GST ಹೆಚ್ಚಳದಿಂದ ನೋಕಿಯಾ ಸ್ಮಾರ್ಟ್‌ಫೋನ್‌ಗಳ ಬೆಲೆಯಲ್ಲಿ ಏರಿಕೆ!
ಎವರ್‌ಗ್ರೀನ್ ಮೊಬೈಲ್ ಸಂಸ್ಥೆ ನೋಕಿಯಾ ಈಗಾಗಾಲೇ ಹಲವು ಆಂಡ್ರಾಯ್ಡ್ ಓಎಸ್ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಿ ಗ್ರಾಹಕರಿಂದ ಸೈ ಎನಿಸಿಕೊಂಡಿದೆ. ನೋಕಿಯಾ ಸ್ಮಾರ್ಟ್‌ಫೋನ್‌ಗಳ ಲಿಸ್ಟಿನಲ್ಲಿ ಅಗ್ಗದ ಪ್ರೈಸ್‌ನ ಫೋನ್‌ಗಳು ಇವೆ ಹಾಗೂ ಹೈ ಎಂಡ್ ಮಾದರಿಯ ಸ್ಮಾರ್ಟ್‌ಫೋನ್‌ಗಳು ಸೇರಿವೆ. ಆದರೆ ಇದೀಗ ನೋಕಿಯಾ ಸ್ಮಾರ್ಟ್‌ಫೋನ್‌ಗಳ ಬೆಲೆಯಲ್ಲಿ ಏರಿಕೆ ಆಗಿದ್ದು, ಗ್ರಾಹಕರಿಗೆ ಅಚ್ಚರಿ ತಂದಿದೆ.

ಹೌದು, ಇತ್ತೀಚಿಗೆ ಕೇಂದ್ರ ಸರ್ಕಾರ ಮೊಬೈಲ್ ಫೋನ್‌ಗಳ ಜಿಎಸ್‌ಟಿ-GSTಯನ್ನು 12 ಪರ್ಸೆಂಟ್‌ನಿಂದ 18 ಪರ್ಸೆಂಟ್‌ಗೆ ಹೆಚ್ಚಳ ಮಾಡಿದೆ. ಈ ಹಿನ್ನಲೆಯಲ್ಲಿ ನೋಕಿಯಾ ಸಂಸ್ಥೆಯು ಸ್ಮಾರ್ಟ್‌ಫೋನ್‌ಗಳ ಬೆಲೆಯಲ್ಲಿ ಏರಿಕೆ ಆಗಿದೆ. ನೋಕಿಯಾ 2.3, ನೋಕಿಯಾ 110, ನೋಕಿಯಾ 6.2, ನೋಕಿಯಾ 7.2, ನೋಕಿಯಾ 105, ನೋಕಿಯಾ 2.2, ನೋಕಿಯಾ 4.2, ನೋಕಿಯಾ 3.2, ಮತ್ತು ನೋಕಿಯಾ 9 ಪ್ಯೂರ್ ವ್ಯೂ ಸ್ಮಾರ್ಟ್‌ಫೋನ್‌ಗಳ ಬೆಲೆಗಳಲ್ಲಿ ಏರಿಕೆ ಆಗಿದೆ.

ಭಾರತದಲ್ಲಿ ನೋಕಿಯಾ 2.3 ಫೋನ್ ಬೆಲೆಯು 7,585 ರೂ. ಆಗಿದೆ. 1,599ರೂ ಬೆಲೆಯಲ್ಲಿದ್ದ ನೋಕಿಯಾ 110 ಫೋನ್ ಬೆಲೆಯು 1,684ರೂ. ಆಗಿದೆ. ಅದೇ ರೀತಿ ನೋಕಿಯಾ 6.2 ಈಗ 13,168ರೂ.ಗಳಿಗೆ ದೊರೆಯುತ್ತದೆ. ಇನ್ನು 4 GB + 64GB ಸ್ಟೋರೇಜ್ ವೇರಿಯಂಟ್‌ನ ನೋಕಿಯಾ 7.2 ಇತ್ತೀಚಿಗೆ ಬೆಲೆ ಇಳಿಕೆ ಕಂಡು 15,499 ರೂ. ಲಭ್ಯವಿತ್ತು. ಆದರೆ ಇದೀಗ ಬೆಲೆ ಏರಿಕೆಯಿಂದ 16,330.ರೂ.ಲಭ್ಯವಾಗಲಿದೆ.

ಅದೇ ರೀತಿ ನೋಕಿಯಾ ಎಂಟ್ರಿ ಲೆವೆಲ್ ಸ್ಮಾರ್ಟ್‌ಫೋನ್‌ಗಳ ಬೆಲೆಯಲ್ಲಿಯು ಹೆಚ್ಚಳವಾಗಿದೆ. ನೋಕಿಯಾ 105 ಬೆಲೆಯು 1,053ರೂ. ಆಗಿದೆ. ನೋಕಿಯಾ 2.2 ಫೋನ್ ಬೆಲೆಯು 6,320ರೂ. ಆಗಿದೆ. ನೋಕಿಯಾ 4.2 ಫೋನ್ ಬೆಲೆಯು 10,008 ಆಗಿದ್ದು, ನೋಕಿಯಾ 3.2 ಫೋನ್ 8,428ರೂ.ಗಳಿಗೆ ಸಿಗಲಿದೆ. ಹಾಗೆಯೇ ಹೈ ಎಂಡ್ ನೋಕಿಯಾ 9 ಪ್ಯೂರ್ ವ್ಯೂ ಸ್ಮಾರ್ಟ್‌ಫೋನಿನ ಬೆಲೆಯು 52,677ರೂ.ಗಳು ಆಗಿದೆ. ನೋಕಿಯಾ 9 ಪ್ಯೂರ್ ವ್ಯೂ ಫೋನಿನ ಎಂಡ್ ಫೀಚರ್ಸ್‌ಗಳು ಹೇಗಿವೆ ಎಂಬುದನ್ನು ತಿಳಿಯಲು ಸ್ಕ್ರಾಲ್ ಮಾಡಿರಿ.

ನೋಕಿಯಾ 9 ಪ್ಯೂರ್ ವ್ಯೂವ್ ಡಿಸ್‌ಪ್ಲೇ
ನೋಕಿಯಾ 9 ಪ್ಯೂರ್ ವ್ಯೂವ್ ಸ್ಮಾರ್ಟ್‌ಫೋನ್ 1440x2960 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯದಲ್ಲಿದ್ದು, 5.99 ಇಂಚಿನ ಕ್ವಾಡ್ ಹೆಚ್‌ಡಿ ಪ್ಲಸ್, 2K pOLED ಸ್ಕ್ರೀನ್ ಡಿಸ್‌ಪ್ಲೇಯನ್ನು ಹೊಂದಿದೆ. ಹಾಗೆಯೇ ಡಿಸ್‌ಪ್ಲೇಯು 18.5:9 ಅನುಪಾತವನ್ನು ಹೊಂದಿದ್ದು, ಫಿಂಗರ್‌ಪ್ರಿಂಟ್ ಸೆನ್ಸಾರ್ ಆಯ್ಕೆಯನ್ನು ಸಹ ಹೊಂದಿದೆ. ಡಿಸ್‌ಪ್ಲೇಯ ಸುತ್ತಲೂ ಕಡಿಮೆ ಅಂಚನ್ನು ಒಳಗೊಂಡಿದದ್ದು, ಗೊರಿಲ್ಲಾ ಗ್ಲಾಸ್ 5 ಹೊಂದಿದೆ.

ನೋಕಿಯಾ 9 ಪ್ಯೂರ್ ವ್ಯೂವ್ ಮೆಮೊರಿ
ನೋಕಿಯಾ 9 ಪ್ಯೂರ್ ವ್ಯೂವ್' ಸ್ಮಾರ್ಟ್‌ಫೋನ್ ಆಕ್ಟಾ-ಕೋರ್ ಸ್ನ್ಯಾಪ್‌ಡ್ರಾಗನ್ 845 SoC ನಲ್ಲಿ ಕಾರ್ಯನಿರ್ವಹಿಸಲಿದ್ದು, ಮಲ್ಟಿಟಾಸ್ಕ್ ಕೆಲಸಗಳಿಗೆ ಉತ್ತಮ ಸಪೋರ್ಟ್ ಒದಗಿಸಲಿದೆ. ಹಾಗೆಯೇ ಆಂಡ್ರಾಯ್ಡ್ 9.0 ಪೈ ಆಪರೇಟಿಂಗ್ ಸಿಸ್ಟಮ್‌ನ ಬೆಂಬಲ ಪಡೆದುಕೊಂಡಿರುವ ಜೊತೆಗೆ 6GB RAM ಸಾಮರ್ಥ್ಯದೊಂದಿಗೆ 128GB ಆಂತರಿಕ ಸಂಗ್ರಹ ಸಾಮರ್ಥ್ಯವನ್ನು ಒಳಗೊಂಡಿದೆ.

ನೋಕಿಯಾ 9 ಪ್ಯೂರ್ ವ್ಯೂವ್ ಕ್ಯಾಮೆರಾ
ನೋಕಿಯಾ 9 ಪ್ಯೂರ್ ವ್ಯೂವ್ ಸ್ಮಾರ್ಟ್‌ಫೋನ್ ಐದು ಕ್ಯಾಮೆರಾಗಳನ್ನು ಹೊಂದಿದ್ದು, ಐದು ಕ್ಯಾಮೆರಾಗಳು f/1.8 ಅಪರ್ಚರ್ ನೊಂದಿಗೆ 12 ಮೆಗಾಪಿಕ್ಸಲ್ ಸಾಮರ್ಥ್ಯವನ್ನು ಹೊಂದಿವೆ. ಫೋಟೊಗಳು 10x ಲೈಟ್ ಜೊತೆಗೆ ಹೈ ರೆಸಲ್ಯೂಶನ್‌ನಲ್ಲಿ ಮೂಡಿಬರಲಿವೆ. ರಾ ಫೋಟೊಗಳು 60ಎಂಪಿ ರೆಸಲ್ಯೂಶನ್‌ನಲ್ಲಿರಲಿದ್ದು, ಫೋಟೊ ಎಡಿಟ್‌ಗಾಗಿ, ಅಡೊಬ್ ರೂಮ್‌ಲೈಟ್ ಆಪ್ ನೀಡಲಾಗಿದೆ. ಹಾಗೆಯೇ 20ಎಂಪಿ ಸಾಮರ್ಥ್ಯ ಸೆಲ್ಫಿ ಕ್ಯಾಮೆರಾ ಇದೆ.

ನೋಕಿಯಾ 9 ಪ್ಯೂರ್ ವ್ಯೂವ್ ಬ್ಯಾಟರಿ
ನೋಕಿಯಾ 9 ಪ್ಯೂರ್ ವ್ಯೂವ್ ಸ್ಮಾರ್ಟ್‌ಫೋನಿನಲ್ಲಿ 3320mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, ವಾಯರ್‌ಲೆಸ್ ಜೊತೆಗೆ ಫಾಸ್ಟ್ ಚಾರ್ಜಿಂಗ್ ಸೌಲಭ್ಯವನ್ನು ನೀಡಲಾಗಿದೆ. ಅಡ್ರಿನೊ 630 GPU, ಡ್ಯೂಯಲ್ ಸಿಮ್ ಬೆಂಬಲ, ಇನ್-ಡಿಸ್‌ಪ್ಲೇ ಫಿಂಗರ್ಪ್ರಿಂಟ್ ಸಂವೇದಕ, ಐಪಿ67 ವಾಟರ್-ರೆಸಿಸ್ಟೆಂಟ್ ರೇಟಿಂಗ್ ಸೇರಿದಂತೆ ಒಂದೇ ಸ್ಪೀಕರ್ ಹೊಂದಿರುವ ಹಲವು ವಿಶೇಷತೆಗಳನ್ನು ಸ್ಮಾರ್ಟ್‌ಫೋನ್ ಹೊಂದಿದೆ.


Click it and Unblock the Notifications








