ಮತ್ತೆ ಭಾರಿ ಬೆಲೆ ಇಳಿಕೆ ಕಂಡ 'ನೋಕಿಯಾ 4.2' ಸ್ಮಾರ್ಟ್‌ಫೋನ್!
ಮೊಬೈಲ್ ಮಾರುಕಟ್ಟೆಯಲ್ಲಿ ಎವರ್‌ಗ್ರೀನ್ ಮೊಬೈಲ್ ಸಂಸ್ಥೆಯಾಗಿ ಗುರುತಿಸಿಕೊಂಡಿರುವ ನೋಕಿಯಾ 2019 ರಲ್ಲಿ ಅತ್ಯುತ್ತಮ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಿದೆ. ಅವುಗಳಲ್ಲಿ ನೋಕಿಯಾ 4.2 ಫೋನ್ ಬಜೆಟ್ ಬೆಲೆಯನ್ನು ಹೊಂದಿದ್ದು, ಇತ್ತೀಚಿಗೆ ದರ ಇಳಿಕೆ ಸಹ ಕಂಡಿತ್ತು. ಆದರೆ ಇದೀಗ ಮತ್ತೊಮ್ಮೆ ಭಾರಿ ಮೊತ್ತದ ಬೆಲೆ ಕಡಿತ ಕಂಡಿದ್ದು, ನೋಕಿಯಾ ಪ್ರಿಯ ಗ್ರಾಹಕರಲ್ಲಿ ಖುಷಿ ತಂದಿದೆ.

ಹೌದು, ನೋಕಿಯಾ ಭಾರತದಲ್ಲಿ ತನ್ನ 'ನೋಕಿಯಾ 4.2' ಸ್ಮಾರ್ಟ್‌ಫೋನ್ ಬೆಲೆಯಲ್ಲಿ ಇಳಿಕೆ ಮಾಡಿದ್ದು, ಇದೀಗ ಕೇವಲ 6,975ರೂ.ಗಳಿಗೆ ಲಭ್ಯ ಇದೆ. ಮೇ ತಿಂಗಳಿನಲ್ಲಿ ಈ ಫೋನ್ 10,990ರೂ.ಪ್ರೈಸ್‌ಟ್ಯಾಗ್‌ನಲ್ಲಿ ಲಾಂಚ್ ಆಗಿತ್ತು. ಜನಪ್ರಿಯ ಇ-ಕಾಮರ್ಸ್ ತಾಣ ಅಮೆಜಾನ್ ನಲ್ಲಿ 6,975ರೂ.ಬೆಲೆಯನ್ನು ಹೊಂದಿದೆ. ಇನ್ನು ಈ ಫೋನ್ ಸ್ನ್ಯಾಪ್‌ಡ್ರಾಗನ್ 439 SoC ಪ್ರೊಸೆಸರ್ ಜೊತೆಗೆ ಅಂಡ್ರಾಯ್ಡ್ 9.0 ಪೈ ಆಪರೇಟಿಂಗ್ ಸಿಸ್ಟಮ್ ಇದರಲ್ಲಿ ಕಾರ್ಯನಿರ್ವಹಿಸಲಿದೆ. ಹಾಗಾದರೇ ನೋಕಿಯಾ 4.2 ಸ್ಮಾರ್ಟ್‌ಫೋನ್ ಇತರೆ ಏನೆಲ್ಲಾ ಫೀಚರ್ಸ್‌ಗಳನ್ನು ಹೊಂದಿರಲಿದೆ ಎಂಬುದನ್ನು ತಿಳಿಯಲು ಮುಂದೆ ಓದಿರಿ.

ಡಿಸ್‌ಪ್ಲೇ ರಚನೆ
ನೋಕಿಯಾ 4.2 ಸ್ಮಾರ್ಟ್‌ಫೋನ್ 720x1520 ಸಾಮರ್ಥ್ಯದ ಪಿಕ್ಸಲ್ ರೆಸಲ್ಯೂಶನ್ ನೊಂದಿಗೆ 5.71 ಇಂಚಿನ ಹೆಚ್‌ಡಿ ಪ್ಲಸ್ ಹಾಗೂ TFT ಮಾದರಿಯ ಡಿಸ್‌ಪ್ಲೇಯನ್ನು ಹೊಂದಿದ್ದು, ಈ ಫೋನಿನ ಡಿಸ್‌ಪ್ಲೇಯ ಅನುಪಾತವು 19:9 ಆಗಿದೆ. ತನ್ನ ವರ್ಗದಲ್ಲಿಯೇ ಅತ್ಯುತ್ತಮ ಡಿಸ್‌ಫ್ಲೇ ಇದಾಗಿದೆ. ಹಾಗೆಯೇ ಈ ಫೋನ್ 5D ಕರ್ವ್ ಗ್ಲಾಸ್ ರಕ್ಷಣೆಯನ್ನು ಪಡೆದಿದೆ. ಫೋನಿನ ಡಿಸ್‌ಪ್ಲೇಯು ಕಡಿಮೆ ಅಂಚಿನಿಂದ ಕೂಡಿದೆ.

ಪ್ರೊಸೆಸರ್ ಯಾವುದು
ಕ್ವಾಲ್ಕಂ ಸ್ನ್ಯಾಪ್‌ಡ್ರಾಗನ್ 439 SoC ಪ್ರೊಸೆಸರ್ ಈ ಸ್ಮಾರ್ಟ್‌ಫೋನಿನಲ್ಲಿ ವೇಗದ ಕಾರ್ಯನಿರ್ವಹಿಸಲಿದೆ ಇದರೊಂದಿಗೆ ಅಂಡ್ರಾಯ್ಡ್ 9.0 ಪೈ ಆಪರೇಟಿಂಗ್ ಸಿಸ್ಟಮ್ ಮಲ್ಟಿಟಾಸ್ಕ್ ಕೆಲಸಗಳಿಗೆ ಬೆಂಬಲ ನೀಡಲಿದೆ. ಗೇಮಿಂಗ್‌ಗೆ ಪೂರ್ಕವಾಗಿ ಪ್ರೊಸೆಸರ್ ಬಲ ನೀಡಲಿದೆ.

ಮೆಮೊರಿ ಸಾಮರ್ಥ್ಯ
ನೋಕಿಯಾ 4.2 ಸ್ಮಾರ್ಟ್‌ಫೋನ್ ಎರಡು ವೇರಿಯಂಟ್ ಆಯ್ಕೆಗಳಲ್ಲಿ ಲಾಂಚ್ ಆಗಿದ್ದು, ಅವು ಕ್ರಮವಾಗಿ 2GB ಮತ್ತು 3GB RAM ಸಾಮರ್ಥ್ಯದಲ್ಲಿರಲಿವೆ. 32GB ಆಂತರಿಕ ಸಂಗ್ರಹವನ್ನು ಪಡೆದಿದ್ದು, ಎಸ್‌ಡಿ ಕಾರ್ಡ್ ಮೂಲಕ ಬಾಹ್ಯ ಸಂಗ್ರಹ ಸಾಮರ್ಥ್ಯವನ್ನು 400GB ವರೆಗೂ ವಿಸ್ತರಿಸುವ ಅವಕಾಶ ನೀಡಿದೆ.

ಕ್ಯಾಮೆರಾ ವಿಶೇಷತೆ
ನೋಕಿಯಾ 4.2 ಸ್ಮಾರ್ಟ್‌ಫೋನ್ ಡ್ಯುಯಲ್ ರೇರ್ ಕ್ಯಾಮೆರಾಗಳನ್ನು ಹೊಂದಿದ್ದು, ಪ್ರಮುಖ ಕ್ಯಾಮೆರಾವು 13 ಮೆಗಾಪಿಕ್ಸಲ್ ಸಾಮರ್ಥ್ಯದಲ್ಲಿದೆ. ಹಾಗೇ ಸೆಕೆಂಡರಿ ಕ್ಯಾಮೆರಾವು 2 ಮೆಗಾಪಿಕ್ಸಲ್ ಸಾಮರ್ಥ್ಯದಲ್ಲಿದೆ. ಇನ್ನು ಸೆಲ್ಫಿ ಕ್ಯಾಮೆರಾವು 8 ಮೆಗಾಪಿಕ್ಸಲ್ ಸಾಮರ್ಥ್ಯದಲ್ಲಿದೆ.

ಬ್ಯಾಟರಿ ಪವರ್
ನೋಕಿಯಾ 4.2 ಸ್ಮಾರ್ಟ್‌ಫೋನ್ 3,000mAh ಸಾಮರ್ಥ್ಯದ ಬ್ಯಾಟರಿ ಶಕ್ತಿಯನ್ನು ಹೊಂದಿದ್ದು, ಅತ್ಯುತ್ತಮ ಬ್ಯಾಕ್‌ಅಪ್ ಒದಗಿಸಲಿದೆ. ಹಾಗೇ ಇದರೊಂದಿಗೆ ಉತ್ತಮ ಚಾರ್ಜಿಂಗ್ ಬೆಂಬಲ ನೀಡುವ ಚಾರ್ಜರ್ ಒದಗಿಸಿದೆ. ಇನ್ನು ಬ್ಲೂಟೂತ್ v4.2, ಸೇರಿದಂತೆ GPS, NFC, Micro-USB ಆಯ್ಕೆಗಳು ಸಹ ಇವೆ.


Click it and Unblock the Notifications








