Just In
- 6 min ago
ಜಿಯೋ ಗ್ರಾಹಕರೆ, ಈ ರೀಚಾರ್ಜ್ ಪ್ಲ್ಯಾನ್ ಅನ್ನು ಖಂಡಿತಾ ನೀವು ಇಷ್ಟ ಪಡ್ತೀರಿ!?
- 19 hrs ago
ಬಜೆಟ್ ಬೆಲೆಯಲ್ಲಿ ಈ ಸ್ಮಾರ್ಟ್ಫೋನ್ಗಳು ಬೆಸ್ಟ್ ಎನಿಸಿಲಿವೆ! ಜಬರ್ದಸ್ತ್ ಫೀಚರ್ಸ್!
- 21 hrs ago
Tech News of this Week; ಜಿಯೋ ಹಿಂದಿಕ್ಕಿದ ಏರ್ಟೆಲ್, ಹೆಚ್ಚು ಸೇಲ್ ಆದ ಫೋನ್ ಯಾವುದು? ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್!
- 1 day ago
ಒಪ್ಪೋ ಕಂಪೆನಿಯ ಈ ಸ್ಮಾರ್ಟ್‌ಫೋನ್ ಮೇಲೆ ಭಾರಿ ನಿರೀಕ್ಷೆ? ಲಾಂಚ್ ಯಾವಾಗ?
Don't Miss
- Automobiles
'ಅಲ್ಟ್ರಾವೈಲೆಟ್ F77' ಹೇಗಿದೆ ಗೋತ್ತಾ.. ಇಲ್ಲಿದೆ ವಿಮರ್ಶೆ
- News
Union Budget; ಬೆಂಗಳೂರು-ಮಂಗಳೂರು ರೈಲು ಕಾರವಾರ ತನಕ ವಿಸ್ತರಣೆ
- Lifestyle
ಫೆಬ್ರವರಿ ತಿಂಗಳಿನಲ್ಲಿ ಜನಿಸಿದವರ ಕುರಿತ ಆಸಕ್ತಿಕರ ಸಂಗತಿಗಳಿವು
- Sports
ನೀವೇ ನಮಗೆ ಸ್ಪೂರ್ತಿ: ಕಿರಿಯರ ಸಾಧನೆಗೆ ಹರ್ಮನ್ಪ್ರೀತ್ ಕೌರ್ ಮುಕ್ತಕಂಠದ ಶ್ಲಾಘನೆ
- Movies
ರಿಲೀಸ್ ದಿನ ಅಬ್ಬರಿಸಿದ್ದ ಕ್ರಾಂತಿ ನಂತರದ 3 ದಿನಗಳಲ್ಲಿ ಗಳಿಸಿದ್ದೆಷ್ಟು? ಇಲ್ಲಿದೆ ವೀಕೆಂಡ್ ಕಲೆಕ್ಷನ್ ರಿಪೋರ್ಟ್
- Finance
ಹೊಸ ಆಫರ್: ಗೃಹ ಸಾಲದ ಬಡ್ಡಿದರ ಇಳಿಸಿದ ಎಸ್ಬಿಐ!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಭಾರತದಲ್ಲಿ 'ನೋಕಿಯಾ 7.2' ಬಿಡುಗಡೆ!..ಅಚ್ಚರಿ ಎನಿಸುವ ಬೆಲೆ!
ಜನಪ್ರಿಯ ನೋಕಿಯಾ ಎಚ್‌ಎಮ್‌ಡಿ ಗ್ಲೋಬಲ್ ಇತ್ತೀಚಿಗೆ ತನ್ನ ಬಹುನಿರೀಕ್ಷಿತ 'ನೋಕಿಯಾ 7.2 'ಮತ್ತು 'ನೋಕಿಯಾ 6.2' ಸ್ಮಾರ್ಟ್‌ಫೋನ್‌ಗಳನ್ನು ಲಾಂಚ್ ಮಾಡಿದೆ. ಅವುಗಳಲ್ಲಿ ನೋಕಿಯಾ 7.2' ಸ್ಮಾರ್ಟ್‌ಫೋನ್ ಅನ್ನು ಇದೀಗ ಭಾರತೀಯ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. Zeiss ಆಕ್ಟಿಕಲ್ ನೊಂದಿಗೆ ತ್ರಿವಳಿ ಕ್ಯಾಮೆರಾ ಹೊಂದಿರುವ ಈ ಸ್ಮಾರ್ಟ್‌ಫೋನ್ ಮೀಡ್‌ರೇಂಜ್ ಮಾದರಿಯಲ್ಲಿ ಸದ್ದು ಮಾಡುವುದರಲ್ಲಿ ಸಂದೇಹವೇ ಇಲ್ಲ.

ಹೌದು, ನೋಕಿಯಾ ಸಂಸ್ಥೆಯು 'ನೋಕಿಯಾ 7.2' ಸ್ಮಾರ್ಟ್‌ಫೋನ್‌ಗಳ ಲಾಂಚ್ ಮಾಡಿದೆ. ಈ ಸ್ಮಾರ್ಟ್‌ಫೋನ್ ಸ್ನ್ಯಾಪ್‌ಡ್ರಾಗನ್ 660 ಪ್ರೊಸೆಸರ್ ಹೊಂದಿದ್ದು, ಆಂಡ್ರಾಯ್ಡ್ 9 ಪೈ ಮತ್ತು ಆಂಡ್ರಾಯ್ಡ್ ಒನ್ ಓಎಸ್ ಬೆಂಬಲ ಪಡೆದಿದೆ. ಹಾಗೆಯೇ ಪ್ಯೂರ್‌ಡಿಸ್‌ಪ್ಲೇ ವಾಟರ್‌ಡ್ರಾಪ್ ಸ್ಕ್ರೀನ್ ಅನ್ನು ಹೊಂದಿದ್ದು, ಜೊತೆಗೆ ಹಿಂಬದಿಯಲ್ಲಿರುವ ಮೂರು ಕ್ಯಾಮೆರಾಗಳಲ್ಲಿ ಮುಖ್ಯ ಕ್ಯಾಮೆರಾವು 48ಎಂಪಿ ಸೆನ್ಸಾರ್‌ನಲ್ಲಿದ್ದು, ಕ್ಯಾಮೆರಾ ಪ್ರಿಯರನ್ನು ಸೆಳೆಯಲಿದೆ.

ಚಾರ್ಕೋಲ್ ಮತ್ತು ಗ್ರೀನ್ ಬಣ್ಣಗಳ ಆಯ್ಕೆಯಲ್ಲಿ ಲಭ್ಯವಿರುವ ನೋಕಿಯಾ 7.2 ಸ್ಮಾರ್ಟ್‌ಫೋನ್ ಇದೇ ಸೆಪ್ಟಂಬರ್ 23ರಿಂದ ಸೇಲ್ ಆರಂಭಿಸಲಿದೆ. ಗ್ರಾಹಕರು ಫ್ಲಿಪ್‌ಕಾರ್ಟ್ ಮತ್ತು ನೋಕಿಯಾ ತಾಣಗಳಲ್ಲಿ ಹಾಗೂ ಆಫ್‌ಲೈನ್ ಶಾಪ್‌ಗಳಲ್ಲಿಯೂ ಖರೀದಿಸಬಹುದಾಗಿದೆ. 4GB RAM + 64GB ಸ್ಟೋರೇಜ್ ಮತ್ತು 6GB RAM + 64GB ಸ್ಟೋರೇಜ್‌ನ ಎರಡು ವೇರಿಯಂಟ್‌ಗಳ ಆಯ್ಕೆಯಲ್ಲಿ ಲಭ್ಯವಾಗುತ್ತದೆ. ಹಾಗಾದರೇ 'ನೋಕಿಯಾ 7.2 'ಸ್ಮಾರ್ಟ್‌ಫೋನ್ ಯಾವೆಲ್ಲಾ ಫೀಚರ್ಸ್‌ಗಳನ್ನು ಹೊಂದಿದೆ ಎಂಬುದನ್ನು ತಿಳಿಯಲು ಮುಂದೆ ಓದಿರಿ.

ನೋಕಿಯಾ 7.2 ಡಿಸ್‌ಪ್ಲೇ
ನೋಕಿಯಾ 7.2 ಸ್ಮಾರ್ಟ್‌ಫೋನ್ 6.3 ಇಂಚಿನ ಫೂರ್ಣ ಹೆಚ್‌ಡಿ ಪ್ಲಸ್ ಡಿಸ್‌ಪ್ಲೇಯನ್ನು ಹೊಂದಿದ್ದು, 1080 x 2280 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯದ ವಾಟರ್‌ಡ್ರಾಪ್ ಸ್ಕ್ರೀನ್ ಪಡೆದಿದೆ. ಹಾಗೆಯೇ ಫೋನ್ ಸ್ಕ್ರೀನ್ ರಕ್ಷಣೆಗಾಗಿ ಗೊರಿಲ್ಲಾ ಗ್ಲಾಸ್ ನೀಡಲಾಗಿದ್ದು, ಡಿಸ್‌ಪ್ಲೇಯ ಪ್ರತಿ ಇಂಚಿನ ಸಾಂದ್ರತೆಯ ಅನುಪಾತವು 400 ppi ಆಗಿದೆ. ಹಾಗೆಯೇ 159.92 x 75.15 x 8.25mm, ಸುತ್ತಳತೆಯನ್ನು ಪಡೆದಿದೆ.

ನೋಕಿಯಾ 7.2 ಪ್ರೊಸೆಸರ್
ನೋಕಿಯಾ 7.2 ಸ್ಮಾರ್ಟ್‌ಫೋನ್ SDM6೦೦ ಸ್ನ್ಯಾಪ್‌ಡ್ರಾಗನ್ 600 ಪ್ರೊಸೆಸರ್ ಅನ್ನು ಒಳಗೊಂಡಿದ್ದು, ಆಂಡ್ರಾಯ್ಡ್ 9 ಪೈ ಓಎಸ್‌ನ ಬೆಂಬಲ ಪಡೆದಿದೆ. ಎರಡು ವೇರಿಯಂಟ್ ಆಯ್ಕೆಗಳನ್ನು ಹೊಂದಿದ್ದು, ಅವುಗಳು ಕ್ರಮವಾಗಿ 4GB RAM+64GB ಸ್ಟೋರೇಜ್ ಮತ್ತು 6GB RAM+64GB ಸ್ಟೋರೇಜ್ ಸಾಮರ್ಥ್ಯವನ್ನು ಹೊಂದಿವೆ. ಎಸ್‌ಡಿ ಕಾರ್ಡ್ ಮೂಲಕ ಬಾಹ್ಯ ಮೆಮೊರಿಯನ್ನು 512 GB ವರೆಗೂ ವಿಸ್ತರಿಸಬಹುದಾಗಿದೆ.

ನೋಕಿಯಾ 7.2 ಕ್ಯಾಮೆರಾ
ನೋಕಿಯಾ 7.2 ಸ್ಮಾರ್ಟ್‌ಫೋನ್ ಸಹ ತ್ರಿವಳಿ ರಿಯರ್ ಕ್ಯಾಮೆರಾ ಸೆಟ್‌ಅಪ್ ಅನ್ನು ಹೊಂದಿದ್ದು, ಪ್ರಾಥಮಿಕ ಕ್ಯಾಮೆರಾವು f/1.8 ಅಪರ್ಚರ್‌ನೊಂದಿಗೆ 48ಎಂಪಿ ಸೆನ್ಸಾರ್ ಪಡೆದಿದೆ. ಸೆಕೆಂಡರಿ ಕ್ಯಾಮೆರಾವು f/2.2 ಅಪರ್ಚರ್ ಜೊತೆಗೆ 8ಎಂಪಿ ಸೆನ್ಸಾರ್‌ನಲ್ಲಿದೆ ಇನ್ನು ತೃತಿಯ ಕ್ಯಾಮೆರಾವು ಡೆಪ್ತ್ ಸೆನ್ಸಾರ್ ಒಳಗೊಂಡಿದ್ದು, 5ಎಂಪಿ ಸೆನ್ಸಾರ್ ಸಾಮರ್ಥ್ಯವನ್ನು ಹೊಂದಿದೆ. ಹಾಗೂ ಸೆಲ್ಫಿ ಕ್ಯಾಮೆರಾವು 20ಎಂಪಿ ಸೆನ್ಸಾರ್‌ನಲ್ಲಿದೆ.

ನೋಕಿಯಾ 7.2 ಬ್ಯಾಟರಿ ಮತ್ತು ಸೌಲಭ್ಯಗಳು
ನೋಕಿಯಾ 7.2 ಸ್ಮಾರ್ಟ್‌ಫೋನ್ ಸಹ 3,500 mAh ಸಾಮರ್ಥ್ಯದ ಬ್ಯಾಟರಿ ಶಕ್ತಿಯನ್ನು ಪಡೆದುಕೊಂಡಿದ್ದು, 10W ಚಾರ್ಜಿಂಗ್ ಸೌಲಭ್ಯವನ್ನು ಪಡೆದಿದೆ. ಇದರೊಂದಿಗೆ ಫಿಂಗರ್‌ಪ್ರಿಂಟ್ ಸೆನ್ಸಾರ್, ವೈಫೈ 802.11ac, ಬ್ಲೂಟೂತ್ 5.0, ಯುಎಸ್‌ಬಿ ಟೈಪ್ ಸಿ ಪೋರ್ಟ್, 4G LTE, ಜಿಪಿಎಸ್ ಕನೆಕ್ಟಿವಿಟಿ, ಆಡಿಯೊ ಜಾಕ್ ಸೌಲಭ್ಯಗಳನ್ನು ಸಹ ಒಳಗೊಂಡಿದೆ.

ಬೆಲೆ ಮತ್ತು ಲಭ್ಯತೆ
ನೋಕಿಯಾ 7.2 ಮಿಡ್‌ರೇಂಜ್ ಬೆಲೆಯ ಮಾದರಿಯಲ್ಲಿ ಗುರುತಿಸಿಕೊಂಡಿದ್ದು, ಚಾರ್ಕೋಲ್ ಮತ್ತು ಗ್ರೀನ್ ಬಣ್ಣಗಳ ಆಯ್ಕೆಯಲ್ಲಿ ಲಭ್ಯ. ಭಾರತದಲ್ಲಿ ನೋಕಿಯಾ 7.2 ಫೋನ್ 4GB RAM + 64GB ಸ್ಟೋರೇಜ್ ವೇರಿಯಂಟ್ ಬೆಲೆಯು 18,599 ಆಗಿದೆ ಮತ್ತು 6GB RAM + 64GB ಸ್ಟೋರೇಜ್ ವೇರಿಯಂಟ್ ಬೆಲೆಯು 19,599 ಆಗಿದೆ. ಈ ಸ್ಮಾರ್ಟ್‌ಫೋನ್ ಇದೇ ಸೆಪ್ಟೆಂಬರ್ 23ರಿಂದ ಗ್ರಾಹಕರ ಖರೀದಿಗೆ ದೊರೆಯಲಿದೆ.
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470