Nokia: ನೋಕಿಯಾದಿಂದ 50 ಇಂಚಿನ 4K ಟಿವಿ ಲಾಂಚ್! 8GB ಸ್ಟೋರೇಜ್, ಬೆಲೆ ಎಷ್ಟು?
ನೋಕಿಯಾ (Nokia) ಇದೀಗ ವಿಶೇಷ ಸ್ಮಾರ್ಟ್ ಗ್ಯಾಜೆಟ್‌ಗಳ ಮೂಲಕ ಮಾರುಕಟ್ಟೆಯಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಅದರಲ್ಲೂ ಇತ್ತೀಚಿಗೆ ಲಾಂಚ್ ಮಾಡಲಾದ ಬಜೆಟ್ ಬೆಲೆಯ ನೋಕಿಯಾ ಫೋನ್‌ಗಳನ್ನು (Nokia phone) ಜನರು ಮೆಚ್ಚಿಕೊಂಡಿದ್ದಾರೆ. ಈ ಬೆಳವಣಿಗೆ ನಡುವೆ ಈಗ ಸ್ಟ್ರೀಮ್‌ವ್ಯೂ ಸುಧಾರಿತ ಫೀಚರ್ಸ್ ಆಯ್ಕೆಯೊಂದಿಗೆ ಹೊಸ ನೋಕಿಯಾ ಸ್ಮಾರ್ಟ್‌ಟಿವಿ ಅನಾವರಣ ಮಾಡಿದೆ.
ಹೌದು, ನೋಕಿಯಾ ಇದೀಗ 50 ಇಂಚಿನ 4K ಆಂಡ್ರಾಯ್ಡ್ ಸ್ಮಾರ್ಟ್ ಟಿವಿಯನ್ನು (Nokia 50″ 4K Android TV ) ಅನಾವರಣ ಮಾಡಿದೆ. ಈ ಸ್ಮಾರ್ಟ್‌ಟಿವಿ ಈ ತಿಂಗಳ ಆರಂಭದಲ್ಲಿ 24 ಇಂಚಿನ, 32 ಇಂಚಿನ, 40 ಇಂಚಿನ ಮತ್ತು 43 ಇಂಚಿನ ನೋಕಿಯಾ ಸ್ಮಾರ್ಟ್ ಟಿವಿಗಳನ್ನು ಲಾಂಚ್ ಮಾಡಿದ ಬಳಿಕ ಈಗ ಈ ಹೊಸ ಟಿವಿಯನ್ನು ಅನಾವರಣ ಮಾಡಲಾಗಿದೆ. ಈ ಸ್ಮಾರ್ಟ್‌ಟಿವಿ ಉತ್ತಮ ಗುಣಮಟ್ಟದ ಮತ್ತು ಅದ್ಭುತ ಫೀಚರ್ಸ್‌ನೊಂದಿಗೆ ಕಾಣಿಸಿಕೊಂಡಿದೆ. ಹಾಗಿದ್ರೆ, ಈ ಟಿವಿಯ ಪ್ರಮುಖ ಫೀಚರ್ಸ್ ಹಾಗೂ ಬೆಲೆ ಎಷ್ಟು ಅನ್ನೋದನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ನೋಕಿಯಾ 50 ಇಂಚಿನ 4K ಆಂಡ್ರಾಯ್ಡ್ ಸ್ಮಾರ್ಟ್ ಟಿವಿ ಡಿಸ್‌ಪ್ಲೇ ವಿವರ: ಈ ಸ್ಮಾರ್ಟ್‌ಟಿವಿ 50 ಇಂಚಿನ 4K ಅಲ್ಟ್ರಾ ಹೆಚ್‌ಡಿ ಡಿಸ್ಪ್ಲೇಯೊಂದಿಗೆ ಹೊಂದಿದ್ದು, ಇದು 3840 x 2160 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯ ಪಡೆದುಕೊಂಡಿದೆ. ಇದರೊಂದಿಗೆ HDR10 ಬೆಂಬಲ ಮತ್ತು ಡಾಲ್ಬಿ ವಿಷನ್ ಸೇರಿದಂತೆ ವಿವಿಧ ಡಿಸ್‌ಪ್ಲೇ ಫೀಚರ್ಸ್ ಪಡೆದಿದ್ದು, ಈ ಮೂಲಕ ಪ್ರೀಮಿಯಂ ಅನುಭವ ಪಡೆಯಬಹುದಾಗಿದೆ.
ನೋಕಿಯಾ 50 ಇಂಚಿನ 4K ಆಂಡ್ರಾಯ್ಡ್ ಸ್ಮಾರ್ಟ್ ಟಿವಿ ಪ್ರೊಸೆಸರ್ ಮಾಹಿತಿ: ಇನ್ನು ARM ಕಾರ್ಟೆಕ್ಸ್-CA55 ಕ್ವಾಡ್-ಕೋರ್ ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದ್ದು, ಮಾಲಿ 470 MP3 GPU ಗ್ರಾಫಿಕ್ಸ್ ಕಾರ್ಡ್ ಬೆಂಬಲದೊಂದಿಗೆ ಅತ್ಯುತ್ತಮವಾಗಿ ಕೆಲಸ ಮಾಡಲಿದೆ. ಅಂದರೆ ಈ ಟಿವಿಯಲ್ಲಿ ಯಾವುದೇ ಅಡೆ ತಡೆ ಇಲ್ಲದೆ ಆನ್‌ಲೈನ್ ಗೇಮ್ ಆಡಬಹುದಾಗಿದೆ. ಈ ಕಾರಣಕ್ಕೆ ಇದನ್ನು ಗೇಮಿಂಗ್ ಉದ್ದೇಶಕ್ಕೆ ವಿಶೇಷವಾಗಿ ತಯಾರು ಮಾಡಿದಂತೆ ಕಾಣುತ್ತದೆ.

ಇದರೊಂದಿಗೆ ಈ ಸ್ಮಾರ್ಟ್‌ಟಿವಿ 1GB RAM ಮತ್ತು 8GB ಇಂಟರ್ ಸ್ಟೋರೇಜ್ ಆಯ್ಕೆ ಪಡೆದಿದ್ದು, ಡಾಲ್ಬಿ ಡಿಜಿಟಲ್ ಪ್ಲಸ್ ಮತ್ತು TDS ಸೌಂಡ್ ಬೆಂಬಲದೊಂದಿಗೆ ಎರಡು 10 ವ್ಯಾಟ್ ಸ್ಪೀಕರ್ ಮೂಲಕ ಪ್ಯಾಕ್ ಆಗಿದೆ. ಪರಿಣಾಮ ಗೇಮಿಂಗ್‌ನಲ್ಲಿ ಅಥವಾ ಯಾವುದೇ ವಿಡಿಯೋ ವೀಕ್ಷಣೆಯಲ್ಲಿ ಸಿನಿಮಾ ಥಿಯೇಟರ್ ಅನುಭವವನ್ನು ಪಡೆದುಕೊಳ್ಳಬಹುದಾಗಿದೆ.
ಹಾಗೆಯೇ ಈ ಸ್ಮಾರ್ಟ್‌ಟಿವಿ ಆಂಡ್ರಾಯ್ಡ್ 9 ಆಪರೇಟಿಂಗ್ ಸಿಸ್ಟಮ್ ಅನ್ನು ರನ್ ಮಾಡಲಿದ್ದು, ಪರಿಣಾಮ ಇದರಲ್ಲಿ ನೀವು ಎಲ್ಲಾ ಆಪ್ ಗಳನ್ನು ಮನಬಂದಂತೆ ಬಳಕೆ ಮಾಡಬಹುದಾಗಿದೆ. ಉಳಿದಂತೆ ಈ ಟಿವಿ ಗೂಗಲ್ ಅಸಿಸ್ಟೆಂಟ್ ಮತ್ತು ಇನ್‌ಬಿಲ್ಟ್ ಕ್ರೋಮಾಕಾಸ್ಟ್ ಬೆಂಬಲ ಸೇರಿದಂತೆ ವಿವಿಧ ಸುಧಾರಿತ ಫೀಚರ್ಸ್ ಅನ್ನು ಈ ಸ್ಮಾರ್ಟ್‌ಟಿವಿ ಹೊಂದಿದೆ. ಹಾಗೆಯೇ ನೆಟ್‌ಫ್ಲಿಕ್ಸ್, ಪ್ರೈಮ್ ವಿಡಿಯೋ, ಡಿಸ್ನಿ+ ಮತ್ತು ಯೂಟ್ಯೂಬ್ ನಂತಹ ಜನಪ್ರಿಯ ಸ್ಟ್ರೀಮಿಂಗ್ ಸೇವೆಗಳನ್ನು ನೀಡುತ್ತದೆ.
ಇದಲ್ಲದೆ, ಗೂಗಲ್ ಪ್ಲೇ ಸ್ಟೋರ್‌ನಿಂದ 7000 ಕ್ಕೂ ಹೆಚ್ಚು ಆಪ್‌ಗಳನ್ನು ಈ ಸ್ಮಾರ್ಟ್‌ಟಿವಿಯಲ್ಲಿ ಬಳಕೆ ಮಾಡಬಹುದಾಗಿದೆ ಎಂದು ಕಂಪನಿ ಮಾಹಿತಿ ನೀಡಿದೆ. ಎಲ್ಲಕ್ಕಿಂತ ಮಿಗಿಲಾಗಿ ಈ ಸ್ಮಾರ್ಟ್‌ಟಿವಿ ವಿಶೇಷ ಸ್ಮಾರ್ಟ್ ರಿಮೋಟ್ ಆಯ್ಕೆ ಪಡೆದಿದ್ದು, OTD ಸೈಟ್‌ಗಳ ಶಾರ್ಟ್‌ಕಟ್ ಬಟನ್‌ಗಳನ್ನು ಇದರಲ್ಲಿ ಕಾಣಬಹುದಾಗಿದೆ, ಈ ಮೂಲಕ ಯಾವುದೇ ವಿಡಿಯೋಗಳಿಗೂ ಸುಲಭ ಎಂಟ್ರಿ ಪಡೆಯಬಹುದಾಗಿದೆ.
ಈ ವಿಶೇಷ ಆಂಡ್ರಾಯ್ಡ್ ಸ್ಮಾರ್ಟ್ ಟಿವಿಯು 4 ಹೆಚ್‌ಡಿಎಮ್‌ಐ ಪೋರ್ಟ್‌ಗಳು, 2 ಯುಎಸ್‌ಬಿ ಪೋರ್ಟ್‌ಗಳು, ಎಥರ್ನೆಟ್ LAN ಪೋರ್ಟ್, ಡ್ಯುಯಲ್-ಬ್ಯಾಂಡ್ ವೈ-ಫೈ, ಬ್ಲೂಟೂತ್ 4.2 ಸೇರಿದಂತೆ ವಿವಿಧ ಕನೆಕ್ಟಿವಿಟಿ ಬೆಂಬಲ ಪಡೆದಿದ್ದು, ಒಟ್ಟಾರೆಯಾಗಿ ಈ ಟಿವಿ 9 ಕೆ.ಜಿ. ತೂಕ ಹೊಂದಿದೆ. ಜೊತೆಗೆ ಈ ಸ್ಮಾರ್ಟ್‌ಟಿವಿ ಕಪ್ಪು ಬಣ್ಣದಲ್ಲಿ ಲಭ್ಯ ಇದೆ.

ನೋಕಿಯಾ 4K ಆಂಡ್ರಾಯ್ಡ್ ಸ್ಮಾರ್ಟ್ ಟಿವಿ ಬೆಲೆ ಹಾಗೂ ಲಭ್ಯತೆ : ಈ ಸ್ಮಾರ್ಟ್‌ಟಿವಿ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಮಾತ್ರ ಲಭ್ಯ ಇದ್ದು, ಇದಕ್ಕೆ $427 ಅನ್ನು ನಿಗದಿ ಮಾಡಲಾಗಿದೆ ಅಂದರೆ ಭಾರತದಲ್ಲಿ ಅಂದಾಜು 35,498 ರೂ.ಗಳು. ಭಾರತದಲ್ಲಿ ನೋಕಿಯಾ 50 ಇಂಚಿನ 4K ಆಂಡ್ರಾಯ್ಡ್ ಸ್ಮಾರ್ಟ್ ಟಿವಿಯನ್ನು ಬಿಡುಗಡೆ ಮಾಡುವ ಕುರಿತು ಈ ಟಿವಿಯನ್ನು ಅನಾವರಣ ಮಾಡಿರುವ ಸ್ಟ್ರೀಮ್‌ವ್ಯೂ ಯಾವುದೇ ಮಾಹಿತಿಯನ್ನು ಬಹಿರಂಗಪಡಿಸಿಲ್ಲ. ಅದಾಗ್ಯೂ ಕೆಲವೇ ದಿನಗಳಲ್ಲಿ ಇದು ಭಾರತದಲ್ಲೂ ಲಭ್ಯ ಇರಬಹುದು ಎಂದು ನಂಬಲಾಗಿದೆ.


Click it and Unblock the Notifications








