Subscribe to Gizbot

ಬರಲಿದೆ ಭಾರತದ್ದೇ ಕ್ರಿಪ್ಟೋಕರೆಸ್ಸಿ: 'ಜಿಯೋ ಕಾಯಿನ್' ಅಂಬಾನಿ ಬಿಗ್ ಪ್ರಾಜೆಕ್ಟ್‌..!

Written By:

ಬಿಟ್ ಕಾಯಿನ್ ಮೌಲ್ಯವೂ ಗಗನಕ್ಕೆ ಏರಿದ ನಂತರದಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಕ್ರಿಪ್ಟೋಕರೆಸ್ಸಿ ಕುರಿತಂತೆ ಸಾಕಷ್ಟು ಚರ್ಚೆಗಳು ಶುರುವಾಗಿದ್ದು, ಹೆಚ್ಚು ಮಂದಿ ಕ್ರಿಪ್ಟೋಕರೆಸ್ಸಿ ಮೇಲೆ ಹೂಡಿಕೆ ಮಾಡಲು ಮುಂದಾಗಿದ್ದಾರೆ. ಇದೇ ಹಿನ್ನಲೆಯಲ್ಲಿ ದೇಶದ ಎಲ್ಲಾ ವಿಭಾಗದಲ್ಲಿ ಕ್ರಾಂತಿಯನ್ನು ಮಾಡುತ್ತಿರುವ ಜಿಯೋ ತನ್ನದೇ ಆದ ಕ್ರಿಪ್ಟೋಕರೆಸ್ಸಿಯನ್ನು ಲಾಂಚ್ ಮಾಡಲು ಮುಂದಾಗಿದೆ ಎನ್ನಲಾಗಿದೆ. ಶೀಘ್ರವೇ ಮಾರುಕಟ್ಟೆಗೆ ಜಿಯೋ ಕಾಯಿನ್ ಲಭ್ಯವಿರಲಿದೆ ಎನ್ನಲಾಗಿದೆ.

ಬರಲಿದೆ ಭಾರತದ್ದೇ ಕ್ರಿಪ್ಟೋಕರೆಸ್ಸಿ: 'ಜಿಯೋ ಕಾಯಿನ್' ಅಂಬಾನಿ ಬಿಗ್ ಪ್ರಾಜೆಕ್ಟ್‌

ಈಗಾಗಲೇ ಮಾರುಕಟ್ಟೆಯಲ್ಲಿ ಬಿಟ್ ಕಾಯಿನ್, ಲಿಟ್ ಕಾಯಿನ್ ಸೇರಿದಂತೆ ಸಾಕಷ್ಟು ಕ್ರಿಪ್ಟೋಕರೆಸ್ಸಿಗಳು ಕಾರ್ಯನಿರ್ವಹಿಸುತ್ತಿದ್ದು, ಭಾರತೀಯ ಮೂಲದ ಯಾವುದೇ ಕಂಪನಿಗಳು ಈ ಉದ್ಯಮಕ್ಕೆ ಕೈ ಹಾಕಿರಲಿಲ್ಲ. ಭಾರತೀಯರು ಕ್ರಿಪ್ಟೋಕರೆಸ್ಸಿ ಕಡೆಗೆ ಹೆಚ್ಚಿನ ಒಲವನ್ನು ತೋರಿಸುತ್ತಿರುವ ಕಾರಣ ಜಿಯೋ ತನ್ನದೇ ಕ್ರಿಪ್ಟೋಕರೆಸ್ಸಿ ಜಿಯೋ ಕಾಯಿನ್ ಲಾಂಚ್ ಮಾಡಲು ಮುಂದಾಗಿದೆ.

ಓದಿರಿ: ವೋಚರ್ ಬಳಸಿ ಕಡಿಮೆ ಬೆಲೆಯಲ್ಲಿ ಜಿಯೋ ರಿಚಾರ್ಜ್ ಮಾಡಿಸುವುದು ಹೇಗೆ...?

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಮಗನಿಗೆ ಸಾರಥ್ಯವಹಿಸಿದ ಅಂಬಾನಿ:

ಮಗನಿಗೆ ಸಾರಥ್ಯವಹಿಸಿದ ಅಂಬಾನಿ:

ಮುಂದಿನ ತಲೆಮಾರಿಗೆ ರಿಲಯನ್ಸ್ ಒಡೆತನವನ್ನು ವರ್ಗಾಹಿಸಲು ಮುಂದಾಗಿರುವ ಮುಖೇಶ್ ಅಂಬಾನಿ, ಈ ಬಾರಿ ಜಿಯೋ ಕಾಯಿನ್ ಪ್ರಾಜೆಕ್ಟ್ ಅನ್ನು ಮಗ ಆಕಾಶ ಅಂಬಾನಿಗೆ ವಹಿಸಿದ್ದಾರೆ ಎನ್ನಲಾಗಿದೆ. ಜಿಯೋ ಕಾಯಿನ್ ನಿರ್ಮಾಣವನ್ನು ವಹಿಸಿಕೊಂಡಿರುವ ಆಕಾಶ್ ಅಂಬಾನಿ ಈ ಹೊಸ ಚಾಲೆಂಜ್ ಅನ್ನು ಯಶಸ್ವಿಯಾಗಿ ನಿರ್ವಹಿಸಲಿದ್ದಾರೆ ಎನ್ನಲಾಗಿದೆ.

50 ಮಂದಿ ಟೀಮ್:

50 ಮಂದಿ ಟೀಮ್:

ಜಿಯೋ ಕಾಯಿನ್ ಲಾಂಚ್ ಬೇಕಾದ ಟೆಕ್ನಾಲಜಿಯನ್ನು ನಿರ್ಮಿಸುವ ಸಲುವಾಗಿ ಆಕಾಶ್ ನೇತೃತ್ವದಲ್ಲಿ 50 ಮಂದಿ ಯಂಗ್ ಇಂಜಿನಿಯರ್ ಗಳ ಟೀಮ್ ವೊಂದನ್ನು ಕಟ್ಟಲಾಗಿದೆ ಎನ್ನಲಾಗಿದೆ. ಈ ಟೀಮ್ ಬ್ಲಾಕ್ ಚೈನ್ ಪ್ರಾಡೆಕ್ಟ್ ನಲ್ಲಿ ಕಾರ್ಯನಿರ್ವಹಿಸಲಿದ್ದಾರೆ.

ಜಿಯೋ ಕಾಯಿನ್:

ಜಿಯೋ ಕಾಯಿನ್:

ಈಗಾಗಲೇ ಮಾರುಕಟ್ಟೆಯಲ್ಲಿ ಜಿಯೋ ತನ್ನ ಗ್ರಾಹಕರ ನಂಬಿಕೆಯನ್ನು ಗಳಿಸಿಕೊಂಡಿದೆ. ಈ ಹಿನ್ನಲೆಯಲ್ಲಿ ಇದನ್ನು ಉಳಿಸಿಕೊಂಡು ಬೆಳೆಸಿಕೊಂಡು ಹೊಗುವ ಸಲುವಾಗಿ ಜಿಯೋ ಕಾಯಿನ್ ಬಳಕೆಗೆ ತರಲು ರಿಲಯನ್ಸ್ ಮುಂದಾಗಿದೆ. ಒಟ್ಟಿನಲ್ಲಿ ಇದು ಭಾರತೀಯ ಮಾರುಕಟ್ಟೆಯಲ್ಲಿ ಹೊಸ ಅಲೆಯನ್ನು ಹುಟ್ಟಿಹಾಕಲಿದೆ.

Jio Free Caller Tune ! ಜಿಯೋ ಉಚಿತ ಕಾಲರ್‌ಟೂನ್ ಬಳಕೆ ಹೇಗೆ..?
ದೊಡ್ಡ ಮಾರುಕಟ್ಟೆ:

ದೊಡ್ಡ ಮಾರುಕಟ್ಟೆ:

ಜಿಯೋ ಕಾಯಿನ್ ಭಾರತದಲ್ಲಿ ದೊಡ್ಡ ಮಟ್ಟದ ಮಾರುಕಟ್ಟೆಯನ್ನು ಸೃಷ್ಟಿಸಿಕೊಳ್ಳಲಿದೆ. ಗ್ರಾಹಕರಿಗೆ ಜಿಯೋ ಮೇಲೆ ಹೆಚ್ಚಿನ ನಂಬಿಕೆ ಹುಟ್ಟಿರುವುದು ಇದಕ್ಕೆ ಪ್ರಮುಖ ಕಾರಣ ಎನ್ನಲಾಗಿದೆ. ದೇಶಿಯ ಮಾರುಕಟ್ಟೆಯಲ್ಲಿ ಈಗಾಗಲೇ ಡಿಜಿಟಲ್ ವ್ಯವಹಾರವೂ ಹೆಚ್ಚಾಗಿರುವುದು ಇದಕ್ಕೆ ಪ್ರಮುಖ ಕಾರಣ ಎಂದರೆ ತಪ್ಪಾಗುವುದಿಲ್ಲ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
Reliance Jio planning its own cryptocurrency called JioCoin. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot