ನೋಕಿಯಾ ಬಳಕೆದಾರರಿಗೆ ಶಾಕಿಂಗ್ ಸುದ್ದಿ: ನೀವು ಬಳಸುತ್ತಿರುವುದು ನೋಕಿಯಾ ಫೋನ್ ಅಲ್ಲವೇ ಅಲ್ಲ..!

ಸತ್ಯ ಸಂಗತಿ ಎಂದರೆ, ಸದ್ಯ ಮಾರುಕಟ್ಟೆಯಲ್ಲಿ ಲಭ್ಯವಿರುವ ಸ್ಮಾರ್ಟ್‌ಫೋನ್‌ಗಳನ್ನು ನೋಕಿಯಾ ತಯಾರು ಮಾಡುತ್ತಿಲ್ಲ ಬದಲಾಗಿ, ನೋಕಿಯಾ ಮುಖವಾಡವನ್ನು ಧರಿಸಿರುವ ಕಂಪನಿಯೊಂದು ನೋಕಿಯಾ ಬ್ರಾಂಡ್ ಹೆಸರಿನಲ್ಲಿ ತನ್ನ ಸ್ಮಾರ್ಟ್‌ಫೋನ್‌ಗಳನ್ನು ಮಾರಾಟ ಮ

|

ಈ ಹಿಂದೆ ಭಾರತೀಯ ಮೊಬೈಲ್ ಮಾರುಕಟ್ಟೆಯಲ್ಲಿ ತನ್ನದೇ ಅಧಿಪತ್ಯವನ್ನು ಸ್ಥಾಪಿಸಿದ್ದ ನೋಕಿಯಾ ಮತ್ತೊಮ್ಮೆ ತನ್ನ ಅದೃಷ್ಠ ಪರೀಕ್ಷೆಗೆ ನಿಂತಿತ್ತು. ಒಮ್ಮೆ ತನ್ನ ಇಡೀ ಕಂಪನಿಯನ್ನು ಮೈಕ್ರೋಸಾಫ್ಟ್‌ಗೆ ಮಾರಾಟ ಮಾಡಿದ್ದ ನೋಕಿಯಾ ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿತ್ತು. ಅಭಿಮಾನಿಗಳು ಸಹ ಜಗತ್ತಿನಾದ್ಯಂತ ನೋಕಿಯಾವನ್ನು ಮತ್ತೊಮ್ಮೆ ತೆರೆದ ಮನಸ್ಸಿನಿಂದ ಸ್ವಾಗತಿಸಿದರು.

ನೀವು ಬಳಸುತ್ತಿರುವುದು ನೋಕಿಯಾ ಫೋನ್ ಅಲ್ಲವೇ ಅಲ್ಲ..!

ಓದಿರಿ: ನೋಕಿಯಾ 7ನಲ್ಲಿ ಸೆಲ್ಫಿ ಅಲ್ಲ, ಬೋತಿ ಕ್ಯಾಮೆರಾ ಇದೆ.! ವಿಶೇಷತೆ ಏನು..?

ಆದರೆ ಸತ್ಯ ಸಂಗತಿ ಎಂದರೆ, ಸದ್ಯ ಮಾರುಕಟ್ಟೆಯಲ್ಲಿ ಲಭ್ಯವಿರುವ ಸ್ಮಾರ್ಟ್‌ಫೋನ್‌ಗಳನ್ನು ನೋಕಿಯಾ ತಯಾರು ಮಾಡುತ್ತಿಲ್ಲ ಬದಲಾಗಿ, ನೋಕಿಯಾ ಮುಖವಾಡವನ್ನು ಧರಿಸಿರುವ ಕಂಪನಿಯೊಂದು ನೋಕಿಯಾ ಬ್ರಾಂಡ್ ಹೆಸರಿನಲ್ಲಿ ತನ್ನ ಸ್ಮಾರ್ಟ್‌ಫೋನ್‌ಗಳನ್ನು ಮಾರಾಟ ಮಾಡುತ್ತಿದೆ ಎನ್ನುವ ಮಾಹಿತಿಯೊಂದು ಲಭ್ಯವಾಗಿ. ಪ್ರತಿಷ್ಠಿತ ಆಂಗ್ಲ ವೆಬ್‌ ಮಾಧ್ಯಮಗಳು ಈ ಅಸಲಿಯತ್ತನ್ನು ಬಿಡುಗಡೆ ಮಾಡಿದೆ.

ನೋಕಿಯಾ ಮುಖವಾಡ ಅಷ್ಟೆ:

ನೋಕಿಯಾ ಮುಖವಾಡ ಅಷ್ಟೆ:

ಈ ಹಿಂದೆ ನೋಕಿಯಾ ಸ್ಮಾರ್ಟ್‌ಫೋನ್‌ಗಳು ಮಾರುಕಟ್ಟೆಯಲ್ಲಿ ಕಾಣಿಸಿಕೊಂಡ ನಂತರದಲ್ಲಿ HMD ಗ್ಲೊಬಲ್ ಸಂಸ್ಥೆಯ ಹೆಸರು ಸಹ ಚಾಲ್ತಿಗೆ ಬಂದಿದೆ. ನೋಕಿಯಾ ಫೋನ್‌ಗಳನ್ನು ಜಾಗತೀಕವಾಗಿ ಮಾರಾಟ ಮಾಡುವ ಹಕ್ಕನ್ನು ಈ ಫೋನ್ ಪಡೆದುಕೊಂಡಿದೆ ಎನ್ನಲಾಗುತ್ತಿತ್ತು.

HDM ಗ್ಲೊಬಲ್ ಫೋನ್‌ಗಳು:

HDM ಗ್ಲೊಬಲ್ ಫೋನ್‌ಗಳು:

HMD ಗ್ಲೊಬಲ್ ಸಂಸ್ಥೆಯೂ ನೋಕಿಯಾ ತಯಾರಿಸಿದ ಫೋನ್‌ಗಳನ್ನು ಮಾರಾಟ ಮಾಡುತ್ತಿಲ್ಲ. ಬದಲಾಗಿ ತಾನು ತಯಾರಿಸಿದ ಸ್ಮಾರ್ಟ್‌ಫೋನ್‌ಗಳ ಮೇಲೆ ನೋಕಿಯಾ ಬ್ರಾಂಡ್ ಲೋಗೊ ಹಾಕಿಕೊಳ್ಳುವ ಲೈಸೆಸ್ಸ್ ಅನ್ನು ಪಡೆದುಕೊಂಡಿದೆ.

ನೋಕಿಯಾ ಫೋನ್ ಅಲ್ಲ:

ನೋಕಿಯಾ ಫೋನ್ ಅಲ್ಲ:

ನೋಕಿಯಾ ಈ ಪೋನ್‌ಗಳನ್ನ ತಯಾರಿಸಿಲ್ಲ ಎನ್ನಲಾಗಿದೆ. ಅದರಲ್ಲಿಯೂ ಬಿಡುಗಡೆಗೆ ಸಿದ್ಧವಾಗಿರುವ ನೋಕಿಯಾ 7 ಸ್ಮಾರ್ಟ್‌ಫೋನ್‌ ಅಂತೂ ಸಂಫೂರ್ಣ HMD ಗ್ಲೊಬಲ್ ಸಂಸ್ಥೆಯು ತಯಾರು ಮಾಡಿರುವ ಫೋನ್‌ ಎನ್ನಲಾಗಿದೆ.

ನೋಕಿಯ ಹೆಸರು ಮಾತ್ರ:

ನೋಕಿಯ ಹೆಸರು ಮಾತ್ರ:

ಫೀಚರ್ ಫೋನ್‌ಗಳ ಮಾರುಕಟ್ಟೆಯಲ್ಲಿ ರಾಜನ ಸ್ಥಾನದಲ್ಲಿದ್ದ ನೋಕಿಯಾ ಸ್ಮಾರ್ಟ್‌ಫೋನ್ ತಯಾರಿಕೆಯಲ್ಲಿ ಹಿಂದುಳಿದಿತ್ತು. ಈ ಹಿನ್ನಲೆಯಲ್ಲಿ ಕಂಪನಿಯನ್ನು ಮೈಕ್ರೋಸಾಫ್ಟ್‌ಗೆ ಮಾರಾಟ ಮಾಡಿತ್ತು. ಈ ಹಿನ್ನಲೆಯಲ್ಲಿ ಹೊಸದಾಗಿ ಮಾರುಕಟ್ಟೆಯನ್ನು ಪ್ರವೇಶಿಸಿದ ಫೋನ್‌ ಕೇಲವ ಹೆಸರು ಮಾತ್ರವೇ ಹೊಂದಿದೆ.

ನೋಕಿಯಾ ಫೋನ್‌ಗಳು:

ನೋಕಿಯಾ ಫೋನ್‌ಗಳು:

ಈಗಾಗಲೇ ಮಾರುಕಟ್ಟೆಯಲ್ಲಿ ನೋಕಿಯಾದ ಸ್ಮಾರ್ಟ್‌ಫೋನ್‌ಗಳಾದ ನೋಕಿಯಾ 3, ನೋಕಿಯಾ 5, ನೋಕಿಯಾ 6 ಮತ್ತು ನೋಕಿಯಾ 8 ಸದ್ದು ಮಾಡುತ್ತಿವೆ. ಜೊತೆಗೆ ನೋಕಿಯಾ 3310 ಸಹ ಬಿಡುಗಡೆಯಾಗಿದೆ.

ಮಾರುಕಟ್ಟೆ ಗಿಮಿಕ್:

ಮಾರುಕಟ್ಟೆ ಗಿಮಿಕ್:

ನೋಕಿಯಾ ಹೆಸರು ಹೇಳಿದರೆ ಹೆಚ್ಚಿನ ಜನರು ಖರೀದಿಸುತ್ತಾರೆ ಎನ್ನುವ ಆಸೆಯಿಂದ ಮಾರುಕಟ್ಟೆಯಲ್ಲಿ ಗಿಮಿಕ್ ಮಾಡಿ ನೋಕಿಯಾ ಹೆಸರಿನಲ್ಲಿ HMD ಗ್ಲೊಬಲ್ ಸಂಸ್ಥೆ ಮೊಬೈಲ್ ಮಾರಾಟ ಮಾಡುತ್ತಿದೆ.

ಇನ್ನು ಫೋನ್‌ಗಳು ಬರಲಿದೆ:

ಇನ್ನು ಫೋನ್‌ಗಳು ಬರಲಿದೆ:

HMD ಗ್ಲೊಬಲ್ ಸಂಸ್ಥೆಯಿಂದ ನೋಕಿಯಾ ಹೆಸರಿನಲ್ಲಿ ಇನಷ್ಟು ಸ್ಮಾರ್ಟ್‌ಫೋನ್‌ಗಳು ಲಾಂಚ್ ಆಗಲಿದೆ ಎನ್ನಲಾಗಿದೆ. ಇದಕ್ಕಾಗಿ ಭರ್ಜರಿ ತಯಾರಿಯನ್ನು ಕಂಪನಿಯೂ ನಡೆಸಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

Best Mobiles in India

English summary
Nokia 7 isn’t actually made by Nokia. to know more visit kananda.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X