ಭಾರತೀಯ ಮಾರುಕಟ್ಟೆಯಲ್ಲಿ ಹೇಗಾದರು ಮಾಡಿ ಮತ್ತೆ ತನ್ನ ಹಿಂದಿನ ಹಿಡಿತವನ್ನು ಸಾಧಿಸಬೇಕು ಎಂದು ನಿರ್ಧರಿಸಿದ್ದು, ಈ ಹಿನ್ನಲೆಯಲ್ಲಿ ತನ್ನ ಐಕಾನಿಕ್ ಫೋನ್‌ಗಳನ್ನು ಮತ್ತೇ ಮಾರುಕಟ್ಟೆಗೆ ಪರಿಚಯ ಮಾಡುವ ಕಾರ್ಯವನ್ನು ಮಾಡುತ್ತಿದೆ. ಈ ಹಿಂದೆ ನೋಕಿಯಾ 3310 ಲಾಂಚ್ ಮಾಡಿದ ರೀತಿಯಲ್ಲಿ ಮತ್ತೊಂದು ಫೋನ್ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವ ಸನಿಹದಲ್ಲಿದೆ ಎನ್ನಲಾಗಿದೆ.

ಈಗಾಗಲೇ ಆಂಡ್ರಾಯ್ಡ್ ಗೋ ಸ್ಮಾರ್ಟ್‌ಫೋನ್ ವೊಂದನ್ನು ಲಾಂಚ್ ಮಾಡಲು ಮುಂದಾಗಿರುವ HMD ಕಂಪನಿಯೂ ಇದರೊಂದಿಗೆ ನೋಕಿಯಾ ಆಶಾ ಫೋನ್‌ಗಳನ್ನು ಮಾರುಕಟ್ಟೆಗೆ ಮತ್ತೇ ಪರಿಚಯ ಮಾಡಲಿದೆ ಎನ್ನಲಾಗಿದೆ. ಈ ಹಿಂದೆ ಆಶಾ ಫೋನ್‌ಗಳು ಮಾರುಕಟ್ಟೆಯಲ್ಲಿ ಸಾಕಷ್ಟು ಸದ್ದು ಮಾಡುತ್ತಿತ್ತು, ಈ ಹಿನ್ನಲೆಯಲ್ಲಿ ಮತ್ತೇ ಆಶಾ ಫೋನ್ ಬರಲಿದೆ.
ಓದಿರಿ: ಬರಲಿದೆ ಭಾರತದ್ದೇ ಕ್ರಿಪ್ಟೋಕರೆಸ್ಸಿ: 'ಜಿಯೋ ಕಾಯಿನ್' ಅಂಬಾನಿ ಬಿಗ್ ಪ್ರಾಜೆಕ್ಟ್..!
ಫೀಚರ್ ಫೋನ್:
ಮಾರುಕಟ್ಟೆಯಲ್ಲಿ ಸದ್ಯ ಫೀಚರ್ ಫೋನ್‌ಗಳ ಆರ್ಭಟವು ಹೆಚ್ಚಾಗಿದ್ದು, ಇದನ್ನು ತನ್ನ ಲಾಭಕ್ಕೆ ಬಳಸಿಕೊಂಡು ಫೀಚರ್ ಫೋನ್ ಬದಲಿಗೆ ಟಚ್ ಸ್ಕ್ರಿನ್ ಇರುವ ತನ್ನ ಆಶಾ ಫೋನ್‌ಗಳನ್ನು ಮಾರುಕಟ್ಟೆಗೆ ಲಾಂಚ್ ಮಾಡಲು ತಯಾರಿಯನ್ನು ನಡೆಸಿದೆ ಎನ್ನಲಾಗಿದೆ. ಇದರಿಂದಾಗಿ ಮಾರುಕಟ್ಟೆಯಲ್ಲಿ ಮತ್ತೊಂದು ಕ್ರಾಂತಿಯನ್ನು ಶುರು ಮಾಡಲಿದೆ.
ಟಾಪ್ ಎಂಡ್ ಫೋನ್:
ಈಗಾಗಲೇ ಮಾರುಕಟ್ಟೆಯಲ್ಲಿ ಸ್ಮಾರ್ಟ್ ಫೋನ್‌ಗಳನ್ನು ಲಾಂಚ್ ಮಾಡಿರುವ ಹೆಚ್ಚಿನ ಗ್ರಾಹರನ್ನು ಹಿಂದಕ್ಕೆ ಸೆಳೆಯುವ ಕಾರ್ಯದಲ್ಲಿ ಯಶಸ್ವಿಯಾಗಿದೆ. ಇದೇ ಮಾದರಿಯಲ್ಲಿ ಈ ಬಾರಿ ಟಾಪ್ ಎಂಡ್ ಫೋನ್‌ಗಳನ್ನು ಮಾರುಕಟ್ಟೆಗೆ ಪರಿಚಯ ಮಾಡುತ್ತಿದೆ. ಅದೇ ಮಾದರಿಯಲ್ಲಿ ಆಶಾ ಫೋನ್‌ಗಳನ್ನು ಮತ್ತೆ ಬಿಡುಗಡೆ ಮಾಡಲಿದೆ.
Gizbot ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿ.Subscribe to Kannada Gizbot.