ಭಾರತದಲ್ಲಿ ಬಜೆಟ್ ಬೆಲೆಯಲ್ಲಿ ನೋಕಿಯಾ 3.4 ಸ್ಮಾರ್ಟ್‌ಫೋನ್ ಲಾಂಚ್!
ಮೊಬೈಲ್ ಪ್ರಿಯರ ಎವರ್‌ಗ್ರೀನ್ ಬ್ರ್ಯಾಂಡ್ ನೋಕಿಯಾ ತನ್ನ ಬಹುನಿರೀಕ್ಷಿತ ನೋಕಿಯಾ 3.4 ಮತ್ತು ನೋಕಿಯಾ 5.4 ಮಾಡೆಲ್‌ಗಳನ್ನು ಭಾರತೀಯ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಅವುಗಳಲ್ಲಿ ನೋಕಿಯಾ 5.4 ಫೋನ್ ಬಜೆಟ್ ದರದಲ್ಲಿ ಕಾಣಿಸಿಕೊಂಡಿದೆ. ನೋಕಿಯಾ 3.4 ಫೋನ್ ಎಂಟ್ರಿ ಲೆವೆಲ್ ಪ್ರೈಸ್‌ಟ್ಯಾಗ್ ಅನ್ನು ಹೊಂದಿದ್ದು, ಕೆಲವು ಆಕರ್ಷಕ ಫೀಚರ್ಸ್‌ಗಳನ್ನು ಪಡೆದುಕೊಂಡಿದೆ.

ಹೌದು, ನೋಕಿಯಾ HMD ಕಂಪನಿಯು ಭಾರತದಲ್ಲಿ ನೋಕಿಯಾ 3.4 ಸ್ಮಾರ್ಟ್‌ಫೋನ್ ಅನ್ನು ಅಧಿಕೃತವಾಗಿ ಲಾಂಚ್ ಮಾಡಿದೆ. ಈ ಸ್ಮಾರ್ಟ್‌ಫೋನ್ ಟ್ರಿಪಲ್ ಕ್ಯಾಮೆರಾ ಸೆಟ್‌ಅಪ್ ಅನ್ನು ಪಡೆದಿದ್ದು, ಸ್ನ್ಯಾಪ್‌ಡ್ರಾಗನ್ 450 ಪ್ರೊಸೆಸರ್ ಸಾಮರ್ಥ್ಯವನ್ನು ಒಳಗೊಂಡಿದೆ. ಹಾಗೆಯೇ 4,000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್ ಅನ್ನು ಹೊಂದಿದೆ. ಹಾಗಾದರೇ ನೋಕಿಯಾ 3.4 ಸ್ಮಾರ್ಟ್‌ಫೋನಿನ ಇನ್ನುಳಿದ ಇತರೆ ಫೀಚರ್ಸ್‌ಗಳ ಬಗ್ಗೆ ಮುಂದೆ ನೋಡೋಣ ಬನ್ನಿರಿ.

ಡಿಸ್‌ಪ್ಲೇ ಡಿಸೈನ್
ನೋಕಿಯಾ 3.4 ಸ್ಮಾರ್ಟ್‌ಫೋನ್ 720x1,560 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯದೊಂದಿಗೆ 6.39 ಇಂಚಿನ ಹೆಚ್‌ಡಿ ಪ್ಲಸ್ ಡಿಸ್‌ಪ್ಲೇಯನ್ನು ಹೊಂದಿದೆ. ಡಿಸ್‌ಪ್ಲೇಯ ಅನುಪಾತವು 19.5:9 ಆಗಿದ್ದು, 400 nits ಬ್ರೈಟ್ನೆಸ್ ಪಡೆದಿದೆ.

ಪ್ರೊಸೆಸರ್ ಕಾರ್ಯ
ನೋಕಿಯಾ 3.4 ಸ್ಮಾರ್ಟ್‌ಫೋನ್ ಆಕ್ಟಾ-ಕೋರ್ ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ 460 SoC ಪ್ರೊಸೆಸರ್ ಅನ್ನು ಒಳಗೊಂಡಿದೆ. ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್ 10 ಓಎಸ್ ಸಫೋರ್ಟ್(ಆಂಡ್ರಾಯ್ಡ್ 11 ರೆಡಿ) ಪಡೆದಿದೆ. ಹಾಗೆಯೇ 4GB RAM ಮತ್ತು 64GB ಸ್ಟೋರೇಜ್ ವೇರಿಯಂಟ್ ಆಯ್ಕೆಯನ್ನು ಪಡೆದಿದ್ದು, ಎಸ್‌ಡಿ ಕಾರ್ಡ್ ಮೂಲಕ 512GB ವರೆಗೂ ಬಾಹ್ಯ ಮೆಮೊರಿ ವಿಸ್ತರಿಸಬಹುದಾಗಿದೆ.

ತ್ರಿವಳಿ ಕ್ಯಾಮೆರಾ ರಚನೆ
ನೋಕಿಯಾ 3.4 ಸ್ಮಾರ್ಟ್‌ಫೋನ್ ಹಿಂಬದಿಯಲ್ಲಿ ತ್ರಿವಳಿ ರಿಯರ್ ಕ್ಯಾಮೆರಾ ಸೆಟ್‌ಅಪ್ ಹೊಂದಿದ್ದು, ಪ್ರಾಥಮಿಕ ಕ್ಯಾಮೆರಾವು 13ಎಂಪಿ ಸಾಮರ್ಥ್ಯದಲ್ಲಿದೆ. ಸೆಕೆಂಡರಿ ಕ್ಯಾಮೆರಾವು 5ಎಂಪಿ ಸೆನ್ಸಾರ್ ನಲ್ಲಿದ್ದು, ತೃತೀಯ ಕ್ಯಾಮೆರಾವು 2ಎಂಪಿ ಸೆನ್ಸಾರ್ ಪಡೆದಿದೆ. ಇನ್ನು ಸೆಲ್ಫಿಗಾಗಿ 8ಎಂಪಿ ಕ್ಯಾಮೆರಾವನ್ನು ನೀಡಲಾಗಿದ್ದು, LED ಫ್ಲ್ಯಾಶ್ ಸೌಲಭ್ಯವನ್ನು ಒಳಗೊಂಡಿದೆ.

ಬ್ಯಾಟರಿ ಪವರ್
ನೋಕಿಯಾ 3.4 ಎಂಟ್ರಿ ಲೆವಲ್ ಸ್ಮಾರ್ಟ್‌ಫೋನ್ 4,000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್ ಹೊಂದಿದೆ. ಇದರೊಂದಿಗೆ 10W ಸಾಮರ್ಥ್ಯದ ಚಾರ್ಜಿಂಗ್ ಸೌಲಭ್ಯ ನೀಡಲಾಗಿದೆ. ಇನ್ನು ಈ ಫೋನ್ ಬ್ಲೂಟೂತ್, GPS/ A-GPS, USB Type-C, FM, ಮೈಕ್ರೋ USB, ವೈ ಫೈ ಸೌಲಭ್ಯಗಳನ್ನು ಪಡೆದಿದೆ.

ಬೆಲೆ ಎಷ್ಟು ಮತ್ತು ಲಭ್ಯತೆ
ದೇಶಿಯ ಮಾರುಕಟ್ಟೆಗೆ ಅನಾವರಣಗೊಂಡಿರುವ ನೋಕಿಯಾ 3.4 ಫೋನಿನ 4GB + 64GB ವೇರಿಯಂಟ್ ಬೆಲೆಯು 11,999ರೂ. ಆಗಿದೆ. ಈ ಫೋನ್ ಚಾರ್ಕೋಲ್, ಡಸ್ಕ್ ಹಾಗೂ ಫ್ಜಾರ್ಡ್ ಬಣ್ಣಗಳ ಆಯ್ಕೆಯಲ್ಲಿ ಲಭ್ಯವಾಗಲಿದೆ. ಇದೇ ಫೆ.20 ರಂದು ನೋಕಿಯಾ ವೆಬ್‌ಸೈಟ್, ಅಮೆಜಾನ್ ಹಾಗೂ ಫ್ಲಿಪ್‌ಕಾರ್ಟ್ ತಾಣಗಳ ಮೂಲಕ ಸೇಲ್ ಶುರು ಮಾಡಲಿದೆ.


Click it and Unblock the Notifications