Home
ಸುದ್ದಿಜಾಲ

ನೋಕಿಯಾ 6.2 ಮತ್ತು ನೋಕಿಯಾ 7.2 ಫೋನ್‌ಗಳ ಬೆಲೆಯಲ್ಲಿ ಭರ್ಜರಿ ಇಳಿಕೆ!

ಮೊಬೈಲ್ ಮಾರುಕಟ್ಟೆಯಲ್ಲಿ ಇವತ್ತಿಗೂ ಬ್ರ್ಯಾಂಡ್ ಉಳಿಸಿಕೊಂಡಿರುವ ನೋಕಿಯಾ ಸಂಸ್ಥೆಯು ಹಲವು ಆಂಡ್ರಾಯ್ಡ್‌ ಮಾದರಿಯ ಸ್ಮಾರ್ಟ್‌ಫೋನ್‌ಗಳನ್ನು ಈಗಾಗಲೇ ಪರಿಚಯಿಸಿದೆ. ಅವುಗಳಲ್ಲಿ ಇತ್ತೀಚಿಗಿನ ಕೆಲವು ಫೋನ್‌ಗಳು ಹೈ ಎಂಡ್‌ ಫೀಚರ್ಸ್‌ಗಳನ್ನು ಒಳಗೊಂಡಿವೆ. ನೋಕಿಯಾ 6.2 ಮತ್ತು ನೋಕಿಯಾ 7.2 ಸ್ಮಾರ್ಟ್‌ಫೋನ್‌ಗಳು ಸೇರಿವೆ. ಆದ್ರೆ ಇದೀಗ ಈ ಎರಡು ಸ್ಮಾರ್ಟ್‌ಫೋನ್‌ಗಳ ಬೆಲೆಯಲ್ಲಿ ಅಧಿಕ ಇಳಿಕೆ ಕಂಡುಬಂದಿದೆ.

ನೋಕಿಯಾ ಸಂಸ್ಥೆ

ಹೌದು, ನೋಕಿಯಾ ಸಂಸ್ಥೆಯ ಜನಪ್ರಿಯ ನೋಕಿಯಾ 6.2 ಮತ್ತು ನೋಕಿಯಾ 7.2 ಸ್ಮಾರ್ಟ್‌ಫೋನ್‌ ಇದೀಗ ಬೆಲೆಯಲ್ಲಿ ಮತ್ತೊಮ್ಮೆ ಭಾರಿ ಕಡಿತವಾಗಿದೆ. ತ್ರಿವಳಿ ಕ್ಯಾಮೆರಾ ಸೆಟ್‌ಅಪ್‌ ಫೀಚರ್ಸ್‌ ಸೇರಿದಂತೆ, ಅಧಿಕ ಬ್ಯಾಟರಿ, ವೇಗದ ಪ್ರೊಸೆಸರ್‌ ಫೀಚರ್ಸ್‌ಗಳನ್ನು ಒಳಗೊಂಡಿವೆ. ನೋಕಿಯಾ 6.2 ಆರಂಭಿಕ ವೇರಿಯಂಟ್ ಫೋನ್ 12,499ರೂ.ಗೆ ಸಿಗಲಿದೆ. ಇನ್ನು ನೋಕಿಯಾ 7.2 ಆರಂಭಿಕ ವೇರಿಯಂಟ್ ಸ್ಮಾರ್ಟ್‌ಫೋನ್ ಬೆಲೆಯು 15,999ರೂ. ಆಗಿದೆ. ಹಾಗಾದರೆ ಫೋನ್‌ಗಳ ಇತರೆ ಫೀಚರ್ಸ್‌ಗಳೆನು ಎನ್ನುವುದನ್ನು ಮುಂದೆ ತಿಳಿಯೋಣ.

ನೋಕಿಯಾ 6.2 ಡಿಸ್‌ಪ್ಲೇ

ನೋಕಿಯಾ 6.2 ಡಿಸ್‌ಪ್ಲೇ

ನೋಕಿಯಾ 6.2 ಸ್ಮಾರ್ಟ್‌ಫೋನ್ 6.3 ಇಂಚಿನ ಫೂರ್ಣ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇಯನ್ನು ಹೊಂದಿದ್ದು, 1080 x 2280 ಪಿಕ್ಸಲ್‌ ರೆಸಲ್ಯೂಶನ್‌ ಸಾಮರ್ಥ್ಯದೊಂದಿಗೆ ಸ್ಕ್ರೀನ್‌ 500nits ಬ್ರೈಟ್ನೆಸ್‌ ಪಡೆದಿದೆ. ಹಾಗೆಯೇ ಫೋನ್ ಸ್ಕ್ರೀನ್‌ ರಕ್ಷಣೆಗಾಗಿ ಗೊರಿಲ್ಲಾ ಗ್ಲಾಸ್‌ ನೀಡಲಾಗಿದ್ದು, ಡಿಸ್‌ಪ್ಲೇಯ ಪ್ರತಿ ಇಂಚಿನ ಸಾಂದ್ರತೆಯ ಅನುಪಾತವು 400 ppi ಆಗಿದೆ. ಹಾಗೆಯೇ 159.88x75.11x8.25mm ಸುತ್ತಳತೆಯನ್ನು ಪಡೆದಿದೆ.

ನೋಕಿಯಾ 6.2 ಪ್ರೊಸೆಸರ್‌

ನೋಕಿಯಾ 6.2 ಪ್ರೊಸೆಸರ್‌

ನೋಕಿಯಾ 6.2 ಸ್ಮಾರ್ಟ್‌ಫೋನ್ SDM636 ಸ್ನ್ಯಾಪ್‌ಡ್ರಾಗನ್ 636 ಪ್ರೊಸೆಸರ್ ಅನ್ನು ಒಳಗೊಂಡಿದ್ದು, ಆಂಡ್ರಾಯ್ಡ್‌ 9 ಪೈ ಓಎಸ್‌ನ ಬೆಂಬಲ ಪಡೆದಿದೆ. ಎರಡು ವೇರಿಯಂಟ್‌ ಆಯ್ಕೆಗಳನ್ನು ಹೊಂದಿದ್ದು, ಅವುಗಳು ಕ್ರಮವಾಗಿ 4GB RAM + 64GB ಸ್ಟೋರೇಜ್ ಮತ್ತು 6GB RAM + 64GB ಸ್ಟೋರೇಜ್ ಸಾಮರ್ಥ್ಯವನ್ನು ಹೊಂದಿವೆ.

ನೋಕಿಯಾ 6.2 ಕ್ಯಾಮೆರಾ

ನೋಕಿಯಾ 6.2 ಕ್ಯಾಮೆರಾ

ಈ ಸ್ಮಾರ್ಟ್‌ಫೋನ್ ತ್ರಿವಳಿ ರಿಯರ್ ಕ್ಯಾಮೆರಾ ಸೆಟ್‌ಅಪ್‌ ಅನ್ನು ಹೊಂದಿದ್ದು, ಮುಖ್ಯ ಕ್ಯಾಮೆರಾವು f/1.8 ಅಪರ್ಚರ್‌ನೊಂದಿಗೆ 16ಎಂಪಿ ಸೆನ್ಸಾರ್ ಪಡೆದಿದೆ. ಸೆಕೆಂಡರಿ ಕ್ಯಾಮೆರಾವು f/2.2 ಅಪರ್ಚರ್ ಜೊತೆಗೆ 8ಎಂಪಿ ಸೆನ್ಸಾರ್‌ನಲ್ಲಿದೆ ಇನ್ನು ತೃತಿಯ ಕ್ಯಾಮೆರಾವು ಡೆಪ್ತ್ ಸೆನ್ಸಾರ್ ಒಳಗೊಂಡಿದ್ದು, 5ಎಂಪಿ ಸೆನ್ಸಾರ್‌ ಸಾಮರ್ಥ್ಯವನ್ನು ಹೊಂದಿದೆ. ಸೆಲ್ಫಿ ಕ್ಯಾಮೆರಾವು 8ಎಂಪಿ ಸೆನ್ಸಾರ್‌ನಲ್ಲಿದೆ.

ನೋಕಿಯಾ 6.2 ಬ್ಯಾಟರಿ ಮತ್ತು ಇತರೆ ಫೀಚರ್ಸ್‌

ನೋಕಿಯಾ 6.2 ಬ್ಯಾಟರಿ ಮತ್ತು ಇತರೆ ಫೀಚರ್ಸ್‌

3,500 mAh ಸಾಮರ್ಥ್ಯದ ಬ್ಯಾಟರಿ ಶಕ್ತಿಯನ್ನು ಪಡೆದುಕೊಂಡಿರುವ ನೋಕಿಯಾ 6.2 ಸ್ಮಾರ್ಟ್‌ಫೋನ್ 10W ಚಾರ್ಜಿಂಗ್ ಸೌಲಭ್ಯವನ್ನು ಪಡೆದಿದೆ. ಇದರೊಂದಿಗೆ ಫಿಂಗರ್‌ಪ್ರಿಂಟ್ ಸೆನ್ಸಾರ್‌, ವೈಫೈ 802.11ac, ಬ್ಲೂಟೂತ್ 5.0, ಯುಎಸ್‌ಬಿ ಟೈಪ್ ಸಿ ಪೋರ್ಟ್, 4G LTE, ಜಿಪಿಎಸ್‌ ಕನೆಕ್ಟಿವಿಟಿ, ಆಡಿಯೊ ಜಾಕ್ ಸೌಲಭ್ಯಗಳನ್ನು ಸಹ ಒಳಗೊಂಡಿದೆ.

ನೋಕಿಯಾ 7.2 ಡಿಸ್‌ಪ್ಲೇ

ನೋಕಿಯಾ 7.2 ಡಿಸ್‌ಪ್ಲೇ

ನೋಕಿಯಾ 7.2 ಸ್ಮಾರ್ಟ್‌ಫೋನ್ 6.3 ಇಂಚಿನ ಫೂರ್ಣ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇಯನ್ನು ಹೊಂದಿದ್ದು, 1080 x 2280 ಪಿಕ್ಸಲ್‌ ರೆಸಲ್ಯೂಶನ್‌ ಸಾಮರ್ಥ್ಯ ಪಡೆದಿದೆ. ಹಾಗೆಯೇ ಫೋನ್ ಸ್ಕ್ರೀನ್‌ ರಕ್ಷಣೆಗಾಗಿ ಗೊರಿಲ್ಲಾ ಗ್ಲಾಸ್‌ ನೀಡಲಾಗಿದ್ದು, ಡಿಸ್‌ಪ್ಲೇಯ ಪ್ರತಿ ಇಂಚಿನ ಸಾಂದ್ರತೆಯ ಅನುಪಾತವು 400 ppi ಆಗಿದೆ. ಹಾಗೆಯೇ 159.92 x 75.15 x 8.25mm, ಸುತ್ತಳತೆಯನ್ನು ಪಡೆದಿದೆ.

ನೋಕಿಯಾ 7.2 ಪ್ರೊಸೆಸರ್‌

ನೋಕಿಯಾ 7.2 ಪ್ರೊಸೆಸರ್‌

ನೋಕಿಯಾ 7.2 ಸ್ಮಾರ್ಟ್‌ಫೋನ್ SDM6೦೦ ಸ್ನ್ಯಾಪ್‌ಡ್ರಾಗನ್ 600 ಪ್ರೊಸೆಸರ್ ಅನ್ನು ಒಳಗೊಂಡಿದ್ದು, ಆಂಡ್ರಾಯ್ಡ್‌ 9 ಪೈ ಓಎಸ್‌ನ ಬೆಂಬಲ ಪಡೆದಿದೆ. ಈ ಫೋನ್ ಎರಡು ವೇರಿಯಂಟ್ ಆಯ್ಕೆ ಹೊಂದಿದ್ದು, ಅವುಗಳು ಕ್ರಮವಾಗಿ 4GB RAM + 64GB ಹಾಗೂ 6GB RAM+64GB ಸ್ಟೋರೇಜ್ ಸಾಮರ್ಥ್ಯವನ್ನು ಹೊಂದಿವೆ. ಎಸ್‌ಡಿ ಕಾರ್ಡ್‌ ಮೂಲಕ ಬಾಹ್ಯ ಮೆಮೊರಿಯನ್ನು 512 GB ವರೆಗೂ ವಿಸ್ತರಿಸಬಹುದಾಗಿದೆ.

ನೋಕಿಯಾ 7.2 ಕ್ಯಾಮೆರಾ

ನೋಕಿಯಾ 7.2 ಕ್ಯಾಮೆರಾ

ನೋಕಿಯಾ 7.2 ಸ್ಮಾರ್ಟ್‌ಫೋನ್ ಸಹ ತ್ರಿವಳಿ ರಿಯರ್ ಕ್ಯಾಮೆರಾ ಸೆಟ್‌ಅಪ್‌ ಅನ್ನು ಹೊಂದಿದ್ದು, ಪ್ರಾಥಮಿಕ ಕ್ಯಾಮೆರಾವು f/1.8 ಅಪರ್ಚರ್‌ನೊಂದಿಗೆ 48ಎಂಪಿ ಸೆನ್ಸಾರ್ ಪಡೆದಿದೆ. ಸೆಕೆಂಡರಿ ಕ್ಯಾಮೆರಾವು f/2.2 ಅಪರ್ಚರ್ ಜೊತೆಗೆ 8ಎಂಪಿ ಸೆನ್ಸಾರ್‌ನಲ್ಲಿದೆ ಇನ್ನು ತೃತಿಯ ಕ್ಯಾಮೆರಾವು ಡೆಪ್ತ್ ಸೆನ್ಸಾರ್ ಒಳಗೊಂಡಿದ್ದು, 5ಎಂಪಿ ಸೆನ್ಸಾರ್‌ ಸಾಮರ್ಥ್ಯವನ್ನು ಹೊಂದಿದೆ. ಹಾಗೂ ಸೆಲ್ಫಿ ಕ್ಯಾಮೆರಾವು 20ಎಂಪಿ ಸೆನ್ಸಾರ್‌ನಲ್ಲಿದೆ.

ನೋಕಿಯಾ 7.2 ಬ್ಯಾಟರಿ ಮತ್ತು ಇತರೆ ಸೌಲಭ್ಯಗಳು

ನೋಕಿಯಾ 7.2 ಬ್ಯಾಟರಿ ಮತ್ತು ಇತರೆ ಸೌಲಭ್ಯಗಳು

ನೋಕಿಯಾ 7.2 ಸ್ಮಾರ್ಟ್‌ಫೋನ್ ಸಹ 3,500 mAh ಸಾಮರ್ಥ್ಯದ ಬ್ಯಾಟರಿ ಶಕ್ತಿಯನ್ನು ಪಡೆದುಕೊಂಡಿದ್ದು, 10W ಚಾರ್ಜಿಂಗ್ ಸೌಲಭ್ಯವನ್ನು ಪಡೆದಿದೆ. ಇದರೊಂದಿಗೆ ಫಿಂಗರ್‌ಪ್ರಿಂಟ್ ಸೆನ್ಸಾರ್‌, ವೈಫೈ 802.11ac, ಬ್ಲೂಟೂತ್ 5.0, ಯುಎಸ್‌ಬಿ ಟೈಪ್ ಸಿ ಪೋರ್ಟ್, 4G LTE, ಜಿಪಿಎಸ್‌ ಕನೆಕ್ಟಿವಿಟಿ, ಆಡಿಯೊ ಜಾಕ್ ಸೌಲಭ್ಯಗಳನ್ನು ಸಹ ಒಳಗೊಂಡಿದೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ನೋಕಿಯಾ 7.2 ಮತ್ತು ನೋಕಿಯಾ 6.2 ಮಿಡ್‌ರೇಂಜ್ ಫೋನ್‌ಗಳು ಇದೀಗ ಬೆಲೆ ಇಳಿಕೆ ಕಂಡು ಬಜೆಟ್ ಬೆಲೆಯ ಫೋನ್‌ಗಳಾಗಿವೆ. 4GB + 64GB ವೇರಿಯಂಟ್‌ನ ನೋಕಿಯಾ 7.2 ಬೆಲೆಯು 15,499 ರೂ ಆಗಿದ್ದು, 4GB + 64GB ವೇರಿಯಂಟ್‌ ಬೆಲೆಯು 17,099ರೂ. ಆಗಿದೆ. ಹಾಗೆಯೇ ನೋಕಿಯಾ 6.2 ಫೋನಿನ 4GB + 64GB ವೇರಿಯಂಟ್‌ ಬೆಲೆಯು 12,499ರೂ. ಆಗಿದೆ. ಪ್ರಮುಖ ಇ-ಕಾಮರ್ಸ್‌ ತಾಣಗಳಲ್ಲಿ ಮತ್ತು ಅಧಿಕೃತ ನೋಕಿಯಾ ವೆಬ್‌ಸೈಟ್‌ನಲ್ಲಿ ಖರೀದಿಗೆ ಲಭ್ಯ.

Best Mobiles in India

English summary
Nokia is offering the Nokia 6.2 phone for Rs 12,449, which is for the 4GB RAM and 64GB storage variant. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+