Home
ಸುದ್ದಿಜಾಲ

ಸದ್ಯದಲ್ಲೇ ಮತ್ತೆ ಎಂಟ್ರಿ ಕೊಡಲಿದೆ 'ನೋಕಿಯಾ 5310' ಫೋನ್!

ಮೊಬೈಲ್ ವಲಯದಲ್ಲಿ ಇಂದಿಗೂ ಎವರ್‌ಗ್ರೀನ್ ಸ್ಥಾನ ಪಡೆದಿರುವ ನೋಕಿಯಾ ಕಂಪನಿಯ ಕೆಲವು ಫೋನ್‌ಗಳು ಇಂದಿಗೂ ಡಿಮ್ಯಾಂಡ್ ಹೊಂದಿವೆ. ಆ ಪೈಕಿ ಜನಪ್ರಿಯ ನೋಕಿಯಾ ಎಕ್ಸ್‌ಪ್ರೆಸ್‌ ಮ್ಯೂಸಿಕ್ ಫೋನ್‌ ಈಗಾಗಲೆ ಕೆಲ ದೇಶಗಳಲ್ಲಿ ಅಪ್‌ಡೇಟ್ ಆವೃತ್ತಿಯಲ್ಲಿ ಪರಿಚಯಿಸಿದೆ. ಇದೀಗ ನೋಕಿಯಾ 5310 ಮಾಡೆಲ್ ಫೋನ್ ಹೊಸ ಅವತರಣಿಗೆಯಲ್ಲಿ ಭಾರತದಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ.

ಎಕ್ಸ್‌ಪ್ರೆಸ್‌ ಮ್ಯೂಸಿಕ್

ಹೌದು, ಮೊಬೈಲ್ ಮಾರುಕಟ್ಟೆಯಲ್ಲಿ ಭಾರಿ ಸದ್ದು ಮಾಡಿದ್ದ ನೋಕಿಯಾ ಸಂಸ್ಥೆಯ ನೋಕಿಯಾ ಎಕ್ಸ್‌ಪ್ರೆಸ್‌ ಮ್ಯೂಸಿಕ್ (5310) ಫೋನ್‌ ಅನ್ನು ಈಗ ಮತ್ತೆ ಹೊಸ ಆವೃತ್ತಿಯಲ್ಲಿ ಲಾಂಚ್ ಆಗಲಿದೆ ಎಂದು HMD ಗ್ಲೋಬಲ್ ನೋಕಿಯಾ ಟ್ವಿಟರ್‌ನಲ್ಲಿ ತಿಳಿಸಿದೆ. ಬ್ಲ್ಯಾಕ್ ಮತ್ತು ರೆಡ್ ಬಣ್ಣಗಳ ಸಮ್ಮಿಶ್ರದಲ್ಲಿದ ನೋಕಿಯಾ ಎಕ್ಸ್‌ಪ್ರೆಸ್‌ ಫೋನ್ ಮ್ಯೂಸಿಕ್ ಪ್ಲೇಗೆ ಅತ್ಯುತ್ತಮ ಪ್ಲಾಟ್‌ಫಾರ್ಮ್ ಒದಗಿಸಿತ್ತು. ನೋಕಿಯಾ ಎಕ್ಸ್‌ಪ್ರೆಸ್‌ ಮ್ಯೂಸಿಕ್ ಫೋನ್ ಈ ಬಾರಿಯೂ ಮ್ಯೂಸಿಕ್ ಪ್ರಿಯರನ್ನು ಸೆಳೆಯುವ ಲಕ್ಷಣಗಳಿವೆ.

ನೋಕಿಯಾ 5310

ಸಖತ್ ಹವಾ ಕ್ರಿಯೆಟ್ ಮಾಡಿದ್ದ ನೋಕಿಯಾ 5310 ಮಾಡೆಲ್‌ ಫೋನ್ ಡಿಸ್‌ಪ್ಲೇ ಪಕ್ಕದಲ್ಲಿಯೇ (ಸೈಡ್‌ ಮೌಂಟೆಡ್)ಆಡಿಯೊ ಪ್ಲೇ, ಫಾರ್ವರ್ಡ್ ಬಟನ್‌ಗಳ (ಮ್ಯೂಸಿಕ್ ಕಂಟ್ರೋಲ್) ರಚನೆಯನ್ನು ಹೊಂದಿತ್ತು. ಕೀ ಪ್ಯಾಡ್‌ ಮಾದರಿಯ ಬೇಸಿಕ್ ಹ್ಯಾಂಡ್‌ಸೆಟ್ ಆಗಿತ್ತು. ಆದರೆ ಹೊಸ ಆವೃತ್ತಿಯಲ್ಲಿ ಬಿಡುಗಡೆ ಆಗಲಿರುವ ನೋಕಿಯಾ 5130 ಮಾಡೆಲ್ ಸೈಡ್‌ ಮೌಂಟ್‌ ಮ್ಯೂಸಿಕ್ ಕಂಟ್ರೋಲ್ ಬಟನ್ ಹೊಂದಿರುವುದಿಲ್ಲ ಎಂದು ಹೇಳಲಾಗಿದೆ.

ಸಿಂಗಲ್ ಕೋರ್

ಬರಲಿರುವ ಹೊಸ ಫೋನ್ ನೋಕಿಯಾ 110 ಮಾದರಿಯಲ್ಲಿರುವಂತೆ ಇರಲಿದೆ ಆದರೆ KaiOS ಓಎಸ್‌ ಇರುವುದಿಲ್ಲ. ಸಿಂಗಲ್ ಕೋರ್ 0.36GHz ಪ್ರೊಸೆಸರ್ ಜೊತೆಗೆ ಉತ್ತಮ RAM ಹಾಗೂ 32GB ಆಂತರಿಕ ಸ್ಟೋರೇಜ್ ಸ್ಥಳಾವಕಾಶ ಇರುವ ಸಾಧ್ಯತೆಗಳಿವೆ. ಎಸ್‌ಡಿ ಕಾರ್ಡ್‌ ಮೂಲಕ ಬಾಹ್ಯ ಮೆಮೊರಿ ಹೆಚ್ಚಿಸಿಕೊಳ್ಳಲು ಅವಕಾಶ ಸಹ ಇರಲಿದೆ. ಎಂಪಿ 3 ಸೌಲಭ್ಯ ಸೇರಿದಂತೆ ಇತರೆ ಮಲ್ಟೀಮೀಡಿಯಾ ಆಯ್ಕೆಗಳನ್ನು ಒಳಗೊಂಡಿರಲಿದೆ.

ಸಿಂಗಲ್ ಕ್ಯಾಮೆರಾ

ಇನ್ನು ಈ ಫೋನ್ ಡಿಸ್‌ಪ್ಲೇಯು 2.4 ಆಗಿರಲಿದ್ದು, ಡಿಸ್‌ಪ್ಲೇಯು 240x320px ಪಿಕ್ಸಲ್ ರೆಸಲ್ಯೂಶನ್ ಪಡೆದಿರಲಿದೆ. ಹಾಗೆಯೇ 1,200mAh ಸಾಮರ್ಥ್ಯ ಬ್ಯಾಟರಿ ಬ್ಯಾಕ್‌ಅಪ್ ಅನ್ನು ಹೊಂದಿರಲಿದೆ. ಫೋನ್ ಹಿಂಬದಿಯಲ್ಲಿ 0.3ಎಂಪಿಯ ಸಿಂಗಲ್ ಕ್ಯಾಮೆರಾ ಇರಲಿದ್ದು, ವಿಡಿಯೊ ರೆಕಾರ್ಡಿಂಗ್ ಸಪೋರ್ಟ್ ಇಲ್ಲ. ಎಲ್‌ಇಡಿ ಫ್ಲ್ಯಾಶ್‌ ಲೈಟ್ ಸೌಲಭ್ಯ ಇರಲಿದೆ. ಈ ಫೋನ್ 13.1mm ದಪ್ಪವಾಗಿರಲಿದ್ದು, ಜೊತೆಗೆ 88ಗ್ರಾಂ ತೂಕವನ್ನು ಪಡೆದಿರಲಿದೆ.

Best Mobiles in India

English summary
Nokia 5310 runs on Series 30+ OS, offers 32GB expandable storage.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+