4G ಮಾದರಿಯಲ್ಲಿ ರೀ ಎಂಟ್ರಿ ನೀಡಲಿದೆ ನೋಕಿಯಾ 8000 ಫೋನ್‌!

|

ಮೊಬೈಲ್‌ ಜಗತ್ತಿನ ಎವರ್‌ಗ್ರೀನ್‌ ಬ್ರ್ಯಾಂಡ್‌ ನೋಕಿಯಾ ಸಂಸ್ಥೆ ತನ್ನ ಗುಣಮಟ್ಟದ ಫೋನ್‌ಗಳಿಗೆ ಹೆಸರುವಾಸಿಯಾಗಿದೆ. ಇದೀಗ ತನ್ನ ಪ್ರಾರಂಭಿಕ ದಿನಗಳಲ್ಲಿ ಸಾಕಷ್ಟು ಜನಪ್ರಿಯವಾಗಿದ್ದ ಹಳೆಯ ಮಾದರಿಗಳನ್ನು ಮತ್ತೆ ಹೊಸ ವಿನ್ಯಾಸದಲ್ಲಿ ಪರಿಷ್ಕರಿಸಿ ಬಿಡುಗಡೆ ಮಾಡುವುದಕ್ಕೆ ಸಿದ್ದತೆ ನಡೆಸಿದೆ. ಈ ಹೊಸ ಪರಿಷ್ಕೃತ ಫೋನ್‌ಗಳ ಸಾಲಿನಲ್ಲಿ ನೋಕಿಯಾ 8000 ಮತ್ತು ನೋಕಿಯಾ 6300 ಫೋನ್‌ಗಳು‌ ಸೇರಿದ್ದು, ಶೀಘ್ರದಲ್ಲೇ ಈ ಎರಡು ಫೋನ್‌ಗಳು ಬಿಡುಗಡೆ ಆಗಲಿವೆ ಎನ್ನಲಾಗಿದೆ.

ನೋಕಿಯಾ

ಹೌದು, ನೋಕಿಯಾ ಸಂಸ್ಥೆ ತನ್ನ ಹಳೆಯ ಮಾಡೆಲ್‌ ಫೋನ್‌ಗಳನ್ನ ಹೊಸ ವಿನ್ಯಾಸದಲ್ಲಿ ಪರಿಷ್ಕರಿಸಿ ಬಿಡುಗಡೆ ಮಾಡಲು ಸಿದ್ದತೆ ನಡೆಸಿದೆ. ಇದರ ಫಲವಾಗಿ ನೋಕಿಯಾ 8000 ಮತ್ತು ನೋಕಿಯಾ 6300 ಫೋನ್‌ಗಳು‌ ಹೊಸ ರೂಪದಲ್ಲಿ ಬರಲಿವೆ. ಇನ್ನು ಈ ಎರಡೂ ಫೋನ್‌ಗಳು 4G ಮಾದರಿಯಲ್ಲಿ ಬರಲಿವೆ ಎಂದು ಆನ್‌ಲೈನ್‌ನಲ್ಲಿ ಗುರುತಿಸಲಾಗಿದೆ. ಇನ್ನು ಈ ಎರಡು ಹಳೆಯ ನೋಕಿಯಾ ಫೋನ್‌ಗಳು ವೈ-ಫೈ ಮತ್ತು ವೈಫೈ ಕರೆಗಳನ್ನು ಬೆಂಬಲಿಸಲಿವೆ ಎಂದು ಹೇಳಾಗಿದೆ. ಇನ್ನು ಈ ಎರಡು ಫೋನ್‌ಗಳ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ನೋಕಿಯಾ

ಸದ್ಯ ನೋಕಿಯಾ ಕಂಪೆನಿ ನೋಕಿಯಾ 6300 4G ಮತ್ತು ನೋಕಿಯಾ 8000 4G ಫೋನ್‌ಗಳು ಹೊಸ ವಿನ್ಯಾಸ ಹಾಗೂ ಇಂದಿನ ಅವಶ್ಯಕತೆಗೆ ತಕ್ಕಂತ ಫೀಚರ್ಸ್‌ಗಳನ್ನ ಒಳಗೊಂಡಿರಲಿದೆ ಎನ್ನಲಾಗಿದೆ. ಇನ್ನು ಲಭ್ಯ ಮಾಹಿತಿ ಪ್ರಕಾರ ಈ ಎರಡು ನೋಕಿಯಾ ಫೋನ್‌ಗಳ ಕೈಯೋಸ್‌ ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ ಎಂದು ನಿರೀಕ್ಷಿಸಲಾಗಿದೆ. ಆದರೆ ಈ ಎರಡು ಫೋನ್‌ಗಳ ಹಳೆಯ ಮಾದರಿಗಳು S40 OS ಬೆಂಬಲದೊಂದಿಗೆ ಕಾರ್ಯನಿರ್ವಹಿಸುತ್ತಿದ್ದವು ಅನ್ನೊದನ್ನ ಗಮನಿಸಬೇಕಿದೆ. ಆದರೆ ಸಾಫ್ಟ್‌ವೇರ್‌ನ ಹೊರತಾಗಿ ಕಂಪನಿಯು ಈ ಫೋನ್‌ಗಳ ಬಾಡಿ ಡಿಸೈನ್‌ ಹೊಸ ಮಾದರಿಗಳಲ್ಲಿ ಹಳೆಯ ಡಿಸೈನ್‌ ಅನ್ನೇ ಉಳಿಸಿಕೊಳ್ಳುವ ಸಾಧ್ಯತೆಯಿದೆ.

ನೋಕಿಯಾ

ಇನ್ನು ನೋಕಿಯಾ 6300 4G ಫೋನ್‌ ಹಿಂಬಾಗದಲ್ಲಿ 2 ಮೆಗಾಪಿಕ್ಸೆಲ್‌ ಸೆನ್ಸಾರ್‌ ಕ್ಯಾಮೆರಾ, T9 ಕೀಬೋರ್ಡ್ ಅನ್ನು ಹೊಂದಿರಲಿದೆ. ಅಲ್ಲದೆ ನೋಕಿಯಾ ಫೋನ್‌ಗಳಿಗೆ ಹೆಸರುವಾಸಿಯಾದ ರೆಟ್ರೊ ವಿನ್ಯಾಸವನ್ನು ಸಹ ಇದರಲ್ಲಿ ನೋಡಬಹುದು. ಇದಲ್ಲದೆ ನೋಕಿಯಾ 8000 4G ಫೋನ್‌ ನೋಕಿಯಾ 8800 ಐಷಾರಾಮಿ ಡಿವೈಸ್‌ನಂತೆ ಲೋಹದ ದೇಹವನ್ನು ಹೊಂದಿರುವ ಸ್ಲೈಡಿಂಗ್ ಡಿಸ್‌ಪ್ಲೇ ಮಾಡ್ಯೂಲ್‌ನಂತೆ ಕಾಣಿಸಬಹುದು. ಇದು ವಿಸ್ತರಿಸಿದಾಗ ಅದರ ಕೆಳಗೆ ಹುದುಗಿರುವ T9 ಕೀಬೋರ್ಡ್ ತೆರೆಯುತ್ತದೆ ಎನ್ನಲಾಗಿದೆ.

ಫೋನ್‌

ಸದ್ಯ ಈ ಎರಡೂ ಫೋನ್‌ಗಳು ಹಳೆಯ ಬಾಡಿ ಡಿಸೈನ್‌ ಅನ್ನೇ ಹೊಂದಿರಲಿವೆ. ಆದರೆ ಹೊಸ ಮಾದರಿಯ ಸಾಫ್ಟವೇರ್‌ ಹಾಗೂ ನ್ಯೂ ಲುಕ್‌ನಲ್ಲಿ ಕಾಣಿಸಲಿವೆ ಎನ್ನಲಾಗಿದೆ. ರೆಟ್ರೋ ಶೈಲಿಯ ಫೋನ್‌ಗಳಿಗೆ ನ್ಯ ಟಚ್‌ ನೀಡಲಾಗುತ್ತೇ ಎಂದು ಹೇಳಬಹುದಾಗಿದೆ. ಇನ್ನು ಈ ಫೋನ್‌ಗಳು ಯಾವಾಗ ಬಿಡುಗಡೆ ಆಗಲಿವೆ, ಇವುಗಳ ಬೆಲೆ ಏನು ಅನ್ನೊದನ್ನ ಕಂಪೆನಿ ಇನ್ನೂ ಬಹಿರಂಗ ಪಡಿಸಿಲ್ಲ. ಆದರೆ ಈ ಫೋನ್‌ಗಳು ಶೀಘ್ರದಲ್ಲೇ ಬಿಡುಗಡೆ ಆಗುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ.

Best Mobiles in India

Read more about:
English summary
HMD Global may be bringing back 4G models of the Nokia 8000 and Nokia 6300.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X