ನೋಕಿಯಾ 8.3 5G ಫೋನ್ ಲಾಂಚ್!..64ಎಂಪಿ ಕ್ಯಾಮೆರಾ!
ಮೊಬೈಲ್ ಕ್ಷೇತ್ರದ ಎವರ್‌ಗ್ರೀನ್ ಸಂಸ್ಥೆ ನೋಕಿಯಾ ಇದೀಗ ತನ್ನ ಬಹುನಿರೀಕ್ಷಿತ ನೋಕಿಯಾ 8.3, ನೋಕಿಯಾ 5.2 ಮತ್ತು ನೋಕಿಯಾ 1,3 ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಿದೆ. ಇವುಗಳಲ್ಲಿ ನೋಕಿಯಾ 8.3 ಫೋನ್ ವೇರಿಯಂಟ್ ಆಗಿದ್ದು, ಈ ಮೂಲಕ 5G ಸ್ಮಾರ್ಟ್‌ಫೋನ್ ಪರಿಚಯಿಸಿರುವ ಕಂಪನಿಗಳ ಸಾಲಿಗೆ ನೋಕಿಯಾ ಸಹ ಸೇರಿಕೊಂಡಿದೆ. ಈ ಸ್ಮಾರ್ಟ್‌ಫೋನ್ ಭಾರಿ ಸಂಚಲಯ ಸೃಷ್ಠಿಸೊ ಲಕ್ಷಣಗಳನ್ನು ಸೂಚಿಸಿದೆ.

ಹೌದು, ನೋಕಿಯಾ ಕಂಪನಿಯು ಬಿಡುಗಡೆ ಮಾಡಿರೊ ಮೂರು ಸ್ಮಾರ್ಟ್‌ಫೋನ್‌ಗಳ ಪೈಕಿ ನೋಕಿಯಾ 8.3, 5G ಸ್ಮಾರ್ಟ್‌ಫೋನ್ ಫ್ಲ್ಯಾಗ್‌ಶಿಪ್ ಮಾದರಿಯಲ್ಲಿದೆ. ಈ ಫೋನ್ ಪ್ಯೂರ್‌ಡಿಸ್‌ಪ್ಲೇ ರಚನೆಯೊಂದಿಗೆ ಪಂಚ್‌ಹೋಲ್ ಕ್ಯಾಮೆರಾ ಹೊಂದಿದೆ. ಜೊತೆಗೆ ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ 765G ಪ್ರೊಸೆಸರ್ ಹಾಗೂ ಆಂಡ್ರಾಯ್ಡ್ 10 ಓಎಸ್ ಸಪೋರ್ಟ್ ಪಡೆದಿದೆ. ಸೈಡ್ ಮೌಂಟೆಡ್ ಫಿಂಗರ್‌ಪ್ರಿಂಟ್ ಡಿಸೈನ್ ಸೌಲಭ್ಯ ಪಡೆದಿದೆ. ಹಾಗಾದರೆ ನೋಕಿಯಾ 8.3, 5G ಸ್ಮಾರ್ಟ್‌ಫೋನಿನ ಇತರೆ ಫೀಚರ್ಸ್‌ಗಳ ಬಗ್ಗೆ ತಿಳಿಯಲು ಮುಂದೆ ಓದಿರಿ.

ಡಿಸ್‌ಪ್ಲೇ ರಚನೆ
ನೋಕಿಯಾ 8.3, 5G ಸ್ಮಾರ್ಟ್‌ಫೋನ್ 1080 x 2400 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯದೊಂದಿಗೆ 6.81 ಇಂಚಿನ ಪೂರ್ಣ ಹೆಚ್‌ಡಿ ಪ್ಲಸ್ ಡಿಸ್‌ಪ್ಲೇಯನ್ನು ಹೊಂದಿದೆ. ಡಿಸ್‌ಪ್ಲೇಯ ಪ್ರತಿ ಇಂಚಿನ ಪಿಕ್ಸಲ್ ಸಾಂದ್ರತೆಯು 386 ppi ಆಗಿದ್ದು, ಸ್ಕ್ರೀನ್‌ನಿಂದ ಬಾಹ್ಯ ಬಾಡಿಯ ನಡುವಿನ ಅಂತರವು 82.9% ಪರ್ಸೆಂಟ್ ಆಗಿದೆ.

ಪ್ರೊಸೆಸರ್ ಸಾಮರ್ಥ್ಯ
ನೋಕಿಯಾ 8.3, 5G ಸ್ಮಾರ್ಟ್‌ಫೋನ್ ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ 765G ಪ್ರೊಸೆಸರ್ ಹೊಂದಿದ್ದು, ಅದಕ್ಕೆ ಪೂರಕವಾಗಿ ಆಂಡ್ರಾಯ್ಡ್ 10 ಓಎಸ್ ಬೆಂಬಲ ಪಡೆದಿದೆ. ಇದರೊಂದಿಗೆ 6GB RAM+ 64GB ಮತ್ತು 8GB RAM+128GB ಸ್ಟೋರೇಜ್ ಆಯ್ಕೆಗಳು ಇವೆ. ಹಾಗೂ ಎಸ್‌ಡಿ ಕಾರ್ಡ್ ಮೂಲಕ ಬಾಹ್ಯ ಮೆಮೊರಿಯನ್ನು ವಿಸ್ತರಿಸುವ ಅವಕಾಶ ಇದೆ.

ಕ್ಯಾಮೆರಾ ವಿಶೇಷ
ನೋಕಿಯಾ 8.3, 5G ಸ್ಮಾರ್ಟ್‌ಫೋನ್ ಕ್ವಾಡ್ ಕ್ಯಾಮೆರಾ ಸೆಟ್‌ಅಪ್ ರಚನೆ ಪಡೆದಿದ್ದು, ಮುಖ್ಯ ಕ್ಯಾಮೆರಾವು 64ಎಂಪಿ ಸೆನ್ಸಾರ್ ಸಾಮರ್ಥ್ಯದಲ್ಲಿದೆ. ಸೆಕೆಂಡರಿ ಕ್ಯಾಮೆರಾವು 12ಎಂಪಿ ಸೆನ್ಸಾರ್ ಸಾಮರ್ಥ್ಯದಲ್ಲಿದೆ. ಇನ್ನು ತೃತೀಯ ಕ್ಯಾಮೆರಾ ಹಾಗೂ ನಾಲ್ಕನೇ ಕ್ಯಾಮೆರಾಗಳೆರಡು 2ಎಂಪಿ ಸೆನ್ಸಾರ್ ಪಡೆದಿವೆ. ಸೆಲ್ಫಿಗಾಗಿ 24ಎಂಪಿ ಸೆನ್ಸಾರ್ ಕ್ಯಾಮೆರಾ ಒದಗಿಸಲಾಗಿದೆ.

ಬ್ಯಾಟರಿ ಬಲ
ನೋಕಿಯಾ 8.3, 5G ಸ್ಮಾರ್ಟ್‌ಫೋನ್ 4,500mAh ಸಾಮರ್ಥ್ಯದ ಬ್ಯಾಟರಿ ಬಾಳಿಕೆಯನ್ನು ಹೊಂದಿದೆ. ಇದರೊಂದಿಗೆ ವೇಗದ ಚಾರ್ಜಿಂಗ್‌ಗಾಗಿ 18W ಸಾಮರ್ಥ್ಯದ ಫಾಸ್ಟ್ ಚಾರ್ಜಿಂಗ್ ಸೌಲಭ್ಯ ಒದಗಿಸಿದೆ. ಹಾಗೆಯೇ OZO ಆಡಿಯೊ ವ್ಯವಸ್ಥೆಯನ್ನು ಹೊಂದಿದ್ದು, ಕ್ಯಾಮೆರಾಗಳು ZEISS ಲೆನ್ಸ್ ಪಡೆದಿವೆ. ಜೊತೆಗೆ ವೈಫೈ, ಜಿಪಿಎಸ್, ಫಿಂಗರ್‌ಪ್ರಿಂಟ್, ಬ್ಲೂಟೂತ್, ಇತರೆ ಕನೆಕ್ಟಿವಿಟಿ ಆಯ್ಕೆಗಳು ಸಹ ಇವೆ.

ಬೆಲೆ ಮತ್ತು ಲಭ್ಯತೆ
ಹೊಸದಾಗಿ ಲಾಂಚ್ ಆಗಿರುವ ನೋಕಿಯಾ 8.3, 5G ಸ್ಮಾರ್ಟ್‌ಫೋನ್ ಸದ್ಯದಲ್ಲಿಯೇ ಸೇಲ್ ಶುರುಮಾಡಲಿದೆ. ಈ ಫೋನಿನ ಗ್ಲೋಬಲ್ ಮಾರುಕಟ್ಟೆ ರೀಟೇಲ್ ಬೆಲೆಯು €599 ಆಗಿದೆ.(ಭಾರತದಲ್ಲಿ ಅಂದಾಜು 47,794ರೂ.)


Click it and Unblock the Notifications








