Home
ಸುದ್ದಿಜಾಲ

ಭಾರತದಲ್ಲಿ ಇಂದು ನೋಕಿಯಾ 3.4 ಫೋನ್ ಸೇಲ್ ಆರಂಭ!..ಬೆಲೆ ಎಷ್ಟು?

ಜನಪ್ರಿಯ ನೋಕಿಯಾ ಮೊಬೈಲ್ ಕಂಪನಿಯ ಇತ್ತೀಚಿಗಷ್ಟೆ ಭಾರತದಲ್ಲಿ ಬಿಡುಗಡೆ ಮಾಡಿರುವ ನೋಕಿಯಾ 3.4 ಸ್ಮಾರ್ಟ್‌ಫೋನ್ ಆಕರ್ಷಕ ಫೀಚರ್ಸ್‌ಗಳಿಂದ ಗ್ರಾಹಕರನ್ನು ಸೆಳೆದಿದೆ. ಈ ಸ್ಮಾರ್ಟ್‌ಫೋನ್ ಇಂದು (ಫೆ.20) ಇ-ಕಾಮರ್ಸ್‌ಗಳಾದ ಫ್ಲಿಪ್‌ಕಾರ್ಟ್‌, ಅಮೆಜಾನ್ ಪ್ಲಾಟ್‌ಫಾರ್ಮ್ ಸೇರಿದಂತೆ ಅಧಿಕೃತ ನೋಕಿಯಾ ವೆಬ್‌ಸೈಟ್‌ನಲ್ಲಿ ಖರೀದಿಗೆ ಲಭ್ಯವಾಗಲಿದೆ. ಇನ್ನು ಈ ಸ್ಮಾರ್ಟ್‌ಫೋನಿನ ಆರಂಭಿಕ ವೇರಿಯಂಟ್ ಬೆಲೆಯು 11,999ರೂ.ಗಳು ಆಗಿದೆ.

ಸ್ಮಾರ್ಟ್‌ಫೋನ್

ಹೌದು, ನೋಕಿಯಾ 3.4 ಸ್ಮಾರ್ಟ್‌ಫೋನ್ ಇ-ಕಾಮರ್ಸ್‌ ತಾಣಗಳಲ್ಲಿ ಇಂದು ಖರೀದಿಗೆ ಲಭ್ಯ. ಈ ಸ್ಮಾರ್ಟ್‌ಫೋನ್ ಹಿಂಬದಿಯಲ್ಲಿ ಟ್ರಿಪಲ್ ಕ್ಯಾಮೆರಾ, ಉತ್ತಮ ಚಾರ್ಜಿಂಗ್ ಬೆಂಬಲಿತ 4,000mAh ಬ್ಯಾಟರಿ ಬಾಳಿಕೆಯನ್ನು ಪಡೆದಿದೆ. ಹಾಗೆಯೇ ಈ ಫೋನ್ 4GB RAM ಮತ್ತು 64GB ವೇರಿಯಂಟ್ ಆಯ್ಕೆ ಪಡೆದಿದೆ. ಇನ್ನುಳಿದಂತೆ ನೋಕಿಯಾ 3.4 ಫೋನಿನ ಫೀಚರ್ಸ್‌ಗಳು ಹೇಗಿವೆ ಎಂಬುದನ್ನು ತಿಳಿಯಲು ಮುಂದೆ ಓದಿರಿ.

ಡಿಸ್‌ಪ್ಲೇ ಡಿಸೈನ್

ಡಿಸ್‌ಪ್ಲೇ ಡಿಸೈನ್

ನೋಕಿಯಾ 3.4 ಸ್ಮಾರ್ಟ್‌ಫೋನ್‌ 720x1,560 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯದೊಂದಿಗೆ 6.39 ಇಂಚಿನ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇಯನ್ನು ಹೊಂದಿದೆ. ಡಿಸ್‌ಪ್ಲೇಯ ಅನುಪಾತವು 19.5:9 ಆಗಿದ್ದು, 400 nits ಬ್ರೈಟ್ನೆಸ್‌ ಪಡೆದಿದೆ.

ಪ್ರೊಸೆಸರ್‌ ಕಾರ್ಯ

ಪ್ರೊಸೆಸರ್‌ ಕಾರ್ಯ

ನೋಕಿಯಾ 3.4 ಸ್ಮಾರ್ಟ್‌ಫೋನ್ ಆಕ್ಟಾ-ಕೋರ್ ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ 460 SoC ಪ್ರೊಸೆಸರ್ ಅನ್ನು ಒಳಗೊಂಡಿದೆ. ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್‌ 10 ಓಎಸ್‌ ಸಫೋರ್ಟ್‌(ಆಂಡ್ರಾಯ್ಡ್‌ 11 ರೆಡಿ) ಪಡೆದಿದೆ. ಹಾಗೆಯೇ 4GB RAM ಮತ್ತು 64GB ಸ್ಟೋರೇಜ್ ವೇರಿಯಂಟ್‌ ಆಯ್ಕೆಯನ್ನು ಪಡೆದಿದ್ದು, ಎಸ್‌ಡಿ ಕಾರ್ಡ್‌ ಮೂಲಕ 512GB ವರೆಗೂ ಬಾಹ್ಯ ಮೆಮೊರಿ ವಿಸ್ತರಿಸಬಹುದಾಗಿದೆ.

ತ್ರಿವಳಿ ಕ್ಯಾಮೆರಾ ರಚನೆ

ತ್ರಿವಳಿ ಕ್ಯಾಮೆರಾ ರಚನೆ

ನೋಕಿಯಾ 3.4 ಸ್ಮಾರ್ಟ್‌ಫೋನ್‌ ಹಿಂಬದಿಯಲ್ಲಿ ತ್ರಿವಳಿ ರಿಯರ್ ಕ್ಯಾಮೆರಾ ಸೆಟ್‌ಅಪ್‌ ಹೊಂದಿದ್ದು, ಪ್ರಾಥಮಿಕ ಕ್ಯಾಮೆರಾವು 13ಎಂಪಿ ಸಾಮರ್ಥ್ಯದಲ್ಲಿದೆ. ಸೆಕೆಂಡರಿ ಕ್ಯಾಮೆರಾವು 5ಎಂಪಿ ಸೆನ್ಸಾರ್‌ ನಲ್ಲಿದ್ದು, ತೃತೀಯ ಕ್ಯಾಮೆರಾವು 2ಎಂಪಿ ಸೆನ್ಸಾರ್ ಪಡೆದಿದೆ. ಇನ್ನು ಸೆಲ್ಫಿಗಾಗಿ 8ಎಂಪಿ ಕ್ಯಾಮೆರಾವನ್ನು ನೀಡಲಾಗಿದ್ದು, LED ಫ್ಲ್ಯಾಶ್‌ ಸೌಲಭ್ಯವನ್ನು ಒಳಗೊಂಡಿದೆ.

ಬ್ಯಾಟರಿ ಪವರ್

ಬ್ಯಾಟರಿ ಪವರ್

ನೋಕಿಯಾ 3.4 ಎಂಟ್ರಿ ಲೆವಲ್ ಸ್ಮಾರ್ಟ್‌ಫೋನ್‌ 4,000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಹೊಂದಿದೆ. ಇದರೊಂದಿಗೆ 10W ಸಾಮರ್ಥ್ಯದ ಚಾರ್ಜಿಂಗ್ ಸೌಲಭ್ಯ ನೀಡಲಾಗಿದೆ. ಇನ್ನು ಈ ಫೋನ್ ಬ್ಲೂಟೂತ್, GPS/ A-GPS, USB Type-C, FM, ಮೈಕ್ರೋ USB, ವೈ ಫೈ ಸೌಲಭ್ಯಗಳನ್ನು ಪಡೆದಿದೆ.

ಬೆಲೆ ಎಷ್ಟು ಮತ್ತು ಲಭ್ಯತೆ

ಬೆಲೆ ಎಷ್ಟು ಮತ್ತು ಲಭ್ಯತೆ

ದೇಶಿಯ ಮಾರುಕಟ್ಟೆಗೆ ಅನಾವರಣಗೊಂಡಿರುವ ನೋಕಿಯಾ 3.4 ಫೋನಿನ 4GB + 64GB ವೇರಿಯಂಟ್ ಬೆಲೆಯು 11,999ರೂ. ಆಗಿದೆ. ಈ ಫೋನ್ ಚಾರ್ಕೋಲ್, ಡಸ್ಕ್ ಹಾಗೂ ಫ್ಜಾರ್ಡ್ ಬಣ್ಣಗಳ ಆಯ್ಕೆಯಲ್ಲಿ ಲಭ್ಯವಾಗಲಿದೆ. (ಇಂದು) ಫೆ.20 ರಂದು ನೋಕಿಯಾ ವೆಬ್‌ಸೈಟ್, ಅಮೆಜಾನ್ ಹಾಗೂ ಫ್ಲಿಪ್‌ಕಾರ್ಟ್‌ ತಾಣಗಳ ಮೂಲಕ ಸೇಲ್ ಶುರು ಮಾಡಲಿದೆ.

Best Mobiles in India

English summary
Nokia 3.4 is available for purchase via Flipkart, Amazon, and Nokia’s official website.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+