ಬೆಲೆ ಇಳಿಕೆ ಕಂಡ 'ನೋಕಿಯಾ 6.1' ಸ್ಮಾರ್ಟ್‌ಫೋನ್!
ಜನಪ್ರಿಯ ನೋಕಿಯಾ ಕಂಪನಿಯು ವಿಂಡೊಸ್ ಬಿಟ್ಟು ಪ್ರಸ್ತುತ ಆಂಡ್ರಾಯ್ಡ್ ಫೋನ್‌ಗಳಿಂದ ಮಾರುಕಟ್ಟೆಯಲ್ಲಿ ಗುರುತಿಸಿಕೊಂಡಿದ್ದು, ಮಾರುಕಟ್ಟೆಗೆ ಈಗ ಹೊಸದಾಗಿ ನೋಕಿಯಾ 9.1 ಪ್ಯೂರ್‌ವ್ಯೂವ್ ಫ್ಲ್ಯಾಗ್‌ಶಿಪ್ ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡುವುದಕ್ಕೆ ತಯಾರಾಗಿದೆ. ಈ ನಡುವೆ ಕಂಪನಿಯು ಗ್ರಾಹಕರಿಗೆ ಭರ್ಜರಿ ಸಿಹಿಸುದ್ದಿ ನೀಡಿದ್ದು, ತನ್ನ ಜನಪ್ರಿಯ ನೋಕಿಯಾ 6.1 ಸ್ಮಾರ್ಟ್‌ಫೋನ್ ಬೆಲೆಯಲ್ಲಿ ಮತ್ತೆ ಇಳಿಕೆ ಮಾಡಿದೆ.

ಹೌದು, ನೋಕಿಯಾ ಸಂಸ್ಥೆಯು ಕಳೆದ ವರ್ಷ 'ನೋಕಿಯಾ 6.1' ಸ್ಮಾರ್ಟ್‌ಫೋನ್ ಅನ್ನು ಮಾರುಕಟ್ಟೆಗೆ ಪರಿಚಯಿಸಿದ್ದು, ಈ ಫೋನಿನ ಬೆಸ್ಟ್ ಫೀಚರ್ಸ್‌ಗಳು ಗ್ರಾಹಕರನ್ನು ಆಕರ್ಷಿಸಿವೆ. 3GB RAM ಮತ್ತು 32GB ಸ್ಟೋರೇಜ್ ಹಾಗೂ 4GB RAM ಮತ್ತು 64GB ಸ್ಟೋರೇಜ್ ಸ್ಥಳಾವಕಾಶದ ಎರಡು ವೇರಿಯಂಟ್ ಆಯ್ಕೆಗಳನ್ನು ಹೊಂದಿದ್ದು, ಅದ್ರಲ್ಲಿಗ 4GB RAM ವೇರಿಯಂಟ್ ಸ್ಮಾರ್ಟ್‌ಫೋನ್ ಬೆಲೆಯಲ್ಲಿ ಕಡಿತವಾಗಿದೆ.

ನೋಕಿಯಾ 6.1 ಸ್ಮಾರ್ಟ್‌ಫೋನ್ ಇ ಕಾಮರ್ಸ್ ಜಾಲತಾಣಗಳಾದ ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್ ಸೇರಿದಂತೆ ಕಂಪನಿಯ ಅಧಿಕೃತ ವೆಬ್‌ಸೈಟ್‌ನಲ್ಲಿಯೂ ಗ್ರಾಹಕರ ಖರೀದಿಗೆ ಲಭ್ಯವಿದ್ದು, ಬೆಲೆ ಇಳಿಕೆಯಿಂದ 4GB RAM + 64GB ವೇರಿಯಂಟ್ ಫೋನ್ ಈಗ 9,999,ರೂ.ಗಳಿಗೆ ದೊರೆಯಲಿದೆ. ಹಾಗಾದರೇ ನೋಕಿಯಾ 6.1 ಸ್ಮಾರ್ಟ್‌ಫೋನ್ ಫೀಚರ್ಸ್‌ಗಳೇನು ಎಂಬುದನ್ನು ಮುಂದೆ ನೋಡೋಣ ಬನ್ನಿರಿ.

ಡಿಸ್‌ಪ್ಲೇ ಮತ್ತು ಡಿಸೈನ್
ಅತ್ಯಾಕರ್ಷಕ ವಿನ್ಯಾಸದಲ್ಲಿ ಮಾರುಕಟ್ಟೆಗೆ ಎಂಟ್ರಿ ನೀಡಿರುವ ನೋಕಿಯಾ 6.1 ಪ್ಲಸ್ ಸ್ಮಾರ್ಟ್‌ಪೋನ್ 1920 x 1080 ಪಿಕ್ಸಲ್ ಸಾಮರ್ಥ್ಯದೊಂದಿಗೆ 5.5 ಇಂಚಿನ ಐಪಿಎಸ್ ಎಲ್‌ಸಿಡಿ ಫುಲ್ ಹೆಚ್‌ಡಿ ಡಿಸ್‌ಪ್ಲೇಯನ್ನು ಹೊಂದಿದೆ. ಡಿಸ್‌ಪ್ಲೇ ಅನುಪಾತವು 19: 9 ಆಕಾರ ಇದ್ದು, ಸ್ಕ್ರೀನ್ ರಕ್ಷಣೆಗೆ ಗೊರಿಲ್ಲಾ ಗ್ಲಾಸ್ 3 ಪಡೆದುಕೊಂಡಿದೆ. ಇದರ ಸುತ್ತಳತೆಯು 148.8 x 75.8 x 8.6mm ಆಗಿದೆ.

ಪ್ರೊಸೆಸರ್ ಮತ್ತು ಮೆಮೊರಿ
ನೋಕಿಯಾ 6.1 ಎರಡು ವೇರಿಯಂಟ್ ಆಯ್ಕೆಗಳನ್ನು ಹೊಂದಿದ್ದು, ಅವುಗಳು ಕ್ರಮವಾಗಿ 3GB RAM ಮತ್ತು 32GB ಸ್ಟೋರೇಜ್ ಹಾಗೂ 4GB RAM ಮತ್ತು 64GB ಸ್ಟೋರೇಜ್ ಸ್ಥಳಾವಕಾಶದ ಸಾಮರ್ಥ್ಯದಲ್ಲಿವೆ. ಕ್ವಾಲ್ಕಂ ಸ್ನ್ಯಾಪ್‌ಡ್ರಾಗನ್ 630 ಎಸ್‌ಒಸಿ ಪ್ರೊಸೆಸರ್ ಇದ್ದು, ಆಂಡ್ರಾಯ್ಡ್ 9 ಪೈ ಬೆಂಬಲ ಪಡೆದಿದೆ. ಎಸ್‌ಡಿ ಕಾರ್ಡ್ ಮೂಲಕ ಬಾಹ್ಯ ಮೆಮೊರಿಯನ್ನು 128GB ವರೆಗೂ ವಿಸ್ತರಿಸುವ ಅವಕಾಶವಿದೆ.

ಕ್ಯಾಮೆರಾ ವಿಶೇಷತೆ
ನೋಕಿಯಾ 6.1 ಸ್ಮಾರ್ಟ್‌ಪೋನ್ ಡ್ಯುಯಲ್ ರಿಯರ್ ಕ್ಯಾಮೆರಾಗಳನ್ನು ಹೊಂದಿದ್ದು, ಪ್ರಾಥಮಿಕ ಕ್ಯಾಮೆರಾವು 16 ಮೆಗಾಪಿಕ್ಸೆಲ್‌ನಲ್ಲಿದ್ದು, ಅಪಾರ್ಚರ್ f/2.0 ಆಗಿದೆ ಮತ್ತು ಡ್ಯುಯಲ್ ಟ್ಯೂನ್ ಫ್ಲ್ಯಾಶ್ ಇದೆ. ಹಾಗೂ ಸೆಕೆಂಡರಿ ಕ್ಯಾಮೆರಾವು 5 ಮೆಗಾಪಿಕ್ಸಲ್‌ನಲ್ಲಿದ್ದು, f/2.2 ಅಪಾರ್ಚರ್ ಹೊಂದಿದೆ. ಇನ್ನು ಸೆಲ್ಫಿಗಾಗಿ 8 ಮೆಗಾಪಿಕ್ಸೆಲ್ ಕ್ಯಾಮರಾವನ್ನು ಈ ಸ್ಮಾರ್ಟ್‌ಫೋನ್ ಒಳಗೊಂಡಿದೆ.

ಬ್ಯಾಟರಿ ಶಕ್ತಿ
ನೋಕಿಯಾ 6.1 ಸ್ಮಾರ್ಟ್‌ಪೋನ್ 3000 mAh ಸಾಮರ್ಥ್ಯದ ಬ್ಯಾಟರಿ ಶಕ್ತಿಯನ್ನು ಹೊಂದಿದ್ದು, ಇದರೊಂದಿಗೆ ಅತ್ಯುತ್ತಮ ಚಾರ್ಜರ್ ಒದಗಿಸಲಾಗಿದೆ. ಇನ್ನು ಯುಎಸ್‌ಬಿ ಟೈಪ್ ಸಿ ಪೋರ್ಟ್ ಮತ್ತು 3.5MM ಹೆಡ್‌ಪೋನ್ ಜಾಕ್ ಅನ್ನು ಸಹ ಈ ಸ್ಮಾರ್ಟ್‌ಫೋನ್ ಒಳಗೊಂಡಿದ್ದು, ನೋಕಿಯಾ OZO ಆಡಿಯೊ ಬೆಂಬಲದ ಎರಡು ಮೈಕ್ರೋಫೋನ್ ಸೌಲಭ್ಯವು ಸಹ ಇದೆ.

ಇತರೆ ಫೀಚರ್ಸ್‌ಗಳು
ನೋಕಿಯಾ 6.1 ಸ್ಮಾರ್ಟ್‌ಫೋನ್ ಆಂಬಿಯಂಟ್ ಲೈಟ್ ಸೆನ್ಸಾರ್, ಪ್ರೊಕ್ಸಿಮಿಟಿ ಸೆನ್ಸಾರ್, ಇ-ಕಂಪಾಸ್, ಫಿಂಗರ್‌ಪ್ರಿಂಟ್ ಸೆನ್ಸಾರ್, ಬ್ಲೂಟೂತ್, ವೈಫೈ ಕನೆಕ್ಟಿವಿಟಿ, ಅಕ್ಸೆಲೆರೊಮೀಟರ್, ಗೈರೊಸ್ಕೋಪ್ ಸೇರಿದಂತೆ ಜಿಪಿಎಸ್ ಸೌಲಭ್ಯದ ಆಯ್ಕೆಯನ್ನು ಸಹ ಹೊಂದಿದೆ. ಬ್ಲ್ಯಾಕ್ ಮತ್ತು ಕಾಪರ್, ವೈಟ್ ಮತ್ತು ಐರನ್ ಹಾಗೂ ಬ್ಲೂ ಮತ್ತು ಗೋಲ್ಡ್ ಬಣ್ಣಗಳ ಆಯ್ಕೆಯನ್ನು ಹೊಂದಿದೆ.


Click it and Unblock the Notifications








