ನೋಕಿಯಾ 9.3 ಪ್ಯೂರ್‌ವ್ಯೂವ್‌ ಮತ್ತು ನೋಕಿಯಾ 7.3 ಬಿಡುಗಡೆಗೆ ತಯಾರಿ!

|

ಎವರ್‌ಗ್ರೀನ್ ಮೊಬೈಲ್‌ ಸಂಸ್ಥೆ ನೋಕಿಯಾ ಆಂಡ್ರಾಯ್ಡ್‌ ಫೋನ್‌ಗಳ ಮೂಲಕ ಮಾರುಕಟ್ಟೆಯಲ್ಲಿ ತನ್ನ ತಕ್ಕಮಟ್ಟಿಗೆ ಮರಳಿ ಖದರ್ ಹೊಂದಿದೆ. ಇತ್ತೀಚಿಗೆ ನೋಕಿಯಾ 8.3 ಮತ್ತು ನೋಕಿಯಾ 5.2 ಸ್ಮಾರ್ಟ್‌ಫೋನ್ ಪರಿಚಯಿಸಿ ಅಚ್ಚರಿ ಮೂಡಿಸಿದೆ. ಈಗ ಅದೇ ಹಾದಿಯಲ್ಲಿ ಮತ್ತೆ ಹೊಸದಾಗಿ ಎರಡು ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಲು ಸಕಲ ತಯಾರಿ ನಡೆಸಿರುವ ಸುದ್ದಿ ಹೊರಬಂದಿದೆ.

ನೋಕಿಯಾ 9.3 ಪ್ಯೂರ್‌ವ್ಯೂ

ಹೌದು, ನೋಕಿಯಾ ಸಂಸ್ಥೆಯು ಹೊಸದಾಗಿ ನೋಕಿಯಾ 9.3 ಪ್ಯೂರ್‌ವ್ಯೂವ್‌ ಹಾಗೂ ನೋಕಿಯಾ 7.3 ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಲು ಸಜ್ಜು ಮಾಡುತ್ತಿದೆ. ನೋಕಿಯಾ 9.3 ಪ್ಯೂರ್‌ವ್ಯೂ ಸ್ನಾಪ್‌ಡ್ರಾಗನ್ 865 ಪ್ರೊಸೆಸರ್ ಮತ್ತು ಅಧಿಕ ಕ್ಯಾಮೆರಾ ಸೆನ್ಸಾರ್ ಒಳಗೊಂಡಿರುವ ಸಾಧ್ಯತೆಗಳಿವೆ. ಹಾಗೂ ಪಾಪ್-ಅಪ್ ಸೆಲ್ಫಿ ಕ್ಯಾಮೆರಾ ಇರುವ ನಿರೀಕ್ಷೆಗಳಿವೆ. ಇನ್ನು ಈ ಫೋನ್ ಅಗಷ್ಟ ಅಥವಾ ಸೆಪ್ಟೆಂಬರ್ ತಿಂಗಳಲ್ಲಿ ಲಾಂಚ್ ಆಗುವ ನಿರೀಕ್ಷೆಗಳಿವೆ. ಹಾಗಾದರೆ ನೋಕಿಯಾ 9.3 ಪ್ಯೂರ್‌ವ್ಯೂವ್‌ ಹಾಗೂ ನೋಕಿಯಾ 7.3 ಫೋನ್‌ಗಳ ಫೀಚರ್ಸ್‌ ಹೇಗಿರಲಿವೆ ಎಂಬುದನ್ನು ತಿಳಿಯಲು ಮುಂದೆ ಓದಿರಿ.

ಡಿಸ್‌ಪ್ಲೇ ಮತ್ತು ವಿನ್ಯಾಸ

ಡಿಸ್‌ಪ್ಲೇ ಮತ್ತು ವಿನ್ಯಾಸ

ನೋಕಿಯಾ 9.3 ಪ್ಯೂರ್‌ವ್ಯೂವ್‌ ಸ್ಮಾರ್ಟ್‌ಫೋನ್ 1440 x 2560 ಪಿಕ್ಸಲ್ ರೆಸಲ್ಯೂಶನ್‌ ಸಾಮರ್ಥ್ಯದಲ್ಲಿದ್ದು, 6.29 ಇಂಚಿನ p-OLED ಸ್ಕ್ರೀನ್‌ ಡಿಸ್‌ಪ್ಲೇಯನ್ನು ಹೊಂದಿರುವ ಸಾಧ್ಯತೆಗಳಿವೆ. ಹಾಗೆಯೇ ಡಿಸ್‌ಪ್ಲೇಯ ಪ್ರತಿ ಇಂಚಿನ ಪಿಕ್ಸಲ್ ಸಾಂದ್ರತೆಯು 467ppi ಆಗಿದ್ದು, ಸ್ಕ್ರೀನ್ ರಕ್ಷಣೆಗಾಗಿ ಗೊರಿಲ್ಲಾ ಗ್ಲಾಸ್‌ ರಚನೆಯನ್ನು ಹೊಂದಿರಲಿದೆ ಎನ್ನಲಾಗಿದೆ.

ಪ್ರೊಸೆಸರ್ ಸಾಮರ್ಥ್ಯ

ಪ್ರೊಸೆಸರ್ ಸಾಮರ್ಥ್ಯ

'ನೋಕಿಯಾ 9.3 ಪ್ಯೂರ್‌ವ್ಯೂವ್‌ ಸ್ಮಾರ್ಟ್‌ಫೋನ್ ಆಕ್ಟಾ-ಕೋರ್ ಸ್ನ್ಯಾಪ್‌ಡ್ರಾಗನ್ 865 SoC ನಲ್ಲಿ ಕಾರ್ಯನಿರ್ವಹಿಸಲಿದ್ದು, ಆಂಡ್ರಾಯ್ಡ್ 10 ಓಎಸ್‌ ಬೆಂಬಲ ಪಡೆದಿರಲಿದೆ. ಜೊತೆಗೆ 6GB RAM ಸಾಮರ್ಥ್ಯದೊಂದಿಗೆ 128GB ಆಂತರಿಕ ಸಂಗ್ರಹ ಸಾಮರ್ಥ್ಯದ ಆಯ್ಕೆಯ ವೇರಿಯಂಟ್ ಇರುವ ನಿರೀಕ್ಷೆಗಳಿವೆ. ಎಸ್‌ಡಿ ಕಾರ್ಡ್‌ ಮೂಲಕ ಮೆಮೊರಿ ವಿಸ್ತರಿಸುವ ಸೌಲಭ್ಯದ ಬಗ್ಗೆ ಮಾಹಿತಿ ಇಲ್ಲ.

ಕ್ಯಾಮೆರಾ ಪಿಕ್ಸಲ್ ಎಷ್ಟು?

ಕ್ಯಾಮೆರಾ ಪಿಕ್ಸಲ್ ಎಷ್ಟು?

ನೋಕಿಯಾ 9.3 ಪ್ಯೂರ್‌ವ್ಯೂವ್‌ ಸ್ಮಾರ್ಟ್‌ಫೋನ್‌ ಕ್ವಾಡ್‌ ಕ್ಯಾಮೆರಾಗಳ ಆಯ್ಕೆ ಹೊಂದಿರಲಿದ್ದು, ಅವುಗಳು ಕ್ರಮವಾಗಿ 13ಎಂಪಿ+13ಎಂಪಿ+13ಎಂಪಿ+13ಎಂಪಿ ಸೆನ್ಸಾರ್ ಸಾಮರ್ಥ್ಯವನ್ನು ಹೊಂದಿರಲಿವೆ ಎನ್ನಲಾಗಿದೆ. ಹಾಗೆಯೇ ಸೆಲ್ಫಿಗಾಗಿ 24ಎಂಪಿ ಸೆನ್ಸಾರ್ ಕ್ಯಾಮೆರಾ ಇರುವ ಸಾಧ್ಯತೆಗಳಿವೆ. ಜೊತೆಗೆ ಡಿಜಿಟಲ್ ಜೂಮ್, ಆಟೋ ಫೋಕಸ್‌ ನಂತಹ ಫೀಚರ್ಸ್‌ಗಳಿ ಇರಲಿವೆ.

ಬ್ಯಾಟರಿ

ಬ್ಯಾಟರಿ

ನೋಕಿಯಾ 9.3 ಪ್ಯೂರ್‌ವ್ಯೂವ್‌ ಸ್ಮಾರ್ಟ್‌ಫೋನಿನಲ್ಲಿ 4500 mAh ಸಾಮರ್ಥ್ಯದ ಬ್ಯಾಟರಿ ಇರುವ ನಿರೀಕ್ಷೆ ಇದೆ. ಇದರೊಂದಿಗೆ ವಾಯರ್‌ಲೆಸ್‌ ಚಾರ್ಜಿಂಗ್ ಸೌಲಭ್ಯ ಹಾಗೂ ಫಾಸ್ಟ್‌ ಚಾರ್ಜಿಂಗ್ ಸೌಲಭ್ಯಗಳು ಇರುವ ಸಾಧ್ಯತೆಗಳು ಅಧಿಕವಾಗಿವೆ.

ಬೆಲೆ ಎಷ್ಟು?

ಬೆಲೆ ಎಷ್ಟು?

ನೋಕಿಯಾ 9.3 ಪ್ಯೂರ್‌ವ್ಯೂವ್‌ ಸ್ಮಾರ್ಟ್‌ಫೋನ್ ಫ್ಲ್ಯಾಗ್‌ಶಿಪ್ ಮಾದರಿಯ ಫೋನ್‌ ಆಗಿರಲಿದ್ದು, ಹೊಸ ಅಲೆ ಎಬ್ಬಿಸುವ ನಿರೀಕ್ಷೆಗಳನ್ನು ಮೂಡಿಸಿದೆ. ಭಾರತದಲ್ಲಿ ಈ ಫೋನ್ ಬೆಲೆಯು 70,000ರೂ.ಗಳ ಆಸುಪಾಸಿನಲ್ಲಿ ಇರಲಿದೆ ಎಂದು ಅಂದಾಜಿಸಲಾಗಿದೆ. ಬಹುಶಃ ಇದೇ ಅಗಷ್ಟ ಅಥವಾ ಸೆಪ್ಟೆಂಬರ್ ತಿಂಗಳಲ್ಲಿ ಲಾಂಚ್ ಆಗುವ ಸಾಧ್ಯತೆಗಳಿವೆ ಎನ್ನಲಾಗಿದೆ.

ನೋಕಿಯಾ 7.3 ಸ್ಮಾರ್ಟ್‌ಫೋನ್

ನೋಕಿಯಾ 7.3 ಸ್ಮಾರ್ಟ್‌ಫೋನ್

ನೋಕಿಯಾ7.3 ಸ್ಮಾರ್ಟ್‌ಫೋನ್ ಸಹ ಕುತೂಹಲ ಮೂಡಿಸಿದ್ದು, ಈ ಫೋನ್ 6.3 ಇಂಚಿನ ಪೂರ್ಣ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇ ಹೊಂದಿರಲಿದೆ. ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ 660 ಪ್ರೊಸೆಸರ್ ಅದಕ್ಕೆ ಪೂರಕವಾಗಿ ಆಂಡ್ರಾಯ್ಡ್ 10 ಓಎಸ್‌ ಸಪೋರ್ಟ್‌ ಇರುವ ನಿರೀಕ್ಷೆಗಳಿವೆ. ಹಾಗೆಯೇ ತ್ರಿವಳಿ ಕ್ಯಾಮೆರಾ ಸೆಟ್‌ಅಪ್ ರಚನೆ ಇರಲಿದ್ದು, 128GB/64GB ROM ಸ್ಟೋರೇಜ್ ಆಯ್ಕೆಗಳಿರಲಿವೆ.

Best Mobiles in India

English summary
Nokia 9.3 Pureview may feature Qualcomm Snapdragon 865 processor and better camera technology than the predecessor.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X