ್ಯಾಮೆರಾ ನೀಡಲಾಗಿದ್ದು, ಅದು f/2.0 ಅಪರ್ಚರ್ ಸಾಮರ್ಥ್ಯದಲ್ಲಿದೆ. ಇದರೊಂದಿಗೆ ಈ ಫೋನ್ 3,000mAh ಸಾಮರ್ಥ್ಯದ ಬ್ಯಾಟರಿ ಬಾಳಿಕೆಯ ಶಕ್ತಿಯನ್ನು ಒಳಗೊಂಡಿದೆ.

Best Mobiles in India

English summary
Nokia 3.2, Nokia 4.2 Get Price Cut In India. The new prices are reflecting on the Nokia online webstore. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X