Home
ಸುದ್ದಿಜಾಲ

ಭಾರತದಲ್ಲಿ ನೋಕಿಯಾ 55 ಇಂಚಿನ ಸ್ಮಾರ್ಟ್‌ಟಿವಿ ಬಿಡುಗಡೆ!..ಬೆಲೆ ಎಷ್ಟು?

ಸದ್ಯ ದೇಶಿಯ ಮಾರುಕಟ್ಟೆಯಲ್ಲಿ ಸ್ಮಾರ್ಟ್‌ಟಿವಿಗಳ ಬೇಡಿಕೆ ಹೆಚ್ಚುತ್ತಲೇ ಇದ್ದು, ಅದರ ಪರಿಣಾಮವಾಗಿ ಜನಪ್ರಿಯ ಫೋನ್ ಕಂಪನಿಗಳು ಸಹ ಸ್ಮಾರ್ಟ್‌ಟಿವಿಗಳನ್ನು ಪರಿಚಯಿಸುವವ ಪರಂಪರೆ ಶುರುವಾಗಿದೆ. ಸ್ಮಾರ್ಟ್‌ಟಿವಿ ಮಾರುಕಟ್ಟೆಯಲ್ಲಿ ಸೋನಿ, ಸ್ಯಾಮ್‌ಸಂಗ್ ಈಗಾಗಲೇ ಅಬ್ಬರಿಸುತ್ತಿದ್ದು, ಆ ಲಿಸ್ಟ್‌ನಲ್ಲಿ ಇತ್ತೀಚಿಗೆ ಶಿಯೋಮಿ, ಒನ್‌ಪ್ಲಸ್‌ ಸ್ಮಾರ್ಟ್‌ಟಿವಿ ಸಂಸ್ಥೆಗಳು ಸೇರಿವೆ. ಆದ್ರೆ ಇದೀಗ ಎವರ್‌ಗ್ರೀನ್ ಮೊಬೈಲ್ ಬ್ರ್ಯಾಂಡ್‌ ನೋಕಿಯಾ ಸಹ 'ಸ್ಮಾರ್ಟ್‌ಟಿವಿ ಲಾಂಚ್ ಮಾಡಿ ಎಲ್ಲರು ಹುಬ್ಬೇರಿಸುವಂತೆ ಮಾಡಿದೆ.

ನೋಕಿಯಾ ಸಂಸ್ಥೆ

ಹೌದು, ಜನಪ್ರಿಯ ನೋಕಿಯಾ ಸಂಸ್ಥೆ ಇದೀಗ ಭಾರತೀಯ ಮಾರುಕಟ್ಟೆಗೆ ಹೊಸದಾಗಿ ಸ್ಮಾರ್ಟ್‌ಟಿವಿಯೊಂದನ್ನು ಬಿಡುಗಡೆ ಮಾಡಿದೆ. ಈ ಸ್ಮಾರ್ಟ್‌ಟಿವಿಯು 55 ಇಂಚಿನ ಡಿಸ್‌ಪ್ಲೇ ರಚನೆಯನ್ನು ಪಡೆದಿದ್ದು, 4K ಪ್ಯಾನೆಲ್ ಒಳಗೊಂಡಿದೆ. ಇನ್ನು ಈ ಸ್ಮಾರ್ಟ್‌ಟಿವಿಯು ಆಂಡ್ರಾಯ್ಡ್ 9 ಪೈ ಓಎಸ್‌ನ ಸಪೋರ್ಟ್ ಹೊಂದಿದ್ದು, ಕ್ವಾಡ್‌ ಕೋರ್ ಪ್ಯೂರ್‌ಎಕ್ಸ್‌ (PureX) ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಹಾಗೆಯೇ ನೋಕಿಯಾದ ಹೊಸ 55 ಇಂಚಿನ ಸ್ಮಾರ್ಟ್‌ಟಿವಿಯ ಇನ್ನಿತರೆ ಫೀಚರ್ಸ್‌ಗಳೆನು ಮತ್ತು ಬೆಲೆ ಎಷ್ಟು ಎನ್ನುವುದನ್ನು ಮುಂದೆ ತಿಳಿಯೋಣ ಬನ್ನಿರಿ.

ಡಿಸ್‌ಪ್ಲೇ ರಚನೆ

ಡಿಸ್‌ಪ್ಲೇ ರಚನೆ

ನೋಕಿಯಾದ ಈ ಹೊಸ ಸ್ಮಾರ್ಟ್‌ಟಿವಿಯು 55 ಇಂಚಿನ ರಚನೆಯಲ್ಲಿದ್ದು, ಅಲ್ಟ್ರಾ ಹೆಚ್‌ಡಿ ಡಿಸ್‌ಪ್ಲೇ ಮಾದರಿಯಲ್ಲಿದೆ. ಹಾಗೆಯೇ ಈ ಟಿವಿಯು ಡಿಸ್‌ಪ್ಲೇಯ ಸುತ್ತಲೂ ಅಂಚು ರಹಿತ ಡಿಸೈನ್‌ ಪಡೆದುಕೊಂಡಿದ್ದು, ಎಚ್‌ಡಿಆರ್‌ 10 ಬೆಂಬಲ್ ಸಹ ಒಳಗೊಂಡಿದೆ. ಟಿವಿ ಬಾಟಮ್‌ನಲ್ಲಿ ಸ್ಪೀಕರ್ಸ್‌ಗಳ ರಚನೆಯನ್ನು ಪಡೆದಿದೆ.

ಪ್ರೊಸೆಸರ್ ಮತ್ತು ಓಎಸ್‌

ಪ್ರೊಸೆಸರ್ ಮತ್ತು ಓಎಸ್‌

ನೋಕಿಯಾದ ಹೊಸ ಸ್ಮಾರ್ಟ್‌ಟಿವಿಯು ಕ್ವಾಡ್‌ ಕೋರ್ ಪ್ಯೂರ್‌ಎಕ್ಸ್‌ (PureX) ಪ್ರೊಸೆಸರ್‌ನಲ್ಲಿ ಕೆಲಸ ಮಾಡಲಿದ್ದು, ಅದಕ್ಕೆ ಪೂರಕವಾಗಿ ಆಂಡ್ರಾಯ್ಡ್‌ 9 ಪೈ ಓಎಸ್‌ ಬೆಂಬಲವನ್ನು ನೀಡಲಾಗಿದೆ. 2.25GB RAM ಸಾಮರ್ಥ್ಯದಲ್ಲಿದ್ದು, ಇಂಟೆಲಿಜೆಂಟ್ ಡಿಮ್ಮಿಂಗ್ (Dimming) ತಂತ್ರಜ್ಞಾನವನ್ನು ಈ ಟಿವಿಯು ಒಳಗೊಂಡಿದೆ.

ಸೌಂಡ್‌ ಮತ್ತು ವಿಶೇಷ ಫೀಚರ್ಸ್‌

ಸೌಂಡ್‌ ಮತ್ತು ವಿಶೇಷ ಫೀಚರ್ಸ್‌

ಈ ಸ್ಮಾರ್ಟ್‌ಟಿವಿಯು ಕ್ಲಿಯರ್‌ ವ್ಯೂವ್ ಮತ್ತು ಕ್ಲಿಯರ್ ಸೌಂಡ್‌ ತಂತ್ರಜ್ಞಾನ್‌ವನ್ನು ಹೊಂದಿದ್ದು, ಜೆಬಿಎಲ್‌ ಸೌಂಡ್‌ ಸಪೋರ್ಟ್‌ ಸಹ ಟಿವಿಯಲ್ಲಿದೆ. ಜೊತೆಗೆ ಡಾಲ್ಬಿ ಅಟೋಮ್, ಡಾಲ್ಬಿ ಡಿಜಿಟಲ್ ಮತ್ತು ಡಿಟಿಎಸ್‌ TruSurround ತಂತ್ರಜ್ಞಾನದ ಸೌಂಡ್‌ ಕ್ವಾಲಿಟಿ ಸೌಲಭ್ಯಗಳನ್ನು ಪಡೆದುಕೊಂಡಿದೆ. ಟಿವಿ ಬಾಟಮ್‌ನಲ್ಲಿ ಫೈರಿಂಗ್ ಸ್ಪೀಕರ್ಸ್‌ಗಳಿವೆ.

ಆಪ್ಸ್‌ ಮತ್ತು ವಾಯಿಸ್‌ ಕಂಟ್ರೋಲ್

ಆಪ್ಸ್‌ ಮತ್ತು ವಾಯಿಸ್‌ ಕಂಟ್ರೋಲ್

ನೋಕಿಯಾದ ಹೊಸ ಸ್ಮಾರ್ಟ್‌ಟಿವಿಯು ನೆಟ್‌ಫ್ಲಿಕ್ಸ್‌, ಯೂಟ್ಯೂಬ್ ಹಾಗೂ ಗೂಗಲ್ ಅಸಿಸ್ಟಂಟ್ ಸೌಲಭ್ಯಗಳನ್ನು ಹೊಂದಿದೆ. ಹಾಗೆಯೇ ಕ್ರೋಮ್‌ಕಾಸ್ಟ್‌ ಕನೆಕ್ಟ್ ಆಯ್ಕೆ ನೀಡಲಾಗದ್ದು, ಈ ಆಯ್ಕೆ ಮೂಲಕ ಸ್ಮಾರ್ಟ್‌ಫೋನ್‌ಗೆ ಸರಳವಾಗಿ ಕನೆಕ್ಟ್‌ ಮಾಡಬಹುದಾಗಿದೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ದೇಶಿಯ ಮಾರುಕಟ್ಟೆಗೆ ಎಂಟ್ರಿ ಆದ ನೋಕಿಯಾದ ಹೊಸ 55 ಇಂಚಿನ ಸ್ಮಾರ್ಟ್‌ಟಿವಿಯ ಬೆಲೆಯು 41,999ರೂ. ಆಗಿದೆ. ಇದೇ ಡಿಸೆಂಬರ್ 10 ರಂದು ಮೊದಲ ಸೇಲ್ ಆರಂಭವಾಗಲಿದ್ದು, ವಿಶೇಷ ರಿಯಾಯಿತಿ ಸಹ ಸಿಗಲಿದೆ. ಗ್ರಾಹಕರು ಇ-ಕಾಮರ್ಸ್‌ ತಾಣ ಫ್ಲಿಪ್‌ಕಾರ್ಟ್‌ ಮತ್ತು ನೋಕಿಯಾ ವೆಬ್‌ಸೈಟ್‌ನಲ್ಲಿ ಖರೀದಿಸಬಹುದಾಗಿದೆ.

Best Mobiles in India

English summary
Nokia Smart TV has been launched in India. This television will go on sale starting December 10 at 12:00PM. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+