Home
ಸುದ್ದಿಜಾಲ

ಜನಪ್ರಿಯ 'ನೋಕಿಯಾ 6.2' ಸ್ಮಾರ್ಟ್‌ಫೋನ್ ಬೆಲೆ ಈಗ ಅಗ್ಗ!

ಜನಪ್ರಿಯ ನೋಕಿಯಾ ಕಂಪನಿಯ ಇತ್ತೀಚಿಗೆ ಬಿಡುಗಡೆ ಮಾಡಿರುವ 'ನೋಕಿಯಾ 6.2' ಸ್ಮಾರ್ಟ್‌ಫೋನ್ ಇದೀಗ ಭರ್ಜರಿ ಬೆಲೆ ಕಡಿತ ಕಂಡಿದೆ. ಈ ಸ್ಮಾರ್ಟ್‌ಫೋನ್ ಸ್ನ್ಯಾಪ್‌ಡ್ರಾಗನ್ 636 ಪ್ರೊಸೆಸರ್‌, ಮೂರು ಕ್ಯಾಮೆರಾ ಸೆಟ್‌ಅಪ್‌ ಪ್ರಮುಖ ಫೀಚರ್ಸ್‌ಗಳಿಂದ ಗ್ರಾಹಕರ ಗಮನ ಸೆಳೆದಿದೆ. ಸಿರಾಮಿಕ್ ಬ್ಲ್ಯಾಕ್‌ ಮತ್ತು ಐಸ್‌ ಬಣ್ಣದ ಆಯ್ಕೆಗಳಲ್ಲಿ ಸಿಗಲಿದ್ದು, ಆರಂಭಿಕ ವೇರಿಯಂಟ್‌ 14,325ರೂ.ಗಳಿಗೆ ಲಭ್ಯ ಇದೆ.

ನೋಕಿಯಾ

ಹೌದು, ನೋಕಿಯಾ ಸಂಸ್ಥೆಯು ತನ್ನ ಜನಪ್ರಿಯ ನೋಕಿಯಾ 6.2' ಸ್ಮಾರ್ಟ್‌ಫೋನ್‌ ಬೆಲೆಯಲ್ಲಿ 1674ರೂ.ಗಳನ್ನು ಇಳಿಕೆ ಮಾಡಿದೆ. ಆಂಡ್ರಾಯ್ಡ್‌ 9 ಪೈ ಓಎಸ್‌ ಸಾಮರ್ಥ್ಯವನ್ನು ಒಳಗೊಂಡಿರುವ ಈ ಫೋನ್ ವೃತ್ತಾಕಾರ ಮಾದರಿಯ ಮೂರು ಕ್ಯಾಮೆರಾ ಸೆಟ್‌ಅಪ್ ಒಳಗೊಂಡಿದೆ. ಹಾಗಾದರೇ 'ನೋಕಿಯಾ 6.2' ಸ್ಮಾರ್ಟ್‌ಫೋನ್‌ ಇತರೆ ಯಾವೆಲ್ಲಾ ಫೀಚರ್ಸ್‌ಗಳನ್ನು ಹೊಂದಿದೆ ಎಂಬುದನ್ನು ತಿಳಿಯಲು ಮುಂದೆ ಓದಿರಿ.

ನೋಕಿಯಾ 6.2 ಡಿಸ್‌ಪ್ಲೇ

ನೋಕಿಯಾ 6.2 ಡಿಸ್‌ಪ್ಲೇ

'ನೋಕಿಯಾ 6.2' ಸ್ಮಾರ್ಟ್‌ಫೋನ್ 6.3 ಇಂಚಿನ ಫೂರ್ಣ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇಯನ್ನು ಹೊಂದಿದ್ದು, 1080 x 2280 ಪಿಕ್ಸಲ್‌ ರೆಸಲ್ಯೂಶನ್‌ ಸಾಮರ್ಥ್ಯದೊಂದಿಗೆ ಸ್ಕ್ರೀನ್‌ 500nits ಬ್ರೈಟ್ನೆಸ್‌ ಪಡೆದಿದೆ. ಹಾಗೆಯೇ ಫೋನ್ ಸ್ಕ್ರೀನ್‌ ರಕ್ಷಣೆಗಾಗಿ ಗೊರಿಲ್ಲಾ ಗ್ಲಾಸ್‌ ನೀಡಲಾಗಿದ್ದು, ಡಿಸ್‌ಪ್ಲೇಯ ಪ್ರತಿ ಇಂಚಿನ ಸಾಂದ್ರತೆಯ ಅನುಪಾತವು 400 ppi ಆಗಿದೆ. ಹಾಗೆಯೇ 159.88x75.11x8.25mm ಸುತ್ತಳತೆಯನ್ನು ಪಡೆದಿದೆ.

ನೋಕಿಯಾ 6.2 ಪ್ರೊಸೆಸರ್‌

ನೋಕಿಯಾ 6.2 ಪ್ರೊಸೆಸರ್‌

'ನೋಕಿಯಾ 6.2' ಸ್ಮಾರ್ಟ್‌ಫೋನ್ SDM636 ಸ್ನ್ಯಾಪ್‌ಡ್ರಾಗನ್ 636 ಪ್ರೊಸೆಸರ್ ಅನ್ನು ಒಳಗೊಂಡಿದ್ದು, ಆಂಡ್ರಾಯ್ಡ್‌ 9 ಪೈ ಓಎಸ್‌ ಇದ್ದು, ಈ ವರ್ಷದ ಅಂತ್ಯದ ವೇಳೆಗೆ ಆಂಡ್ರಾಯ್ಡ್‌ 10 ಓಎಸ್‌ ಅಪ್‌ಡೇಟ್‌ ಆಗಲಿದೆ. ಈ ಸ್ಮಾರ್ಟ್‌ಫೋನ್ 3GB RAM + 32GB ಹಾಗೂ 4GB RAM ಮತ್ತು 64GB ಆಂತರಿಕ ಸ್ಟೋರೇಜ್‌ ಸಾಮರ್ಥ್ಯವನ್ನು ಪಡೆದಿದ್ದು, ಎಸ್‌ಡಿ ಕಾರ್ಡ್‌ ಮೂಲಕ ಬಾಹ್ಯವಾಗಿ 512GB ವಿಸ್ತರಿಸುವ ಅವಕಾಶವನ್ನು ಪಡೆದಿದೆ.

ನೋಕಿಯಾ 6.2 ಕ್ಯಾಮೆರಾ

ನೋಕಿಯಾ 6.2 ಕ್ಯಾಮೆರಾ

ನೋಕಿಯಾ 6.2 ಸ್ಮಾರ್ಟ್‌ಫೋನ್ ತ್ರಿವಳಿ ರಿಯರ್ ಕ್ಯಾಮೆರಾ ಸೆಟ್‌ಅಪ್‌ ಅನ್ನು ಹೊಂದಿದ್ದು, ಮುಖ್ಯ ಕ್ಯಾಮೆರಾವು f/1.8 ಅಪರ್ಚರ್‌ನೊಂದಿಗೆ 16ಎಂಪಿ ಸೆನ್ಸಾರ್ ಪಡೆದಿದೆ. ಸೆಕೆಂಡರಿ ಕ್ಯಾಮೆರಾವು f/2.2 ಅಪರ್ಚರ್ ಜೊತೆಗೆ 8ಎಂಪಿ ಸೆನ್ಸಾರ್‌ನಲ್ಲಿದೆ ಇನ್ನು ತೃತಿಯ ಕ್ಯಾಮೆರಾವು ಡೆಪ್ತ್ ಸೆನ್ಸಾರ್ ಒಳಗೊಂಡಿದ್ದು, 5ಎಂಪಿ ಸೆನ್ಸಾರ್‌ ಸಾಮರ್ಥ್ಯವನ್ನು ಹೊಂದಿದೆ. ಸೆಲ್ಫಿ ಕ್ಯಾಮೆರಾವು 8ಎಂಪಿ ಸೆನ್ಸಾರ್‌ನಲ್ಲಿದೆ.

ನೋಕಿಯಾ 6.2 ಬ್ಯಾಟರಿ

ನೋಕಿಯಾ 6.2 ಬ್ಯಾಟರಿ

ನೋಕಿಯಾ 6.2 ಸ್ಮಾರ್ಟ್‌ಫೋನ್ 3,500 mAh ಸಾಮರ್ಥ್ಯದ ಬ್ಯಾಟರಿ ಶಕ್ತಿಯನ್ನು ಪಡೆದುಕೊಂಡಿರುವ ನೋಕಿಯಾ 6.2 ಸ್ಮಾರ್ಟ್‌ಫೋನ್ 10W ಚಾರ್ಜಿಂಗ್ ಸೌಲಭ್ಯವನ್ನು ಪಡೆದಿದೆ. ಇದರೊಂದಿಗೆ ಫಿಂಗರ್‌ಪ್ರಿಂಟ್ ಸೆನ್ಸಾರ್‌, ವೈಫೈ 802.11ac, ಬ್ಲೂಟೂತ್ 5.0, ಯುಎಸ್‌ಬಿ ಟೈಪ್ ಸಿ ಪೋರ್ಟ್, 4G LTE, ಜಿಪಿಎಸ್‌ ಕನೆಕ್ಟಿವಿಟಿ, ಆಡಿಯೊ ಜಾಕ್ ಸೌಲಭ್ಯಗಳನ್ನು ಸಹ ಒಳಗೊಂಡಿದೆ.

ನೋಕಿಯಾ 6.2 ಬೆಲೆ

ನೋಕಿಯಾ 6.2 ಬೆಲೆ

ನೋಕಿಯಾ 6.2 ಸ್ಮಾರ್ಟ್‌ಫೋನ್ 3GB RAM + 32GB ವೇರಿಯಂಟ್ ಬೆಲೆಯು 14,325ರೂ.ಗಳಾಗಿಗೆ ಸಿಗಲಿದೆ. ಅಮೆಜಾನ್ ತಾಣದಲ್ಲಿ ಗ್ರಾಹಕರ ಖರೀದಿಗೆ ಲಭ್ಯ. ಹಾಗೆಯೇ 4GB RAM ಮತ್ತು 64GB ಸ್ಟೋರೇಜ್ ವೇರಿಯಂಟ್‌ ಆಯ್ಕೆಯನ್ನು ಪಡೆದಿದೆ.

Best Mobiles in India

English summary
Nokia 6.2 has received a price cut of Rs 1674 and it now retails at Rs 14,325 on Amazon India. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+