Subscribe to Gizbot

5,685 ರೂ.ಬೆಲೆಗೆ ನೋಕಿಯಾ ಆಶಾ 308 ಬಿಡುಗಡೆ

Posted By: Super
5,685 ರೂ.ಬೆಲೆಗೆ ನೋಕಿಯಾ ಆಶಾ 308 ಬಿಡುಗಡೆ

ಉತ್ತಮ ಗುಣಮಟ್ಟದ ಮೊಬೈಲ್‌ ಫೋನ್‌ಗಳಿಗೆ ಹೆಸರು ವಾಸಿಯಾದಂತಹ ನೋಕಿಯಾ ಇಂದು ತನ್ನಯ ನೂತನ ಆಶಾ ಸರಣಿಯ ಫೀಚರ್‌ಫೋನ್‌ ಆದಂತಹ ಆಶಾ 308 ಅನ್ನು ಭಾರತೀಯ ಮಾರುಕಟ್ಟೆಗೆ ರೂ. 5,685 ದರದಲ್ಲಿ ಬಿಡುಗಡೆ ಮಾಡಿದೆ. ಆಶಾ ಸರಣಿಗೆ ಇದೀಗ ತಾನೆ ಸೇರ್ಪಡೆಯಾಗಿರು ನೂತನ ಫೀಚರ್‌ ಫೋನ್‌ ಸಂಪೂರ್ಣ ಟಚ್‌ಸ್ಕ್ರೀನ್‌ ಹೊಂದಿದೆ. ಅಂದಹಾಗೆ ಆಶಾ ಸರಣಿಯಲ್ಲಿ ಈಗಾಗಲೇ ಬಿಡುಗಡೆ ಯಾಗಿರುವ ಎಲ್ಲಾ ಫೋನ್‌ಗಳು ಭಾರತೀಯ ಮಾರುಕಟ್ಟೆಯಲ್ಲಿ ಹಿಟ್‌ ಎನಿಸಿಕೊಂಡಿದ್ದು ಈ ಯಶಸ್ಸಿನ ಹಿನ್ನೆಲೆಯಲ್ಲಿ ಸಂಸ್ಥೆಯು ಇತ್ತೀಚೆಗಷ್ಟೇ ಬಿಡುಗಡೆ ಮಾಡಲಾಗಿದ್ದ ಆಶಾ 305 ಹಾಗೂ ಆಶಾ 306 ನ ಬಳಿಕ ಇದೀಗ ನೂತನವಾಗಿ ನೋಕಿಯಾ ಸಂಸ್ಥೆಯು ತನ್ನಯ ಆಶಾ 308 ಮಾರುಕಟ್ಟೆಗೆ ತಂದಿದೆ.

ಅಂದಹಾಗೆ ಮಾರುಕಟ್ಟೆಗೆ ಇದೀಗ ತಾನೆ ಹೊಸ ಇನ್ನಿಂಗ್ಸ್‌ ಆರಂಭಿಸಲು ಕಾಲಿರಿಸಿರುವ ನೂತ ಆಶಾ 308 ಫೀಚರ್‌ ಫೋನ್‌ನಲ್ಲಿ ಏನೆಲ್ಲಾ ವಿಶೇಷತೆಗಳಿವೆ ಎಂಬುದನ್ನು ತಿಳಿದುಕೊಳ್ಳೋಣ.

ನೋಕಿಯಾ ಆಶಾ 308 ವಿಶೇಷತೆ :

ಡ್ಯುಯೆಲ್‌ ಸಿಮ್‌ ಸ್ಮಾರ್ಟ್‌ಫೊನ್‌ ಆಗಿರುವ ಆಶಾ 308 ಈಸೀ ಸ್ವಾಪ್‌ ತಂತ್ರಜ್ಞಾನ ಹೊಂದಿದೆ.

ಗಾತ್ರ ಹಾಗೂ ತೂಕ : 109.9 x 54.0 x 13.0 mm, ಸುತ್ತಳತೆಯೊಂದಿಗೆ 104 ಗ್ರಾಂ ತೂಕವಿದೆ.

ದರ್ಶಕ : 3 ಇಂಚಿನ ಮಲ್ಟಿ ಪಾಯಿಂಟ್‌ ಟಚ್‌ಸ್ಕ್ರೀನ್‌ ಹಾಗೂ 400 x 240 ಪಿಕ್ಸೆಲ ರೆಸೆಲ್ಯೂಷನ್‌.

ಆಪರೇಟಿಂಗ್‌ ಸಿಸ್ಟಂ : ನೋಕಿಯಾ OS (ಸೀರೀಸ್‌ 40).

ಕ್ಯಾಮೆರಾ : 2MP ಕ್ಯಾಮೆರಾ ದೊಂದಿಗೆ ಫಿಕ್ಸೆಡ್‌ ಫೊಕಸ್‌ ಹೊಂದಿದ್ದು ಮುಂಬದಿಯ ಕ್ಯಾಮೆರಾ ಇಲ್ಲ.

ಮೆಮೊರಿ : 64MB ಆಂತರಿಕ ಮೆಮೊರಿ, 128MB ಮಾಸ್‌ ಮೆಮೊರಿ ಹಾಗೂ ಮೈಕ್ರೋ SD ಸ್ಲಾಟ್‌ನಿಂದಾಗಿ 32GB ವರೆಗೆ ಮೆಮೊರಿ ವಿಸ್ತರಿಸ ಬಹುದಾಗಿದೆ..

ಕನೆಕ್ಟಿವಿಟಿ : ಬ್ಲೂಟೂತ್‌, Wi-Fi ಹಾಗೂ ಮೈಕ್ರೋ USB 2.0.

ಬ್ಯಾಟರಿ : 1,110 mAh BL-4U ಬ್ಯಾಟರಿ ಇದ್ದು 6 ಗಂಟೆಗಳ ಟಾಕ್‌ ಟೈಮ್‌ ಹಗೂ 510 ಗಂಟೆಗಳ ಸ್ಟ್ಯಾಂಡ್‌ ಬೈ ನೀಡುತ್ತದೆ.

ಟಾಪ್‌ 5 ನೋಕಿಯಾ ಟಚ್‌ & ಟೈಪ್‌ ಮೊಬೈಲ್ಸ್‌

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot