'ನೋಕಿಯಾ 6.2' ಮತ್ತು 'ನೋಕಿಯಾ 7.2' ಲಾಂಚ್!..ಬೆಲೆ?
ಪ್ರಸ್ತುತ ಬರ್ಲಿನ್‌ನಲ್ಲಿ ನಡೆಯುತ್ತಿರುವ IFA-2019 ಟೆಕ್ ಕಾರ್ಯಕ್ರಮದಲ್ಲಿ ಜನಪ್ರಿಯ ನೋಕಿಯಾ ಎಚ್‌ಎಮ್‌ಡಿ ಗ್ಲೋಬಲ್ ತನ್ನ ಬಹುನಿರೀಕ್ಷಿತ 'ನೋಕಿಯಾ 7.2 'ಮತ್ತು 'ನೋಕಿಯಾ 6.2' ಸ್ಮಾರ್ಟ್‌ಫೋನ್‌ಗಳನ್ನು ಲಾಂಚ್ ಮಾಡಿದೆ. ಈ ಸ್ಮಾರ್ಟ್‌ಫೋನ್‌ಗಳು ಆಂಡ್ರಾಯ್ಡ್ 10 ರೆಡಿ ಓಎಸ್ ಜೊತೆಗೆ ಅತ್ಯುತ್ತಮ ಫೀಚರ್ಸ್‌ಗಳನ್ನು ಒಳಗೊಂಡಿದ್ದು, ಮಿಡ್‌ರೇಂಜ್ ಪ್ರೈಸ್‌ಟ್ಯಾಗ್‌ನಲ್ಲಿ ಗುರುತಿಸಿಕೊಂಡಿರುವುದು ಗ್ರಾಹಕರನ್ನು ಆಕರ್ಷಿಸಿದೆ.

ಹೌದು, ನೋಕಿಯಾ ಸಂಸ್ಥೆಯ 'ನೋಕಿಯಾ 7.2 'ಮತ್ತು 'ನೋಕಿಯಾ 6.2' ಈ ಎರಡು ಸ್ಮಾರ್ಟ್‌ಫೋನ್‌ಗಳ ಹಿಂಬದಿಯ ತ್ರಿವಳಿ ಕ್ಯಾಮೆರಾ ಹೊಂದಿದ್ದು, ಕ್ಯಾಮೆರಾಗಳನ್ನು ವೃತ್ತಾಕಾರದ ಮಾದರಿಯಲ್ಲಿ ಸೆಟ್‌ಅಪ್ ಮಾಡಲಾಗಿದೆ. ಆಂಡ್ರಾಯ್ಡ್ 10 ಓಎಸ್‌ಗೆ ಅಪ್‌ಡೇಟ್ ಆಗುವ ಅವಕಾಶವನ್ನು ಒಳಗೊಂಡಿವೆ. ಹಾಗಾದರೇ 'ನೋಕಿಯಾ 7.2 'ಮತ್ತು 'ನೋಕಿಯಾ 6.2' ಸ್ಮಾರ್ಟ್‌ಫೋನ್‌ಗಳು ಯಾವೆಲ್ಲಾ ಫೀಚರ್ಸ್‌ಗಳನ್ನು ಹೊಂದಿದೆ ಮತ್ತು ಬೆಲೆ ಎಷ್ಟು ಎಂಬುದನ್ನು ತಿಳಿಯಲು ಮುಂದೆ ಓದಿರಿ.

ನೋಕಿಯಾ 6.2 ಸ್ಮಾರ್ಟ್‌ಫೋನ್ 6.3 ಇಂಚಿನ ಫೂರ್ಣ ಹೆಚ್‌ಡಿ ಪ್ಲಸ್ ಡಿಸ್‌ಪ್ಲೇಯನ್ನು ಹೊಂದಿದ್ದು, 1080 x 2280 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯದೊಂದಿಗೆ ಸ್ಕ್ರೀನ್ 500nits ಬ್ರೈಟ್ನೆಸ್ ಪಡೆದಿದೆ. ಹಾಗೆಯೇ ಫೋನ್ ಸ್ಕ್ರೀನ್ ರಕ್ಷಣೆಗಾಗಿ ಗೊರಿಲ್ಲಾ ಗ್ಲಾಸ್ ನೀಡಲಾಗಿದ್ದು, ಡಿಸ್‌ಪ್ಲೇಯ ಪ್ರತಿ ಇಂಚಿನ ಸಾಂದ್ರತೆಯ ಅನುಪಾತವು 400 ppi ಆಗಿದೆ. ಹಾಗೆಯೇ 159.88x75.11x8.25mm ಸುತ್ತಳತೆಯನ್ನು ಪಡೆದಿದೆ.

ನೋಕಿಯಾ 6.2 ಸ್ಮಾರ್ಟ್‌ಫೋನ್ SDM636 ಸ್ನ್ಯಾಪ್‌ಡ್ರಾಗನ್ 636 ಪ್ರೊಸೆಸರ್ ಅನ್ನು ಒಳಗೊಂಡಿದ್ದು, ಆಂಡ್ರಾಯ್ಡ್ 9 ಪೈ ಓಎಸ್‌ನ ಬೆಂಬಲ ಪಡೆದಿದೆ. ಮೂರು ವೇರಿಯಂಟ್ ಆಯ್ಕೆಗಳನ್ನು ಹೊಂದಿದ್ದು, ಅವುಗಳು ಕ್ರಮವಾಗಿ 3GB RAM+32GB ಸ್ಟೋರೇಜ್, 4GB RAM+64GB ಸ್ಟೋರೇಜ್ ಮತ್ತು 4GB RAM+128GB ಸ್ಟೋರೇಜ್ ಸಾಮರ್ಥ್ಯವನ್ನು ಹೊಂದಿವೆ.

ಈ ಸ್ಮಾರ್ಟ್‌ಫೋನ್ ತ್ರಿವಳಿ ರಿಯರ್ ಕ್ಯಾಮೆರಾ ಸೆಟ್‌ಅಪ್ ಅನ್ನು ಹೊಂದಿದ್ದು, ಮುಖ್ಯ ಕ್ಯಾಮೆರಾವು f/1.8 ಅಪರ್ಚರ್‌ನೊಂದಿಗೆ 16ಎಂಪಿ ಸೆನ್ಸಾರ್ ಪಡೆದಿದೆ. ಸೆಕೆಂಡರಿ ಕ್ಯಾಮೆರಾವು f/2.2 ಅಪರ್ಚರ್ ಜೊತೆಗೆ 8ಎಂಪಿ ಸೆನ್ಸಾರ್‌ನಲ್ಲಿದೆ ಇನ್ನು ತೃತಿಯ ಕ್ಯಾಮೆರಾವು ಡೆಪ್ತ್ ಸೆನ್ಸಾರ್ ಒಳಗೊಂಡಿದ್ದು, 5ಎಂಪಿ ಸೆನ್ಸಾರ್ ಸಾಮರ್ಥ್ಯವನ್ನು ಹೊಂದಿದೆ. ಸೆಲ್ಫಿ ಕ್ಯಾಮೆರಾವು 8ಎಂಪಿ ಸೆನ್ಸಾರ್‌ನಲ್ಲಿದೆ.

3,500 mAh ಸಾಮರ್ಥ್ಯದ ಬ್ಯಾಟರಿ ಶಕ್ತಿಯನ್ನು ಪಡೆದುಕೊಂಡಿರುವ ನೋಕಿಯಾ 6.2 ಸ್ಮಾರ್ಟ್‌ಫೋನ್ 10W ಚಾರ್ಜಿಂಗ್ ಸೌಲಭ್ಯವನ್ನು ಪಡೆದಿದೆ. ಇದರೊಂದಿಗೆ ಫಿಂಗರ್‌ಪ್ರಿಂಟ್ ಸೆನ್ಸಾರ್, ವೈಫೈ 802.11ac, ಬ್ಲೂಟೂತ್ 5.0, ಯುಎಸ್‌ಬಿ ಟೈಪ್ ಸಿ ಪೋರ್ಟ್, 4G LTE, ಜಿಪಿಎಸ್ ಕನೆಕ್ಟಿವಿಟಿ, ಆಡಿಯೊ ಜಾಕ್ ಸೌಲಭ್ಯಗಳನ್ನು ಸಹ ಒಳಗೊಂಡಿದೆ.

ನೋಕಿಯಾ 7.2 ಸ್ಮಾರ್ಟ್‌ಫೋನ್ 6.3 ಇಂಚಿನ ಫೂರ್ಣ ಹೆಚ್‌ಡಿ ಪ್ಲಸ್ ಡಿಸ್‌ಪ್ಲೇಯನ್ನು ಹೊಂದಿದ್ದು, 1080 x 2280 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯ ಪಡೆದಿದೆ. ಹಾಗೆಯೇ ಫೋನ್ ಸ್ಕ್ರೀನ್ ರಕ್ಷಣೆಗಾಗಿ ಗೊರಿಲ್ಲಾ ಗ್ಲಾಸ್ ನೀಡಲಾಗಿದ್ದು, ಡಿಸ್‌ಪ್ಲೇಯ ಪ್ರತಿ ಇಂಚಿನ ಸಾಂದ್ರತೆಯ ಅನುಪಾತವು 400 ppi ಆಗಿದೆ. ಹಾಗೆಯೇ 159.92 x 75.15 x 8.25mm, ಸುತ್ತಳತೆಯನ್ನು ಪಡೆದಿದೆ.

ನೋಕಿಯಾ 7.2 ಸ್ಮಾರ್ಟ್‌ಫೋನ್ SDM6೦೦ ಸ್ನ್ಯಾಪ್‌ಡ್ರಾಗನ್ 600 ಪ್ರೊಸೆಸರ್ ಅನ್ನು ಒಳಗೊಂಡಿದ್ದು, ಆಂಡ್ರಾಯ್ಡ್ 9 ಪೈ ಓಎಸ್‌ನ ಬೆಂಬಲ ಪಡೆದಿದೆ. ಎರಡು ವೇರಿಯಂಟ್ ಆಯ್ಕೆಗಳನ್ನು ಹೊಂದಿದ್ದು, ಅವುಗಳು ಕ್ರಮವಾಗಿ 4GB RAM+64GB ಸ್ಟೋರೇಜ್ ಮತ್ತು 6GB RAM+128GB ಸ್ಟೋರೇಜ್ ಸಾಮರ್ಥ್ಯವನ್ನು ಹೊಂದಿವೆ. ಎಸ್‌ಡಿ ಕಾರ್ಡ್ ಮೂಲಕ ಬಾಹ್ಯ ಮೆಮೊರಿಯನ್ನು 512 GB ವರೆಗೂ ವಿಸ್ತರಿಸಬಹುದಾಗಿದೆ.

ನೋಕಿಯಾ 7.2 ಸ್ಮಾರ್ಟ್‌ಫೋನ್ ಸಹ ತ್ರಿವಳಿ ರಿಯರ್ ಕ್ಯಾಮೆರಾ ಸೆಟ್‌ಅಪ್ ಅನ್ನು ಹೊಂದಿದ್ದು, ಪ್ರಾಥಮಿಕ ಕ್ಯಾಮೆರಾವು f/1.8 ಅಪರ್ಚರ್‌ನೊಂದಿಗೆ 48ಎಂಪಿ ಸೆನ್ಸಾರ್ ಪಡೆದಿದೆ. ಸೆಕೆಂಡರಿ ಕ್ಯಾಮೆರಾವು f/2.2 ಅಪರ್ಚರ್ ಜೊತೆಗೆ 8ಎಂಪಿ ಸೆನ್ಸಾರ್‌ನಲ್ಲಿದೆ ಇನ್ನು ತೃತಿಯ ಕ್ಯಾಮೆರಾವು ಡೆಪ್ತ್ ಸೆನ್ಸಾರ್ ಒಳಗೊಂಡಿದ್ದು, 5ಎಂಪಿ ಸೆನ್ಸಾರ್ ಸಾಮರ್ಥ್ಯವನ್ನು ಹೊಂದಿದೆ. ಹಾಗೂ ಸೆಲ್ಫಿ ಕ್ಯಾಮೆರಾವು 20ಎಂಪಿ ಸೆನ್ಸಾರ್‌ನಲ್ಲಿದೆ.

ನೋಕಿಯಾ 7.2 ಸ್ಮಾರ್ಟ್‌ಫೋನ್ ಸಹ 3,500 mAh ಸಾಮರ್ಥ್ಯದ ಬ್ಯಾಟರಿ ಶಕ್ತಿಯನ್ನು ಪಡೆದುಕೊಂಡಿದ್ದು, 10W ಚಾರ್ಜಿಂಗ್ ಸೌಲಭ್ಯವನ್ನು ಪಡೆದಿದೆ. ಇದರೊಂದಿಗೆ ಫಿಂಗರ್‌ಪ್ರಿಂಟ್ ಸೆನ್ಸಾರ್, ವೈಫೈ 802.11ac, ಬ್ಲೂಟೂತ್ 5.0, ಯುಎಸ್‌ಬಿ ಟೈಪ್ ಸಿ ಪೋರ್ಟ್, 4G LTE, ಜಿಪಿಎಸ್ ಕನೆಕ್ಟಿವಿಟಿ, ಆಡಿಯೊ ಜಾಕ್ ಸೌಲಭ್ಯಗಳನ್ನು ಸಹ ಒಳಗೊಂಡಿದೆ.

ನೋಕಿಯಾ 7.2 ಮತ್ತು ನೋಕಿಯಾ 6.2 ಮಿಡ್‌ರೇಂಜ್ ಮಾದರಿಯಲ್ಲಿ ಗುರುತಿಸಿಕೊಂಡಿದ್ದು, ಅವುಗಳಲ್ಲಿ ನೋಕಿಯಾ 7.2 ಬೆಲೆಯು 300 EUR(ಅಂದಾಜು 23,800ರೂ) ಆಗಿದ್ದು, ಹಾಗೆಯೇ 200 EUR(ಅಂದಾಜು 15,900ರೂ) ಆಗಿದೆ. ಇನ್ನು ಸೆಪ್ಟೆಂಬರ್ ಅಂತ್ಯದೊಳಗೆ ಈ ಎರಡು ಸ್ಮಾರ್ಟ್‌ಫೋನ್‌ಗಳು ಸೇಲ್ ಆರಂಭಿಸಲಿವೆ ಎಂದು ಹೇಳಲಾಗಿದೆ.


Click it and Unblock the Notifications