Just In
- 26 min ago
ಒಪ್ಪೋ ಕಂಪೆನಿಯ ಈ ಸ್ಮಾರ್ಟ್‌ಫೋನ್ ಮೇಲೆ ಭಾರಿ ನಿರೀಕ್ಷೆ? ಲಾಂಚ್ ಯಾವಾಗ?
- 1 hr ago
ಫ್ಲಿಪ್‌ಕಾರ್ಟ್‌ನಲ್ಲಿ ಐಫೋನ್ 14 ಪ್ಲಸ್ ಬೆಲೆಯಲ್ಲಿ ಭಾರಿ ಕಡಿತ! ಇದಕ್ಕಿಂತ ಒಳ್ಳೆ ಟೈಂ ಸಿಗೋದಿಲ್ಲ!
- 2 hrs ago
ರಾಷ್ಟ್ರಮಟ್ಟದಲ್ಲಿ ಮೆಚ್ಚುಗೆ ಗಳಿಸಿದ ಬೆಂಗಳೂರಿನ 8 ವರ್ಷದ ಆಂಡ್ರಾಯ್ಡ್ ಆಪ್ ಡೆವಲಪರ್!
- 4 hrs ago
ಭಾರತದಲ್ಲಿ ಹೊಸ ಸಂಚಲನ ಸೃಷ್ಟಿಸಿದ ಫೈರ್ಬೋಲ್ಟ್ ಕಂಪೆನಿ!..ಪ್ರತಿಸ್ಫರ್ಧಿಗಳು ಕಂಗಾಲು!
Don't Miss
- Finance
ಅಭ್ಯರ್ಥಿಯ ಸಂದರ್ಶನ ಮಾಡುತ್ತಿದ್ದಾಗಲೇ ಗೂಗಲ್ ಎಚ್ಆರ್ ವಜಾ!
- Automobiles
ಭಾರತದಲ್ಲಿ ಶೀಘ್ರ ಬಿಡುಗಡೆಯಾಗಲಿದೆ ಬಹುನಿರೀಕ್ಷಿತ ಹೀರೋ ಮೆಸ್ಟ್ರೋ Xoom: ಹೇಗಿದೆ ಗೋತ್ತಾ?
- Sports
ಅರ್ಶ್ದೀಪ್ 'ನೋಬಾಲ್' ಎಸೆಯಲು ಕಾರಣ ವಿವರಿಸಿದ ಮೊಹಮ್ಮದ್ ಕೈಫ್
- Lifestyle
ವೃತ್ತಿ ಬದುಕಿನಲ್ಲಿ ಯಸಸ್ಸು ಪಡೆಯಲು ಚಾಣಕ್ಯ ಹೇಳಿದ ಸಪ್ತ ಸೂತ್ರಗಳು
- News
ಪುಲ್ವಾಮಾಕ್ಕೆ ಭೇಟಿ ನೀಡಿದ ರಾಹುಲ್ ಗಾಂಧಿ
- Movies
ಗಾಯಕನಾಗುವ ಆಸೆಯಿಂದ ಬಂದು ನಟನಾದ ಯಶವಂತ್ ಕಿರುತೆರೆ ಪಯಣ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಭಾರತದಲ್ಲಿ ಇಂದಿನಿಂದ 'ನೋಕಿಯಾ 7.2' ಫೋನ್ ಮಾರಾಟ ಆರಂಭ!.ಬೆಲೆ?
ನೋಕಿಯಾ ಇತ್ತೀಚಿಗೆ ಬಿಡುಗಡೆ ಮಾಡಿರುವ 'ನೋಕಿಯಾ 7.2' ಸ್ಮಾರ್ಟ್‌ಫೋನ್ ಇಂದು ಭಾರತದಲ್ಲಿ ಮಾರಾಟ ಶುರುಮಾಡಲಿದೆ. 48ಎಂಪಿ ಕ್ಯಾಮೆರಾ ಮತ್ತು 20ಎಂಪಿ ಸೆಲ್ಫಿ ಕ್ಯಾಮೆರಾ ಫೀಚರ್ಸ್‌ಗಳಿಂದ ಈ ಸ್ಮಾರ್ಟ್‌ಫೋನ್ ಈಗಾಗಲೇ ಗ್ರಾಹಕರನ್ನು ಸೆಳೆದಿದ್ದು, ಈ ಸ್ಮಾರ್ಟ್‌ಫೋನ್ 4GB RAM + 64GB ಆಂತರಿಕ ಸ್ಟೋರೇಜ್ ಹಾಗೂ 6GB RAM + 128GB ಸ್ಟೋರೇಜ್ ವೇರಿಯಂಟ್ ಮಾದರಿಗಳ ಆಯ್ಕೆಗಳನ್ನು ಹೊಂದಿದೆ.

ನೋಕಿಯಾ 7.2 ಸ್ಮಾರ್ಟ್‌ಫೋನ್ ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ 660 ಪ್ರೊಸೆಸರ್ ಸಾಮರ್ಥ್ಯವನ್ನು ಒಳಗೊಂಡಿದ್ದು, ಆಂಡ್ರಾಯ್ಡ್ ಪೈ ಜೊತೆಗೆ ಆಂಡ್ರಾಯ್ಡ್ ಒನ್ ಓಎಸ್‌ನ ಬೆಂಬಲವನ್ನು ಪಡೆದುಕೊಂಡಿದೆ. ಗ್ರೀನ್ ಮತ್ತು ಚಾರ್ಕೋಲ್ ಬಣ್ಣಗಳ ಆಯ್ಕೆಯಲ್ಲಿದ್ದು, ನೋಕಿಯಾ ಆನ್‌ಲೈನ್ ಸ್ಟೋರ್ ಮತ್ತು ಇ ಕಾಮರ್ಸ್ ತಾಣ ಫ್ಲಿಪ್‌ಕಾರ್ಟ್ ಸೇರಿದಂತೆ ಆಫ್‌ಲೈನ್ ಸ್ಟೋರ್‌ಗಳಲ್ಲಿಯೂ ಖರೀದಿಗೆ ಲಭ್ಯವಾಗಲಿದೆ. ಹಾಗಾದರೇ ನೋಕಿಯಾ 7.2 ಸ್ಮಾರ್ಟ್‌ಫೋನ್ ಫೀಚರ್ಸ್‌ಗಳೆನು ಎಂಬುದನ್ನು ಮುಂದೆ ನೋಡೋಣ ಬನ್ನಿರಿ.

ನೋಕಿಯಾ 7.2 ಡಿಸ್‌ಪ್ಲೇ
ನೋಕಿಯಾ 7.2 ಸ್ಮಾರ್ಟ್‌ಫೋನ್ 6.3 ಇಂಚಿನ ಫೂರ್ಣ ಹೆಚ್‌ಡಿ ಪ್ಲಸ್ ಡಿಸ್‌ಪ್ಲೇಯನ್ನು ಹೊಂದಿದ್ದು, 1080 x 2280 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯದ ವಾಟರ್‌ಡ್ರಾಪ್ ಸ್ಕ್ರೀನ್ ಪಡೆದಿದೆ. ಹಾಗೆಯೇ ಫೋನ್ ಸ್ಕ್ರೀನ್ ರಕ್ಷಣೆಗಾಗಿ ಗೊರಿಲ್ಲಾ ಗ್ಲಾಸ್ ನೀಡಲಾಗಿದ್ದು, ಡಿಸ್‌ಪ್ಲೇಯ ಪ್ರತಿ ಇಂಚಿನ ಸಾಂದ್ರತೆಯ ಅನುಪಾತವು 400 ppi ಆಗಿದೆ. ಹಾಗೆಯೇ 159.92 x 75.15 x 8.25mm, ಸುತ್ತಳತೆಯನ್ನು ಪಡೆದಿದೆ.

ನೋಕಿಯಾ 7.2 ಪ್ರೊಸೆಸರ್
ನೋಕಿಯಾ 7.2 ಸ್ಮಾರ್ಟ್‌ಫೋನ್ SDM6೦೦ ಸ್ನ್ಯಾಪ್‌ಡ್ರಾಗನ್ 600 ಪ್ರೊಸೆಸರ್ ಅನ್ನು ಒಳಗೊಂಡಿದ್ದು, ಆಂಡ್ರಾಯ್ಡ್ 9 ಪೈ ಓಎಸ್‌ನ ಬೆಂಬಲ ಪಡೆದಿದೆ. ಎರಡು ವೇರಿಯಂಟ್ ಆಯ್ಕೆಗಳನ್ನು ಹೊಂದಿದ್ದು, ಅವುಗಳು ಕ್ರಮವಾಗಿ 4GB RAM+64GB ಸ್ಟೋರೇಜ್ ಮತ್ತು 6GB RAM+64GB ಸ್ಟೋರೇಜ್ ಸಾಮರ್ಥ್ಯವನ್ನು ಹೊಂದಿವೆ. ಎಸ್‌ಡಿ ಕಾರ್ಡ್ ಮೂಲಕ ಬಾಹ್ಯ ಮೆಮೊರಿಯನ್ನು 512 GB ವರೆಗೂ ವಿಸ್ತರಿಸಬಹುದಾಗಿದೆ.

ನೋಕಿಯಾ 7.2 ಕ್ಯಾಮೆರಾ
ನೋಕಿಯಾ 7.2 ಸ್ಮಾರ್ಟ್‌ಫೋನ್ ಸಹ ತ್ರಿವಳಿ ರಿಯರ್ ಕ್ಯಾಮೆರಾ ಸೆಟ್‌ಅಪ್ ಅನ್ನು ಹೊಂದಿದ್ದು, ಪ್ರಾಥಮಿಕ ಕ್ಯಾಮೆರಾವು f/1.8 ಅಪರ್ಚರ್‌ನೊಂದಿಗೆ 48ಎಂಪಿ ಸೆನ್ಸಾರ್ ಪಡೆದಿದೆ. ಸೆಕೆಂಡರಿ ಕ್ಯಾಮೆರಾವು f/2.2 ಅಪರ್ಚರ್ ಜೊತೆಗೆ 8ಎಂಪಿ ಸೆನ್ಸಾರ್‌ನಲ್ಲಿದೆ ಇನ್ನು ತೃತಿಯ ಕ್ಯಾಮೆರಾವು ಡೆಪ್ತ್ ಸೆನ್ಸಾರ್ ಒಳಗೊಂಡಿದ್ದು, 5ಎಂಪಿ ಸೆನ್ಸಾರ್ ಸಾಮರ್ಥ್ಯವನ್ನು ಹೊಂದಿದೆ. ಹಾಗೂ ಸೆಲ್ಫಿ ಕ್ಯಾಮೆರಾವು 20ಎಂಪಿ ಸೆನ್ಸಾರ್‌ನಲ್ಲಿದೆ.

ನೋಕಿಯಾ 7.2 ಬ್ಯಾಟರಿ
ನೋಕಿಯಾ 7.2 ಸ್ಮಾರ್ಟ್‌ಫೋನ್ ಸಹ 3,500 mAh ಸಾಮರ್ಥ್ಯದ ಬ್ಯಾಟರಿ ಶಕ್ತಿಯನ್ನು ಪಡೆದುಕೊಂಡಿದ್ದು, 10W ಚಾರ್ಜಿಂಗ್ ಸೌಲಭ್ಯವನ್ನು ಪಡೆದಿದೆ. ಇದರೊಂದಿಗೆ ಫಿಂಗರ್‌ಪ್ರಿಂಟ್ ಸೆನ್ಸಾರ್, ವೈಫೈ 802.11ac, ಬ್ಲೂಟೂತ್ 5.0, ಯುಎಸ್‌ಬಿ ಟೈಪ್ ಸಿ ಪೋರ್ಟ್, 4G LTE, ಜಿಪಿಎಸ್ ಕನೆಕ್ಟಿವಿಟಿ, ಆಡಿಯೊ ಜಾಕ್ ಸೌಲಭ್ಯಗಳನ್ನು ಸಹ ಒಳಗೊಂಡಿದೆ.

ಬೆಲೆ ಮತ್ತು ಲಭ್ಯತೆ
ನೋಕಿಯಾ 7.2 ಮಿಡ್‌ರೇಂಜ್ ಬೆಲೆಯ ಮಾದರಿಯಲ್ಲಿ ಗುರುತಿಸಿಕೊಂಡಿದ್ದು, ಚಾರ್ಕೋಲ್ ಮತ್ತು ಗ್ರೀನ್ ಬಣ್ಣಗಳ ಆಯ್ಕೆಯಲ್ಲಿ ಲಭ್ಯ. ಭಾರತದಲ್ಲಿ ನೋಕಿಯಾ 7.2 ಫೋನ್ 4GB RAM + 64GB ಸ್ಟೋರೇಜ್ ವೇರಿಯಂಟ್ ಬೆಲೆಯು 18,599 ಆಗಿದೆ ಮತ್ತು 6GB RAM + 64GB ಸ್ಟೋರೇಜ್ ವೇರಿಯಂಟ್ ಬೆಲೆಯು 19,599 ಆಗಿದೆ. ಈ ಸ್ಮಾರ್ಟ್‌ಫೋನ್ ಇಂದಿನಿಂದ (ಸೆಪ್ಟೆಂಬರ್ 23) ಗ್ರಾಹಕರ ಖರೀದಿಗೆ ಲಭ್ಯವಾಗಲಿದೆ. ನೋಕಿಯಾ ಆನ್‌ಲೈನ್ ತಾಣ ಮತ್ತು ಫ್ಲಿಪ್‌ಕಾರ್ಟ್‌ನಲ್ಲಿ ಲಭ್ಯ.
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470