ಬಿಡುಗಡೆಗೆ ಸಜ್ಜಾಗಿವೆ 'ನೋಕಿಯಾ'ದ ಮೂರು ಹೊಸ ಫೋನ್!.ವಿಶೇಷ ಏನು ಗೊತ್ತಾ?
ಎವರ್‌ಗ್ರೀನ್ ಮೊಬೈಲ್ ಸಂಸ್ಥೆ ನೋಕಿಯಾ ಆಂಡ್ರಾಯ್ಡ್ ಓಎಸ್ ಆಧಾರಿತ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಿ ಮಾರುಕಟ್ಟೆಯಲ್ಲಿ ಸೈ ಎನಿಸಿಕೊಂಡಿದೆ. ನೋಕಿಯಾ ಫೋನ್‌ಗಳು ಅತ್ಯುತ್ತಮ ಫೀಚರ್ಸ್‌ಗಳಿಂದ ಗ್ರಾಹಕರನ್ನು ಆಕರ್ಷಿಸುತ್ತಿದ್ದು, ಆ ಲಿಸ್ಟಿಗೆ ಸದ್ಯದಲ್ಲಿಯೇ ಮತ್ತೆ ಮೂರು ಸ್ಮಾರ್ಟ್‌ಫೋನ್‌ಗಳು ಸೇರಿಕೊಳ್ಳಲಿವೆ. ಈ ಹೊಸ ಫೋನ್‌ಗಳು ಮಾರುಕಟ್ಟೆಯಲ್ಲಿ ಹೊಸ ಸಂಚಲಯ ಮೂಡಿಸುವ ಲಕ್ಷಣಗಳನ್ನು ಹೊರಹಾಕಿವೆ.

ಹೌದು, ನೋಕಿಯಾ ಸಂಸ್ಥೆಯು ಹೊಸದಾಗಿ ಮೂರು ಲಾಂಚ್ ಮಾಡುವ ತಯಾರಿಯಲ್ಲಿದೆ. ಅವುಗಳು ನೋಕಿಯಾ 8.2 5G, ನೋಕಿಯಾ 5.2 ಮತ್ತು ನೋಕಿಯಾ 1.3 ಆಗಿವೆ. ಇನ್ನು ಈ ಸ್ಮಾರ್ಟ್‌ಫೋನ್‌ಗಳನ್ನು ಕಂಪನಿಯು ಇದೇ ಫೆಬ್ರುವರಿಯಲ್ಲಿ ನಡೆಯಲಿರುವ ಮೊಬೈಲ್ ವರ್ಲ್ಡ್ ಕಾಂಗ್ರೆಸ್-2020 ಕಾರ್ಯಕ್ರಮದಲ್ಲಿ ಅನಾವರಣ ಮಾಡುವುದು ಬಹುತೇಕ ಖಚಿತವಾಗಿದೆ. ಹಾಗಾದರೆ ನೋಕಿಯಾದ ಈ ಮೂರು ಸ್ಮಾರ್ಟ್‌ಫೋನ್‌ಗಳು ಯಾವೆಲ್ಲಾ ಫೀಚರ್ಸ್‌ಗಳನ್ನು ಹೊಂದಿರಲಿವೆ ಎಂಬುದನ್ನು ಮುಂದೆ ತಿಳಿಯೋಣ.

ನೋಕಿಯಾ 8.2 5G
ನೋಕಿಯಾ 8.2 5G ಕನೆಕ್ಟಿವಿಟಿ ಬೆಂಬಲ ಪಡೆದಿರಲಿದೆ. ಈ ಫೋನ್ 7nm ಆಧಾರಿತ ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ 765 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಹಾಗೆಯೇ 4GB RAM + 64GB, 6GB RAM + 128GB ಮತ್ತು 8GB + 256GB ಸ್ಟೋರೇಜ್ ವೇರಿಯಂಟ್ ಆಯ್ಕೆಗಳಲ್ಲಿ ಬಿಡುಗಡೆ ಆಗುವುದು ಖಚಿತ ಎನ್ನಲಾಗಿದೆ. ಪಾಪ್‌ಅಪ್ ಕ್ಯಾಮೆರಾ ಇರುವ ಸಾಧ್ಯತೆಗಳಿವೆ. ಹಿಂಬದಿ ಮುಖ್ಯ ಕ್ಯಾಮೆರಾವು 64ಎಂಪಿ ಸಾಮರ್ಥ್ಯದಲ್ಲಿರಲಿದೆ. ಇನ್ನು ಬ್ಯಾಟರಿಯು 3,500mAh ಸಾಮರ್ಥ್ಯ ಪಡೆದಿರಲಿದೆ. ಬೆಲೆಯು EUR 459 ( ಅಂದಾಜು 36,100ರೂ)

ನೋಕಿಯಾ 5.2
ನೋಕಿಯಾ 5.2 ಸ್ಮಾರ್ಟ್‌ಫೋನ್ 6.2 ಇಂಚಿನ ಡಿಸ್‌ಪ್ಲೇ ಹೊಂದಿರಲಿದ್ದು ವಾಟರ್ ಡ್ರಾಪ್ ನಾಚ್ ಪಡೆದಿರಲಿದೆ. ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ 632 ಪ್ರೊಸೆಸರ್‌ನಲ್ಲಿ ಕೆಲಸ ಮಾಡಲಿದ್ದು, ಆಂಡ್ರಾಯ್ಡ್ ಒನ್ ಸಫೋರ್ಟ್ ಹೊಂದಿದೆ. ಈ ಫೋನ್ 3GB RAM + 32GB ಮತ್ತು 4GB RAM + 64GB ವೇರಿಯಂಟ್ ಆಯ್ಕೆ ಹೊಂದಿರಲಿದ್ದು, 3,500mAh ಸಾಮರ್ಥ್ಯದ ಬ್ಯಾಟರಿ ಪಡೆದಿರಲಿದೆ. 16ಎಂಪಿ ಕ್ಯಾಮೆರಾ ಸೆನ್ಸಾರ್ ಇರಲಿದೆ. ಬೆಲೆಯು EUR 169 (ಅಂದಾಜು 13,300ರೂ)

ನೋಕಿಯಾ 1.3
ನೋಕಿಯಾ 1.3 ಸ್ಮಾರ್ಟ್‌ಫೋನ್ ಎಂಟ್ರಿ ಲೆವೆಲ್ ಮಾದರಿಯಲ್ಲಿ ಲಾಂಚ್ ಆಗಲಿದೆ. ಈ ಫೋನ್ ಸ್ನ್ಯಾಪ್‌ಡ್ರಾಗನ್ 215 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. 4G ಬೆಂಬಲ ಪಡೆದಿರಲಿದ್ದು, ಬ್ಲೂಟೂತ್ 4.2 ಸಫೋರ್ಟ್ ಹೊಂದಿರಲಿದೆ. ಇನ್ನು ಈ ಫೋನ್ 13ಎಂಪಿ ಕ್ಯಾಮೆರಾ ಸೆನ್ಸಾರ್ ಒಳಗೊಂಡಿರಲಿದ್ದು, 1GB RAM ಮತ್ತು 8GB ಸ್ಟೋರೇಜ್ ಸಾಮರ್ಥ್ಯದಲ್ಲಿ ಲಾಂಚ್ ಆಗಲಿದೆ. ಬೆಲೆಯು EUR 79 (ಅಂದಾಜು 6,200ರೂ)


Click it and Unblock the Notifications








