Home
ಸುದ್ದಿಜಾಲ

ನೋಕಿಯಾ 7.1 ಸ್ಮಾರ್ಟ್‌ಫೋನ್‌ ಬೆಲೆ ಕುಸಿತ!

ಜನಪ್ರಿಯ ನೋಕಿಯಾ ಕಂಪನಿಯು ಕಳೆದ ವರ್ಷ ಬಿಡುಗಡೆ ಮಾಡಿದ್ದ 'ನೋಕಿಯಾ 7.1' ಸ್ಮಾರ್ಟ್‌ಫೋನ್‌ ಭಾರತೀಯ ಮಾರುಕಟ್ಟೆಯಲ್ಲಿ ಗ್ರಾಹಕರ ಗಮನ ಸೆಳೆದಿತ್ತು. ಅತ್ಯುತ್ತಮ ಕಾರ್ಯವೈಖರಿ ಹೊಂದಿರುವ ಈ ಸ್ಮಾರ್ಟ್‌ಫೋನ್‌ ಸ್ನ್ಯಾಪ್‌ಡ್ರಾಗನ್ 636 ಪ್ರೊಸೆಸರ್‌ ಶಕ್ತಿಯನ್ನು ಹೊಂದಿದೆ. ಆದ್ರೆ ಈಗ ನೋಕಿಯಾ ಫೋನ್‌ ಪ್ರಿಯರಿಗೆ ಖುಷಿ ವಿಷಯ ಏನೆಂದರೇ ಈ ಸ್ಮಾರ್ಟ್‌ಫೋನ್‌ ಬೆಲೆಯಲ್ಲಿ ಭಾರೀ ಇಳಿಕೆ ಆಗಿದೆ.

ನೋಕಿಯಾ 7.1 ಸ್ಮಾರ್ಟ್‌ಫೋನ್‌ ಬೆಲೆ ಕುಸಿತ!

ಹೌದು, ಇ ಕಾಮರ್ಸ್‌ ಜಾಲತಾಣ ಅಮೆಜಾನ್‌ 'ನೋಕಿಯಾ 7.1' ಸ್ಮಾರ್ಟ್‌ಫೋನ್‌ ಬೆಲೆಯಲ್ಲಿ ಭರ್ಜರಿ ಇಳಿಕೆ ಮಾಡಿದ್ದು, 14,999ರೂ.ಗಳಿಗೆ ದೊರೆಯಲಿದೆ. ಕಳೆದ ವರ್ಷ ಈ ಸ್ಮಾರ್ಟ್‌ಫೋನ್‌ 19,999ರೂ.ಗಳ ಮೀಡ್‌ರೇಂಜ್‌ ಪ್ರೈಸ್‌ಟ್ಯಾಗ್‌ನಲ್ಲಿ ಬಿಡುಗಡೆ ಆಗಿತ್ತು. 4GB RAM ಸಾಮರ್ಥ್ಯದೊಂದಿಗೆ 64GB ಆಂತರಿಕ ಸ್ಟೋರೇಜ್‌ ಸ್ಥಳಾವಕಾಶವನ್ನು ಒಳಗೊಂಡಿದ್ದು, ಡ್ಯುಯಲ್‌ ಕ್ಯಾಮೆರಾ ಆಯ್ಕೆಯನ್ನು ಹೊಂದಿದೆ. ಹಾಗಾದರೇ ನೋಕಿಯಾ 7.1 ಸ್ಮಾರ್ಟ್‌ಫೋನಿನ ಇತರೆ ಫೀಚರ್ಸ್‌ಗಳೆನು ಎಂಬುದನ್ನು ಮುಂದೆ ನೋಡೋಣ ಬನ್ನಿರಿ.

ಡಿಸೈನ್ ಹೇಗಿದೆ

ಡಿಸೈನ್ ಹೇಗಿದೆ

ನೋಕಿಯಾ 7.1 ಸ್ಮಾರ್ಟ್‌ಫೋನ್ ಆಕರ್ಷಕ ವಿನ್ಯಾಸವನ್ನು ಪಡೆದುಕೊಂಡಿದ್ದು, 149.7 x 71.18 x 7.99mm ಸುತ್ತಳತೆಯ ರಚನೆಯನ್ನು ಒಳಗೊಂಡಿದೆ. 160ಗ್ರಾಂ ತೂಕವನ್ನು ಹೊಂದಿ ಹಗುರವಾದ ರಚನೆಯಲ್ಲಿರುವ ಈ ಡಿವೈಸ್‌ನ ಡಿಸ್‌ಪ್ಲೇ ಮತ್ತು ಬಾಹ್ಯ ಬಾಡಿಯ ನಡುವಿನ ಅನುಪಾತವು ಶೇ.80% ರಷ್ಟಿದೆ. ಗ್ಲಾಸ್‌ ಮೀಡ್‌ನೈಟ್‌ ಬ್ಲೂ ಮತ್ತು ಗ್ಲಾಸ್‌ ಸ್ಟೀಲ್‌ ಬಣ್ಣಗಳ ಆಯ್ಕೆಯನ್ನು ಹೊಂದಿದೆ.

ಫುಲ್‌ ಹೆಚ್‌ಡಿ ಡಿಸ್‌ಪ್ಲೇ

ಫುಲ್‌ ಹೆಚ್‌ಡಿ ಡಿಸ್‌ಪ್ಲೇ

ನೋಕಿಯಾ 7.1 ಸ್ಮಾರ್ಟ್‌ಫೋನ್ 1080 x 2280 ಪಿಕ್ಸಲ್‌ ರೆಸಲ್ಯೂಶನ್‌ ಸಾಮರ್ಥ್ಯದೊಂದಿಗೆ 5.84 ಇಂಚಿನ ಫುಲ್‌ ಹೆಚ್‌ಡಿ ಪ್ಯೂರ್‌ವ್ಯೂವ್‌ ಡಿಸ್‌ಪ್ಲೇಯನ್ನು ಒಳಗೊಂಡಿದೆ. ಡಿಸ್‌ಪ್ಲೇಯ ಅನುಪಾತವು 19:9 ಆಗಿದ್ದು, ನಾಚ್‌ ಮಾದರಿಯನ್ನು ಹೊಂದಿದೆ. HDR10 ಮಾದರಿಯನ್ನು ಹೊಂದಿರುವ ಜೊತೆಗೆ 2.5D ಗೊರಿಲ್ಲಾ ಗ್ಲಾಸ್‌ ರಕ್ಷಣೆಯನ್ನು ಪಡೆದುಕೊಂಡಿದೆ.

ಪ್ರೊಸೆಸರ್‌ ಶಕ್ತಿ

ಪ್ರೊಸೆಸರ್‌ ಶಕ್ತಿ

ನೋಕಿಯಾ 7.1 ಫೋನ್‌ ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ 636 ಪ್ರೊಸೆಸರ್‌ ಶಕ್ತಿಯಲ್ಲಿ ಕಾರ್ಯನಿರ್ವಹಿಸುತ್ತದೆ ಹಾಗೂ ಆಂಡ್ರಾಯ್ಡ್‌ ಓರಿಯೊ ಓಎಸ್‌ನ ಬೆಂಬಲ ಪಡೆದುಕೊಂಡಿದೆ. ಇದರೊಂದಿಗೆ 4GB RAM ಸಾಮರ್ಥ್ಯದೊಂದಿಗೆ 64GB ಆಂತರಿಕ ಸ್ಟೋರೇಜ್‌ ಸ್ಥಳಾವಕಾಶವನ್ನು ಹೊಂದಿದ್ದು, ಮಲ್ಟಿಟಾಸ್ಕ್‌ ಕೆಲಸಗಳನ್ನು ನಿಬಾಯಿಸು ಸಾಮರ್ಥ್ಯ ಹೊಂದಿದೆ.

ಡ್ಯುಯಲ್‌ ಕ್ಯಾಮೆರಾ

ಡ್ಯುಯಲ್‌ ಕ್ಯಾಮೆರಾ

ನೋಕಿಯಾ 7.1 ಸ್ಮಾರ್ಟ್‌ಫೋನ್‌ ಹಿಂಬದಿಯಲ್ಲಿ ಎರಡು ರೇರ್‌ ಡ್ಯುಯಲ್‌ ಕ್ಯಾಮೆರಾಗಳನ್ನು ಹೊಂದಿದ್ದು, ZEISS ಲೆನ್ಸ್‌ಗಳನ್ನು ನೀಡಲಾಗಿದೆ. ಪ್ರಾಥಮಿಕ ಕ್ಯಾಮೆರಾವು 12ಎಂಪಿ ಸಾಮರ್ಥ್ಯದಲ್ಲಿದ್ದು, ಹಾಗೆಯೇ ಸೆಕೆಂಡರಿ ಕ್ಯಾಮೆರಾವು 5ಎಂಪಿ ಆಗಿದೆ. ಸೆಲ್ಫಿಗಾಗಿ ಮುಂಬದಿ 8ಎಂಪಿ ಕ್ಯಾಮೆರಾ ಆಯ್ಕೆ ನೀಡಲಾಗಿದೆ. ಇದರೊಂದಿಗೆ ಡ್ಯುಯಲ್‌ ಫ್ಲ್ಯಾಶ್‌ ನೀಡಲಾಗಿದೆ.

ಬ್ಯಾಟರಿ ಪವರ್‌

ಬ್ಯಾಟರಿ ಪವರ್‌

3,060mAh ಸಾಮರ್ಥ್ಯದ ಬ್ಯಾಟರಿ ಪವರ್‌ ಅನ್ನು ಹೊಂದಿರುವ ನೋಕಿಯಾ 7.1 ಸ್ಮಾರ್ಟ್‌ಫೋನ್‌, ಫಾಸ್ಟ್‌ ಚಾರ್ಜಿಂಗ ಸೌಲಭ್ಯದ ಬೆಂಬಲವನ್ನು ಪಡೆದುಕೊಂಡಿದೆ. (USB 2.0) ಯುಎಸ್‌ಬಿ ಟೈಪ್‌-ಸಿ ಪೋರ್ಟ್‌ ಆಯ್ಕೆಯನ್ನು ಒಳಗೊಂಡಿರುವ ಜೊತೆಗೆ ಜಿಪಿಎಸ್‌, ಬ್ಲೂಟೂತ್ 5.0, ಎನ್‌ಎಫ್‌ಸಿ ಕನೆಕ್ಟಿವಿಟಿ ಆಯ್ಕೆಗಳನ್ನು ಸಹ ಹೊಂದಿದೆ.

Best Mobiles in India

English summary
Launched late last year in India, the Nokia 7.1 can now be found for as low on Amazon India. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+